ಅ ಕಪ್ ಓಫ್ ಕಾಫಿ ... ಸಿಪ್ - ೬
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಸಿಪ್ ೬
ಮೆಸ್ಸ್ ನಲ್ಲಿ ಬರೇ ಜುನಿಯರ್ಸ್ ಮತ್ತು ಹುಡುಗೀರು ಇದ್ದರು. ಸೀನಿಯರ್ಸ್ ಎಲ್ಲಾ ಹಾಸ್ಟೆಲ್ ನಿಂದ ೮ ಕ್ಕೆ ಪಲಾಯನ ಗೈದಿದ್ದರು. ೯ ಕ್ಕೆ ನಾನು ನನ್ನ ಊಟ ಮುಗಿಸಿ ರೂಂ ಗೆ ಮರಳಿದೆ. ಹಾಸ್ಟೆಲ್ ನ ಸೀನಿಯರ್ ಬಾಯ್ಸ್ ಬ್ಲಾಕ್ ನ ಬಹುತೇಕ ಎಲ್ಲಾ ಕೋಣೆಗಳು ಖಾಲಿ, ಕೆಲವೊಂದು ಕೋಣೆಗಳು ಮಾತ್ರ ನಿಶಬ್ದವಾಗಿ ಓದುತಿದ್ದವು. ಓದಲೆಂದೇ ಹುಟ್ಟಿದ ಜನ ಅವರು. ಮೊದಲ ಕಂಪನಿಯಲ್ಲೇ ಕೆಲಸ ಗಿಟ್ಟಿಸಿಕ್ಕೊಂಡ ಜನ. ಆದರೂ ವಿದ್ಯಾರ್ಚನೆಯ ದಾಹ ತೀರದೆ CAT ಪ್ರೆಪರಶನ್ ಮಾಡುತಿದ್ದರು. ೬ ಅಂಕೆಯ ಸಂಬಳವನ್ನು ತಿಂಗಳಿಗೆ ತೆಗೆಯಬೇಕ್ಕೆಂಬ ಛಲ ಅವರಲ್ಲಿ. ಆ ಮೂಲಕ ಜಾಬ್ ಹುಂಟ್ ನಲ್ಲಿ ತನಗಿಂತ ಹಿಂದೆ ಇದ್ದ ವಿದ್ಯಾರ್ಥಿಗಳ ಮೇಲೆ ತಣ್ಣೀರೆರಚಿದ ಜನ.
ಹೊಸ ಪ್ರಿನ್ಸಿಪಾಲ್ ತಂದ 'ಒಮ್ಮೆ ಪ್ಲೇಸ್ ಆದ ವಿದ್ಯಾರ್ಥಿಗಳು ಮುಂದಿನ ಕಂಪನಿಯಲ್ಲಿ ಬರೆಯುವಂತಿಲ್ಲ' ಎಂಬ ಹೊಸ ನಿಯಮದಿಂದ ನನ್ನಂತಹ ಫಸ್ಟ್ ಕ್ಲಾಸ್ ಹುಡುಗನಿಗೆ ೮ ನೇ ಕಂಪನಿಯಲ್ಲಿ ಅವಕಾಶ ಒದಗಿಬಂತು. ಇಲ್ಲನ್ತಾದರೆ ಈ ಜನ ಬಂದ ಎಲ್ಲಾ ಕಂಪನಿ ಬರೆಯುತಿದ್ದರು. ಮತ್ತು ಎಲ್ಲದರಲ್ಲೂ ತಮ್ಮ ಸ್ಥಾನ ಭದ್ರ ಮಾಡಿಕೊಳ್ಳುತಿದ್ದರು. ಕೊನೆಗೆ ಸೆಲೆಕ್ಟ್ ಮಾಡಿದ ಕಂಪನಿಗೂ, ಸ್ಪರ್ದೆಯಲ್ಲಿರುವ ನಮಗೂ ಕೈಗೊಂದು ಚೆಂಬುಕ್ಕೊಟ್ಟು ಐಐಎಂ, ಬಿಸಿನೆಸ್ ಸ್ಚೂಲ್ಸ್ ನ ಹಾದಿ ಹಿಡಿಯುತಿದ್ದರು.
ಅವರ ಜೊತೆ ಸೇರುವುದೆಂದರೆ ಒಂದು ಸೆಮಿನಾರ್ ಎದುರಿಸಿದಂತೆ ಅಂದುಕ್ಕೊಂದು ನಾನು ಪುನಃ ಮಹಡಿ ಮೆಟ್ಟಲಿಳಿದೆ.
ರವಿ ಕಾಲೇಜ್ ಕ್ಯಾಂಪಸ್ ಪಕ್ಕದಲ್ಲೇ ರೂಂ ಮಾಡಿಕ್ಕೊಂಡಿದ್ದ. ಸಲ್ಪ ದೂರ. ಈಗ ಬೈಕ್ ಬಂದಾಗಿಂದ ಎರಡು ಹೆಜ್ಜೆ ನಡೆಯಲು ಆಲಸ್ಯ. ಆದರೆ ಇವತ್ತು ನಡೆದೇ ಹೋಗುವ ಅನಿವಾರ್ಯತೆ. ೭: ೩೦ ಕ್ಕೆ ಕಾಲೇಜ್ ಗೇಟ್ ಗೆ ಬೀಗ ಹಾಕುತ್ತಾರೆ.ಎಲ್ಲಾ ಹೊಸ ಪ್ರಿನ್ಸಿಪಾಲ್ ಕೃಪೆ !!!
