ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )-೪

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )-೪

'ಬೆಂಕಿ ಮುನಿಯ' ತನ್ನ ಸತ್ಯವಾದ ಮಾತಿಂದ 'ಖುಷಿಯಾಗಿಲ್' ಸಮಾಧಾನಗೊಂಡಿಲ್ಲ  ಅಂತ ಅವನ 'ಹುಳಿ ತಿಂದ ತರಹದ್ ಮುಖ' ನೋಡಿಯೇ 'ಬಡ ಬೋರಂಗೆ' ಗೊತ್ತಯ್ತು. ಆದ್ರೆ ಅವ್ನು ತಲೆ ಕೆಡಿಸಿಕೊಳ್ಳದೆ  'ಬೆಂಕಿ ಮುನಿಯಂಗೆ' ಹೇಳಿದ ' ಕುರ್ಚೀನ' ಸ್ವಲ್ಪ ಹಂಗೆ ನನ ಹೆಗಲ ಮೆಲಿಕ್ಕೋ.  ಹೌದು 'ಬಯಲು ಜಾಗದಲ್ಲಿ' ತಾನೇ ಎತ್ತಿಕೊಂಡ  ಬಂದ  ' ಚೇರು'  ಬೋರನಿಗೆ ಈಗ 'ಭಾರವೇನು' ಆಗಿದ್ದಿಲ್ಲ, ಆದರೆ ತನ್ನ ಹೆಗಲಿಂದ ಕುರ್ಚಿ ಇಳಿಸಿ ಏನೇನೋ ಪ್ರಶ್ನೆ ಕೇಳಿ, ತನ್ನ ಸತ್ಯವಾದ ಮಾತಿನ್ಗೂವೆ ಸಮಾಧಾನಗೊಳ್ಳದೆ ಮುಖಾನ ಕಹಿ ಮಾಡಿಕೊಂಡದ್ದು ಬೋರನಿಗೆ ಉರೀತು, ಅದಕ್ಕೆ ಮುನಿಯಂಗೆ ಹೇಳಿದ್ದು  ಕುರ್ಚೀನ ತನ್ನ ಹೆಗಲ ಮೇಲೆ ಇಕ್ಕೋ ಅಂತ:)

 

ಊರೊಳಗೆ ಬರ್ತಾ ಊರ ಮುಂದಿನ 'ಅಗಸಿ ಬಾಗಿಲೊಳಗೆ' ಬಂದಿದ್ದೆ ತಡ, ಹೆಗಲ ಮೇಲೆ ಕುರ್ಚೀನ ಮುಚ್ಚಿಟ್ಕೊಂಡು ಬಂದ 'ಬಡ ಬೋರನನ್ನ' ನೋಡಿ ಅಲ್ಲಿ ಇದ್ದ-ಬಿದ್ದ ನಾಯಿಗಳೆಲ್ಲ ಒಟಾಗಿ  ಕೂಗ್ತಾ ಅವ್ನ ಸಮೀಪಕ್ಕೆ ಬಂದ್ ಬಿಟ್ವು. ಆಚ-ಅಚಾ  ತತ್  ದರಿದ್ರ ನಾಯಿಗಳ ಅಂತ ಅವ್ನು ಕೂಗಿದ್ದಸ್ತೆ ಬಂತು, ಒಂಚೂರು ಅತ್ತಿತ್ತ ಕದಲದೆ ಅವನನ್ನ ವೃತ್ತಾಕಾರವಾಗಿ ಅಟ್ಯಾಕ್ ಮಾಡ ಹೋದವು. ಅಸ್ಟರಲ್ಲಿ  ಸಾಬರ ಹಾಜಿ 'ಬಯಲಿಗೆ' ಹೋಗೋಕೆ  ಬಂದವನು  ನಾಯಿಗಳ ಅಟ್ಯಾಕ್ನೋಡಿ,  ಚಿಕ್ಕ  ಕಲ್ಲುಗಳಲ್ಲಿ ನಾಯಿಗಳನ್ನ ಓಡಿಸಿ, ಅದ್ಯಾರು  ' ಮಹಾನುಭಾವ' ಅಂತ ನೋಡ್ತಾನೆ -ಅದು 'ಬಡಾ ಬೋರ'..

