ಅ ಕಪ್ ಓಫ್ ಕಾಫಿ ... ಸಿಪ್ - ೫
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಸಿಪ್ - ೫
ಹಾಸ್ಟೆಲ್ ಯಾಕೋ ಇಂದು ಬಿಕೋ ಎನ್ನುತಿತ್ತು, ಸಚ್ಚ್ಚಾ ಹುಡುಗರು ಎರಡು ದಿನ ರಜೆ ಇದ್ದುದರಿಂದ ಮನೆಗೆ ಹೋಗಿದ್ದರು. ಡಿಂಗ್ ಪಾರ್ಟಿಗಳೆಲ್ಲಾ ರಾತ್ರಿಯ ಪಾರ್ಟಿಗಾಗಿ ಎಣ್ಣೆ ಶೇಖರಣೆಯಲ್ಲಿ ಬ್ಯುಸಿ ಆಗಿದ್ದರು.೩- ೪ ಮಂದಿ ಮಂಗಳೂರಿನಿಂದ ಬಾಟಲ್ ತೆಕ್ಕೊಂಡು ಬರಲು ನಿಖಿಲ್ ನ ಕಾರ್ ನಲ್ಲಿ ಹೋಗಿದ್ದರು.
ನನ್ನ ರೂಂ, ಪಕ್ಕದ ರೂಂ ಎಲ್ಲಾನು ಖಾಲಿ ಖಾಲಿ. ಬೋರ್ ಹೊಡೆಯುತ್ತಿತ್ತು. ಮನಸಲ್ಲಿ ಆ ನವಿಲಿನ ಅಸ್ಪಷ್ಟ ಚಹರೆ ಮೂಡಿ ಮಾಯವಾಗುತಿತ್ತು. ಅಷ್ಟರಲ್ಲೇ ಕಾಲೇಜ್ ಕ್ಯಾಂಪಸ್ ನಲ್ಲಿರುವ ಇಂಟರ್ನೆಟ್ ಕೆಫೆ ಯ ನೆನಪಾಗಿ ಅವಳ ಭೇಟಿಗೆ ಅಲ್ಲಿ ಧಾವಿಸಿದೆ.
೧ MBPS ಸ್ಪೀಡ್ ನ ಇಂಟರ್ನೆಟ್ ಅನ್ನು ೨೮ ಸಿಸ್ಟಮ್ ಗಳಿಗೆ ಜೋಡಿಸಲಾಗಿತ್ತು. ಒಂದು ಪೇಜ್ ಲೋಡ್ ಆಗಲು ತುಂಬಾನೆ ಸಮಯ ತೆಗೆದು ಕೊಳ್ಳುತಿತ್ತು, ಅದಕ್ಕಾಗಿಯೇ ನಾನು ವೀಕ್ ಡೇಸ್ ನಲ್ಲಿ ಇಲ್ಲಿ ಬರುತಿರಲಿಲ್ಲ, ಬರೀ ರವಿವಾರದ ಮದ್ಯಾನ್ಹ ಎಲ್ಲರೂ ಮಲಗಿರಬೇಕಾದರೆ ಭೇಟಿ ನೀಡುತಿದ್ದೆ.ಆ ಸಮಯದಲ್ಲಿ ಅಲ್ಲಿ ಬರೇ ಇಬ್ಬರಿಂದ ಮೂವರು ವಿಧ್ಯಾರ್ಥಿಗಳಿರುವುದರಿಂದ ನಮಗೆ ಬೇಕಾದ ಕೆಲಸ ಮಾಡಲು ಅನುವಾಗುತಿತ್ತು. ಹುಡುಗೀರು ಲೆಕ್ಚರರ್ಸ್ ಯಾರು ಈ ಸಮಯದಲ್ಲಿ ಇರುತ್ತಿರಲಿಲ್ಲ. ಇದು ಹದಿಹರೆಯದ ಹುಡುಗರಿಗೆ ಹೆಚ್ಚಿನ ಸ್ವಾತಂತ್ರ್ಯವನ್ನೇ ನೀಡುತ್ತಿತ್ತು.