ಒಂದು ಬದಿಯಲ್ಲಿ ಪ್ರಿನ್ಸಿಪಾಲ್ ಗೆ ಬಯ್ಯುತ್ತಾ, ಒಂದು ಬದಿಯಲ್ಲಿ ಅವರನ್ನು ಸ್ಮರಿಸುತ್ತಾ ಕಾಲೇಜ್ ಗೇಟಿನ ಚಡಾವು ಏರಿ ಹೊರಬಂದೆ.ನನ್ನ ಪುಣ್ಯಕ್ಕೆ ಗೇಟ್ ನಲ್ಲಿ ಸೆಕ್ಯುರಿಟಿಯವನಿರಲಿಲ್ಲ. ಬೀಡಿ ಸೇದಲು ಹೋಗಿದ್ದ ಅನ್ಸುತ್ತೆ. ಇಲ್ಲವಾದಲ್ಲಿ ನಾನು ಲೆಜ್ಜರ್ ಬುಕ್ ನಲ್ಲಿ ನನ್ನ ಎಂಟ್ರಿ ಮಾಡಿಸಿ ಹೊರ ಬರಬೇಕಿತ್ತು ಇಲ್ಲ ಅವನಿಗೆ ಒಂದು ಕಟ್ಟು ಬೀಡಿಯ ಲಂಚ ಕೊಡಬೇಕಿತ್ತು.
ಕತ್ತಲಲ್ಲಿ ಒಬ್ಬನೇ ಸಾಗಿ ಕಾಲು ಕಿ.ಮಿ. ದೂರದ ರವಿಯ ರೂಂ ಇರುವ ಕಾಂಪೌಂಡ್ ತಲುಪಿದೆ. ದೊಡ್ಡದಾದ ಕಾಂಪೌಂಡ್ ಒಂದು ಬದಿಯಲ್ಲಿ ಮಾವಿನ ತೋಪು, ತೆಂಗಿನ ಮರ, ತರಕಾರಿ ಕೃಷಿ ಎಲ್ಲಾನು ಅದರಲ್ಲಿ ನಡೆಯುತ್ತಿತ್ತು. ನಮ್ಮ ಕಾಲೇಜ್ ಶುರುವಾದ ಹೊಸತರಲ್ಲಿ ಮಂಗಳೂರಿನ ಒಬ್ಬ ವ್ಯಾಪಾರಿ ೭ ಎಕರೆಯ ಈ ಜಾಗ ತೆಗೆದುಕ್ಕೊಂಡಿದ್ದ. ತನ್ನ ಜಾಗದ ಒಂದು ಮೂಲೆಯಲ್ಲಿ ಬರೇ ಪಾರೆ ಕಲ್ಲಿನ ಪ್ರದೇಶ. ಮೊದಲಿಗೆ ಅಲ್ಲಿ ಕಲ್ಲು ಕೊರೆಯುತಿದ್ದ ವ್ಯಾಪಾರಿಗೆ ಇಲ್ಲಿ ವಿದ್ಯಾರ್ಥಿಗಳಿಗೆ ಮನೆ ಕಟ್ಟಿಸಿ ಬಾಡಿಗೆಗೆ ಕೊಡುವ ಆಲೋಚನೆ ಕಾಲೇಜ್ ಶುರುವಾಗುವಾಗಿನಿಂದ ಬಂದಿತು.
ಅದರಂತೆ ಬಂಜರು ಪ್ರದೇಶದಲ್ಲಿ ಅವನು ೧೨ 1BHK ಮನೆಗಳನ್ನು ಕಟ್ಟಿಸಿದ. ಪ್ರತಿಯೊಂದು ಮನೆಯನ್ನು ೩- ೪ ಮಂದಿಗೆ ವರ್ಷಕ್ಕೆ ೧೮ ಸಾವಿರದ ವರೆಗೆ ಬಾಡಿಗೆಗೆ ಕೊಡುತಿದ್ದ. ಒಂದು ವರ್ಷದ ಹಿಂದೆ ಅವನು ಹೀಗೆ ಬೇರೆ ಬೇರೆ ಮನೆ ಕಟ್ಟುವುದಕ್ಕಿಂತ ೨- ೩ ಮಹಡಿಯ ಒಂದು ಮಳಿಗೆಯನ್ನೆ ಕಟ್ಟಿಸಿದ. ಪ್ರತಿ ರೂಮ್ನಲ್ಲಿ ಇಬ್ಬರೂ ವಿದ್ಯಾರ್ಥಿಗಳನ್ನು ಹಾಕಿ ಅಷ್ಟೇ ಹಣ ವಸೂಲಿ ಮಾಡುವ ಇರಾದೆ ಅವನದ್ದಾಗಿತ್ತು.
