ಅಣ್ಣನಿಗೊಂದು ಪತ್ರ
ಪ್ರೀತಿಯ ಅಣ್ಣನಿಗೆ
ಅಣ್ಣ ಅಮ್ಮ ಹೇಗಿದರೋ ನಾನು ಕೇಳಿದೆ ಅಂತ ಹೇಳು ನೀವು ಇಬ್ಬರೂ ಚೆನ್ನಾಗೆ ಇರ್ತೀರಾ ಅಂತ ನನಗೆ ಗೊತ್ತು ತುಂಬಾ ಪ್ರೀತಿಸೋ ಅಮ್ಮ ಅನ್ನೋ ದೇವರೆ ನಿನ್ನ ಜೊತೆ ಇದ್ದಾರೆ ಅಂದ ಮೇಲೆ ನೀನು ಚೆನ್ನಾಗೆ ಇರ್ತೀಯಾ ಕಣೋ. ನಾನು ಹೇಗಿದ್ದೀನಿ ಅಂತ ನನ್ನ ಕೇಳೋದಿಲ್ವಾ ಕೇಳೋದಕ್ಕೆ ಹೋಗಬೇಡ ನಿನ್ನ ಜವಾಬ್ದಾರಿ ಎಲ್ಲಾ ನನ್ನ ಮೇಲೆ ಹಾಕಿಬಿಟ್ಟು ನೀನು ಹೊರಟು ಹೋದೆ ಕಣೋ ಅಲ್ಲ ನಿನಗೆ ಹೇಗಾದ್ರು ಮನಸ್ಸು ಬಂತು ನನ್ನ ಬಿಟ್ಟು ಹೋಗದಕ್ಕೆ ನೀನು ಅವರಿಗೆ ಹೇಳಬೇಕಿತ್ತು ನನ್ನ ತಂಗಿ ತುಂಬಾ ಮುಗ್ದೆ ಅವಳನ್ನ ಚಿಕ್ಕ ಮಗು ತರ ಬೆಳೆಸಿದ್ದೀನಿ ಅವಳಿಗೆ ಜವಾಬ್ದಾರಿ ಕೊಟ್ಟು ಬರೋದಿಕ್ಕೆ ಅಗೋದಿಲ್ಲ ಅಂತ. ಅಮ್ಮ ಇಲ್ಲ ಅನ್ನೋ ಕೊರಗು ನನಗೆ ಇಲ್ಲ ಅನ್ನೋ ಹಾಗೆ ಸಾಕ್ತಾ ಇದ್ದೆ. ನೀನು ಹೋದ ಮೇಲೆ ಇಲ್ಲಿ ಏನೆಲ್ಲಾ ಆಯ್ತು ಗೊತ್ತ ನೀನು ಒಂದು ಸಾರಿ ಕೂಡ ನಾನು ಹೇಗಿದ್ದೀನಿ ಅಂತ ಕೇಳಲೇ ಇಲ್ಲ ಕಣೋ ಬೇಡ ಬಿಡು ಯಾವಾಗ ಅದರೂ ನೀನು ನನ್ನ balance ತೀರಿಸಲೇ ಬೇಕು ಗೊತ್ತ ಅವಾಗ ಬಡ್ಡಿ ಸಮೇತ ನಿನ್ನ ಹತ್ತಿರ ತೀರಿಸ್ಕೋತೀನಿ ಅವಾಗ ಅಮ್ಮನಿಗೂ ಹೇಳು ನಾನು ಅವಳ ಮೇಲೆ ತುಂಬಾ ಸಿಟ್ಟು ಮಾಡ್ಕೊಂಡಿದ್ದೀನಿ ಅಂತ ಅವರಿಗೆ ನನ್ನ ಕಂಡರೆ ಪ್ರೀತಿ ಇಲ್ವಂತ ಯಾಕೆ ಮೊದಲೆಲ್ಲಾ ನಾನು ಅವರ ಮುದ್ದಿನ ಮಗಳು ಅಂತ ಹೇಳ್ತಾ ಇದ್ದರು. ಹೋಗಲಿ ಬಿಡು ನನ್ನ ಕಷ್ಟ ನನಗೆ ಇರಲಿ ನೀನು ಸುಖವಾಗಿರು.
