ಯಾವುದೀ ಕಟ್ಟಡ, ಕಾರ್ಪೊರೇಟ್ ನಿಲಯವೋ, ಅಥವಾ ಮಾಲೋ, ಇಲ್ಲವೇ ಥಿಯೇಟರ್(ಓ) ತಿಳಿವಲ್ದಲ್ಲಾ ?!

ಯಾವುದೀ ಕಟ್ಟಡ, ಕಾರ್ಪೊರೇಟ್ ನಿಲಯವೋ, ಅಥವಾ ಮಾಲೋ, ಇಲ್ಲವೇ ಥಿಯೇಟರ್(ಓ) ತಿಳಿವಲ್ದಲ್ಲಾ ?!

ನಾನು ೧೦ ದಿನಗಳ ಹಿಂದೆ 'ಬನಶಂಕರಿ ಬಸ್ ನಿಲ್ದಾಣ'ದಲ್ಲಿ ಯಾವುದೋ ಬಸ್ ನಲ್ಲಿ ಪ್ರಯಾಣಿಸಲು ಹೋಗಿದ್ದೆ. ಈಗ ಎನ್ಚನ್ನಾಗಿದೆ ಆ ಜಾಗ ಅಂತೀರ, ಪಕ್ಕದಲ್ಲೇ 'ಬನಶಂಕರಿ ಅಮ್ಮನವರ ಸುಂದರ, ಭವ್ಯ ಹೊಸ ಮಂದಿರ' ತಯಾರಾಗಿದೆ. ಆ ಜಾಗವೆಲ್ಲ ಎನೋ ಒಂದ್ ತರಹ ಹೊಸ ಹೊಸದಾಗಿ ಕಾಣ್ಸ್ತಿದೆ.  ಹತ್ತಿರದಲ್ಲೇ ಇನ್ನೂ ಗುಡಿಸಿಲುಗಳು ಹಣ್ಣು-ಹೂ ಮಾರೋರು, ಜನರ ಗುಂಪು ಮಾತ್ರ ಹಾಗೆ ಇದೆ. ಇಲ್ಲ ಇನ್ನೂ ಹೆಚ್ಚ್ತಿದೆ.


ಈ ಹೊಸ ಕಟ್ಟಡದ ಮುಂದೆ ಯಾವ್ ಬೋರ್ಡೂ ಇಲ್ಲ. 'ಸಾರಿಗೆ ಪರಿವಹನದ ಕಟ್ಟಡ' ಅನ್ನಕ್ಕೂ ಆಗಲ್ಲ. ನಮ್ಮ ಜನ ಅಷ್ಟು ಒಳ್ಳೆ ಕಟ್ಟಡನ    'ಸಾರಿಗೆ ಪರಿವಹನಕ್ಕೆ   ಕಟ್ತಾರ ?  ಚಾನ್ಸೇ ಇಲ್ಲ. 'ಮಾಲ್' ಅಂದ್ರೆ ತೀರ ಕಿಷ್ಕಿಂಧದ ಜಾಗ. ಅಲ್ಲಿ ಓಡಾಡೋ ಜನ ಮಾಲ್ಘೋಗಿ ಏನಾದೃ ಕೊಳ್ತಾರೆ ಅಂತೀರಾ ! ಏನೊ ಗೊತ್ತಾಗಲ್ಲಪ್ಪ. 'ನಮ್ಮ್ ಬೆಂಗ್ಳೂರ್ ಜನ ಈಗ 'ಅದು ಇದು, ಹಾಳು-ಮೂಳುಗಳನ್ನು ಕೊಳ್ಳೋದ್ರಲ್ಲಿ ನಿಸ್ಸೀಮರು' ಅಂತ ಪತ್ರಿಕೆಗಳು  ವರದಿ ಮಾಡಿದ್ದೇ ಮಾಡಿದ್ದು. ಅಂದ್ಮೇಲೆ ಇನ್ನೇನಿರಬಹುದು. ನಾನ್ ಈಗಾಗ್ಲೆ ಮುಂಬೈಗೆ ಬಂದಾಯ್ತು. ಯಾರಾದೃ ಅಲ್ಲಿಗೆ ಹೋದ್ರೆ ನೋಡಿದ್ರೆ, ಓದಿದ್ರೆ, ಏನಾದೃ ಬರೀಲೇ ಬೇಕಲ್ವಾ. ಎಷ್ಟ್ ದಿನ ಅಂತ ಹಾಗೆ ಇಟ್ಕೊಂಡಿರ್ತಾರೆ ಆ ಬಿಲ್ಡಿಂಗ್ ನ ?


ಇಲ್ ಬಂದ್ರೂ ಸಮಾಧಾನ ಇಲ್ಲ. ಹಾಳು ನಮ್ಮುರಲ್ವ; ತಿಳ್ಕೊಳ್ಳೋ ಕೂತುಹಲ !

Comments