ಆಂಡ್ರಾಯ್ಡ್ ಮೊಬೈಲಿನಲ್ಲಿ .apk ಫೈಲನ್ನು ಅನುಸ್ಥಾಪಿಸಿಕೊಳ್ಳುವ ವಿಧಾನ
ಆಂಡ್ರಾಯ್ಡ್ ಮೊಬೈಲಿನಲ್ಲಿ ಅನುಸ್ಥಾಪಿಸಿಕೊಳ್ಳುವ ಅಪ್ಲಿಕೇಶನ್ ಗಳು .apk ಎಕ್ಸ್ ಟೆನ್ಷನ್ ಹೊಂದಿರುತ್ತವೆ. ಈ ಅಪ್ಲಿಕೇಶನ್ ಗಳನ್ನು ಆಂಡ್ರಾಯ್ಡ್ ನ ಅಧಿಕೃತ ಮಾರುಕಟ್ಟೆ 'ಆಂಡ್ರಾಯ್ಡ್ ಮಾರ್ಕೆಟ್' ನಿಂದ ಡೌನ್ ಲೋಡ್ ಮಾಡಿಕೊಂಡು ಅನುಸ್ಥಾಪಿಸಿಕೊಳ್ಳಬಹುದು.
ಮಾರ್ಕೆಟ್ ನಲ್ಲಿ ಲಭ್ಯವಿಲ್ಲದ ಅಪ್ಲಿಕೇಶನ್ ಗಳ .apk ಫೈಲ್ ನಿಮ್ಮ ಬಳಿ ಇದ್ದರೆ ಅದನ್ನು ನೇರವಾಗಿ ನಿಮ್ಮ ಮೊಬೈಲಿನಲ್ಲಿ ಅನುಸ್ಥಾಪಿಸಿಕೊಳ್ಳಲು ಸಾಧ್ಯವಿದೆ. (ಆದರೆ ಈ .apk ಫೈಲುಗಳು ನಂಬಲರ್ಹ ಮೂಲಗಳನ್ನು ಹೊಂದಿವೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಿ..)
೧. ಅಂತರಜಾಲತಾಣದಿಂದ ಡೌನ್ ಲೋಡ್ ಮಾಡಿದ .apk ಫೈಲನ್ನು ನಿಮ್ಮ SDCard ಇಲ್ಲವೇ ಫೋನ್ ಮೆಮರಿಯಲ್ಲಿ ಉಳಿಸಿಕೊಳ್ಳಿ.
೨. ನಿಮ್ಮ ಮೊಬೈಲಿನಲ್ಲಿ ಮಾರ್ಕೆಟ್-ಹೊರಗಿನ ಅಪ್ಲಿಕೇಶನ್ ಅನುಸ್ಥಾಪಿಸಿಕೊಳ್ಳಲು ಅನುಮತಿ ನೀಡಬೇಕು.
ಎಲ್ಲಾ ಅಪ್ಲಿಕೇಶನ್ ಗಳು ಕಾಣುವ ಮೆನುಗೆ ಹೋಗಿ. ಅಲ್ಲಿ settings ಎಂದಿರುವ ಐಕಾನ್ ಒತ್ತಿ.
Settings ಪಟ್ಟಿಯಲ್ಲಿ Applications ತೆರೆಯಿರಿ. ಅದರಲ್ಲಿ Unknown Sources ಎಂದಿರುವುದನ್ನು ಟಿಕ್ ಮಾಡಿ.
೩. ಈಗ ನಿಮ್ಮ .apk ಫೈಲ್ ಇರುವಲ್ಲಿ ಹೋಗಿ ಅದನ್ನು ಕ್ಲಿಕ್ ಮಾಡಿದರೆ ಮಾಮೂಲಾಗಿ ಮಾರ್ಕೆಟಿನಿಂದ ಅಪ್ಲಿಕೇಶನ್ ಇನ್ಸ್ಟಾಲ್ ಆಗುವಂತೆಯೇ ಅಪ್ಲಿಕೇಶನ್ ಅನುಸ್ಥಾಪನೆಗೊಳ್ಳುತ್ತದೆ.