ರಿಟೈಲ್ ಮಾರ್ಕೆಟಿಂಗ್ ಮತ್ತು ಕೇಂದ್ರ ಸರ್ಕಾರದ ನೀತಿ

ರಿಟೈಲ್ ಮಾರ್ಕೆಟಿಂಗ್ ಮತ್ತು ಕೇಂದ್ರ ಸರ್ಕಾರದ ನೀತಿ

ಬೆಳಗಿನ ಪತ್ರಿಕೆ ಸುದ್ದಿಯ ಪ್ರಕಾರ ರಿಟೈಲ್ ಮಾರ್ಕೆಟ್ (ಚಿಲ್ಲರೆ ಮಾರಟ) ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಸ್ಥಾಪಕ್ಕೆ ಮನಮೋಹನ ಸಿಂಗ್ ನಾಯಕತ್ವದ (?) ಸರ್ಕಾರ ಒಪ್ಪಿಗೆ ನೀಡಿದೆ.  ಈ ವಿಷಯವನ್ನು ವಿರೋದಿಪಕ್ಷಗಳು ಅದರಲ್ಲು ಬಾಜಪ ದೊಡ್ಡಧ್ವನಿಯಿಂದ ವಿರೋದಿಸಿದೆ !!!.   ಹೆಚ್ಚು  ಆಶ್ಚರ್ಯವೇನು ಬೇಡ , ಒಮ್ಮೆ  ಬಾಜಪದ ನೇತೃತ್ವದ ಕೇಂದ್ರ ಸರ್ಕಾರವಿದ್ದಲ್ಲಿ    ಈ ನಿರ್ಣಯವನ್ನು ಎಂದೊ ಮಾಡಿ ಮುಗಿಸುತ್ತಿತ್ತು ಮತ್ತು ಅದನ್ನು ಕಾಂಗ್ರೆಸ್ ವಿರೋಧ ಮಾಡುತ್ತಿತ್ತು.
ಭಾರತದಂತಹ ಬೃಹುತ್ ದೇಶಕ್ಕೆ ಶಾಶ್ವತ  ಹಾಗು ದೀರ್ಘಾವಧಿಯ ನೀತಿಗಳೆ ಇಲ್ಲ .  ಸರ್ಕಾರದ ನೇತಾರರ ಮರ್ಜಿಯ ಮೇಲೆ ನಮ್ಮ ಆಡಳಿತಾತ್ಮಕ  ಶೈಕ್ಷಣೀಕ  ಹಾಗು ಹಣಕಾಸಿನ  ಸಾಮಾಜಿಕ ನೀತಿಗಳೆಲ್ಲ ಬದಲಾಗುತ್ತ ಹೋಗುತ್ತವೆ ಪ್ರತಿ ಹತ್ತು ಇಪ್ಪತ್ತು ವರ್ಷಗಳಿಗೊಮ್ಮೆ.  ಹೀಗಾಗಿ ಭಾರತದ ಸಾಮನ್ಯ ಪ್ರಜೆ ಸದಾ ಗೊಂದಲ ಹಾಗು ಕಸಿವಿಸಿಯಲ್ಲಿದ್ದಾನೆ.  ತನ್ನ ಜೀವನದ ಉದ್ಯೋಗವನ್ನು  ಆರ್ಥೀಕ ಸ್ಥಿಥಿಯನ್ನು ನಿರ್ದರಿಸುವಲ್ಲಿ ಸದಾ ಗೊಂದಲ.

ಸ್ವತಂತ್ರ ನಂತರದ  ಜವಹರಲಾಲ್ ನೆಹರು ನೇತೃತ್ವದ ಕಾಂಗ್ರೆಸ್ ಸರ್ಕಾರ ಸೋವಿಯತ್ ರಷ್ಯಯದ ಸೋಶಿಯಲಿಸಮ್ ನಿಂದ ಪ್ರಭಾವಿತಗೊಂಡು ಬೃಹುತ್ ಕೈಗಾರಿಕೆಗಳನ್ನು  ಸ್ಥಾಪಿಸುವುದು , ಹಸಿರು ಕ್ರಾಂತಿಯಂತ ರೈತ ಪರ ಯೋಜನೆಗಳನ್ನು ಕೈಗೊಂಡಿತು.  ಜನ ಜೀವನವೆಲ್ಲರ ಬದುಕು ಅದರಿಂದ ಪ್ರಭಾವಿತಗೊಂಡು ನಗರಪ್ರಧೇಶಗಳಲ್ಲಿ   ಸರ್ಕಾರಿ ಉದ್ಯೋಗಗಳಲ್ಲಿ ಸೇರುವುದು, ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಕೆಲಸ ಹುಡುಕುವುದು ಮಾಡಿದರೆ, ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸಾಯ ಹೈನುಗಾರಿಕೆ ಹಾಲು ಉತ್ಪನ್ನ ಮುಂತಾದವುಗಳಲ್ಲಿ ತಮ್ಮ ಜೀವನ ಮಾರ್ಗಗಳನ್ನು ಕಂಡುಕೊಂಡರು.
  ಇಂದಿರಾಗಾಂಧಿಯವರ ಕಾಲದಲ್ಲಿ  ಈ ನೀತಿ ಇನ್ನು ತಾರಕಕ್ಕೆ ಹೋಯಿತು. ಅವರು ಖಾಸಗಿ ಬ್ಯಾಂಕುಗಳನ್ನು ಸಾರ್ವಜನಿಕ  ಬ್ಯಾಂಕುಗಳಾಗಿ ವಿಲೀನಗೊಳಿಸಿದರು, ರಸ್ತೆಯಲ್ಲಿ ಓಡಾಡುವ ಖಾಸಗಿ ಬಸ್ಸುಗಳನ್ನು ಸರ್ಕಾರಕ್ಕೆ ಸೇರಿಸಿಬಿಟ್ಟರು. ಜಯಪ್ರಕಾಶ, ವಿನೋಭ ರಂತ  ಸುಧಾರರಕರು ಉಳುವವನು  ಭೂಮಿಗೆ ಒಡೆಯನೆಂದು ಘೋಶಿಸಿ ರೈತರನ್ನು ಭೂಮಿಗೆ ಒಡೆಯನನ್ನಾಗಿಸಿದರು.