 

ಆಯ ಅದು  ನಮ್ದುಕೆ ಬಡಾ ಬೋರ!! ' ಯಾ ಅಲ್ಲ ಎಂಥಾ ಕಾಲ ಬಂತು ನಮ್ಮ ನಾಯಿಗಳೇ ನಮ್ಮೊರವ್ರ್ಣ ಕಚ್ಚೋದು ಅಂದ್ರೇನು?  ನಡುಗ್ತಾ ನಿಂತಿದ್ದ 'ಬಡಾ ಬೋರನ' ಹತ್ತಿರಕ್ ಹೋಗ  ಅವನ್ ಹೆಗಲೇ ನೋಡ್ತಾ ಏನ್ಲ ಬೋರ ತತ್ ನೀನೇನೋ  ನಾ 'ಯಾರೋ ಹೊಸಬರು' ಊರ್ಗೆ ಬಂದಿರ್ಬೇಕ್ ಅದ್ಕೆ ನಾಯಿಗಳ ಬೊಗಳ್ತವೆ ಅನ್ಕಂಡಿದ್ದೆ. 

'ಅರ್ಜನ್ತಾಗ್' ಬಯಲಿಗ್ ಒಗ್ಬೇಕಾಗಿದ್ದವ್ನು 'ಅದನೆ' ಮರ್ತು  ಬೋರನ ಹೆಗಲಿಂದ ಇಳಿಸಿ ನೋಡ್ತಾನೆ ಕುರ್ಚೀನ, ಅಹ! ಏನ್ಲ ಬೋರ ಒಳ್ಳೆ ಕುರ್ಚೀನೆ ಮಸ್ತಾಗೈತೆ ಹೋಗ್ಗೊಗು ನಿಮ್ದುಕೆ ಅಧ್ರುಸ್ಟ ಆಇತೆ ನಮ್ದುಕೆ ಇಲ್ಲಸ್ಟೇ. ಅದಾಗಲೇ  ತಕ್ಕಮಟ್ಟಿಗೆ  ಭಾರವಾಗಿದ್ ಕುರ್ಚೀನ ಹೆಗಲ ಮೇಲಿಟ್ಟುಕೊಂಡು ಮಧ್ಯೆ -ಮಧ್ಯೆ  ಅಲ್ಲಲಿ ಇಳಿಸ್ತ-ಎತ್ತಿಟ್ಟು ಕೊಳ್ತಾ   ಅಡ್ಡ ಬಂದವರಿಗೆಲ್ಲ 'ಅದ್ರ' ಪುರಾಣ ಓದಿ-ಓದಿ ಒಂಥರಾ ನಿಶ್ಯಕ್ತಿಯಿಂದ  ಸಾಕಾಗಿದ್ದ ಬಡ ಬೋರನಿಗೆ ಮೊದ್ಲು ಮನೆ ಮುಟ್ಟಿ ಬಾಗಿಲ ಹಾಕಿ 'ಅದ್ರ' ಮೇಲೆ ಕೂತರೆ ಸಾಕಸ್ಟೆ ಅನ್ಸ್ತಿತ್ತು.

 

ಲೋ ಹಾಜಿ ನೀ ಮೊದ್ಲು 'ಬಯಲಿಗ್' ಹೋಗಪ್ಪ, ಅಮೇಲ ಒಂದಪ ಮನೆಗ್ ಬಾ ಆಗ್ ಕುರ್ಚೀನ 'ಕಣ್ಣಲ್ಲೇ' ನೋಡುವಿಯಂತೆ.  ಹಲ್ಲು ಕಿರಿದ ಹಾಜಿ ಅನ್ಕಂಡ ಮನಸಲ್ಲೇ ,ಅಬ್ಬೋ! ಏನ್ ಜನಾನಪ್ಪ ಕುರ್ಚಿ ಸಿಕ್ತೂನ್ದ್ರೆ  ಸಾಕ್  'ನಮ್ನೇ'  ಜೋತೆಲಿದವ್ರ್ನೆ ಮರೆಯೋದ? ಮನೆಗ ಒಂದಪ ಬಂದು 'ಕಣ್ಣಲ್ಲಿ' ನೋಡಬೇಕಂತೆ:)) ಅಂದ್ರೆ 'ನೀ' ಅದ್ರ ಮೇಲೆ ಕುಳಿತು ಕೊಳ್ಲೋಹಾಗಿಲ್ಲ ಅಂತ ಅರ್ಥ್ವ?