ವಿಧ್ಯಾರ್ಥಿಗಳಿಗೂ ಕಾಲೇಜ್ ನ ೪೦ ಸಾವಿರ ಬಾಡಿಗೆಯ ಹಾಸ್ಟೆಲ್ ಗಿಂತ ಇದು ಹತ್ತಿರವಾಗುತಿತ್ತು, ಇಲ್ಲಿ ವಾರ್ಡನ್ ಗೀರ್ಡನ್ ಗಳ ಕಾಟವಿಲ್ಲ. ಇಷ್ಟ ಬಂದ ಹಾಗೆ ಇರಬಹುದು. ಆದರೆ ಇಲ್ಲಿ ಕರೆಂಟ್ ಪ್ರಾಬ್ಲಮ್, ಬಟ್ಟೆ ಉಪಚಾರಗಳಿಲ್ಲ. ಮನೆಯವರು ಮಕ್ಕಳು ಚೂರದರೂ ಶಿಸ್ತು ಕಲಿಯಲಿ ಎಂದು ಅವರನ್ನು ಈ ಪ್ರೈವೇಟ್ ರೂಂ ಬಿಟ್ಟು ಹಾಸ್ಟೆಲ್ ನಲ್ಲಿ ಸೇರಿಸುತಿದ್ದರು. ಮಕ್ಕಳ ಶ್ರೆಯಸ್ಸೋಭಿವೃದ್ದಿ ಮನೆಯವರು ಬಯಸಿದರೆ ಮಕ್ಕಳು ತಮ್ಮ ಶೋಕಿಭಿವೃದ್ದಿ ಮಾಡುವಲ್ಲಿ ತಲ್ಲೀನರು.
ತಮಗೆ ಕುಡಿಬೇಕು, ಪಾರ್ಟಿ ಮಾಡ ಬೇಕು ಎಂದಾದಾಗ ಈ ಕಾಂಪೌಂಡ್ ಗೆ ಬರುತಿದ್ದರು. ಕಾಲೇಜ್ ಗೇಟ್ ನಲ್ಲಿ ಕಾವಲು ಕಾಯುತಿದ್ದ ತಾಪನಿಗೆ ಒಂದು ಕ್ವಾಟರ್ ಕೊಟ್ಟರೆ ಅವ ತುಟಿಪಿಟಿಕ್ ಎನ್ನುತಿರಲಿಲ್ಲ. ವಾರ್ಡನ್ ಸ್ವಂತ ಬಾಟಲಿ ಹೊಡೆದು ಮಲಗಿರುವಾಗ ಈ ಹಾಸ್ಟೆಲ್ ಹುಡುಗರಿಗೆ ಶಿಸ್ತು ಕಲಿಸುವರ್ಯಾರು..??
ತಮ್ಮ ಮಗ-ಮಗಳು ಹಾಸ್ಟೆಲ್ ನಲ್ಲಿ ಓದಲಿ, ಹಬ್ಬ ಹರಿದಿನ ಎಂದು ಮನೆಗೆ ಏಕೆ ಕರೀಬೇಕು, ಅಂತೂ ಇಂತೂ ವರ್ಷದ ನಾಲ್ಕು ತಿಂಗಳು ನಮ್ಮೊಂದಿಗೆ ಇರ್ತಾರಲ್ಲ!' ಎಂದು ಅವರವರ ಧೈನಂದಿನ ಕಾರ್ಯದಲ್ಲಿ ಬ್ಯುಸಿ ಆಗಿರುವ ಹೆತ್ತವರು ಒಂದು ಕಡೆಯಲ್ಲಿ; ಪ್ರೀತಿ, ಪ್ರೇಮ, ವಿರಹ, ಲವ್ ಟ್ರಯಾಂಗಲ್, ಗ್ರುಜ್, ಬಾಕ್ಕ್ಸ್, ಕ್ರಿಟ್ಟಿ, ಇಯರ್ ಔಟ್ ನಲ್ಲಿ ನಿತ್ಯ ನರಳಾಡುವ ವಿದ್ಯಾರ್ಥಿವರ್ಗ ಇನ್ನೊಂದು ಕಡೆಯಲ್ಲಿ; ಹಾಗಾದ್ರೆ ಕಾಲೇಜ್ ವಿದ್ಯಾಬ್ಯಾಸ ಎಲ್ಲ ಯಾರಿಗೆ ...?
ಅದು ಹಣ ಮಾಡುವುದಕ್ಕೆ ಮೊದಲು ಡಿಗ್ರಿ ಕೊಡುತ್ತೇವೆ ಹೇಳಿ ಸ್ಕೂಲ್ ಫೌಂಡೆಶನ್ ಹಣ ಮಾಡುತ್ತದೆ; ನಂತರ ಯುನಿವರ್ಸಿಟಿ ಫೀಸ್, ರೆವಲ್ಯುಯೇಶನ್ ಹೇಳಿ ಹಣ ಮಾಡುತ್ತದೆ, ಕೊನೆಗೆ ಯುನಿವರ್ಸಿಟಿ ಕೊಟ್ಟ ಆ ಡಿಗ್ರಿ ಹಿಡಿದು ನಾವು ಹಣ ಮಾಡುತ್ತೇವೆ.