ಸಂಜೆ ಏಳರ ಸಮಯ, ಚಪ್ಪಲಿಯನ್ನು ಹೊರಗಿನ ರೂಮ್ನಲ್ಲಿ ಇಟ್ಟು ಒಳಗೆ ಹೋದೆ. ಮೂರು ಮೂಲೆಯಲ್ಲಿ ಮೂವರು ಕುಳಿತಿದ್ದರು. ಬಾಗಿಲಿನ ಪಕ್ಕದ ಕಂಪ್ಯೂಟರ್ ನಲ್ಲಿ E&E ನ ಲಾಬ್ ಅಟೆನ್ಡರ್ ಕೂತಿದ್ದರು. ಸಂಜೆಯ ಸಮಯದಲ್ಲಿ ಅವರು ಈ ನೆಟ್ ಕೆಫೆ ಯ ನಿರ್ವಹಣೆಯನ್ನು ನೋಡಿಕೊಳ್ಳುತಿದ್ದರು. ನನ್ನಿಂದ ನನ್ನ ಹಾಸ್ಟೆಲ್ ಐಡಿ ಪಡೆದು ಅಲ್ಲಿರುವ ಬುಕ್ ನಲ್ಲಿ ನನ್ನ ಎಂಟ್ರಿ ಮಾಡಿಸಿ ಕೊಂಡರು. ಈಚೆಗೆ ಹೊಸ ಪ್ರಿನ್ಸಿಪಾಲ್ ಬಂದ ಬಳಿಕ ಈ ಎಲ್ಲಾ ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದ್ದರು. ಯಾವುದೇ ಡೇ ಸ್ಕೊಲರ್ ವಿದ್ಯಾರ್ಥಿಗಳಿಗೆ ಸಂಜೆಯ ಸಮಯದಲ್ಲಿ ಇಲ್ಲಿ ಪ್ರವೇಶ ನಿರ್ಭಂಧ, ಹಾಸ್ಟೆಲ್ ವಿದ್ಯಾರ್ಥಿಗಳು ಒಂದು ದಿನಕ್ಕೆ ಗರಿಷ್ಟ ಒಂದೇ ಗಂಟೆ ಇಂಟರ್ನೆಟ್ ಉಪಯೋಗಿಸುವಂತೆ ಅವರು ನಿರ್ಭಂದ ಹೇರಿದ್ದರು.
ಹೆಚ್ಚಿನ ಅಶ್ಲೀಲ ಸೈಟ್ ಗಳಿಗೆ ಫೈರ್ ವಾಲ್ ಪ್ರೊಟೆಕ್ಷನ್ ಹಾಕಿಸಿದ್ದರು.
ಮೂರು ಮೂಲೆಯಲ್ಲಿ ಕೂತ ಮೂವರಲ್ಲಿ ನನ್ನ ಬಾಚ್ ಮೇಟ್ ಮಿಲನ್ ಎಲ್ಲ ಫೈರ್ ವಾಲ್ ಗಳನ್ನು ಪ್ರಾಕ್ಸಿ ಬಳಸಿ ಭೇದಿಸಿ, ತನಗೆ ಸಿಕ್ಕ ಸ್ವಾತಂತ್ರ ವನ್ನು ಅನುಭವಿಸುತಿದ್ದ. ನನ್ನನ್ನು ನೋಡಿ ತನ್ನ ಕಂಪ್ಯೂಟರ್ ಸ್ಕ್ರೀನ್ ಅನ್ನು ಮಿನಿಮೈಸ್ ಮಾಡಿ ಮುಗುಳ್ನಕ್ಕ. ನಾನು ಅವನಿಗೆ ಬೆನ್ನು ಹಾಕಿ ಇನ್ನೊಂದು ಸಿಸ್ಟಮ್ ಎದುರಿಗೆ ಕುಳಿತುಕ್ಕೊಂಡೆ.
