ಕಣ್ಣು
ಕಣ್ಣು
ಮುಸ್ಸಂಜೆ ಮುಂಜಾವು
ಒಂದು ಇರುಳು ಒಂದು ಹಗಲು
ಹರಿಯುವುವು ಎಳೆಗಳು
ಎಲ್ಲೊ ಬಿದ್ದ ಗರಿಗಳು
ಆಸೆ ಮೂಡಿ ಕನಸು ತೂರಿ
ಹಗುರ ಹಾರಿ ಬರುವುವು
ಒಂದು ಕಡ್ಡಿ ಒಂದು ಗರಿಕೆ
ಒಂದು ಉಲ್ಲು ಒಂದು ಕುಣಿಕೆ
ಆಯ್ದು ತಂದು ಕಟ್ಟು ಗೂಡು
ಇಟ್ಟು ಬಿಟ್ಟು ತ್ತಿ ಜೋರು
ಇದ್ದುದಂತೆ ಇರುವುದಿಲ್ಲ
ಯಾವುದೂ ಇದ್ದಂತೆಯೆ
ಚಿಚಿಲಿ ಕುಕಿಲ ಸದ್ದು ಇಲ್ಲ
ಯಾವ ಹಾವೊ ಯಾವ ಬೆಕ್ಕೊ
ಹಗಲು ಇರುಳು ಒಂದೆಯಾನ
ಹಾಯಿಪಟವೆ ಜರಿದ ಗಾನ
ಬೆಳ್ದಿಂಗಳು ಕದ್ದಿಂಗಳು
ಅರಿಯದಾದ ಪಾಕಶಾಲೆ
ಹಗಲಿರುಲೂ ರಾಗವೊಂದೆ?
Rating
Comments
ಉ: ಕಣ್ಣು