ಕಾಲ ಕಳೆಯಿತು ಇಂದಿರಾ ಕಾಲ ಕಳೆದು ಅವರ ಮಗ ರಾಜೀವನ ಕಾಲ ಬಂದಿತು. ಯುರೋಪಿನಲ್ಲಿ ವಿಧ್ಯಾಬ್ಯಾಸ ಮಾಡಿ ಅಲ್ಲಿಯೆ ಬೆಳೆದಿದ್ದ ಅವರ ಮೇಲೆ  ಪಾಶ್ಚಿಮಾತ್ಯ ಸಮಾಜದ ಪ್ರಭಾವ ಸಾಕಷ್ಟಿತ್ತು. ಅವರಿಗೆ ಸಾಮ್ ಪೆಟ್ರೋಡರಂತವರು ಜೊತೆಯಾದರು. ದೂರದರ್ಶನ ತಮ್ಮ ಬಾಹುಗಳನ್ನು ಪಸರಿಸಿತು. ಹಾಗೆಯೆ ವಿವಿದ ಚಾನಲ್ ಗಳು ದಾಂಗುಡಿಯಿಟ್ಟು ಸಮಾಜದ ಮೇಲೆ ತಮ್ಮ ಪ್ರಭಾವ ಹಿಡಿತ ಸಾಧಿಸಿದವು. ಇದು ಸಾಮ್ರಾಜ್ಯ ಶಾಹಿಗಳ ಮೊದಲ ಹೆಜ್ಜೆ.
  ಹಾಗೆಯೆ ದೂರಸಂಪರ್ಕದಲ್ಲಿ  ಸಹ ಭಾರತ ತನ್ನ ದೊಡ್ಡ ಹೆಜ್ಜೆಗಳನ್ನಿಟ್ಟಿತ್ತು. ಅದಕ್ಕೆ  ಭಾರತ ಸರ್ಕಾರದ ನಿರ್ಧಾರವೇನು ಕಾರಣವಲ್ಲ , ಬದಲಿಗೆ ಹೊರದೇಶದಿಂದ ಮಾಡಿದ್ದ  ದೊಡ್ಡಪ್ರಮಾಣದ ಸಾಲ ಹಾಗು ವಿಶ್ವಬ್ಯಾಂಕಿನ ಅಣತಿ, ದೊಡ್ಡಣ್ಣ ಅಮೇರಿಕದ ಒತ್ತಡ ಇಂತಹುದೆಲ್ಲ ಹಿನ್ನಲೆಯಲ್ಲಿ ಮಾಡಿದ ಪ್ರಭಾವಗಳಷ್ಟೆ. ಅದು ಯಾವ ಪ್ರಮಾಣವೆಂದರೆ. ವಾಜಪೇಯಿಯವರಂತ ಭಾರತದ ಪ್ರಧಾನಿ ಅಮೇರಿಕ ಪ್ರವಾಸಕ್ಕೆ ಹೊರಡುವ ಮುನ್ನ ಅಮೇರಿಕವನ್ನು ಮೆಚ್ಚಿಸಲು ಸರ್ಕಾರದ  ಸಂಪರ್ಕ ಇಲಾಖೆಯನ್ನು  ಪ್ರತ್ಯೇಕ ಸರ್ಕಾರಿ ಕಂಪನಿಯನ್ನಾಗಿ ಪರಿವರ್ತಿಸಿತು. ಹಾಗೆಯೆ,  ತಾನೆ ಒಮ್ಮೆ ಬ್ಯಾಂಕುಗಳನ್ನು ಸರ್ಕಾರಿಕರಣಗೊಳಿಸಿದ್ದನ್ನು ಮರೆತು ಖಾಸಗಿ ಬ್ಯಾಂಕುಗಳನ್ನು ಸ್ಥಾಪಿಸಲು ಉತ್ತೇಜಿಸಿ ರೈತರಿಗೆ ಸಾಲಕೊಡುತ್ತಿದ್ದ  ಗ್ರಾಮೀಣ ಬ್ಯಾಂಕುಗಳನ್ನು ಬುಡಮೇಲುಗೊಳಿಸಿತು. ತಾನೆ ಸ್ಥಾಪಿಸಿದ ಕೈಗಾರಿಕೆಗಳನ್ನು ಸ್ವಹಿತಾಸಕ್ತಿಯಿಂದ ಮುಚ್ಚುತ್ತ ಹೊರಟಿತು. ಸರ್ಕಾರದ ನೀತಿಯ ಪರಿಣಾಮ ಕಾರ್ಮಿಕರೆಲ್ಲ ಅಕ್ಷರಷಃ ಬೀದಿಗೆ ಬಿದ್ದರೆ ರೈತರು ಆತ್ಮೆಹತ್ಯೆಗಾಗಿ ಹಗ್ಗ , ಮತ್ತು ವಿಷದ ಬಾಟಲುಗಳನ್ನು ಕೈಗೆ ತೆಗೆದುಕೊಂಡರು. ಸರ್ಕಾರ ಮಾತ್ರ ನಿರಾತಂಕವಾಗಿ ರೈತರ ಜಮೀನುಗಳನ್ನು ವಶಮಾಡಿಕೊಂಡು ದೇಶದ ಬಂಡವಾಳಶಾಯಿಗಳಿಗೆ ವಶಮಾಡಿ ತನ್ನ ಪೌರುಷ ಮೆರೆಸಿತು. ಬಂಡವಾಳ ಶಾಯಿಯಗಳ ಪ್ರತಿನಿಧಿಗಳೊ ಎಂಬಂತೆ ಬಳ್ಳಾರಿಯ  ಗಣಿದೊರೆಗಳಂತವರು ಸರ್ಕಾರದ ಮೇಲೆ ಹಿಡಿತ ಸಾಧಿಸಿದರು.

