ಕನ್ನಡದಲ್ಲಿ ಶುದ್ಧ ಸ್ವರಾಕ್ಷರಗಳಿಂದ ಕೊನೆಗೊಳ್ಳುವ ಪದಗಳಿವಿಯೆ?

ಕನ್ನಡದಲ್ಲಿ ಶುದ್ಧ ಸ್ವರಾಕ್ಷರಗಳಿಂದ ಕೊನೆಗೊಳ್ಳುವ ಪದಗಳಿವಿಯೆ?

ಗೆಳೆಯರೆ/ಹಿರಿಯರೆ,

   ನಾನು ಹಾಗೆ ಯೋಚಿಸುತ್ತಿದ್ದಾಗ ನನಗೆ ಈ ವಿಷಯ ತಿಳಿದು ಬಂತು. ಕನ್ನಡದಲ್ಲಿ ಶುದ್ಧ ಸ್ವರಗಳಿಂದ ಕೊನೆಗೊಳ್ಳುವ ಪದಗಳೇ ಇಲ್ಲ(ನನಗಂತೂ ಇನ್ನೂ ಹೊಳೆದಿಲ್ಲ). ಇದು ಅಲಿಖಿತ/ಲಿಖಿತ ನಿಯಮವೆ? ಅಥವ ಆಕಸ್ಮಿಕವೆ? ಅಥವ ನಮ್ಮ ಕನ್ನಡದ ವೈಶಿಷ್ಟ್ಯವೆ?

ಆದರೆ ಹಿಂದಿಯಲ್ಲಿ ಇಂತಹ ಪದಗಳಿವೆ

ಉದಾ:

नई  - ಹೊಸ  ( ಇಲ್ಲಿ  'ಈ' ಕೊನೆಯ ಅಕ್ಷರ)
ताऊ - ದೊಡ್ಡಪ್ಪ (ಇಲ್ಲಿ 'ಊ' ಕೊನೆಯ ಅಕ್ಷರ)
कलाई - ಕಲಾಯಿ (ಇಲ್ಲಿ 'ಈ' ಕೊನೆಯ ಅಕ್ಷರ)
ताई   - ದೊಡ್ಡಮ್ಮ (ಇಲ್ಲಿ 'ಈ' ಕೊನೆಯ ಅಕ್ಷರ)

ಆದರೆ ಶುದ್ಧ ಸ್ವರಾಕ್ಷರಗಳಿಂದ ಪ್ರಾರಂಭವಾಗುವ ಪದಗಳು ಕನ್ನಡದಲ್ಲಿವೆ (ನಮಗೆಲ್ಲ ಗೊತ್ತೇ ಇದೆ)

ಉದಾ:  ಅರಸ, ಆಡು, ಇಲಿ, ಈಶ, ಉಂಗುರ, ಊರು ....ಇತ್ಯಾದಿ.

ಏಕೆ ಹೀಗೆ? ಇದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನನ್ನಲ್ಲಿ ಹೆಚ್ಚುತ್ತಿದೆ. ದಯವಿಟ್ಟು ಬಲ್ಲವರು ಇದರ ಕಾರಣಗಳ ಬಗ್ಗೆ ತಿಳಿಸಿಕೊಡಿ 

-ಜೈ ಕರ್ನಾಟಕ

Rating
No votes yet

Comments