 

ಆಯ್ತು ಕಣ್ಲ ಬೋರ, ಈಗ ನೀ ಮನೆಗ್ ಹೋಗ  ವಸಿ ಸುಧಾರ್ಸ್ಕೋ 'ಬೊ ದಣಿದ್ ಬುಟ್ಟಿದಿಯಾ' !! ನಾ ಅಮೇಲ್ ಸಿಕ್ತೀನ್.  ಅಂತ-ಇಂತೂ ಹೆಚ್ -ಕಡಿಮೆ ಓಡುತ್ಲೇ  ಮನೆ ಮುಟ್ಟಿ  ' ಕುರ್ಚೀನ' ಹೆಗಲಿಂದ ಮನೆ ಮುಂದಿನ ಚಿಕ್ಕ ಕಟ್ಟೆಯ ಮೇಲೆ 'ರಾಜ್ ಕುಮಾರೀನ' ಸಾರೋಟಿನಿಂದ  ಕೈ  ಹಿಡಿದು  ಇಳಿಸೋ ಹಾಗೆ ಮ್ರುದುವಾಗ್ ಇಳಿಸಿದ:)  ಪ್ರಶ್ನಾರ್ಥಕ್ವಾಗ್   ನೋಡಿ 'ಗಣೇಶ್'  ಬೀಡಿ ಸೇದ್ತ ಕುಳಿತಿದ್ 'ಕೆಮ್ಮೀರಪ್ಪ'  ಅಕ  'ತಮ್ಮಪ್ಪ ನ್ನ' ನೋಡಿಯೇ    ಅನ್ಕಂಡ ಒಹ್! ಅಪ್ಪಜಿಯವ್ರು ಅದೆನಾರ  ಹೇಳೋಕ್ ಮುಂಚೆ ನಾ ತೆಪ್ಗೆ ಇದ್ನ ಒಳಗಡೆ ಸಾಗಿಸ್ಬೇಕ್

 

ಕೆಮ್ಮೀರಪ್ಪ  ಹೆಸರಿನ   'ಬಡ ಬೋರನ್' ತಂದೆ ನಿಜ್ವಾದ್ ಹೆಸರು ಈರಪ್ಪ ಅಸ್ಟೆಯ ಆದ್ರೆ 'ಸದ್ದ' ಧೂಮ ಧ್ಯಾನದಲ್ಲಿ ಇದು ಹೋಗೆ ಬಿಡ್ತಾ ಬಿಡ್ತಾ  ಹೊಟ್ಟೆ ಒಳಗಡೆ, ಅದೇ ಪುಪ್ಪುಸವೆಲ್ಲ ಬರೀ ಹೊಗೆಯ 'ರಾಡಿ'  ತುಂಬ್ಕೊಂಡ್ ಉಸ್ರಿಗ್ ಜಾಗವಿಲ್ಲದೆ 'ನವ್ರಂದ್ರಗಲ್'  ಮುಚೋಗ್ 'ವಾಯು' ಹೋಗಕ್ ಜಾಗವಿಲ್ದೆ

 

'ಒಳ ಹೋದ ಬೀಡಿ ಹೊಗೇ' ಅಲ್ಲಲ್ಲೇ ಗಿರಕಿ  ಹೊಡೀತ ಕೆಮ್ಮಿನ್ ರೂಪದಲ್ ಹೊರ ಬರ್ತಾ ಈರಪ್ಪಂಗೆ  ಬರೀ ಕೆಮ್ಮೊದೆ ಕಾಯಕ್ವಗೊಯ್ತು,  ಕ್ವಯ್ಯಕ್-ಕ್ವಯ್ಯಕ್ -ಕ್ವಯ್ಯಾಯಕ್ -ಆಮೇಲ್ ಆಹಾ  ಅನ್ತೊಮ್ಮೆ ಜೋರಾಗ್ ಕ್ಯಾಕರಿಸಿ  ಕ್ಕೆಮ್ಮಿ 'ಹಿಂದೊಮ್ಮೆ ಸುರ-ಅಸುರರು ಕಡೆದು ಬಿಟ್ಟ- ವ್ಹಿಷವನ್ನ'   ಈರಪ್ಪಪ್ನೆ ನುಂಗಿ, ಇಗ್ ಉಗುಳ್ತಾವ್ನೋ ಎಂಬಂತೆ  ತನ್ ಬಾಯಿಂದ ಹೊರ ಹಾಕ್ತಿದ್ದ: ) ಅದ್ಕೆ ಊರವರು ಅದಾಗಲೇಆ ಊರಲ್ 'ಊರ್ ದೇವರ ಈರಪ್ಪ'   ಹೆಸರಿನ ದೆಸೆಯಿಂದ ಅದೇ ಹೆಸರನ್ ಇಟ್ಕೊಂಡ  ಸುಮಾರಿದ್ದ ಹಲವಾರ್ ಈರಪ್ಪ-ಗಳಿಂದ  'ಇವರಪ್ಪನ'(ಬಡ ಬೋರನ್ ಅಪ್ಪ)  ಸುಲ್ಭಾವಾಗ್ ಗುರ್ತ್ಸೋಕೆ  'ಕೆಮ್ಮೀರಪ್ಪ' ಅನ್ನೋ 'ನವ ನಾಮಕರಣವನ್ನ' ಯಾವೊಂದ ಸಮಾರಂಭವಿಲ್ದೆ ಬಿಡಿಗಾಸಿನ್ ಕರ್ಚಿಲ್ದೆ ಮಾಡಿ ಪುಣ್ಯ ಕಟ್ಕೊಂಡ್ರು   :)

