ಅವರವರ ಭಾವಕ್ಕೆ(ಕಥೆ)-ಭಾಗ-೪ .....................

ಅವರವರ ಭಾವಕ್ಕೆ(ಕಥೆ)-ಭಾಗ-೪ .....................

 'ಅವನು' -'ಅವಳು'

 ಸ್ನೇಹಿತರಾಗಿದ್ದು ಹೆಂಗೆ?

 -ಮೊದಲ ಭೇಟಿ ಹೇಗಾಯ್ತು?

ಏನ್ ನಡೀತು?

 

ಅದೊಂದು ಬೆಂಗಳೂರಿನ   ಹೆಸರುವಾಸಿಯಾದ ಶಿಕ್ಷಣ ಸಂಸ್ಥೆ  'ಎಲ್ ಕೆಜಿ ಯಿಂದ ಡಿಗ್ರೀವರೆಗೆ' ಎಲ್ಲವೂ ಒಂದೇ ವಿಶಾಲ ಸ್ಥದಲ್ಲಿ  'ಗುಣಮಟ್ಟದ ಶಿಕ್ಷಣದೊಂದಿಗೆ' ಲಭ್ಯ.

 

'ಅವಳೇನೋ' ಎಲ್ ಕೆ ಜಿ ಯಿಂದಲೇ  ಅದೇ ಶಿಕ್ಷಣ ಸಂಸ್ಥೇಲಿ ಓದುತ್ತಿದ್ದವಳು. ಆದರೆ 'ಅವನು' ಅವರಪ್ಪನಿಗೆ ಊರ್ಗೆ ವರ್ಗವಾದ ಕಾರಣ , ಕರ್ನಾಟಕದ  ಗ್ರಾಮೀಣ ಪ್ರದೇಶದ 'ಕನ್ನಡ' ಶಾಲೇಲಿ ರಿಂದ  ರವೆಗೆ  ಓದಿ ಈಗ ಬೆಂಗಳೂರಿನ ಶಿಕ್ಷಣ ಸಂಸ್ಥೆ  ಅದರಲ್ಲೂ  ಅಂಗ್ಲ ಮಾಧ್ಯಮದಲ್ಲಿ ಸೇರಿದ್ದು .. ಕನ್ನಡದಿಂದ  ಅಂಗ್ಲ ಮಾಧ್ಯಮಕ್ಕೆ  ಸೇರಲು  'ಅವನಿಗೇನು'ಕಷ್ಟ ಅನಿಸಲಿಲ್ಲ. ಅದಕ್ಕೆ 'ಅವನ' ತಾಯಿಯ ಒತ್ತಾಸೆ  ತಂದೆಯ ಬಯಕೆಯೇ ಕಾರಣ. ಮತ್ತು 'ನಗರದ' ಬಹುಪಾಲು ಪಾಲಕರ ಬಯಕೆ-ಕನಸು-ಆಜ್ಞೆ! ಮತ್ತು ಆಂಗ್ಲ ಮಾಧ್ಯಮದಲ್ಲಿ ಓದಿದರೆ 'ಅವನಿಗೆ' ಮುಂದೊಮ್ಮೆ 'ಒಳ್ಳೆ ಕೆಲಸ' ಸಿಗಲು ಸಹಾಯವಾಗಬಹುದು ಎನ್ನುವ 'ದೂರಾಲೋಚನೆ'..

 

ಮೊದಲ ದಿನ ತನ್ ತಂದೆಯವರೊಡನೆ ಬಂದು ಕ್ಲಾಸಿನ ಮಿಸ್ ನೊಂದಿಗೆ ಮಾತಾಡಿ, ಅವರು ತರಗತಿಯಲ್ಲಿ ಕುಳಿತುಕೊಳ್ಳಲು  ಹೇಳಿದಾಗ , 'ಅವನು' ಸುತ್ತಮುತ್ತಲೂ  ಒಮ್ಮೆ ಕಣ್ಣಾಡಿಸಿದಒಂದೊಂದು ಕಡೆ ಹುಡ್ಗೀರು ಕೆಲವೆಡೆ ಹುಡುಗ-ಹುಡ್ಗೀರು- ಇನ್ನು ಕೆಲವೆಡೆ ಬರೀ ಹುಡುಗರು  ಹೀಗೆ, ಹೇಗೇಗೋ  ಕುಳಿತುಕೊಂಡಿದ್ದ  ವಿಧ್ಯಾರ್ಥಿಗಳನ್ನು ನೋಡಿ, 'ಇವನಿಗೆ' ಎಲ್ಲಿ ಕುಳಿತುಕೊಳ್ಳುವುದು  ಎಂಬ 'ಜಿಜ್ಞಾಸೆ' ಮೂಡಿತು. ಆಗ 'ಇವನ್ನನ್ನೇನೋಡುತ್ತಿದ್ದ 'ಅವಳು' 'ಇವನೆಡೆ' ಕೈ ಬೀಸಿ ಕರೆದು ಅಲ್ಲಿಂದಲೇ  'ಹಾಯ್' ಎಂಬಂತೆ ವಿಶ್ ಮಾಡ್ತಾ  ಇಲ್ಲೇ ನನ್ನ ಪಕ್ಕದಲ್ಲಿ ಕುಳಿತುಕೋ ಎಂದು 'ಸಜ್ಹ್ನೆ' ಮಾಡಿದಳು...