ಕಾಂಪೌಂಡ್ ನಲ್ಲಿ ಹೆಚ್ಚಿನವರು ನಮ್ಮ ಬಾಚ್ ನವರೇ ಎಲ್ಲಾ ೧೨ ಮನೆಗಳನ್ನು ನಮ್ಮ ಬಾಚ್ ನವರೇ ಬಾಡಿಗೆ ತೆಕ್ಕೊಂಡಿದ್ದರು. ಹೊಸ ಕಟ್ಟಡದಲ್ಲಿ ಮಾತ್ರ ಈ ವರ್ಷ ಸೇರಿದ ವಿದ್ಯಾರ್ಥಿಗಳಿದ್ದರು, ಆ ಕಟ್ಟಡದಲ್ಲೂ ನಮ್ಮ ಬಾಚ್ ನವರು ಆಕ್ರಮಿಸಿದ್ದರು. ಉಳಿದಿರುವ ವಿದ್ಯಾರ್ಥಿಜೀವನದ ಒಂದು ವರ್ಷವನ್ನು ಸಂಪೂರ್ಣ ವಾಗಿ ಅನ್ಹುಭಾವಿಸಲು ಅವರು ಹಾಸ್ಟೆಲ್ ನಿಂದ ಇಲ್ಲಿ ಪಲಾಯನ ಗೈದಿದ್ದರು.
ಹನ್ನೆರಡು ಮನೆಯನ್ನು ಒವ್ನರ್ ಒಂದು ವಿಸ್ತಾರವಾದ ಅಂಗಳದ ಎಂಟೂ ದಿಕ್ಕುಗಳಲ್ಲಿ ಕಟ್ಟಿದ್ದ. ನಡುವಲ್ಲಿದ್ದ ಅಂಗಳ ಹುಡುಗರಿಗೆ ಕ್ರಿಕೆಟ್, ಒಲಿಬಾಲ್, ಫೂಟ್ಬಾಲ್ ಆಡಲು ಸಾಕಾಗಿತ್ತು. ಈಗ ಅಲ್ಲಿ ೧೦- ೧೨ ಬೈಕ್ ಗಳು, ನಿಖಿಲ್ ನ ಕಾರ್ ಮತ್ತು ಶೆಟ್ಟಿಯ ಕಾರ್ ನಿಂತಿದ್ದವು.
ಅಂಗಳದ ಮದ್ಯದಲ್ಲಿ ತೆಂಗಿನ ಮಡಲನ್ನು ರಾಶಿ ಹಾಕಿ ಎಲ್ಲಾ ರೂಂ ನ ಕಸ ದ ರಾಶಿಯನ್ನು ಬದಿಯಲ್ಲಿ ಹಾಕಿದ್ದರು, ಕೇಂ ಫೈರ್ ನ ವ್ಯವಸ್ತೆ ಮಾಡಲಾಗಿತ್ತು. ನಿಖಿಲ್, ಶೆಟ್ಟಿ ಎಲ್ಲಾ ಮಡಲನ್ನು ನಡುವಲ್ಲಿ ಜೋಡಿಸುತಿದ್ದರು. ಸುತ್ತಲಿನ ೧೨ ಮನೆಗಳ ಜಗಲಿಯಲ್ಲಿ ಸರಿ ಸುಮಾರು ೩೦ ಮಂದಿ ಸೇರಿದ್ದರು. ರವಿಯು ತನ್ನ ಕಂಪ್ಯೂಟರ್ ಅನ್ನು ತನ್ನ ಜಗಲಿಯಲ್ಲಿ ಸೆಟ್ ಮಾಡಿಕೊಂಡಿದ್ದ.ಅದರಲ್ಲಿನ ೫.೧ ಸೌಂಡ್ ಸಿಸ್ಟೆಮ್ಸ್ ಅನ್ನು ಎಲ್ಲರಿಗೂ ಸಮನಾಗಿ ಕೇಳಿಸಲು ಪ್ರಕ್ಟಿಕಾಲ್ ನಲ್ಲಿ ಹೆಚ್ಚೇ ಜ್ಞಾನ ಇರುವ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಓದುತಿದ್ದ ಪ್ರಶಾಂತ್ ಅಮ್ಪ್ಲಿಫೈರ್ ಬಳಸಿ ಬಂದ ಶಬ್ಧವನ್ನು ಇನ್ನಷ್ಟು ದೂರಕ್ಕೆ ಸರಬರಾಜು ಮಾಡಲು ಅವನಿಗೆ ಸಹಾಯ ಮಾಡುತಿದ್ದ. ಎಲ್ಲಾ ರೂಂನ ಒಳಗಿದ್ದ ಸ್ಪೀಕರ್ಸ್ ಗಳನ್ನು ಜೋಡಿಸಿ ಒಂದೇ ತೆರನಾದ ಸದ್ದು ಬರುವಂತಹ ವ್ಯವಸ್ತೆ ಮಾಡಿ ಆಗಿತ್ತು.