ಮೊದಲಿಗೆ ನನ್ನ ಯಾಹೂ ಮೇಲ್ ನಲ್ಲಿ ಲಾಗಿನ್ ಆಗಿ ಒಂದು ವಾರದಿಂದ ನನ್ನ ಇನ್ ಬಾಕ್ಸ್ ನಲ್ಲಿ ಬಂದು ಬಿದ್ದಿರುವ ಮೇಲ್ ಗಳನ್ನೂ ನೋಡಿ, ಇನ್ನೊಂದು ವಿಂಡೋ ನಲ್ಲಿ ಆರ್ಕುಟ್ ಗೆ ಲಾಗಿನ್ ಆದೆ.
ಒಂದು ಫ್ರೆಂಡ್ ರಿಕ್ವೆಸ್ಟ್ ಅದೂ ಪ್ರೀತಿ ಕಳುಹಿಸಿದ್ದು. ಒಂದುವಾರದಿಂದ ನಾವು ಸ್ನೇಹಿತರಾಗಿದ್ದೆವು. ಇಲ್ಲಿ ಅವಳನ್ನು ಸೇರಿಸುವ ಧೈರ್ಯ ನನಗಿರಲಿಲ್ಲ, ಬರೇ ಅವಳ ಪ್ರೊಫೈಲ್ ಗೆ ಭೇಟಿ ನೀಡುತಿದ್ದೆ ಅಷ್ಟೇ.
ಮರುಕ್ಷಣವೇ ಅವಳ ಫ್ರೆಂಡ್ ರಿಕ್ವೆಸ್ಟ್ ಅನ್ನು ಅಕ್ಸೆಪ್ಟ್ ಮಾಡಿ, ಅವಳ ಪ್ರೊಫೈಲ್ ಅನ್ನು ಇನ್ನೊಮ್ಮೆ ಮೆಲುಕಾಡಿದೆ.
ಗೂಗಲ್ ನಲ್ಲಿ ಒಂದು ಒಳ್ಳೆ ಟೆಸ್ಟಿಮೊನಿಯಲ್ ಹುಡುಕಿ ಅವಳಿಗೆ ಪೋಸ್ಟ್ ಮಾಡಿದೆ. ಎರಡು ಮೂರು ಫೋಟೋಸ್ ಗಳಿಗೆ ಕಾಮೆಂಟ್ಸ್ ಅನ್ನೂ ಸೇರಿಸಿದೆ. ಒಂದರಲ್ಲಂತೂ ಅವಳು ಅಪ್ಪಟ ಕನ್ನಡ ಹುಡುಗಿಯಂತೆ ಕಾಣುತಿದ್ದಳು.ಅದು ಅವಳ ಯಾವುದೋ ಕಸಿನ್ ನ ಮದುವೆಯಲ್ಲಿ ತೆಗೆದ ಫೋಟೋ ವಿರಬಹುದು. ಇಲ್ಲಿ ವರೆಗೆ ಅವಳನ್ನು ಕೂದಲು ಬಿಟ್ಟ, ಖಾಲಿ ಹಣೆಯಲ್ಲಿ ನಾನು ನೋಡಿದ್ದೆ , ಇಲ್ಲಿ ಅವಳು ಜಡೆ ಕಟ್ಟಿ ಹಣೆಯಲ್ಲಿ ಭಿನ್ದಿ ಇಟ್ಟು ವಿಭಿನ್ನವಾಗಿ ಕಾಣುತಿದ್ದಳು.ನನ್ನನ್ನೇ ದಿಟ್ಟಿಸುವಂತಹ ಆ ಶುಭ್ರ ಕಣ್ಣುಗಳು ನನ್ನನ್ನು ಆಕರ್ಷಿಸುತಿತ್ತು.ಇಲ್ಲಿ ನಿನ್ನೆ ಧರಿಸಿದಂತ ನವಿಲು ಬಣ್ಣದ ಸಲ್ವರ್ನಲ್ಲಿ ನಿನ್ನೆಗಿಂತಲೂ ಸುಂದರವಾಗಿ ಕಾಣುತಿದ್ದಳು.
