ಈ ಭಿತ್ತಿಪತ್ರಗಳನ್ನು ಬರೆದವರಾರು ?

ಈ ಭಿತ್ತಿಪತ್ರಗಳನ್ನು ಬರೆದವರಾರು ?

ಲೇಖನದಲ್ಲಿ ಪ್ರಕಟಿಸಿರುವ ಫೋಟೋಗಳ ವಿಶೇಷತೆ ಏನು ? ಒಮ್ಮೆ ಗಮನವಿಟ್ಟು ನೋಡಿ.

ಇವನ್ನೆಲ ನೋಡಿದ ಬಳಿಕ ನಿಮಗೆ ಅನ್ನಿಸುವುದೇನು ? ಯಾರೋ ಸಮಾಜವಾದಿ ಸಿದ್ಧಾಂತ ಪ್ರತಿಪಾದಿಸುವವರು ಹೀಗೆ ಬರೆದಿರಬಹುದು ಎಂದೆನಿಸಬಹುದು ಅಥವಾ ಅಣ್ಣಾ ಅವರ ಕ್ರಾಂತಿಯ ಬಳಿಕ ಇನ್ಯಾರೋ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಪ್ರಯತ್ನಿಸುತ್ತಿರಿರಬಹುದು ಎಂದೆನಿಸಿದರೆ ನಿಮ್ಮ ಊಹೆ ತಪ್ಪು ಏಕೆಂದರೆ ಇಂತಹ  ಭಿತ್ತಿಪತ್ರಗಳು ದಕ್ಷಿಣ ದೆಹಲಿಯ ಬೇರ್ ಸರಾಯ್ ಚಿಕ್ಕ ಮಾರುಕಟ್ಟೆ ಬಳಿ ಸರ್ವೇಸಾಮಾನ್ಯ

ಬೇರ್ ಸರಾಯ್ ಮಾರುಕಟ್ಟೆಯ ಮುಂದಿದೆ ಪ್ರತಿಷ್ಠಿತ ಜವಾಹರ್ ಲಾಲ್ ನೆಹರು ವಿಶ್ವ ವಿದ್ಯಾಲಯ ಹಾಗೂ ನಮಗೆಲ್ಲರಿಗೂ ತಿಳಿದಂತೆ ಪ್ರಜಾವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ನಾಗೇಶ್ ಹೆಗಡೆ ಹಾಗೂ ವರಿಷ್ಠ ಪೋಲಿಸ್ ಅಧಿಕಾರಿ ಶ್ರೀ ಮಧುಕರ್ ಶೆಟ್ಟಿಯವರು ಇಲ್ಲಿ ತಮ್ಮ ಪದವಿ ಶಿಕ್ಷಣ ಪೂರೈಸಿದ್ದಾರೆ ಹಾಗೂ ಪ್ರದೇಶದ ಹಿಂಭಾಗದಲ್ಲಿದೆ ..ಟಿ ದೆಹಲಿ ಹಾಗಾಗಿ ಬೇರ್ ಸರಾಯ್ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಕೇವಲ ಉನ್ನತಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಭಾರತೀಯ ಲೋಕ ಸೇವಾ ಆಯೋಗ ನಡೆಸುವ ಸ್ಪರ್ಧಾಪರೀಕ್ಷೆಗಳಿಗಾಗಿ ಹಗಲಿರುಳು ತಯಾರಿ ನಡೆಸುತ್ತಿರುವ ಅಕಾಂಕ್ಷಿಗಳೇ ಇಲ್ಲಿ ಹೆಚ್ಚು ಕಾಣಸಿಗುತ್ತಾರೆ. ಹಾಗಾಗಿ ಎಲ್ಲಾ ಭಿತ್ತಿಪತ್ರಗಳನ್ನು ಮೊದಲ ಸಲ ನೋಡಿದಾಗ ಇದು ವಿದ್ಯಾರ್ಥಿಗಳ ಕೆಲಸವಿರಬಹುದೆಂದು ಭಾವಿಸಿದ್ದೆ. ಅದರಲ್ಲೂ ಇವುಗಳಲ್ಲಿರುವ ಸುಂದರ ಬರವಣಿಗೆ ಹಾಗೂ ವಿಚಾರ, ಹಿಂದಿ ಹಾಗೂ ಆಂಗ್ಲ ಎರಡರಲ್ಲೂ ಇದ್ದುದರಿಂದ ನನ್ನನ್ನು ಸೆಳೆದದ್ದುಂಟು.

