ಮುಂಜಾನೆ
ಕವನ
ಸರಿಯುವ ಬೆಳದಿಂಗಳ ಸುರಿಯುವ ಮಾಗಿಯ ಮಬ್ಬಿನಿಬ್ಬನಿಯ
ಮಣಿಯ ಬಿಂಬ ಪ್ರತಿಬಿಂಬದಿಂಬಿನಲಿ ದಿನಮಣಿಯ ಮಾಗಿಯ ಛಳಿಯ
ಮಣಿಸುವ ಸೆಣಿಸಿನಾಟದ ನೋಟದ ಸಗ್ಗದ ಸವಿಯನಕ್ಕರದಲುಕ್ಕಿಸುತ
ಮರಳಮರಡಿಯ ತಣ್ಪಿನಲಿಬ್ಬನಿಯ ಧೂಪ ಧೂಮ್ರ ದಿನಪರ
ಕಣ್ಣಮುಚ್ಚಾಲೆಯನಕ್ಕರದಲೀಕ್ಷಿಸುತ
ಬಟ್ಟಬಯಲಿನಂಕುಡೊಂಕಿನ ಬಟ್ಟೆ ಬದಿಯ ಬಿಂಕದಂಕದ
ಬಣ್ಣದ ದುಂಬಿಗಳ ಬಂಡುಂಬುವ ತವಕದೋಟವ ಕಾಣುತ
ಮುಂಜಾನೆಯ ಬಾನಂಗಳದಿ ಸ್ವಚ್ಛಂದ ಬಾನಾಡಿಗಳ ಚಿತ್ರವಿಚಿತ್ರ
ವಿನ್ಯಾಸ ವಿಸ್ಮಯ ತತಿಯ ಗಣತಿಯ ಸೊಬಗ ಸವಿಯುತ
ಉತ್ತರಮುಖಿ ಪುಣ್ಯನದಿ ಮಂದಗಮನೆ ವೇದವತಿಯ ಸುಮಧುರ
ಜುಳಜುಳು ಮಂಜುಳ ನಿನಾದದಿಂಚರವನಾಲಿಸುತ
ಗಳಿಸುವ ಜೀವನದಿ ಜೀವ ಮಧುರಭಾವ ತುಂಬಲೆಲ್ಲರ ತುಂಬುಬಾಳಿನಲಿ.
Comments
ಉ: ಮುಂಜಾನೆ