ಮೌಸ್ ನಲ್ಲಿ ರೈಟ್ ಕ್ಲಿಕ್ ಕೊಟ್ಟು ಆ ಫೋಟೋವನ್ನು ನನ್ನ ಕಂಪ್ಯೂಟರ್ ಗೆ ಇಳಿಸಿಕ್ಕೊಂಡೆ. ಮತ್ತೆ ಯಾಹೂ ಮೇಲ್ ಗೆ ಬಂದು ನನ್ನ ಅಡ್ರೆಸ್ ನಿಂದ ನನಗೇ ಆ ಫೋಟೋವನ್ನು ಫಾರ್ವರ್ಡ್ ಮಾಡಿಸಿಕ್ಕೊಂಡೆ.
ಇನ್ನೊಮ್ಮೆ, ಮತ್ತೊಮ್ಮೆ ... ಹೀಗೆ ಪ್ರತಿ ೧ ನಿಮಿಷದ ಅವದಿಯಲ್ಲಿ ಆ ಫೋಟೋ ನೋಡುತಿದ್ದೆ. ಹಿಂಬದಿಯಲ್ಲಿ ಕುಳಿತ ಮಿಲನ್ ನಾನು ಅವನ ಸ್ಕ್ರೀನ್ ಗಮನಿಸುತ್ತ ಇದ್ದೆನೆಯೇ ಎಂದು ಬಾರಿ ಬಾರಿ ತಿರುಗಿ ನೋಡುತಿದ್ದುದ್ದು ನನ್ನ ಗಮನಕ್ಕೆ ಬರುತಿತ್ತು.ಇಬ್ಬರೂ ಒಬ್ಬರ ಕಣ್ಣು ತಪ್ಪಿಸಿ ಒಬ್ಬರು ಅವರವರ ಕೆಲಸದಲ್ಲಿ ಬ್ಯುಸಿ ಆಗಿದ್ದರು.
ಅಷ್ಟರಲ್ಲೇ ಕೆಫೆ ಯ ಬಾಗಿಲು ಯಾರೋ ಸರಿಸಿದಂತಾಯಿತು. ಇಬ್ಬರೂ ತಮ್ಮ ತಮ್ಮ ವಿಂಡೋ ಅನ್ನು ಮಿನಿಮೈಸ್ ಮಾಡಿದೆವು. ಒಳಗೆ ಬಂದ ದೇವು ಸೀದಾ ಮಿಲನ್ ಪಕ್ಕಕ್ಕೆ ಬಂದು "ಕೆಲಸ ಮುಗೀತು.. ರವಿ ರೂಂ ಗೆ ೯ ಗಂಟೆಗೆ ಬಾ ..ಎಲ್ಲ ಅಲ್ಲಿ ಸೇರುತ್ತೇವೆ ಎಂಬ ಮಾತಾಗಿದೆ, ಎಲ್ಲಾನೂ ಅಲ್ಲಿ ಇಟ್ಟಿದ್ದೇವೆ, ಹಾಸ್ಟೆಲ್ ನಲ್ಲಿ ಯಾಕೆ ಸುಮ್ನೆ ರಿಸ್ಕ್ " ಅಂದ.
ಮಿಲನ್ ಅವನಿಗೆ "ಓಕೆ , ರಾತ್ರಿ ೮ ೩೦ ರ ಒಳಗೆ ಊಟ ಮಾಡಿ ಅಲ್ಲಿ ಹೋಗೋಣ, ಎಲ್ಲ ಒಟ್ಟಿಗೆ"
ದೇವು "ಯಾವ್ ನಮ್ನೆಯ ತಿಂಡಿ ಪೋತನೋ ... ಎಣ್ಣೆ ಹಾಕುವಾಗ ಖಾಲಿ ಹೊಟ್ಟೆ ಇರಬೇಕೋ.. ಇಲ್ಲನ್ತಾದ್ರೆ ಖಾರಿ ಹೇಸ್ಗೆ ಮಾಡಬೇಕಾಗುತ್ತೆ, ಎಲ್ಲ ನಶೆ ಇಳಿದ ಮೇಲೆ ತಿನ್ನಲು ನೋನ್ ವೆಜ್ ತಕ್ಕೊಂಡು ಬಂದಿದ್ದೇವೆ. ಜ್ಯಾನದಲ್ಲಿರುವವರು ಅದನ್ನು ತಿಂದು ಮಲಗಬಹುದು" ಅಂದ.