ಏ ನಾನು ಯಾಕೆ ಗೊತ್ತೆನೊ ಈಗ letter ಬರೆಯುತ್ತಾ ಇರೋದು ಮೊನ್ನೆ ನನ್ನ ಬೆಂಗಳೂರಿಗೆ training ಹಾಕಿದ್ದರು ಅಲ್ಲ ಕಣೋ ನನ್ನ office ಸಹ ನೀನು school ಹೋಗೋ ತರ ನಾನು ready ಆಗಿ ಬರೋವರೆಗೆ ನೀನು ನನಗೆ wait ಮಾಡಿ ಕರೆದುಕೊಂಡು ಬಂದು ಬಿಟ್ಟು ಹೋಗಿ ಮತ್ತೆ ಬಂದ ನನ್ನ ಕರೆದುಕೊಂಡು ಹೋಗ್ತಾ ಇದ್ದೆ ಅಂತದ್ರಲ್ಲಿ ನನ್ನ ಬೆಳಗ್ಗೆ ನಿನಗೆ training ಇದೆ ಹೋಗು ಅಂತ ಹೇಳಿದ್ರು ನನ್ನ ಸ್ಥಿತಿ ಹೇಗಿರಬೇಕು. ನೀನು ಯಾವತ್ತೂ ನಾನು ಒಬ್ಬಳೆ ಎಲ್ಲಿಗೂ ಹೋಗೋದಕ್ಕೆ ಬಿಡಲೇ ಇಲ್ಲ. ಯಾವಗಲೂ ಇಬ್ಬರು ಜೊತೆಯಲ್ಲೇ ಓಡಾಡ್ತ ಇದ್ವಿ ಆಗ ನನ್ನ ಸ್ಥಿತಿ ಹೇಗಿತ್ತು ಗೊತ್ತ ನೀರಲ್ಲಿರೊ ಮೀನು ತೆಗೆದು ಭೂಮಿ ಮೇಲೆ ಹಾಕಿದಾಗಿತ್ತು. ಸರಿ ಹೋಗೋಣ ಅಂತ ಹೊರಟರೆ ನನ್ನ health problem ಅಕ್ಕ ನೀನು ಹೋಗೋದು ಏನು ಬೇಡ ಮನೇಲೆ ಇರು ಅಂತಾಳೆ but officeನಲ್ಲಿ ನೀನು ಹೋಗಲೇಬೇಕು ಅಂತ ಏನು ಮಾಡೋದು ಹೇಳೊ ನೀನೆ ನಾನಂತು ನಿನ್ನ ಚೆನ್ನಾಗಿ ಬೈದುಕೊಂಡೆ ಕಣೋ. ನಾನು ಚಿಕ್ಕೊಳಿರೊವಾಗಿಂದ ನಾನು ದೈರ್ಯವಾಗಿ ಎಲ್ಲರ ತರ ಓಡಾಡುವುದನ್ನು ಕಲಿತಿದ್ದರೆ ಈಗ ನನಗೆ ಈ ಕಷ್ಠ ಇರ್ತಾ ಇರಲಿಲ್ಲ ಕಣೋ. ಅಣ್ಣ ನಮ್ಮ officeನಲ್ಲಿ ಯೋಗಣ್ಣ sir ಗೊತ್ತಲ್ಲ ಅವರು ನನ್ನ ಪಾಲಿಗೆ ದೇವರೇ ಸರಿ. ಎಂದೋ ನೋಡದೇ ಇರೋ ಅಲ್ಲಿ ನಾನು ಹೋಗೋದು ಹೇಗೆ, ಹೋಗಲಿಲ್ಲ ಅಂದರೆ salary cut ಆಗುತ್ತೆ ಸರಿ ನೋಡೋಣ ಅಂತ already ರಾತ್ರಿ 9-00 ಆಗಿದೆ ಅವರಿಗೆ phone ಮಾಡೋಣ ಅಂದರೆ ಸರಿ ಅವರಿಗೆ ಯಾಕೆ phone ಮಾಡೋದು ಅಂತ ಹೇಳಿ ರೂಪೇಶ್ ಸಾರ್ ಗೆ call ಮಾಡ್ದೆ. ಅಲ್ಲಿಗೆ ನಾನು ರೂಪೇಶ್ ಅವರ ಜೊತೆ ಮನಸ್ಸು ಬಿಚ್ಚಿ ಮಾತನಾಡಿ ಸುಮಾರು 1 1/2 ವರ್ಷ ಅಗಿತ್ತು ನಾನು ಅವರ ಬಗ್ಗೆ ತಪ್ಪು ತಿಳ್ಕೊಂಡಿದ್ದೆ ಕಣೋ . ಹೇಗೋ ರೂಪೇಶ್ ಸಹಾಯದಿಂದ ನಾನು ಬೆಳಿಗ್ಗೆ ಬೇಗ ಎದ್ದು ತುಮಕೂರಿಗೆ ಬಂದೆ ನಾನು bus stand ತಲುಪುವಷ್ಟರಲ್ಲಿ ಇಬ್ಬರು two time call ಮಾಡಿದ್ರು ನನಗೆ ಎಷ್ಟು ಸಂತೋಷ ಆಯ್ತು ಗೊತ್ತ. ನಾನು bus stand ತಲುಪವಷ್ಟರಲ್ಲಿ ರೂಪೇಶ್ ನನಿಗಾಗಿ ಕಾಯ್ತ ಇದ್ರು ನನ್ನ Railway