 ಮೊದ-ಮೊದಲಿಗೆ  ಹಿಂಜರಿಕೆಯಿಂದ  'ಅವಳ' ಜೊತೆ ಮತ್ತು  'ಅವಳ' ಸ್ನೇಹಿತ-ಸ್ನೇಹಿತೆಯರ ಜೊತೆ ಮಾತಾಡಿದ 'ಅವನು' ಆನಂತರ 'ಅವರೆಲ್ಲರ' ಜೊತೆ  ಪಾಠ-ಊಟ-ಆಟ ವಾಡ್ತಾ -ಮುಕ್ತವಾಗ್ ಬೆರೆಯುತ್ತಾ ಕೆಲ ದಿನಗಳಲ್ಲೇ 'ಅವರೆಲ್ಲ'   ಒಳ್ಳೆ ಸ್ನೇಹಿತರಾದರು.  

 

ಇಬ್ಬರೂ ೫ನೆಯ ಕ್ಲಾಸಿಂದ ಹತ್ತರವರೆಗೆ  ಬಂದರು,  'ಇವರ' ಗೆಳೆತನ ಮತ್ತಷ್ಟು ಗಟ್ಟಿಯಾಯ್ತು ,ಮತ್ತದು ಇಬ್ಬರ ಮನೆವ್ರಿಗೂ ಗೊತ್ತಾತು. ಆದರೆ 'ಅವನ' ಮತ್ತು 'ಅವಳ' ಮನೆಯವರು ಅದನ್ನು ಸಾಮಾನ್ಯ ಸಂಗತಿಯಾಗಿಸಿ ಇಬ್ಬರಿಗೂ 'ಮುಕ್ತ ಸ್ವಾತಂತ್ರ್ಯ' ಕೊಟ್ಟರುಮತ್ತು  ಅವರವರ ಮನೆವ್ರ ನಂಬಿಕೆಗೆ  'ಅವನಾಗಲಿ, 'ಅವಳಾಗಲಿ' ಒಮ್ಮೆಯೂ  'ಚ್ಯುತಿ' ತರಲಿಲ್ಲ.

ವರ್ಷಗಳುರುಳಿ  ಇಬ್ಬರೂ 'ಹತ್ತನೇ ಕ್ಲಾಸಿಗೆ' ಬಂದಾಯ್ತು. ಮುಂದಿನ ಭವ್ಯ ಭವಿಷ್ಯಕ್ಕೆ  ಬುನಾದಿಯಾಗೋ  ಪರೀಕ್ಷೆಗಾಗ್ 'ಇಬ್ಬರೂ' ಒಮ್ಮೊಮ್ಮೆ 'ಅವಳ' ಇಲ್ಲಾ  'ಇವನ'   ಮನೆಯಲ್ಲಿ  ಒಟ್ಟಾಗಿ  ಕುಳಿತು  ಓದಿಕೊಳ್ಳುವುದು ಊಟ ವೂ ಅಲ್ಲಿಯೇ.

 

 

 ಆಗಾಗ  ಶಾಲೆಯ ವತಿಯಿಂದ  ಕೆಲ ಪ್ರವಾಸಿ ಸ್ಥಳಗಳಿಗೆ ಹೋಗಿದ್ದಯ್ತು, ಹಾಗೊಮ್ಮೆ  'ತಲಕಾಡು' ನೋಡಲು ಹೋದಾಗ  ಅಲ್ಲಿನ ಅಗಾದ ಮರಳಿನ ರಾಶಿಗೆ ಮನ ಸೋತು  ಅದರಲಿ ಎರಡೂ ಕಾಲನ್ನು ಇಟ್ಟುಕೊಂಡು ಇಬ್ಬರೂ ಕೆಲ ಹೊತ್ತು ಕುಳಿತಿದ್ದು ಹೊತ್ತು ಕಳೆದದ್ದು  ಅವರ ಸ್ನೇಹಿತರಿಗೆ ಅನಿಸ್ತು ಹುಚ್ಚ್ ಹುಡುಗ -ಹುಚ್ ಹುಡುಗಿ  ಮರಳಲ್ಲಿ  ಖುಷಿ ಕೊಡುವ ಆದ ಏನನ್ನು ಕಂಡರೋ?

