ರೈಲು ಪಯಣದ ಮಧುರಾನುಭವ

ರೈಲು ಪಯಣದ ಮಧುರಾನುಭವ

ನಾನು ನನ್ನ ಯಜಮಾನರೂ ಒಂದು ದಿನ ಪಕ್ಕದೂರಿಗೆ ಪ್ರಯಾಣಿಸಬೇಕಾಗಿತ್ತು. ಬಸ್ಸು, ರೈಲು ಅಥವಾ ಬೈಕೋ ಅಂತ ವಾದ ವಿವಾದಗಳಾಗಿ ಕೊನೆಗೆ ರೈಲೇ ಅಂತ ತೀರ್ಮಾನಮಾಡಿ, ಸ್ಟೇಷನ್ಗೆ ಹೋಗಿ ಟಿಕೆ‌ಟ್ ತೆಗೆದುಕೊಂದು ಒಳಗೆ ಹೋದ್ವಿ. ರೈಲೇನೋ ಬಂತು ಆದ್ರೆ ಆಸನಗಳಂತೂ ಖಾಲಿ ಇರಲಿಲ್ಲ. ಎಲ್ಲೂ ಸೀಟು ಸಿಗದೆ ಕೊನೆಗೆ ರೈಲು ಹೊರಡುವ ಸಮವಾಯಿತು, ನಾವು ಸೀಟು ಹುಡುಕುತ್ತಾ ಹುಡುಕುತ್ತಾ ಹೆಂಗಸರ ಬೋಗಿ ಹತ್ರ ಬಂದಿದ್ವಿ. ಅಲ್ಲಿ ಒಂದು ಗಂಡಸಿನ ತಲೆ ಕಾಣಿಸಿತು, ರೈಲು ಹೋರಡುವ ಸಮಯವೂ ಆಗಿತ್ತು ಬೇರೆ ಬೋಗಿಗೆ ಹತ್ತುವಷ್ಟು ಸಮಯಾವಕಾಶವೂ ಇರದ ಕಾರಣ ನಾನು ಬನ್ನಿ ಇಲ್ಲೇ ಹತ್ತುವ ಮತ್ತೆ ಬೇಕಾದ್ರೆ ಬೇರೆ ಬೋಗಿಗೆ ಹೋಗುವಾ ಅಂತ ಹೆಂಗಸರ ಬೋಗಿಗೇ ಹತ್ತಿಸಿಬಿಟ್ಟೆ. ಅಲ್ಲಿ ಆರೆಂಟು ಮಾರ್ವಾಡಾ ಹೆಂಗಸರ ಮಾತನ್ನು ಅರ್ಥೈಸುತ್ತಾ, ಕಡಲೇಕಾಯಿ ತಿನ್ನು‌ತ್ತಾ ಕಾಲಾಡಿಸುತ್ತಾ ಪಯಣ ಮುಂದುವರೆಸಿದೆವು. ಯಾವ ಟಿ.ಸಿ.ಯೂ ಬರದ ಕಾರಣ ನಾವು ಬೋಗಿಯನ್ನು ಬದಲಾಯಿಸಲೇ ಇಲ್ಲ. ನಾವು ಇಳಿಯುವ ಸ್ಟೇಷನ್ ಬಂತು ಹೆಂಗಸರ ಬೋಗಿಯಲ್ಲಿದ್ದ ಕಾರಣ ಊರ ಸ್ಟೇಷನ್ ಬಂದ ಕೂಡಲೇ ಧುಮುಕಿ ನಡೆದೆವು, ತಮಾಷೆಯೆಂದರೆ ನಾವು ಹೆಂಗಸರ ಬೋಗಿಯಲ್ಲಿ ನೋಡಿದ ಗಂದಸೂ ಅಲ್ಲೇ ಇಳಿದರು ಆದರೆ ಅವರು ಹೆಂಗಸೇ. ಅವರ ವೇಷ, ಭೂಷಣ(ಬಾಯ್ ಕಟ್) ನಮನ್ನು ಏಮಾರಿಸಿತ್ತು. ಆ ದಿನದ ಪಯಣ, ನಮಗಾದ ತಬ್ಬಿಬ್ಬಿನ ರಸನಿಮಿಷ ಯಾವುದನ್ನೂ ಮರೆಯಲು ಸಾದ್ಯವೇ ಇಲ್ಲ.

 

Rating
No votes yet