 

'ಏನೋ' ಕೇಳೋಕ್ ಹೋಗಿ ಧ್ವನಿ ಬರ್ದೇ ಬರ್ರೀ 'ಹೊಗೇ' ಬಂದು ಆಮೇಲ್ ಕವ್ವ-ಕಾವ್ -ಕ್ವಯ್ಯಕ್ ಅಂತ  'ನವ ರಾಗ'  ಶುರು ಮಾಡಿದ  ತಂದೆನ ನೋಡಿಯೂ  ನೋಡದಂಗೆ  'ಕುರ್ಚೀನ' ಎತ್ಕೊಂಡ್ ಒಳಗಡೆ ಹೋಗ ಅದ್ನ ಮನೆ ಒಳ್ಗಡೆ  ಮಧ್ಯದಲ್ ಹಾಕಿ ಅದ್ರ ಮೇಲೆ 'ಉಸ್ಸಪ್ಪ' ಅಂತ ಕುಳಿತ    ಆಹಾ! ಏನ್ ಹೇಳೋದು ಮೈ ಎಲ್ಲ ರೋಮಾಂಚನ:) ಇಸ್ತೆತ್ತರವಾದ್ರೂ ಒಮ್ಮೆಯೂ 'ಕುರ್ಚೀಲ್' ಕುಳಿತ್ಕೊಳ್ಳದೆ, 'ಅದ್ರಲ್' ಕುಲಿತವ್ರ್ಣ ನೋಡ್ತಾ ತನ್ ಸ್ತಿತಿಗ್ ಕೊರಗ್ತಾ ಮರುಗ್ತಾ  ಇದ್ದಕ್ಕಿದ್ದಂತೆ 'ಲಾಟ್ರೀ ಒಡ್ದು'   ಈಗ್  'ಅದ್ರ' ಮೇಲೆ ಹತ್ತಿ ಕೂರೋದ್ ಅಂದ್ರೆ ಸುಮ್ನೆನ

'ವಿಧಾನ ಸೋಧದಿಂದ''' ಕಳ್ಳರ ಪಾಲಾಗ್, ಅವ್ರು ಅದ್ನ ಇಟ್ಕೊಲೋಕಾಗ್ದೆ ' ಊರಿನ ಬಯಲಿಗ್' ಬಂದ್ ಬಿದ್ದು , ಬಡ ಬೋರನ ಕಣ್ಣಿಗ್ ಬಿದ್ದ್, ಅವ್ನ ಹೆಗಲೇರಿ-ಇಳಿದು ,ಅವ್ನ  ಮನೆ ಒಳ್ಗಡೆಯೂ  ಬಂತು 'ಕುರ್ಚಿರೂಪದ್ಶನಿ:)) 

 

ನಮ್ದುಕೆ 'ಬಡಾ ಬೋರಾಕಿ' ಆಇತೆ ಮುಂದೆ ಮಾರಿ ಹಬ್ಬ  ಭರಪೂರ ಮನರಂಜನೆ ಖಾತ್ರೀ,,,,  ಕಾದ್- ಓದಿ..

 

 ಅಲ್ವರ್ಗೆ...

 

Comments