ನಾನು ಹೋಗಿ ನನ್ನಂತೆ ವೆಜ್ ಹುಡುಗರ ಜಗಲಿಯಲ್ಲಿ ಕುಳಿತೆ. ೧೨ ರಲ್ಲಿ ಒಂದೇ ಮನೆ ವೆಜ್ ಆಗಿತ್ತು, ಕಳೆದ ಮೂರು ವರ್ಷದಲ್ಲಿ, ಇದೊಂದೇ ಮನೆಯವರು ಯಾವುದೇ ಚಟಕ್ಕೆ ದಾಸರಾಗದೆ ಉಳಿದವರಾಗಿದ್ದರರು.
ಎಲ್ಲ ಎರೆನ್ಜ್ಮೆಂಟ್ ಬಳಿಕ ಶೆಟ್ಟಿ ಮಡಲಿನ ಕೆಳಗೆ ತೆಂಗಿನ ಸಿಪ್ಪೆಯಲ್ಲಿ, ತಂದ ಸೀಮೆ ಎಣ್ಣೆ ಸುರಿದು "ಮ್ಯಾಚ್ ಬಾಕ್ಸ್ ಪ್ಲೀಸ್" ಅಂದ.
ಗುಂಪು ಸೇರಿ ಹೋಗೆ ಬಿಡುತಿದ್ದ ಗುಂಪಲ್ಲಿ ಒಬ್ಬ ತನ್ನ ಕಿಸೆಯಲ್ಲಿದ್ದ ಸಿಗಾರ್ ಲೈಟ್ ಅನ್ನು ಅವನೆಡೆಗೆ ಎಸೆದ. ಅವನು ಆ ಶೇಖರಣೆಗೆ ಬೆಂಕಿ ಹಚ್ಚಲು ಸರಿಯಾಗಿ ೧೨ ಗಂಟೆ ಯಾಗಿತ್ತು.
ಎಲ್ಲರು ತಮ್ಮ ತಮ್ಮ ಮನೆಯ ದೀಪವನ್ನೆಲ್ಲ ಆರಿಸಿ ಆ ಬೆಂಕಿಯ ಸುತ್ತಲೂ ಸೇರಿದರು. ರವಿ ಮತ್ತು ದೇವು ಇಬ್ಬರು ಕಂಪ್ಯೂಟರ್ ನಲ್ಲಿ ಕುಳಿತು ಹಾಡನ್ನು ಹಾಕಲು ಶುರು ಮಾಡಿದರು.
"ಕೋಯಿ ಕಹೇ .. ಕೆಹತಾ ರಹೇ .. ಕಿತನಾ ಭಿ ಹುಮ್ಕೋ ದಿವಾನ... " ಜೋಡಿಸಿದ ೧೨ ಸ್ಪೀಕರ್ ೨ ವೂಫರ್ ನಲ್ಲಿ ತೇಲಿ ಬರುತಿತ್ತು. ಬೆಂಕಿಯ ಸುತ್ತು ೨೪ ಮಂದಿ ಟ್ರೈನ್ ಮಾಡಿ ಸುತ್ತು ಬರುತಿದ್ದರು. ಶೆಟ್ಟಿ ಈ ಗುಂಪಿಗೆ ನಾಯಕ ನಾಗಿದ್ದ. ಎರಡು ರೌಂಡ್ ಆದ ಮೇಲೆ ಶೆಟ್ಟಿ ಟ್ರೈನ್ ಗೆ ಬ್ರೇಕ್ ಹಾಕಿದ. ಅವನನ್ನು ಹಿಮ್ಬಾಲಿಸುತಿದ್ದ ೪೬ ಕಾಲುಗಳು ನಿಂತುಕೊಂಡವು.
"ದೇವು, ಇಟ್ಸ್ ಟೈಮ್ ಟು ಸೆಲೆಬ್ರೇಟ್, ಪಾರ್ಟಿಯ ಕಳೆ ಹೆಚ್ಚಿಸಲು Moet & Chandon ಬರಲಿ " ಅಂದ ಶೆಟ್ಟಿ.
ಶೆಟ್ಟಿ ಕುಡುಕ ಅಲ್ಲ. ಆದರೆ ಕುಡುಕರಿಗೆ ಕಿಡಿ ಹತ್ತಿಸುವ ಗುಣದವ. ಅವರನ್ನು ಕುಡಿದು ಅದರಲ್ಲಿ ತೂರಾಡಿಸಿ ಅವರ ಬಾಯಿ ಬಿಚ್ಚಿಸುವ ಜನ.ಕುಡುಕರೊಂದಿಗೆ ಸೇರಿ ಎಲ್ಲ ಬ್ರಾಂಡ್ ನ ಹೆಸರನ್ನು ತಿಳಿದು ಕೊಂಡವ.