ಹೀಗೆ ಪ್ರತಿಸಾರಿ ಅಲ್ಲಿ ಹೋದಾಗಲೆಲ್ಲಾ ಹೊಸತೇನಾದರು ಇದೆಯಾ ಎಂದು ಹುಡುಕುತ್ತಿದ್ದೆ. ಆದರೆ ಸಾಯಾಂಕಾಲವಾದರೆ ಕಿಕ್ಕಿರಿದು ಸೇರುವ ಜನ ಸಮೂಹ ಪೋಸ್ಟರ್ ಗಳೆಡೆಗೆ  ಕಿಂಚಿತ್ತೂ ಗಮನ ಕೊಡುವುದಿಲ್ಲ.

ಮುಂದೊಂದು ದಿನ ಮುಂಜಾವಿನ ಸಮಯದಲ್ಲಿ ಅದೇ ಸ್ಥಳದಲ್ಲಿ ಮಾನಸಿಕ ಅಸ್ವಸ್ಥನಂತೆ ಕಾಣುವ ಮಧ್ಯವಯಸ್ಕ ವ್ಯಕ್ತಿ ಅರಚುತ್ತಿರುವಂತೆ ಕಂಡು ಬಂತು. ಕುತೂಹಲ ಹೆಚ್ಚಾಗಿ ಕೊಂಚ ಗಮನವಿಟ್ಟು ಕೇಳಿದಾಗ ಆತ ಜೆ .ಎನ್.ಯು  ಮುಖ್ಯದ್ವಾರದೆಡೆಗೆ ಮುಖ ಮಾಡಿ ಏನೇನೋ ಹೇಳಬಯಸುತ್ತಿರುವಂತೆ ಕಂಡು ಬಂತು.
"ಡಾ. ಚಮನ್ ಲಾಲ್ , ಭಗತ್ ಸಿಂಗ್ ಸೇ ಭೀ ಬಹುತ್ ಬಡೇ ಕ್ರಾಂತಿಕಾರಿ ಥೆ" ಹೀಗೆ ಇದೊಂದೇ ವಾಕ್ಯವನ್ನು ಮೂರ್ನಾಲ್ಕು ಸಲ ಒಂದೇ ಸಮನೆ ಜೋರಾಗಿ ಕೂಗಿದ ಬಳಿಕ ಕೆಲ ಕಾಲ ಅತ್ತಿತ್ತ ತಿರುಗಾಡಿ ಮತ್ತೆ " ಅಂಗ್ರೇಜಿ ಭಾಷಾಕೇ ಗುಲಾಮೋ" ಎಂದೆನಬೇಕೆ?`
ಮಾನಸಿಕ ಅಸ್ವಸ್ಥನಿರಬಹುದೆಂದು ಯಾರೊಬ್ಬರೂ ಆತನೆಡೆಗೆ ನೋಡಲೂ ಇಲ್ಲ .ಹಾಗೆ ಜಾಗದಿಂದ ಸ್ವಲ್ಪ ಬೇರೆ ಜಾಗದೆಡೆಗೆ ತೆರಳಿ ತನ್ನ ಬಗಲಲ್ಲಿದ್ದ ಚೀಲದಿಂದ ಒಂದು ಅಗಲವಾದ ಖಾಲಿ ಕಾಗದವೊಂದನ್ನು ಹೊರ ತಗೆದು ಬರೆಯಲಾರಂಭಿಸಿದ. ನಾಲ್ಕೈದು ನಿಮಿಷಗಳ ಕಾಲಾವಧಿಯಲ್ಲಿ ಸರಸರನೆ ತೋಚಿದ್ದನ್ನು ಬರೆದು ಗೋಡೆಗೆ ಅಂಟಿಸಿ ಬಿಟ್ಟ.
