3 ಡಿ0ಡಿಮ‌

3 ಡಿ0ಡಿಮ‌

ಕವನ

 ಭೋಜರಾಜನೊಡ್ಡೋಲಗದಿ ಸರಸ ಸಾಹಿತ್ಯಾದಿ ಚರ್ಚೆಯೊಳಿರಲು

ಢಮರುಗವ ಢಂಕರಿಸುತ ಮದ ಕವಿಕುಂಜರ ಡಿಂಡಿಮನುದ್ದಾಮ ಕವಿ

ಪುಂಗವನಡಿಯಿಡುತರಾಜನ್ ನಿನ್ನೀ ಒಡ್ಡೋಲಗದೊಳುನ್ನತ ಕವಿ

ಪಂಡಿತರಿಹರಿಂದೆನ್ನ ಸವಾಲಿಗುತ್ತರವನರಸಿ ಬಂದಿಹೆ ನಿನ್ನೀಕವಿಗಣ

ಪಂಡಿತೋತ್ತಮರುತ್ತರವನಳುಹಿ ವಿಜಯಿಗಳಾದರವರ ಶಿಷ್ಯನಾಗಿರ್ಪೆನ್  

ಸವಾಲಿಗುತ್ತರಿಸದಿರೆನ್ನೆಯಶಿಷ್ಯರೆಂದಬ್ಬರದಿ ಢಮರುಗವ ಢಂಕರಿಸೆ  

ಡಿಂಡಿಮ ಕವಿಕುಲೋತ್ತಮ ನಿನ್ನಯಸವಾಲನರುಹು ನೀವೆಮ್ಮಕವಿಗಳ

ಶಿಷ್ಯತನವದೆಮ್ಮಗಳಗ್ಗಳಿಕೆಯಲ್ತೆಂದನಾ ಭೋಜರಾಜನಸುನಗುತ