ರಸ್ತೆ ಸೂಚನಾ ಫಲಕ
ನಾನು ದಾರಿ ಸೂಚಕ,ರಸ್ತೆ ಸೂಚನಾ ಫಲಕ
ನನ್ನ ಕೆಲಸ ದಾರಿ ಹೋಕರಿಗೆ,ಪಥಿಕರಿಗೆ
ಅಲೆಮಾರಿಗಳಿಗೆ,ವಿಳಾಸ ಹುಡುಕುವವರಿಗೆ
ಸಹಾಯ ಮಾಡುವ ನಿರ್ಜೀವ ರಸ್ತೆ ಸೂಚಕ; BBMP ಬಣ್ಣ ಬಣ್ಣಗಳಿಂದ ಸಿಂಗರಿಸಿದರು ರಸ್ತೆಯ ಬಲ ಭಾಗವೋ? ಎಡ ಭಾಗವೋ? ಎಲ್ಲೋ ಒಂದು ಕಡೆ ನಿಲ್ಲಿಸಿ, ಅದಕ್ಕೊಂದು ಹೆಸರ ನೀಡಿ ನನ್ನ ಸೇವೆಗೆ ನಿಲ್ಲಿಸಿಹರು; ಹಗಲು,ರಾತ್ರಿ,ಧೂಳು,ಮಳೆ ಯಾವುದಕ್ಕೋ ಜಗ್ಗದೆ, ಸದಾ ಜನರ ಸೇವೆಯಲ್ಲಿ ನಿಂತವನು ನಾನು ಒಂದೊಂದು ರಸ್ತೆಯಲ್ಲಿ ಒಂದೊಂದು ಹೊಸ ಹೊಸ ಹೆಸರು ನನಗೆ MG ಅತ್ತಿಮಬ್ಬೆ ರಸ್ತೆ, Bull temple ರಸ್ತೆ.......... ಹೆಸರೇನೋ ಗಣ್ಯರದ್ದೇ!...... ಆದರೆ ನಾನು ಮಾತ್ರ ನಗಣ್ಯ ನನಗೋ ಹಿಗ್ಗು ಅದರಿಂದ ಸ್ವಲ್ಪ ಅಹಂ ಆ ಅಹಂ ನನ್ನ ಸೌಂದರ್ಯಕ್ಕೆ ದಕ್ಕೆ ತಂದಿದೆ ಏನು ಹೇಳಲಿ? ಯಾರಿಗೆ ಹೇಳಲಿ? ನನ್ನ ಸಮಸ್ಯೆಯನ್ನ ನನ್ನ ಸೌಂದರ್ಯ ಹಾಳಾಗಿದೆ; ಹೊಸ ಬಣ್ಣ ಕಂಡು ವರ್ಷಗಳಾಗಿವೆ; ಕಾಲು ಮುರಿದಿದೆ; ಕೆಲವೊಮ್ಮೆ ಕನ್ನಡದ ಕೊಲೆಯೊ ನನ್ನ ಮೇಲೆಯೇ ಆಗುತ್ತದೆ ತಪ್ಪು ತಪ್ಪಾದ ಕನ್ನಡದ ಪದಗಳನ್ನ ನನ್ನ ಮೇಲೆ ಬರೆದು; ಈ ಸಣ್ಣ ಸಣ್ಣ ಜಾಹೀರಾತುದಾರರು ತಮ್ಮ ವ್ಯಾಪಾರದ ಜಾಹೀರಾತು ಚೀಟಿಗಳನ್ನು ನನ್ನ ಮೇಲೇ ಅಂಟಿಸುವರು; ಎಷ್ಟು ಅಂಟಿಸಿದ್ದಾರೆ ಎಂದರೆ ನನ್ನ ಮೊಲ ಹೆಸರು ಮರೆಯಾಗಿದೆ; ನನ್ನಿಂದ ಜನತೆಗೆ ತೊಂದರೆಯಾಗುತ್ತಿದೆ; ರಸ್ತೆ ಹುಡುಕುವವರಿಗೆ ದಾರಿ ತೋರಲಾಗದೆ ಬಳಲುತ್ತಿದ್ದೇನೆ; ಅಸಹಾಯಕ ಸ್ಥಿತಿಗೆ ನನ್ನನ್ನು ಈ ಜಾಹೀರಾತುದಾರರು ತಳ್ಳಿದ್ದಾರೆ; ಮಾಹಿತಿ ಪಸರಿಸುವ ನನ್ನ ಕಾಯಕಕ್ಕೆ ಧಕ್ಕೆಯಾಗಿದೆ; ನನ್ನ ನಿಲ್ಲಿಸಿದ BBMPಯವರಿಗೂ ನನ್ನ ಬಗ್ಗೆ ಗಮನವಿಲ್ಲ; ನನ್ನ ಸ್ವಚ್ಛತೆಯ ಬಗ್ಗೆ ತಿರಸ್ಕಾರ; ನಾನು ಮಾತ್ರ ಸೊರಗಿದ್ದೇನೆ,ನರಳುತ್ತಿದ್ದೇನೆ ಅಸಹಾಯಕನಾಗಿ; ನನ್ನನ್ನು ರಕ್ಷಿಸಿ;ನನ್ನನ್ನು ರಕ್ಷಿಸಿ.
ಯವರು ನನ್ನನ್ನಿಲ್ಲಿ ನಿಲ್ಲಿಸಿಹರು