ನಾನು ಕೆಲ ದಿನಗಳಿಂದ ತಿಳಿಯಬಯಸಿದ ವ್ಯಕ್ತಿ ನನ್ನ ಮುಂದಿದ್ದ ಆದರೆ ಅಪರಿಚಿತ ವ್ಯಕ್ತಿಯ ಜೊತೆ ಸಂಭಾಷಣೆ ನಡೆಸಲು ಹಿಂಜರಿಕೆ ಉಂಟಾಯಿತುಹಿಂಜರಿಕೆ ಮಾನವನ ಸಹಜ ಗುಣವೆಂದು ಸುಮ್ಮನಾಗಿಬಿಟ್ಟೆ. ಪ್ರತಿ ಸಾರಿ ಅಲ್ಲಿ ಹೋದಾಗಲೆಲ್ಲ ಅಲ್ಲಿರುವ ಎಲ್ಲಾ ಭಿತ್ತಿಚಿತ್ರಗಳ ಮೇಲೆ ಕಣ್ಣಾಡಿಸುತ್ತಿದ್ದೆ ಹಾಗೂ ವ್ಯಕ್ತಿ ಒಂದು ಮೂಲೆಯಲ್ಲಿ ಸುಮ್ಮನೆ ನಿಂತಿರುತ್ತಿದ್ದ . ಮುಂದೊಂದು ದಿನ ಅಲ್ಲಿನ ಚಹಾದಂಗಡಿಯಲ್ಲಿ ಚಹಾ ಸೇವಿಸುತ್ತಿರುವಾಗ ಆತ ಎಂದಿನಂತೆ ಏನನ್ನೋ ಹೇಳುತ್ತಿರುವಂತೆ ಕಂಡು ಬಂತು .
"ಭಾರತ್ ಮೇ ದೋ ಸೌ ಸೇ ಭೀ ಅಧಿಕ್ ಭಾಷಯೇ ಹೈ" (ಭಾರತದಲ್ಲಿ ಇನ್ನೂರಕ್ಕೂ ಹೆಚ್ಚು ಭಾಷೆಗಳಿವೆ).
"ಹಮಾರಿ ಮಾಂಗೆ ಸಾಫ್ ಹೈ , ಶಿಕ್ಷಾ ಮೇ ಬದಲಾವ್ ಲಾನಾ ಚಾಹಿಯೇ"(ನಮ್ಮ ಬೇಡಿಕೆ ಇಷ್ಟೇ, ಶಿಕ್ಷಣದಲ್ಲಿ ಬದಲಾವಣೆಯ ಅಗತ್ಯವಿದೆ) ಎಂದೆನ್ನುತ್ತಿದ್ದ.
ಇಷ್ಟೆಲ್ಲಾ ವೀಕ್ಷಿಸಿದ ಬಳಿಕ ವ್ಯಕ್ತಿಯ ಬಗ್ಗೆ ತಿಳಿಯೋಣವೆಂದು ಅಲ್ಲಿದ್ದ ಪುಸ್ತಕ ಮಳಿಗೆಯ ವ್ಯಾಪರಿಯನ್ನು ವಿಚಾರಿಸಿದೆ ವ್ಯಾಪಾರಿ ತನಗೆ ಗೊತ್ತಿದ್ದ ಎಲ್ಲ ಮಾಹಿತಿಯನ್ನು ನೀಡತೊಡಗಿದ.
