ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )-೩
'ಅನಾಯಾಸವಾಗಿ' -ಅಚಾನಕಾಗ್ ಮತ್ತು ಬಿಡಿಗಾಸಿನ ಕರ್ಚಿಲ್ಲದೆ ಸಿಕ್ಕ 'ಆ ಚೇರನ್ನು' ಅದರ ಮೇಲೆ ತನ್ನ ಟವೆಲ್ ಹೊದೆಸಿ ಹೆಗಲ ಮೇಲೆ ಇಟ್ಟುಕೊಂಡು ಹೊರಟ 'ಬಡ ಬೋರಂಗೆ' ,ಮೊದ್ಲು ಆ ದಾರಿಯ ತಿರುವಿನಲ್ಲಿ ಎದುರಾದವ್ನೆ 'ಬೆಂಕಿ ಮುನಿಯ' ಅವ್ನ ಹೆಸರು ಮುನಿಯ ಇದ್ದದ್ದು ಬೆಂಕಿ ಮುನಿಯ ಆಗಿದ್ದಕ್ಕೆ ಕಾರಣ ಅವನು 'ಕ್ಷಣ ಮಾತ್ರದಲ್ಲಿ' ಯಾವ್ಯಾವ್ದೋ ವಿಷಯದ ಬಗ್ಗೆ ಒಬ್ಬರ ಹತ್ತಿರ ಕೇಳಿ ಇನ್ನೊಬ್ಬರ ಹತ್ತಿರ ಸೀಕ್ರೆಟ್ ಓಪನ್ ಮಾಡಿ 'ಕೊಳ್ಳಿ' ಇಡ್ತಿದ್ದ :)
ಬೆಳ್ ಬೆಳಗ್ಗೆ ಈ 'ಬಡ ಬೋರ' ಅದೇನನ್ನ ಹೆಗಲ ಮೇಲೆ ಹೊತ್ಕೊಂಡು ಹೋಗ್ತವ್ನೆ? ಯಾರ್ದಾರ ಜಮೀನಿಂದ ಏನಾರ ಕದ್ದುಕೊಂಡು ಬಂದಿರಬಹುದ? ಮನದಲ್ಲೇ ಹೀಗೆ ಅನ್ಕೊಂಡು ಕೇಳೆ ಬಿಡುವ ಅಂತ ದಾರಿಗಡ್ಡವಾಗಿ ನಿಂತ. ದೂರದಿಂದಲೇ 'ಅವ್ನು' ಹಲ್ಲುಕಿರಿದುಕೊಂಡು ನಿಂತ ಭಂಗಿ ನೋಡಿಯೇ ಅವ್ನು ಖಚಿತವಾಗಿ 'ಬೆಂಕಿ ಮುನಿಯನೆ' ಅಂತ 'ಬಡ ಬೋರ'0ಗೆ ಗೊತ್ತಾಯ್ತು. ಈ ಮುಂಡೇ ಗಂಡ ಬೆಂಕಿ -ಮುನಿಯ ಈ ಹೊತ್ತಲ್ಲೇ ಬರಬೇಕ? ಒಳ್ಳೆ ಕೆಲ್ಸಕ್ಕೆ ಹಲ್ವಾರ್ ಅಡ್ಡಿ ಅನ್ನೋ ಹಾಗೆ, ಇವ್ನೆನಾರ ನೂರೆಂಟು ಪ್ರಶ್ನೆ ಕೇಳಿದ್ರೆ ನಾ ಏನ್ ಹೇಳಲಿ? ಇವ್ನು ಖಂಡಿತ ಊರೆಲ್ಲ ಈ ವಿಷಯಾನ ' ಆಲ್ ಇಂಡಿಯಾ ರೇಡಿಯೋ' ಪ್ರಸಾರ ಮಾಡ್ತಾನೆ.
'ಬಡ ಬೋರ' ಸಮೀಪಕ್ಕೆ ಬಂದಕೂಡಲೇ , ಬೆಂಕಿ ಮುನಿಯ' ಹಲ್ಲೆಲ್ಲ ಸವಿಸ್ತಾರವಾಗಿ ಅಡ್ದಡ್ದಕ್ಕೆ ಕಿಸಿಯುತ್ತ ಬೋರನ ಹೆಗಲನ್ನೇ ನೋಡ್ತಾ ಕೇಳ್ದ-
ಓಹೋ ಏನ್ಲ ಬೋರ ಹೊತ್ತಾರೆ ಎದ್ದ್ ಬಿಟ್ಟು ಎಲ್ಲೋ ಹೋಗಿ 'ಅದೇನನ್ನೂ' ಹೊತ್ತು ತರ್ತಿದ್ದನ್ಗಿದೆ?
