ಬರಗಾಲದೂರಿಂದ...

ಬರಗಾಲದೂರಿಂದ...

ಕವನ

ಬರಗಾಲದೂರಿಂದ ಬಸವಳಿದುಬಂದವಳು            

ಬರಿದಾದ ಹೊಟ್ಟೆ ತುಂಬಿಸಲು
 
ಬಂಧುಗಳ ಬೆಂಬಲವಿಲ್ಲ ಬಳಗದಲಿ ಬಲವಿಲ್ಲ
 
ಗಂಡನಿಹನು ಬಲು ಭಂಡನಾಗಿ ಮಡದಿಮಕ್ಕಳ
 
ಕಾಳಜಿಯ ಕನಸಲೂ ಕಾಣದವನು
 
ಪುಂಡಪೋಕರಿಗಳು ಅಂಡಲೆದು
 
ಕಾಡುವರು ಗಂಡನಿಲ್ಲದಿರೆ 
 
ಭಂಡಬಾಳಿದು ನೋಡು ಸವೆಯದಿದು ದೌಡು
 
ಹುಡುಕಾಡಿಸಾವೆನೆಂದರೆ 
 
ಮಿಡುಕುವುದು ಮನವೆರಡು ಮಕ್ಕಳ  ಮೋಹದಲಿ 
 
ಆಟಕುಂಟು ಲೆಕ್ಕಕಿಲ್ಲದಗಂಡ 
 
ಬೀಡಿಕೊಂಬಲು ಬಿಡಿಗಾಸು
 
ಕುಡಿಯಲೊಂದಿಷ್ಟುಕಿಲುಬುಕಾಸು
 
ಕೊನೆಗೆ ಕೂಡಿಕೊಂಬಲೂ ಕವಡೆಕಾಸಿಗ್ಹಲ್ಲಗಿಂಜುವ 
 
ಕೆಲಸಗೇಡಿಯೊಡಗೂಡಿ
 
ಬಾಳಬಂಡಿಯ  ಕಡುಕಷ್ಟದಿ ದೂಡುತಿಹೆನು 
 
ತಲೆಯಮೇಲೊಂದಿಲ್ಲಸೂರು
 
ತಟ್ಟೆಯಲಿರೊಟ್ಟಿ ರಟ್ಟೆಗಟ್ಟಿಯಿರುವನಕ 
 
ಇದೇತರ ಭಂಡಬಾಳಿದು
 
ಹೊತ್ತಿಲ್ಲಗೊತ್ತಿಲ್ಲಮೈಚಾಚಲೂಸವುಡೊಂದಿಷ್ಟಿಲ್ಲ 
 
ನೆಲಕಟ್ಟಿದೆನೆಂದರಾರೂದಿಕ್ಕಿಲ್ಲ
 
ದಿಕ್ಕೆಟ್ಟಜೀವನವಿನ್ನೆಷ್ಟುದಿನ ..
 

Comments