station ಗೆ ಕರೆದುಕೊಂಡು ಹೋಗಿ ticket ಕೊಡಿಸಿ coffee ಕೊಡಿಸಿ ಯೋಗಣ್ಣ ಸಾರ್ ಬರೋವರೆಗೆ ನನ್ನ ಜೊತೆ ಇದ್ದು ಅವರ ಬಂದಮೇಲೆ ಅವರು ಮನೆಗೆ ಹೋದರು. ಅಲ್ಲಿಂದ ಯೋಗಣ್ಣ ಸಾರ್ ಜವಾಬ್ದಾರಿ ಶುರುವಾಯಿತು ಅವರು ನನ್ನ training ಒಳಗಡೆ ಬಿಟ್ಟು ಮತ್ತೆ ಮದ್ಯಾಹ್ನ ಊಟದ ಸಮಯದಲ್ಲಿ ನನ್ನ ಹತ್ತಿರ ಬಂದು ಊಟ ಆಯಿತಾ ಅಂತ ಕೇಳಿ ಮತ್ತೆ ಸಂಜೆ ಜೊತೆಯಲ್ಲಿ ಕರೆದುಕೊಂಡು ಬಂದು ಮತ್ತೆ ಇಬ್ಬರು ಸೇರಿ ನನಗೆ bus ticket ತೆಗೆದುಕೊಟ್ಟು ಹೋಗ್ತಾ ಇದ್ರು ಕಣೋ. ಅವಾಗ ನನಗೆ ನೀನು ಪ್ರತೀ ನಿಮಿಷದಲ್ಲೂ ನೆನಪಾಗ್ತ ಇದ್ದೆ ಕಣೋ ಅಣ್ಣ ಬೇಜಾರ್ ಮಾಡ್ಕೊಬೇಡ ಒಂದು ವಿಷಯ ನಾನು ಯಾವಾಗ್ಲೂ ನಿನ್ನ ಮುದ್ದಿನ ತಂಗಿ ಪ್ರತೀ ಜನ್ಮದಲ್ಲೂ ನಿನಗೆ ತಂಗಿ ಆಗ್ತೀನಿ ಅಂತ ಮಾತು ಕೊಟ್ಟಿದ್ದೆ ಈಗಲೂ ಹೇಳ್ತಿನಿ ಕಣೋ ಆ ಮೂರು ದಿನಗಳಲ್ಲಿ ನಾನು ನನ್ನ ಮನಸ್ಸನ್ನ change ಮಾಡ್ಕೊಂಡೆ ಯಾಕೆ ಗೊತ್ತ ಅವರಿಬ್ಬರ ಋಣ ಕೂಡ ನನ್ನ ಮೇಲೆ ಅದ್ದರಿಂದ ನಾನು ನಿಮ್ಮ ಮೂವರಿಗೂ ತಂಗಿ ಆಗ್ತೀನಿ. ರೂಪೇಶ್ ಸಾರ್ ನಾನು ನಿಮ್ಮ ನಂಬಿಕೆಗೆ ಯಾವತ್ತೂ ದ್ರೋಹ ಮಾಡೊದಿಲ್ಲ ನಾನು ಪ್ರತೀ ವರ್ಷ ಕಟ್ಟುತ್ತಿದ್ದ ಒಂದು ರಾಖಿ ನನಗೆ ಇಷ್ಟೊಂದು ಸಹಾಯ ಮಾಡುತ್ತೆ ಅಂದ್ರೆ ನಾನು ತುಂಬಾ ಅದೃಷ್ಟವಂತೆ ಕಣೋ ಏನೇ ಇರಲಿ ನಾನು ಮಾತ್ರ ನಿನ್ನ ಕ್ಷಮಿಸೋದಿಲ್ಲ ಕಣೋ ನನ್ನ ಒಬ್ಬಳನ್ನೇ ಬಿಟ್ಟು ಯಾಕೆ ಹೋದೆ.
ಅಣ್ಣ ಇನ್ನೊಂದು ಸಾರಿ letter ಬರೆಯೋವಾಗ ಎಲ್ಲಾ ವಿಷಯನು ಹೇಳ್ತೀನಿ ಕಣೋ please ಈ letter ಓದು ಅಣ್ಣ ಅಮ್ಮನ್ನ ಕೇಳ್ದೇ ಅಂತ ಹೇಳು
ಇಂತಿ ನಿನ್ನ ಪ್ರೀತಿಯ ನತದೃಷ್ಟ ತಂಗಿ
Comments
ಉ: ಅಣ್ಣನಿಗೊಂದು ಪತ್ರ
In reply to ಉ: ಅಣ್ಣನಿಗೊಂದು ಪತ್ರ by partha1059
ಉ: ಅಣ್ಣನಿಗೊಂದು ಪತ್ರ
ಉ: ಅಣ್ಣನಿಗೊಂದು ಪತ್ರ
In reply to ಉ: ಅಣ್ಣನಿಗೊಂದು ಪತ್ರ by ashokdoddajala
ಉ: ಅಣ್ಣನಿಗೊಂದು ಪತ್ರ
In reply to ಉ: ಅಣ್ಣನಿಗೊಂದು ಪತ್ರ by umargraju
ಉ: ಅಣ್ಣನಿಗೊಂದು ಪತ್ರ
ಉ: ಅಣ್ಣನಿಗೊಂದು ಪತ್ರ
In reply to ಉ: ಅಣ್ಣನಿಗೊಂದು ಪತ್ರ by sathishnasa
ಉ: ಅಣ್ಣನಿಗೊಂದು ಪತ್ರ