ಬರೆಯಲಾರೆನೇ ಒಂದು ಹೊಸ ಅಧ್ಯಾಯ?

ಬರೆಯಲಾರೆನೇ ಒಂದು ಹೊಸ ಅಧ್ಯಾಯ?

ಈಗೀಗ ಮತ್ತೆ ಮತ್ತೆ ಸೋಲುತ್ತಿದ್ದೇನೆ, ಕಾರಣ ಸಿಗುತ್ತಿಲ್ಲ,   
ಮೊದಲು ಗೆಲ್ಲುವುದೇ ರೂಢಿಯಾಗಿತ್ತು, ಸೋಲು ಅಪವಾದವಾಗಿತ್ತು, ಈಗ ಹಾಗಿಲ್ಲ. 

ಆಗೆಲ್ಲ ಎಷ್ಟು ಸಲ ಸೋತರೂ, ಸೋಲನ್ನು ಅಂತಿಮವೆಂದು ಒಪ್ಪಿಕೊಂಡಿದ್ದಿರಲಿಲ್ಲ,  
ಈಗ ನಡೆಯುತ್ತಿರುವುದನ್ನು ಸುಮ್ಮನೆ ಒಪ್ಪಿಕೊಂಡುಬಿಡುತ್ತೇನೆ, ಹೋರಾಟವೇ ಇಲ್ಲ.
   
ಮತ್ತೆ ಮೊದಲಿನಂತೆ ಆಗಲಾರೆನೆ ನಾನು? ಈ ಹದಗೆಡುವಿಕೆಗೆ ಇಲ್ಲವೇ ಪೂರ್ಣವಿರಾಮ?
ಬದಲಾವಣೆಯ ತಂಗಾಳಿ ಸೂಸಲಾರದೆ? ಬರೆಯಲಾರೆನೇ ಒಂದು ಹೊಸ ಅಧ್ಯಾಯ? 

Rating
No votes yet