  ಈಗ ಇದರ ಮುಂದಿನ ಹೆಜ್ಜೆ ರಿಟೈಲ್ ಮಾರ್ಕೆಟಿಂಗ್ ನೀತಿ , ಬೀದಿಬದಿಯ ವ್ಯಾಪಾರಿಗಳು, ಕೈಗಾಡಿಯ ಸಾಹುಕಾರರು! . ನಿಮ್ಮ ರಸ್ತೆಯ ಕಡೆಯಲ್ಲಿರಬಹುದಾದ ಶೆಟ್ಟರ ಅಂಗಡಿಗಳಂತ ಗುಬ್ಬಿಗಳನ್ನು  ಮಟ್ಟಹಾಕಲು ವಿದೇಶದಿಂದ ವಾಲ್ ಮಾರ್ಟ್ ನಂತ ದೈತ್ಯಶಕ್ತಿಗಳನ್ನು  ಅಹ್ವಾನಿಸಲಾಗಿದೆ ಸರ್ಕಾರದ ಪರವಾಗಿ.

 ಸರ್ಕಾರವೆಂದರೆ ಈಗ ನಮ್ಮನ್ನು ಕಾಪಾಡಲು ಇರುವಂತ ವ್ಯವಸ್ಥೆಯಲ್ಲ ಬದಲಾಗಿ ಲಾಭ ಮಾಡಲು ನಿಂತಿರುವ ’ಈಸ್ಟ್  ಇಂಡಿಯ’ ಕಂಪನಿ ರೀತಿಯ ಮತ್ತೊಂದು ಲಾಭಕೋರ ಸಂಸ್ಥೆಯಷ್ಟೆ.

 ಏನು ಉಪಯೋಗವಿಲ್ಲ,  ಇದನ್ನೆಲ್ಲ ಚಿಂತಿಸಬೇಕಾದ ಯುವಜನತೆ ಅಮೋಧಪ್ರಮೋಧದಲ್ಲಿ ಮುಳುಗಿದ್ದಾರೆ , ಏಕೆಂದರೆ ಅವರಿಗೆ ಏನು ಕೇಳದಂತೆ ಕಿವಿಗೆ ಐ-ಪಾಡ್ ಕೊಡಿಸಲಾಗಿದೆ , ಏನು ಕಾಣದಂತೆ ಕಣ್ಣೆದುರು ಫೇಸ್ಬುಕು ಹಾಗು ಯೂ-ಟ್ಯೂಬ್ ಗಳನ್ನು ಇಡಲಾಗಿದೆ.
ಭಾರತ ಮಾತೆಗೆ ಜಯವಾಗಲಿ.

 

Rating
No votes yet

Comments