ನಿನ್ನ ಕಣ್ಣ ನೋಟಕಾಗಿ !
ಕವನ
ನಿನ್ನ ಕಣ್ಣ ನೋಟಕಾಗಿ !
ಇದು ಕಷ್ಟ ! ಆ ಕಣ್ಣಿನ ಕುಡಿಯ ನೋಟದ ಅರ್ಥ ಕಾಂಬಲು ..
ಗೂಗಲ್ ಗು ತಿಳಿಯದ , ನಿಟುಕದ ಸ್ವಾರಸ್ಯ ಮಾಹಿತಿ !
ಎಷ್ಟು ಕವಿಗಳು, ಕವಿತೆಗಳು ಹಿಂದೆಲ್ಲ ಪುಸ್ತಕದ ಸಾಲುಗಳಾಗಿ ,
ಇಂದು ಕಂಪ್ಯೂಟರ್ ನ ಹೊಟ್ಟೆಯೊಳಗೆ ! ಅಂತರ್ಜಾಲ ಮೂಲೆ ಮೂಲೆ ಯಲ್ಲೂ !
ಸಮಯ ಅಂದು ಸರಿಯಿತ್ತಿತು ! ಇಂದು ಕೂಡ ! ಶಬ್ದಕೋಶ ಬೆಳೆಯಲಿ ! ಬೆಳೆಯಲಿ ..
ನಾನು ಕವಿಯೋ ? ಏನು ತಿಳಿಯದೆ ಹುಡುಕಿ, ಹುಡುಕಿ ಬೆಪ್ಪಾದ ಏನೋ ?
ಎಲ್ಲಿಹೊಯ್ತು ? ಏನು ಕಳದಿದೆ ,?ಹೇಳಪ್ಪ ?
ಸಾಕಪ್ಪ ಈ ಯತ್ನ ! ಸೋತರೆ ಸಿಗುವ ಮಹದಾನಂಧಕ್ಕೆ ಉಪಮೆ ಯಾಕೆ ?
ಅನುಭಾವದ ವಿರಾಟ ವಿಶ್ವರೂಪ ಮತ್ತೆ “ ಮೌನದಿಂದ ಪರ್ಯವಾಸಾನ” !!
ಗಿರೀಶ್ ಶ್ರೀನಿವಾಸ