ಚಿನ್ನದ ಬೆಗಡಿಯ Moet & Chandon ಅನ್ನು ಹಿಡಿದು ದೇವು ರಂಗ ಪ್ರವೇಶಿಸಿದ.ಎಲ್ಲ ಗಂಡುಹೈಕಳು ನಿಂತಲ್ಲೇ ನಿಂತಿದ್ದರು. ಎರಡುವರೆ ಸಾವಿರ ಬೆಲೆಯ ಶಾಂಪೇನ್ ಬಾಟಲನ್ನು ಶೆಟ್ಟಿ ಎರಡು ಬಾರಿ ಕುಲುಕಿಸಿ ನಿಂತಿದ್ದವರ ಮೇಲೆ ಪ್ರೋಕ್ಷಿಸಿದ. ಬಳಿಯಲ್ಲೇ ನಿಂತಿದ್ದ ನಿಖಿಲ್ ಬಾಟಲ್ ಇಸ್ಕೊಂಡು ಎಲ್ಲರು "ಒಂದೊಂದು ಸಿಪ್ ಟೇಸ್ಟ್ ನೋಡೋಣ " ಎಂದು ಬಾಯಿಗೆ ಇಳಿಸಿದ.ಅವನಾದ ಮೇಲೆ ಎಲ್ಲರು ತಮ್ಮ ತಮ್ಮ ದಾಹ ತೀರಿಸಿಕ್ಕೊಂಡರು.
ನಾವು ಮೂವರು ಒಂದು ಜಗಲಿಯ ಮೂಲೆಯಲ್ಲಿ ಕೂತು ರವಿ ತನ್ನ ಸಿಸ್ಟಮ್ ನಲ್ಲಿ ತೇಲಿಸಿದ "ಧೂಮ್ ಮಚಾಲೆ ಧೂಮ್ ಮಚಾಲೆ..." ಹಾಡಿಗೆ ತಲೆ ದೂಗುತಿದ್ದೆವು.
************
ರವಿ, ಶೆಟ್ಟಿ ಮತ್ತು ನಾವು ಮೂವರು ಈಗ ಜ್ಯಾನದಲ್ಲಿದ್ದೆವು, ಉಳಿದವರೆಲ್ಲ ತಮ್ಮ ತಮ್ಮದೇ ಲೋಕದಲ್ಲಿ ವಿಹರಿಸುತಿದ್ದರು. ೫ ಸ್ಪ್ರೈಟ್, ೬ ಕೋಕ್, ೨ ವೋಡ್ಕಾ, ೫ ರಂ ಬಾಟಲ್ಗಳು ನಡುವಲ್ಲಿ ಉರಿಯುತಿದ್ದ ಬೆಂಕಿಯಂತೆ ಉಳಿದ ೨೫ ಮಂದಿ ಗಳ ಹೊಟ್ಟೆಯೊಳಗೆ ಸುಡುತಿತ್ತು.
ನಿಖಿಲ್ ಇನ್ನೂ ಆ ಉರಿಯುವ ಬೆಂಕಿಗೆ ಮಡಲು ಸೇರಿಸುತಿದ್ದ. ದೇವುಗೆ ಹೆಚ್ಚಿನ ಕಿಕ್ಕೆಕೊಟ್ಟಂತೆ ಇತ್ತು. ಹುಚ್ಚು ಹುಡುಗ ಇನ್ನೊಂದು ವಿಸ್ಕಿ ಬೋತ್ತಲ್ ಕೈಗೆತ್ತಿಕ್ಕೊಂಡು "ಗುಟ್ಸ್ ಇದ್ರೆ, ರೋ .. ಕುಡಿಯೋವರಿದ್ರೆ ನನ್ನೊಟ್ಟಿಗೆ ಬೆಟ್ ಗೆ ಇಳಿತೀರಾ...? " ಅಂದ.
ಅವನ ಒಪ್ಪಂದವನ್ನು ಇತರ ೫ ಹುಡುಗರು ಒಪ್ಪಿಕೊಂಡರು. ನಿಕಿಲ್ ತಂದ ಪ್ಲಾಸ್ಟಿಕ್ ಗ್ಲಾಸ್ ನಲ್ಲಿ ಆ ಬಾಟಲ್ ಅನ್ನು ಸಮನಾಗಿ ಹಂಚಿದ. ಬೇಗನೆ ಗ್ಲಾಸ್ ಮುಗಿಸಿದವನಿಗೆ ಆ ದಿನದ ಸ್ಪೆಷಲ್ ಉಡುಗೊರೆ ಎಂದು ನಿಖಿಲ್ ಘೋಷಿಸಿದ.
ಶೆಟ್ಟಿಯನ್ನು ಟೈಮ್ ಕೀಪೆರ್ ಆಗಿ ನೇಮಿಸಲಾಯಿತು.
ಒಂದೇ ನಿಮಿಷದಲ್ಲಿ ತನಗೆ ಕೊಟ್ಟ ಗ್ಲಾಸನ್ನು ಒಬ್ಬ ಕುಡಿದು ಮುಗಿಸಿದ, ನಿಖಿಲ್ ಇನ್ನೂ ತನ್ನ ಗುಟುಕು ಇಳಿಸುವುದರಲ್ಲೇ ಬ್ಯುಸಿ ಆಗಿದ್ದ.
ಶೆಟ್ಟಿ ಅವನಲ್ಲಿ "ಮಗಾ... ಬರಲಿ ನಿನ್ನ ಸ್ಪೆಷಲ್ ಗಿಫ್ಟ್ "
ನಿಖಿಲ್ "ರವೀ ಆ ರೆಡ್ ವೈನ್ ಬಾಟಲ್ ಕೊಡೊ ..." ಅಂದ.
ರವಿ ತನ್ನ ರೂಮ್ನಿಂದ ತಂದ ಆ ಬಾಟಲ್ ಅನ್ನು ನಿಕಿಲ್ ನ ಕೈಗಿಟ್ಟ.