"ಆತನ ಹೆಸರು ರಮಾನಂದ . ಊರು ಬನಾರಸ್ (ಕಾಶಿ). ಕಳೆದ ಏಳೆಂಟು ವರ್ಷಗಳಿಂದ ಇಲ್ಲಿಯೇ ವಾಸಸುತ್ತಿದ್ದಾನೆ ಎಂದ. ಈತನ ಸಂಬಧಿಕರೆಲ್ಲಿ ಎಂದಾಗ ಸದ್ಯಕ್ಕಂತೂ ಆತನಿಗೆ ಸಂಬಂಧಪಟ್ಟವರು ಯಾರೂ ದೆಹಲಿಯಲ್ಲಿ ಇಲ್ಲ ಎಂದ.   ಮತ್ತೆ ದೈನಂದಿನ ಖರ್ಚು ವೆಚ್ಚ ಹೇಗೆ ನಿಭಾಯಿಸುತ್ತಾರೆ ಎಂದೆ. ಈತ ಈಗ್ಗೆ ಸರಿ ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಇದೇ ಜೆ .ಎನ್.ಯು  ದಲ್ಲಿ  ಎಂ. ಪದವಿ ಪೂರೈಸಿದ್ದು ಈತನ ಸಹಪಾಠಿಗಳು ಆಗಾಗ ಬಂದು ನೂರೋ ಇನ್ನೂರೋ ಕೊಡುತ್ತಾರೆ. ನಾವು ಕೂಡ ಆಗಾಗ ಊಟಕ್ಕೋ ಚಹಕ್ಕೋ ಕಾಸು ಕೊಡುತ್ತೇವೆ ಎಂದ. ಕೊನೆಯ ಪ್ರಶ್ನೆಯೆಂಬಂತೆ ಇವರು ಹೀಗಾಗಲು ಕಾರಣವೇನು  ಎಂದು ಕೇಳಿದೆ. ಅದಕ್ಕೆ ಆತ ಸ್ಪಷ್ಟ ಕಾರಣ ನನಗೂ ಗೊತ್ತಿಲ್ಲ ಆದರೆ ಈತ ಸ್ಥಿತಿಗೆ ಬರಲು  ತಾನೇ ಕಾರಣವಿರಬಹುದು ಮತ್ತು ಅವರು ಪುನಃ ಮಾನಸಿಕವಾಗಿ ಸ್ವಸ್ಥರಾಗುವ ಸಾಧ್ಯತೆಗಳು ಕಡಿಮೆ ಎನ್ನುತ್ತ ರಮಾನಂದರನ್ನು ಕರೆದುಬಿಡಬೇಕೇ. ರಮಾನಂದರನ್ನು ಹತ್ತಿರ ಕರೆದು "ದೇಖಿಯೇ ಭಾಯಿ ಸಾಹಬ್ ಯೇ ಆಪಸೇ ಮಿಲನಾ ಚಹತೆ ಹೈ " ಎಂದು ನನ್ನನ್ನು ಪರಿಚಯಿಸಿ ಬಿಟ್ಟನನಗೋ ಕೆಲ ಕ್ಷಣ ದಿಕ್ಕೇ ತೋಚದಂತಾಯಿತು. ವ್ಯಕ್ತಿ ಹೇಗೆ ವರ್ತಿಸುತ್ತಾನೋ ದೇವರೇ ಬಲ್ಲ ಸುಮ್ಮನೆ ಕಾಲಿಗೆ ಬುದ್ದಿ ಹೇಳೋಣ ಎನಿಸಿತು.

ಆದರೆ ನಡೆದದ್ದೇ ಬೇರೆ.
