ಪುಸ್ತಕ ಲೋಕಾರ್ಪಣೆ: "ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು"

ಪುಸ್ತಕ ಲೋಕಾರ್ಪಣೆ: "ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು"

ನನ್ನ ಹೊಸ ಪುಸ್ತಕ ‘ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು’ ನವೆಂಬರ್ ೬ರಂದು ಭಾನುವಾರ ಸಂಜೆ ಲೋಕಾರ್ಪಣೆಯಾಗಲಿದೆ.

ಹಿರಿಯ ವಿದ್ವಾಂಸರಾದ ಪ್ರೊ. ಜಿ. ವೆಂಕಟಸುಬ್ಬಯ್ಯ ಹಾಗೂ ಚಲನಚಿತ್ರ ನಿರ್ದೇಶಕರಾದ ಶ್ರೀ ಗುರುಪ್ರಸಾದ್ ಅಂದು ನಮ್ಮ ಜೊತೆಗಿರಲಿದ್ದಾರೆ. ಶ್ರೀ ಶ್ರೀವತ್ಸ ಜೋಶಿಯವರು ಅಮೆರಿಕಾದಿಂದಲೇ ಪುಸ್ತಕದ ಪರಿಚಯ ಮಾಡಿಕೊಡಲಿದ್ದಾರೆ.

ಶ್ರೀ ಜಿ. ಎಸ್. ನಾಗನಾಥ್ ಅವರು ಈ ಕೃತಿಗಾಗಿ ಬರೆದಿರುವ ಚಿತ್ರಗಳ ಸ್ಲೈಡ್ ಪ್ರದರ್ಶನವೂ ಇದೆ.

ಆಕೃತಿ ಪುಸ್ತಕ ಹಾಗೂ ಇಜ್ಞಾನ ಡಾಟ್ ಕಾಮ್ ಪರವಾಗಿ ಈ ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಸ್ವಾಗತ.

- ಟಿ. ಜಿ. ಶ್ರೀನಿಧಿ