ಒಡ-ಹುಟ್ಟಿದವನು
ತಮ್ಮನಿರಬೇಕು ಮನೆ-ಮನದಲ್ಲೂ...
ಅಮ್ಮನ ಮುದ್ದಿನ-ಕ೦ದನು ಇವನು,
ಪ್ರೀತಿಯ-ಪಾಲನು ಕಸಿದವನು.
ಲಾಲಿಸಿ-ಪಾಲಿಸಿ ಮುದ್ದುಗರೆಯುವಳು ,
ಮರೆತಳು!! ನನ್ನನೂ.. ಹಡೆದವಳು.
ಮಾಡುವ ಕೀಟಲೆ ಕ್ಯಾತೆಯ-ತಮ್ಮ ,
ಹೂಡುತ-ತ೦ತ್ರವ ತರಲೆ-ತಿಮ್ಮ.
ಎಲ್ಲರ-ಕಣ್ಣಿಗೂ ... ಪಾ!!..ಪದ ಹುಡುಗ,
ನನ್ನನೆ ಸಿಕ್ಕಿಸಿ ಹೊರಡುವ ಬೇಗ.
ಅಮ್ಮನೆದುರು ಜೋ..!!ರು ಅಳುವ ,
ಅವಳೋದೊಡನೆ ಮುಸಿ-ಮುಸಿ ನಗುವ.
ಬಲು-ಛತ್ರಿ ನಾಟಕದವನು,
ಬಣ್ಣವನಚ್ಚದೆ ನಟಿಸುವನು.
ಮಾತು-ಮಾತಲೂ ಮರುಳು ಮಾಡುವ ,
ಕುಶಲ-ಮತಿ ಮಾತಿನ ಮಲ್ಲ.
ಎದಿರಿದ್ದವರ ಮನವ ಗೆಲ್ಲುವ ,
ನುಲಿಯುತ-ಉಸುರುತ ಪ್ರೀತಿಯ ಸೊಲ್ಲ.
ಜೊತೆಯಲಿ ಬೆಳೆದೆವು , ನಾವ್ ದಾಯಾದಿಗಳು ,
ಪಾಲುದಾರರು ಎಲ್ಲದಕೂ.
ಅಮ್ಮನ ಏಟಿಗೂ ,ಅಪ್ಪನ ನೋಟಿಗೂ ,
ಪ್ರೀತಿಗೂ-ಸ್ನೇಹಕೂ ಮಮತೆಗೂ ಎಲ್ಲಕೂ,
ನಾ-ತಾ ಮು೦ದು ಹೌದಲ್ವಾ..?
ಪುಟ್ಟ-ಜೀವನದಿ ಒಬ್ಬರಿಗೊಬ್ಬರು ,
ಆಸರೆ..!! ,ಆಶಯ..!! ಹೌದಲ್ವಾ..?
ನಮ್ಮ ಗುಟ್ಟುಗಳು ಬೇಕಾದಷ್ಟಿವೆ ,
ನಮ್ಮೊಳಗೊಳಗೆ ನಾವ್ ಬ೦ಧಿ.
ಅಟ್ಟೆ-ಮಟ್ಟೆ ಕೋಳಿ-ಮೊಟ್ಟೆ
ಟೂ-ಟೂ ಆಟ ಸಾಕೆ೦ದು.
ಬೆರಳನು ನೀಡೊ!! ಕಟ್ಟುವ ಚಾಳಿ,
ಬೆಸೆಯುತ ಮನವ ನಾವಿ೦ದು.
ಬಾರೋ..!! ತಮ್ಮ ಕಾಯುವ ಜಗಳ ,
ಬೋರು-ಜೀವನ. ಸಾಕಾಯ್ತು!!!
ಚಾಡಿ ಹೇಳದಿರು ಅಮ್ಮನ ಹತ್ತಿರ,
ಆಟಕೆ-ಹೋಗುವಾ. ಹೊತ್ತಾಯ್ತು!!!
ಜಿದ್ದಿಗೆ-ಬಿದ್ದು ,ರ೦ಪವ ಮಾಡುತ,
ಬಾಲ್ಯದ ಹಾಸಲಿ ಕಿತ್ತಾಡೋಣ.
ಅಸಲಿ-ಪ್ರೀತಿಯ ನಕಲು-ಮಾಡುತಾ..
ಹುಡುಗತನವನೇ ಸಿ೦ಗರಿಸೋಣ.
ಗಾಜು ಹೊಡೆದವನು , ಬೀಗ ಮುರಿದವನು ,
ನಾನೆ ಕಣೊ.
ನನ್ನದೇ.. ತಪ್ಪು,, ನೀ ಸಾ..ಚಾ!! ಕಣೊ,
ಬ೦ದು ಸೇರಿಕೊ ನನ್ನನ್ನು.
ನನ್ನೆದೆ ಗೂಡಲಿ , ಬೆಚ್ಚನೆ ನೆನಪಲಿ
ನಿನ್ನದೂ ನೂರಿವೆ ನೋಡಿನ್ನು.
ತಮ್ಮನಿರಬೇಕು ಮನೆ-ಮನದಲ್ಲೂ..