ಮಿಲನ್ ಅದಕ್ಕೆ ಸಮ್ಮತಿಸಿದ.
"ಬರ್ತಿಯೇನೋ ಹಾಸ್ಟೆಲ್ ರೂಂ ಗೆ ..?? ಬೀಟ್ಸ್ ಇರುವ ಸೊಂಗಸಂನೆಲ್ಲಾ ಒಂದು ಸಿಡಿ ಯಲ್ಲಿ ಹಾಕ ಬೇಕಿದೆ, ಕಂಟಿನ್ಯೂಸ್ ೩ ಘಂಟೆಗೆ ಕಿವಿ ತಮಟೆ ಹೊಡೆಯುವಂತ ಹಾಡನ್ನು ಹಾಡಿಸ ಬೇಕಿದೆ."
ಮಿಲನ್ "ಅಂದ್ರೆ ಆಜ್ ಕಿ ರಾತ್ ಡಿಜೆ ದೇವು ಕೆ ಸಾಥ್ !!!"
ದೇವು "ಹುಂ ... ಹೌದು ಬಾ ನನಗೆ ಸಲ್ಪ ಸಹಾಯಮಾಡು , ನಿಂಗೂ ಕ್ರೆಡಿಟ್ಸ್ ಕೊಡ್ತೇನೆ."
ಮಿಲನ್ "ಬೇಡವೋ, ನಾನ್ ಸಲ್ಪ ಬ್ಯುಸಿ ಇದ್ದೇನೆ."
ದೇವು "ಏನೋ ? ಭಜನೆನಾ ..?"
ಮಿಲನ್ "ಹುಂ , ಡೌನ್ಲೋಡ್ ಗೆ ಇಟ್ಟಿದ್ದೇನೆ. ೧೧ ಮಿನುಟ್ಸ್ ರೆಮೈನಿಂಗ್ ಇದೆ .. ನಾನು ಪೆನ್ ಡ್ರೈವ್ ನಲ್ಲಿ ಹಾಕಿ ಬರ್ತೇನೆ,ಯಾರೆಲ್ಲ ಭಜನೆಯ ದಾಸರಿದ್ದಾರೆ ಅವರಿಗೆ ನಾನು ಉಪಚರಿಸುವೆ" ಅಂದ.
ದೇವು "ಸರಿ ಹಾಗಾದರೆ, ನಾನು ಹೋಗ್ತೇನೆ" ಎಂದು ಹೇಳಿ ತಿರುಗಿದ.
ನನ್ನನ್ನು ಹಿಂದೆ ನೋಡಿ "ಓ ವೆಜ್ ಪಾರ್ಟಿ, ನೀನೂ ಬರಬಹುದು, ಸ್ಪ್ರೈಟ್, ಥಂಬ್ಸ್ ಅಪ್ ಎಲ್ಲ ತಂದಿದ್ದೇವೆ, ನೀನು ಅದರೊಂದಿಗೆ ಸಾಥ್ ಕೊಡ ಬಹುದು, ಒಬ್ಬನೇ ಮೂರು ಮಾಳಿಗೆಯ ಹಾಸ್ಟೆಲ್ ಬ್ಲಾಕ್ ನಲ್ಲಿ ರಾತ್ರಿ ಕಳೆಯುವುದು ಬೆಳೆದ ಹುಡುಗರ ಆರೋಗ್ಯಕ್ಕೆ ಒಳ್ಳೇದಲ್ಲ " ಎನ್ನುತ್ತಾ ಕಿಸಕ್ಕನೆ ನಕ್ಕ. ಅವನಿಗೆ ಮಿಲನೂ ಜೊತೆಯಾದ.