ನಿಖಿಲ್ ಸಭಿಕರನ್ನು ಉದ್ದೇಶಿಸಿ "ನಮ್ಮ ಇವತ್ತಿನ ದಿನದ ವಿನ್ನರ್ MR ....??"
ಆ ತರುಣ "ವಿವೇಕ್"
ನಿಖಿಲ್ ಮತ್ತೆ ಮುಂದುವರಿಸಿದ "ವಿವೇಕ್ ಗೆ ಚೀರ್ಸ್ !!!" ಅಂದ.
ಉಳಿದ ಎಲ್ಲರು ತಮ್ಮ ಕೈಯಲ್ಲಿದ್ದ ಗ್ಲಾಸ್ ಅನ್ನು ಬಾನೆತ್ತರಕ್ಕೆ ಎತ್ತಿ ಚೀರ್ಸ್ ಅಂದರು.
ಅಷ್ಟರಲ್ಲಿ ರವಿ "ಶೀಶಾ ಸೆ ಶೀಶಾ ಟಕರಾವೋ.... " ಹಾಡು ಹಾಕಿದ. ಸೇರಿದ ಜನರಿಗೆ ಇನ್ನೂ ಜೋಶ್ ಬಂತು. ಶೆಟ್ಟಿ ಎಲ್ಲರಿಗೂ ಒಂದೊಂದು ಬೀರ್ ಕ್ಯಾನ್ ಸರಬರಾಜು ಮಾಡಿದ.
ಬಳಿಕ ಎಲ್ಲರೂ ಅವರವರ ಅಂತರಾಳದ ಮಾತನ್ನು ಯಾವುದೇ ತಡೆ ಇಲ್ಲದೆ ಮಾತನಾಡಾಲಾರಂಬಿಸಿದರು, ಗುಟುಕಿಸಲು ಬೀರ್ ಸಾಥ್ ಕೊಡುತ್ತಿತ್ತು.ಎಲ್ಲ ಬೆಂಕಿಯ ಬಳಿಯಲ್ಲಿ ಕುಳಿತು ತಮ್ಮ ತಮ್ಮ ಕಥೆಯಲ್ಲೇ ಮುಳುಗಿದರು. ಕೆಲವರು ಲೆಕ್ಚರರ್ ಬಗ್ಗೆ ಲೇವಡಿ ಮಾಡುತಿದ್ದರೆ, ಕೆಲವರು ತಮ್ಮ ಪ್ರೇಮದ ಬಗ್ಗೆ ಕೊರಗುತಿದ್ದರು.
ರವಿಯ ರೂಮ್ ಮೆಟ್ ಅಬ್ಬಾಸ್ ಅರ್ದ ಗಂಟೆ ಇಂದ ಒಂದೇ ಬೀರ್ ಕ್ಯಾನ್ ಹಿಡಿದು ಕುಳಿತಿದ್ದ, ಅವ ಮತ್ತು ಶೆಟ್ಟಿ ನಮ್ಮ ಜಗಲಿಯ ಬಳಿಗೆ ಬಂದು ಕುಳಿತುಕ್ಕೊಂಡ.
ಶೆಟ್ಟಿ "ಎಂಚ ಉಂಡು ...? ಪೋಸ ಟೇಸ್ಟ್(ಹೇಗುಂಟು ಹೊಸ ರುಚಿ ..??)"
ಅಬ್ಬಾಸ್ "ದಾದನೋ, ಒಗರೋಗರುಂಡು... "
ಅಬ್ಬಾಸ್ ಇವತ್ತು ಮೊದಲ ಬಾರಿಗೆ ಕುಡಿಯುತಿದ್ದ. ಇನ್ಫೋಸಿಸ್ ನಲ್ಲಿ ಕೆಲಸ ಗಿಟ್ಟಿಸಿಕ್ಕೊಂಡ ಖುಷಿಗೆ ಅವನು ಇವತ್ತು ಎಣ್ಣೆ ಇಳಿಸಿದ್ದ. ಸಲ್ಪದರಲ್ಲೇ ಅಲ್ಲಿ ಬಂದ ವಿವೇಕ್ ಅವನಿಗೆ "ಹಾಟ್ ಪರೋಡು... ಎಡ್ಡೆ ಕಿಕ್ಕ್ ತಿಕ್ಕುಂಡು" ಅಂದ.
ಅವನು ಅದಕ್ಕೆ ಸಮ್ಮತ್ತಿಸಿ ಅವ ಕೊಟ್ಟ ರಂನ ರೋ ಸಿಪ್ ಅನ್ನು ಹಾಗೆ ಕುಡಿದು ಬಿಟ್ಟ.
ವಿವೇಕ್ ನಮ್ಮಲ್ಲಿ " ಪರೋಡು , ಇತ್ತೆದ ಕಾಲೋಡು ಪೋನ್ನುಳು ಲ ಪರ್ಪೆರ್ , ನಿಕ್ಲು ಆಣಾದ್ ವೇಸ್ಟ್ "(ಕುಡಿಬೇಕು, ಈ ಕಾಲದಲ್ಲಿ ಹುಡುಗೀರೂ ಕುಡಿತಾರೆ, ನೀವು ಗಂಡಾಗಿ ವೇಸ್ಟ್!!!) ಅಂದ.