 

ಆದರೆ ಅದಕ್ಕೆ ಇಬ್ರೂ ಕೇರೇ  ಮಾಡಲಿಲ್ಲ ನಕ್ಕು ಸುಮ್ಮನಾದರಸ್ಟೇ,ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ ಎಂಬಂತೆ!!  ಆಮೇಲೆ  ಮರಳಲ್ಲಿ ಹುದುಗಿ ಹೋಗಿ ನಂತರ ಉತ್ಕಣನ ನಡೆಸಿ ಹೊರ ತೆಗೆದ ದೇವಸ್ಥಾನಗಳನ್ನು ಅಚ್ಚರಿಯಿಂದ ನೋಡಿಕೊಂಡು ಸ್ವಲ್ಪ ದೂರದಲ್ಲಿರುವ ನದಿಯನ್ನ ನೋಡಲು ಹೊರಟರು.

 

ಅಲ್ಲಿ ಅದಾಗಲೇ ಪ್ರವಾಸಿಗರ ಬಹು ಚಟುವಟಿಕೆಯ ವಾತಾವರಣವಿತ್ತು. ಅಲ್ಲ್ಲಿ ತಮ್ಮ- ತಮ್ಮ ತೆಪ್ಪಗಳೊಂದಿಗೆ ಪ್ರವಾಸಿಗರಿಗಾಗಿ ಕಾದಿದ್ದರು   ತೆಪ್ಪಗಳ ಒಡೆಯರು.  ಒಂದು ತೆಪ್ಪವನ್ನು ಆಯ್ದುಕೊಂಡು  ಅದರಲೀ ೬ ಜನ ವೃತ್ತಾಕಾರವಾಗಿ ಕುಳಿತರು. ನಿಂತುಕೊಂಡೆ ಹುಟ್ಟು ಹಾಕಿ ಅಷ್ಟಾಗಿ ಸೆಳವು ಇರದ ಕಡೆಗೆ ಹೋಗಿ  ಮತ್ತೆ ದಡ ಮುಟ್ಟುವಾಗ ಜೋರಾಗಿ ಹುಟ್ಟು ಹಾಕಿ ಒಮ್ಮೆ ವೃತ್ತಾಕಾರವಾಗಿ ತಿರುಗಿಸಿದಾಗ 'ಅವಳಿಗೆ'  ಮೈ ಎಲ್ಲ ಕಂಪಿಸಿ  'ಕಿಟ್ಟನೆ' ಕಿರುಚಿದ್ದು 'ಅವನನ್ನ' ಬಿಗಿಯಾಗಿ ಹಿಡಿದುಕೊಂಡದ್ದು 'ಅವನು' ಏನಾಗಲ್ಲ ಭಯ ಪಡಬೇಡ ಅಂತ ಸಂತೈಸಿದ್ದು  ಆಮೇಲೆ ಅದನ್ನೇ  ಹೇಳ್ತಾ 'ಅವಳನ್ನ' ಕಿಚಾಯಿಸೋದು  ಆಯ್ತು..   

ತರಗತಿಯ ಪರೀಕ್ಷೆಗೆ ತಯಾರಿಯನ್ನು 'ಇಬ್ಬರೂ'    ತರಗತಿಗೆ ಸೇರಿದಾಗಲೇ   ಶುರು ಹಚ್ಚಿಕೊಂಡು  ಅರ್ಧ ವಾರ್ಷಿಕ ಪರೀಕ್ಷೆ  ನಂತರ  ಆಗಾಗ ನಡೆಯುವ ಕಿರು ಪರೀಕ್ಷೆ -ಟೆಸ್ಟ್ ಎಲ್ಲದರಲ್ಲೂ  ಇಬ್ಬರೂ ಪ್ರಥಮದಲ್ಲಿ  ಪಾಸಾಗುತ್ತ   ಬಂದರು... 

 

 

ಸಶೇಷ........