ಓ ನನ್ನ ಜೀವವೆ

ಓ ನನ್ನ ಜೀವವೆ

ಕವನ

ಓ ಜೀವವೆ ಜೀವ ತಗಿಯಬೇಡ


ಜೀವ ಹೋಗುವ ಮುನ್ನ ನೋಡ


ಒಮ್ಮೆ ಆದರೂ ಮಾತನಾಡಿಸು


ಮನಸ್ಸು ಬಿಚ್ಚಿ ಮನಸ್ಸು ಕೊಟ್ಟು


 


ಓ ಜೀವವೆ ಮನಸಿನಲ್ಲಿ ಮನೆ ಮಾಡಿ


ನೀ ಕಣ್ಣು ಮರೆಯಾಗಿ ಹೋದರೆ ನಾ ಹೇಗಿರಲಿ


ಮನಸ್ಸಲ್ಲಿ ನೂರೆಂಟು ಆಸೆಗಳ ಬಿತ್ತಿ


ನೀ ಹೋದರೆ ನಾ ಹೇಗಿರಲು  ಸಾಧ್ಯ


 


ಓ ಜೀವವೆ ಜೀವವೆ ಇಲ್ಲದ ಜೀವಕ್ಕೆ ಜೀವ ತುಂಬಿ


ಪ್ರೀತಿ ಪ್ರೇಮದ ಆಸೆಗಳ ಹುಟ್ಟಿಸಿ, ಪ್ರಾಣ ತುಂಬಿ


ನೀನೀಲ್ಲದೆ ನಾ ಹೇಗಿರಲಿ  ಓ ಮನಸ್ಸಿನ ಓ ಜೀವವೆ 


ನೀನಿಲ್ಲದೆ ನಾನಿಲ್ಲ ಈ ಜಗದಾಗ ಓ ನನ್ನ ಜೀವವೆ.


 


                                                                         ಹೆಚ್.ವಿರುಪಾಕ್ಷಪ್ಪ ತಾವರಗೊಂದಿ