ನಾನು "ಸರಿ, ನಾನು ಊಟ ಮುಗಿಸಿ ಅಲ್ಲಿ ಬರುತ್ತೇನೆ" ಅಂದೆ.
ಅವನು "ಹೌದು ಹೌದು , ಊಟ ಮುಗಿಸಿ ಬಾ, ಇಲ್ಲನ್ತಾದ್ರೆ ಖಾಲಿ ಹೊಟ್ಟೆಲಿ ಮಲಗ್ಬೇಕಾದಿತು"
ದೇವು ಮೊದಲಿಗೆ ಹೊರನಡೆದ, ಮಿಲನ್ ನ ೧೧ ನಿಮಿಷ ಮುಗಿದ ಬಳಿಕ ಅವನು ತನ್ನ ಕಿಸೆಯಲ್ಲಿದ್ದ 512MB ಪೆನ್ ಡ್ರೈವ್ ನಲ್ಲಿ ತಾನು ಇಳಿಸಿದ ಭಜನೆಯನ್ನು ಹಾಕಿಸಿಕ್ಕೊಂಡ. ಡೆಸ್ಕ್ಟೊಪ್ ನಲ್ಲಿ ಸೇವ್ ಆದ ಆ ಫೈಲನ್ನು ಶಿಫ್ಟ್ ಡಿಲೀಟ್ ಮಾಡಿ ಲಾಗೌಟ್ ಆದ.
ನನಗೆ ಇನ್ನೂ ೩೦ ನಿಮಿಷ ಬಾಕಿ ಇತ್ತು ೧ ಗಂಟೆಯನ್ನು ನೆಟ್ ನಲ್ಲಿ ಪೂರ್ತಿ ಮಾಡಲು. ಮತ್ತೆ ಅವಳ ಪ್ರೊಫೈಲ್ ನಲ್ಲಿ ಇದ್ದ ಎಲ್ಲ ಫೋಟೋ ಗಳನ್ನೂ ನೋಡಿದೆ. ಆ ನವಿಲು ನಿಲುವಂಗಿ ತೊಟ್ಟ ಫೋಟೋ ನನ್ನನ್ನು ಇನ್ನು ೧೫-೨೦ ನಿಮಿಷ ಕಣ್ಣು ಅಲಕದೇ ನೋಡಲು ಯಾವುದೇ ಅಡಚಣೆ ಇರಲಿಲ್ಲ.
ಗಂಟೆ ಎಂಟು ಬಾರಿಸುತಿದಂತೆ ಆ ಅಟೆನ್ಡರ್ ಸಮಯ ಆಯಿತು ಎನ್ನಲು ಮತ್ತೆ ಯಾಹೂ ನಲ್ಲಿ ಆ ಮೇಲ್ ಫಾರ್ವರ್ಡ್ ಆಗಿದೆಯೋ ಇಲ್ಲವೋ ಎಂಬುದನ್ನು ಖಾತ್ರಿ ಪಡಿಸಿ ನನ್ನ ಸಿಸ್ಟಮ್ ಅನ್ನು ಲಾಗೌಟ್ ಮಾಡಿದೆ.
Comments
ಉ: ಅ ಕಪ್ ಓಫ್ ಕಾಫಿ ... ಸಿಪ್ - ೫
In reply to ಉ: ಅ ಕಪ್ ಓಫ್ ಕಾಫಿ ... ಸಿಪ್ - ೫ by makara
ಉ: ಅ ಕಪ್ ಓಫ್ ಕಾಫಿ ... ಸಿಪ್ - ೫
In reply to ಉ: ಅ ಕಪ್ ಓಫ್ ಕಾಫಿ ... ಸಿಪ್ - ೫ by makara
ಉ: ಅ ಕಪ್ ಓಫ್ ಕಾಫಿ ... ಸಿಪ್ - ೫
In reply to ಉ: ಅ ಕಪ್ ಓಫ್ ಕಾಫಿ ... ಸಿಪ್ - ೫ by manju787
ಉ: ಅ ಕಪ್ ಓಫ್ ಕಾಫಿ ... ಸಿಪ್ - ೫