ಮೂವರು ಒಲ್ಲೆ ಎಂದು ಹೇಳಲು ಅವನು ತಾನು ತಂದ ಸ್ಪ್ರೈಟ್ ಬಾಟಲ್ ಅನ್ನು ನಮಗೆ ಕೊಟ್ಟು ತನ್ನ ಕುಡುಕರ ಗುಂಪನ್ನು ಸೇರಿಕ್ಕೊಂಡ.
ರವಿ ಹಾಡು ಬದಲಿಸುತ್ತಾ ಇದ್ದ. ಸಮಯ ಒಂದು ಗಂಟೆ ಜಾರಿತ್ತು. ಮಿಲನ್ ಇನ್ನೊಂದು ಜಗಲಿಯಲ್ಲಿ ವ್ಯವಸ್ತೆ ಮಾಡಿದ ಕಂಪ್ಯೂಟರ್ ನಲ್ಲಿ ಕುಳಿತು ತನ್ನ ಬಳಿ ಇರುವ ಭಜನೆಗಳನ್ನು ಆಸಕ್ತರಿಗೆ ತೋರಿಸುತಿದ್ದ. ಅದ ನೋಡುತ್ತಾ ಕೆಲವರು ಜೊಲ್ಲು ಸುರಿಸುತ್ತಾ ಬೀರ್ ಗುಟುಕುತಿದ್ದರು.
ನಾನು ವಿವೇಕ್ ಕೊಟ್ಟ ಸ್ಪ್ರೈಟ್ ಬಾಟಲ್ ಕೈ ಗೆತ್ತಿ ಕುಡಿಯಲು ಹೋದೆ, ಇದನ್ನು ಗಮನಿಸುತಿದ್ದ ಶೆಟ್ಟಿ "ಅವ್ವೆನ್ ಪರೋಡ್ಚಿ"(ಅದ ಕುಡಿ ಬೇಡ!!!) ಅಂದ.
ಯಾಕೆ ಎಂದು ತಿಳಿಯದೆ ಅವನನ್ನೇ ನೋಡುತಿದ್ದೆ, ಅವ "ಅಕ್ಕುಳು, ಆಯ್ಕ ವೋಡ್ಕಾ ಮಿಕ್ಸ್ ಮಲ್ದೆರ್ " ಅಂದ.
ಮೂವರಿಗೂ ಆಶ್ಚರ್ಯ ವಾಯಿತು. ಮೆಲ್ಲನೆ ಒಂದು ಗೊಟುಕನ್ನು ನಾಲಿಗೆಗೆ ತಾಗಿಸಿ ನೋಡಿದೆ. ಬೇರೇನೆ ರುಚಿ ಇತ್ತು. ವಿವೇಕ್ ಅರ್ದ ಮುಗಿದ ಸ್ಪ್ರೈಟ್ ಬಾಟಲ್ ಗೆ ವೋಡ್ಕಾ ಇಳಿಸಿ ನಮಗೆ ಕುಡಿಯಲು ಕೊಟ್ಟಿದ್ದು ಎಂದು ಮನವರಿಕೆ ಆಯಿತು.
ಅದನ್ನು ಶೆಟ್ಟಿ ಕುಡುಕರಿಗೆ ಹಿಂತಿರುಗಿಸಿ, ಇನ್ನೂ ಓಪನ್ ಮಾಡದಿರುವ ಸ್ಪ್ರೈಟ್ ನಮಗೆ ತಂದು ಕ್ಕೊಟ್ಟ. ನಾಲ್ವರೂ ಅದನ್ನು ಕುಡಿದು ಕುಡುಕರ ಆಗು ಹೋಗುಗಳನ್ನು ಗಮನಿಸುತಿದ್ದೆವು. ಕೆಲವರು ಸುಸ್ತಾಗಿ ಅಲ್ಲೇ ಅಂಗಳದಲ್ಲಿ ಅಡ್ಡ ಬಿದ್ದುಕ್ಕೊಂಡರು, ಇನ್ನೂ ಕೆಲವರು ತಮ್ಮತಮ್ಮ ರೂಮ್ ಗೆ ಹೋಗಿ ಬಿದ್ದು ಕೊಂಡರು, ರವಿ ತನ್ನ ಸಿಸ್ಟಮ್ ಬಿಡಿಸಿ ಹೋದದ್ದು ನಶೆ ಹೆಚ್ಚಿಸಿ ಕೊಂಡಿರುವ ವಿವೇಕ್ ನಂತ ಹಾರ್ಡ್ ಕೋರ್ ಕುಡುಕರಿಗೆ ತಿಳಿಯಲಿಲ್ಲ, ಅವರಿನ್ನೂ ಸಂಗೀತಕ್ಕೆ ಹೆಜ್ಜೆ ಹಾಕುತಿದ್ದರು.ನಾನು ಮತ್ತು ಶೆಟ್ಟಿ ಕುಡುಕರಿಲ್ಲದ ರೂಮ್ ಸೇರಿದೆವು.
ಮುಂದಿನ ಸಿಪ್