ವಿರಾಗಿ
ಕವನ
ವಿರಾಗಿ.
ಕವಿಯಾಗಿದ್ದರೆ ನಾ ಬರೆಯುತ್ತಿದ್ದೆ
ನನ್ನ ಕವನದಲ್ಲಿ ನಿನ್ನ ರೂಪವ ಬಣ್ಣಿಸುತ್ತಿದ್ದೆ.
ಕಲೆಗಾರನಾಗಿದ್ದರೆ ನಾ ಚಿತ್ರಿಸುತ್ತಿದ್ದೆ
ಅದರಲ್ಲಿ ನಿನ್ನ ಸೌಂದರ್ಯವ ಬಿಂಬಿಸುತ್ತಿದ್ದೆ.
ಹಾಡುಗಾರನಾಗಿದ್ದರೆ ಹಾಡುತ್ತಿದ್ದೆ
ಅದರಲ್ಲಿ ನಿನ್ನ ಗಾನ ಮಾಧುರ್ಯವ ತುಂಬಿಕೊಳ್ಳುತ್ತಿದ್ದೆ.
ರಸಿಕನಾಗಿದ್ದರೆ ನಾ ನಿನ್ನ ಸೌಂದರ್ಯದ ಆರಾಧಕನಾಗುತ್ತಿದ್ದೆ.
ಪ್ರೇಮಿಯಾಗಿದ್ದರೆ ನಾ ಕಟ್ಟುತ್ತಿದ್ದೆ
ಬಣ್ಣ ಬಣ್ಣದ ಕನಸುಗಳ ಹೂಮಾಲೆ.
ಆದರೇನೊಂದು ಆಗದೆ ವಿರಾಗಿಯಾದೆ
ಎಂದೆಂದೂ ನಿನ್ನ ಮರೆಯದಾದೆ.