ಕೆಲ ನಿಮಿಷಗಳ ಹಿಂದೆ ವಿಚಿತ್ರವಾಗಿ ವರ್ತಿಸುತ್ತಿದ್ದ ವ್ಯಕ್ತಿ ಹತ್ತಿರ ಬಂದು ನಗು ನಗುತ್ತ "ನಮಸ್ತೆ ಭಾಯಿ ಸಾಹಬ್ , ಮೇರಾ ನಾಮ್ ರಮಾನಂದ್ ಹೈ . ಮೈ ಭಿ ಆಪ್ ಕಿ ತರಹ್ ಭಾರತ್ ದೇಶ್ ಕಾ ನಾಗರಿಕ್ ಹ್ಞೂ" ಎಂದಾಗ ವ್ಯಕ್ತಿ ಸಾಮಾನ್ಯ ವ್ಯಕ್ತಿಯಂತೆ ಇದ್ದಾನಲ್ಲ ಎನಿಸಿತು.  
ನಾನು: ಕ್ಯಾ ಆಪ್ ಪ್ರೊಫೆಸರ್ ಹೈ ?
ರಮಾನಂದ್: ಅರೆ ನಹಿ ಲೋಗ್ ಐಸೆ ಹಿ ಪುಕಾರ್ತೆ ಹೈ.
ನಾನು: ಆಪ್ ಕರ್ತೆ ಕ್ಯಾ ಹೈ ?
ರಮಾನಂದ್: ಮೈ ಫ್ರೀಲಾನ್ಸ್ ಜರ್ನಲಿಸ್ಟ್  ಹ್ಞೂ.
ನಾನು: ಕ್ಯಾ ಆಪ್ ಕಿತಬ್ ವಗೈರ ಲಿಖ್ತೆ ಹೈ ?
ರಮಾನಂದ್: ನಹಿ ಬಸ್ ಐಸೆ ಹಿ ದೋ ತೀನ್ ಕಿತಾಬ್ ಛಪೀ ಹೈ.
ರಮಾನಂದ್: ಆಪ್ ಕಹಾ ಕೆ ಹೈ ?
ನಾನು: ಮೈ ಕರ್ನಾಟಕ್ ಕಾ ಹ್ಞೂ.
ರಮಾನಂದ್: ಆಪ್ ಹಿಂದಿ ತೋ ಜಾನತೇ ಹೈ ನಾ ಎನ್ನುತ್ತಾ ಒಂದು ಮುದ್ರಿತ ಹಾಳೆಯನ್ನು ನನ್ನ ಕೈಗಿತ್ತರು.
ಕಾಗದಲ್ಲಿನ ವಿಷಯಗಳ ಬಗ್ಗೆ ವಿವರಣೆ ಕೊಡುತ್ತ "ಯೇ ಸಬ್ ಪುರಾನೀ ಮಾಂಗೆ ಹೈ, ಕುಚ್  ನಯಾ ನಹಿ ಹೈ ಇಸ್ಮೆ" ಎಂದು ತೀರಾ ಸಾಮಾನ್ಯ ವ್ಯಕ್ತಿಯಂತೆ ಮಾತನಾಡತೊಡಗಿದರು.
ಅದರಲ್ಲಿದ್ದ  PDS (Public Distribution System) ನಾಗರಿಕ ಆಹಾರ ಸರಬರಾಜು  ವ್ಯವಸ್ಥೆಯ ಬಗ್ಗೆ ಹೇಳುತ್ತಾ ಸದ್ಯದ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಆಹಾರ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ ಆದರೆ ಆರ್ಥಿಕವಾಗಿ ಹಿಂದುಳಿದವರಿಗೆ ಅದು ಉಚಿತವಾಗಿ ದೊರೆಯುವಂತೆ ಮಾಡಬೇಕು ಎಂದರು.  (ಈಗಲೂ ಸರಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಆಹಾರ ಸಾಮಗ್ರಿಗಳನ್ನು ಉಚಿತವಾಗಿ ಪೂರೈಕೆ ಮಾಡುತ್ತಿದೆಯೋ ಇಲ್ಲವೋ   ಬಗ್ಗೆ ನನ್ನ ಬಳಿ ಮಾಹಿತಿ ಇಲ್ಲ).