ಮೈ ಎಲ್ಲ ಉರಿದುಹೊಗ್ತಿದ್ರೂ 'ಬಡ ಬೋರ' ಬಡವನ ಕೋಪ ದವ್ದೆಗ್ ಮೂಲ ಅನ್ನೋದನ ನೆನಪಿಸ್ಕೊಂಡು ಮತ್ತು ಏನಾರ ಸುಳ್ಳು ಹೇಳಿದ್ರೂ ಈ ಮುನಿಯ ಅದ್ನ ಸಮಸ್ಯೆ ಮಾಡ್ತಾನೆ ಅದ್ಕೆ ನಿಜಹೇಳೋದೇ ಒಳ್ಳೇದ್ ಅಂತ ಯೋಚಿಸಿ ಆದಸ್ಟು ಸಮಾಧಾನವಾಗಿಯೇ ಹೇಳಿದ- ಏನಿಲ್ಲ ಕಣ್ಲ ಮುನಿಯ ,ಹೊತ್ತಾರೆ 'ಜಮೀನ್ ಕಡೆ '೨ಕ್ಕೆ ಅಂತಾ' ಹೋಗಿದ್ನ ? ಅಂತಾ ಶುರು ಮಾಡಿ ಬೆಳಗ್ಗೆಯಿಂದ 'ನಡೆದಿದ್ದೆಲ್ಲ ' ಹೇಳಿದ.
ಬಡ ಬೋರನ ಸತ್ಯವಾದ ಮಾತು ಕೇಳಿಯೂ 'ಬೆಂಕಿ ಮುನಿಯಂಗೆ' ನಂಬಲಾಗದೆ, ಹೌದಾ ಒಮ್ಮೆ ಇಳಿಸು ನೋಡೋಣ ಹೆಂಗಿದೆ ಅಂತ.
ಬಡ ಬೋರನಿಗೆ ಕೋಪ ಬಂದರೂ ತಡ್ಕೊಂಡು 'ಈ ಜಿಗಣೆ ವಂಶದ ಬೆಂಕಿ ಮುನಿಯಂಗೆ' ಅದ್ನ ತೋರಿಸದೆ ಮುಂದಕೆ ಹೋಗೋಕ್ ಆಗಲ್ಲ ಅಂತ ಗೊತಾಗೊಯ್ತು, ಅದ್ಕೆ ತೆಪ್ಪಗೆ ಅದ್ನ ಕೆಳಗಿಲ್ಸಿ ಅದರ ಮೇಲಿದ್ದ ಟವೆಲ್ ಸರಿಸಿ ,ನೋಡು ಅಂದ.
'ಆ ಕುರ್ಚೀನ' ನೋಡಿ ಮತ್ತು ಅದರ ಮೇಲೆ 'ಆ ಬಡ ಬೋರ' ರಾಜನ್ ತರಹ ಕಾಲ್ ಮೇಲೆ ಕಾಲ್ ಹಾಕೊಂಡು ಕುಲಿತುಕೊಳ್ಲೋದನ್ನ 'ಕಲ್ಪಿಸಿಕೊಂಡೇ ' ಬೆಂಕಿ ಮುನಿಯಂಗೆ 'ಹೊಟ್ಟೆಲಿ ಅರಿಶಿನ ಅರದನ್ಗಾಯ್ತು'!!
ಆದರೂ ಅದ್ನ ಹೊರಗೆ ತೋರಿಸಿಕೊಳ್ಳದೆ ಮನದಲ್ಲೇ ' ಆ ಬಡ್ಡೀ ಮಗ ಬಡ ಬೋರ' ಅದೆಸ್ಟು ದಿನ ಅದರ ಮೇಲೆ ಕುಳಿತುಕೊಳ್ತಾನೆ ಅವನ್ನ 'ಅದರ' ಮೇಲಿ0ದ ಕೆಡವಿ ನಾ 'ಅದ್ನ ಹತ್ತಿ ಕೂರದಿದ್ದರೆ ನಂಗೆ ಮುಕ್ತಿಯಿಲ್ಲ' ಅನ್ಕಂಡು ಹೇಳ್ದ, ಒಹ್ ಬೋರ ಏನ್ಲ ನಿನ್ನ 'ಅಧ್ರುಸ್ಟ' ಚಿಕ್ಕಾಸು ಬಿಚ್ಚದೆ 'ಒಳ್ಳೆ ಮಜಬೂತಾದ ಕುರ್ಚೀನ' ಪಟಾಯ್ಸಿ ಬಿಟ್ತೆಯಲ್ಲೋ:))
Comments
ಉ: ಬಡ ಬೋರ
In reply to ಉ: ಬಡ ಬೋರ by makara
ಉ: ಬಡ ಬೋರ
ಉ: ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )-೩
In reply to ಉ: ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )-೩ by partha1059
ಉ: ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )-೩