ರಮಾನಂದ್: ಕ್ಯಾ ಆಪ್ ಸಿವಿಲ್ ಸರ್ವೀಸಸ್ ಕಿ ತಯಾರಿ ಕರ್ ರಹೇ ಹೈ ?

ನಾನು: (ನಾನು ಸಿವಿಲ್ ಸರ್ವೀಸಸ್ ಗೆಂದು ಸಿದ್ಧತೆ ನಡೆಸುತ್ತಿಲ್ಲವಾದರೂ ಹೌದೆಂದೆ).
ರಮಾನಂದ್: ಶಾಮ್ ಮೇ ಆಪ್ ಕಭಿ ಭಿ ಆಯಿಯೇ , ಮೈ ತೋ ಇಧರ್ ಹಿ ರಹತಾ ಹ್ಞೂ ,ಕಿಸೀ ಭಿ ಚೀಜ್ ಕಿ ಜಾನಕಾರೀ ಚಾಹಿಯೇ ತೋ ಆಪ್ ಹಮ್ ಸೆ ಮಿಲ್ ಸಖ್ತೆ ಹೈ ಎಂದು ಅಲ್ಲಿಂದ ಹೋಗಿ ಬಿಟ್ಟರು.
ಅವರು ಅಲ್ಲಿಂದ ತೆರಳಿದ ಬಳಿಕ ಅದೇ ಪುಸ್ತಕ ವ್ಯಾಪಾರಿಯು ಇವರು ಬೇಗ ಗುಣಮುಖರಾಗಲಿ ಎಂದ. ಅದಲ್ಲದೆ ಈಗಲೂ  ಕೆಲ ಸಿವಿಲ್ ಸರ್ವೀಸಸ್ ಅಕಾಂಕ್ಷಿಗಳು ಇವರ ಬಳಿ ಸಮಾಜಶಾಸ್ತ್ರದ ಬಗ್ಗೆ ಮಾರ್ಗದರ್ಶನ ಪಡೆಯುತ್ತಾರೆ ಎಂದ.
ಲೇಖನ ಬರೆಯುವ ಮುನ್ನ ರಮಾನಂದರ ಪೂರ್ವಾಪರ ಇನ್ನಷ್ಟು ತಿಳಿದು ಬರೆಯಬೇಕೆಂದೆನಿಸಿದರೂ ಬಗ್ಗೆ ಪೂರಕ ಮಾಹಿತಿ ಕಲೆ ಹಾಕಲಾಗಲಿಲ್ಲ ಹಾಗಾಗಿ ಪೂರ್ಣ ಮಾಹಿತಿ ಇಲ್ಲದೆ ಲೇಖನ ಅಪೂರ್ಣ ಆದರೂ ಒಂದು ಮಾತಂತೂ ನಿಜ. ನಮ್ಮಲ್ಲಿ ಎಷ್ಟು ಜನರಿಗೆ ಸಮಾಜಶಾಸ್ತ್ರ ಬಗ್ಗೆ ಅವರಷ್ಟು ಅರಿವು ಇದೆ? ನಮ್ಮನ್ನಾಳುವ ಪ್ರಜಾಸೇವಕರಿಗಾದರೂ ಅವರು ಪ್ರಸ್ತಾಪಿಸ ಬಯಸಿರುವ ವಿಷಯಗಳ ಬಗ್ಗೆ ಗಮನವಿದೆಯೇ ? ಅಷ್ಟೆಲ್ಲ ಜ್ಞಾನ ಹೊಂದಿದ್ದರೂ ವ್ಯಕ್ತಿ ಯಾರ ಉಪಯೋಗಕ್ಕೂ ಬಾರದೆ ನಿರ್ಲಕ್ಷಿಸಲ್ಪಟ್ಟಿರುವುದೇಕೆಅವರ ಉಪಯುಕ್ತತೆಯನ್ನರಿಯದ ನಾವೆಂಥಾ "ಹುಚ್ಚರು".

Rating
No votes yet

Comments