ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )-೫

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )-೫

 


ಕೆಮ್ಮು ಒತ್ತರಿಸಿ ಬಂದು  ಬಾಯಲ್ಲಿದ್ದ 'ಬೀಡಿ'  ಕಪದ ವಿಷವನ್ನ' ತುಪಕ್ಕನೆ ಉಗ್ದು  ಒಳಗಡೆ  ಬಂದ 'ಕೆಮ್ಮೀರಪ್ಪಂಗೆ' ಮಗ 'ಮಹದಾನಂದದಿಂದ' ಕುರ್ಚಿ ಮೇಲ್ ಕುಳಿತಿದ್ ಕಾಣಿಸ್ತು. ಅಲಾ ಬಡಿವಾರದವ್ನೆ !! ಅಲ್ಲ ದೇವ್ರು  'ಬಡವ ನೀ ಮಡಗಿದಂಗಿರು' ಅಂತಾ  ನಮನ ಬಡವರನ್ ಆಗ್  ಭೂಮಿಗ್ ಬಿಟ್ರೆ ,ಇಲ್ಲಿ 'ಇವ್ನು' ಕುರ್ಚಿ ಮೇಲೆ ಕುಳಿತು  'ಮಹಾರಾಜನ ಗತ್ತು' ತೋರಿಸ್ತವ್ನಲ್ಲ, ಲೇಯ್  ದಡ್ಡ ಮುಂಡೇ ಗಂಡ ಬೋರ  ,ನಿನ್ ಹೆಣ ಎತ್ತಾ, ದುಡಿಯೋದ್  ಒಂದ್ ಕಾಸಿಲ್ಲ, 'ಗೇಯ್ಮೆ' ಅಂತೂ ಕೆಳಂಗೆ ಇಲ್ಲ, ಏನಾರ ಕೂಲಿ -ನಾಲಿ ಮಾಡ್ ನಮ್ ಹೊಟ್ಟೆ ತುಮ್ಬ್ಸೋ ಅಂತ ನಾವಂದ್ರೆ ಬರೀ ಹುಡುಗರನ ಕಟ್ಟಿಕೊಂಡು  ಊರೆಲ್ಲ ಪೋಲಿ ಅಲೆಯೋದೆ ಆಯ್ತು

ಸದಾ ಊರ್ ಹೈಕುಳ್ಗಳನ್ನೆಲ್ಲ ಕಟ್ಟಿಕೊಂಡು 'ಕಾಡು-ಮೇಡು' ಅಲೆಯೋದು 'ಸಂಜೆ ಹೊತ್ಗೆ  ಸರ್ಯಾಗ್ ತಿನ್ನೋಕ್ ಬರೋದು'. ಅದೂ ಸಾಲ್ದೆ    ಕುರ್ಚೀನ 'ಅದೆಲ್ಲಿಂದಲೋ ಎತಾಕೊಂಡ್' ಬಂದು ಇಲ್ಲಿ ಅದ್ರ ಮೇಲ್ ರ್ರಾಜನ್ ಗತ್ತಲ್ ಕುಳಿತಿದ್ಯ  'ನಿನ್ ಮನೆ ಕ್ವಾಯೊಗ '  ಇಳಿಯೋ ಕೆಲ್ಗಡೆ, ಅದೆಲ್ಲಿಂದ ತಂದೋ ಇದ್ನಾ?  ಬೆಳಗ್ಗೆಯಿಂದ 'ಆ ಕುರ್ಚಿ' ಸಿಕ್ಕ ಕಥೆ ಹೇಳಿ -ಹೇಳಿ ಸೋತು ಸೊರಗಿ ಹೋಗಿದ್ದ ಬದ್ಪಾಯೀ  'ಬೋರ' ಮತ್ತೆ ಅದನೆ 'ತಂದೆಗೆ'  ರಿಪೀಟ್ ಮಾಡಿದ.

ಆದ್ರೆ 'ಕೆಮೀರಪ್ಪಂಗೆ' ಆ ತರಹದ್ ಕುರ್ಚಿ 'ಅದೆಲ್ಲಿಂದಲೋ ಬಂದು ಇಲ್ಲಿ ಬಯಲಲ್ಲಿ ಬೀಳೋದು' ನಂಬಲಾಗದವಿಷ್ಯ.ಸುಳ್ಳು ಹೇಳ್ತೀಯ ನಂಗೆ?? ಅದ್ನ ನಾ ನಂಬೇಕ?

 

'ಮೂರ್ ಕತ್ತೆ '  ವಯ್ಸಾಗ್ ಬರೀ  'ಒಂಟೆ ತರಹ' ಬೆಲ್ದಿದೀಯ ಆದ್ರೆ ತಲೆಲ್ 'ಸ್ವಲ್ಪನಾರ ಬುದ್ದಿ ಬೆಳಿಲಿಲ್ಲ',  ಏನಾರ ಕೆಲಸ ಮಾಡ್ಬೇಕು -ದುಡೀಬೇಕು -ಗಳಿಸಬೇಕು 'ಮದ್ವೆಯಗಬೇಕ್ ' ಅಂತ ಅನ್ಸಲ್ವೇನೋ ನಿಂಗೆ?

'ಕೆಮ್ಮೀರಪ್ಪನ' ಆ ಮಾತುಗಳಲ್ ಏಳವನೂ ಈ ಕಿವಿಯಿಂದ ಆ ಕಿವ್ಗ್ ಬಿತ್ ಹೊರಗಡೆ ಕಳಿಸಿದ್ 'ಬಡ ಬೋರಂಗೆ' ಆ 'ಮದ್ವೇಯಾಗ್ಬೇಕ್' ಅನ್ನೋ ಪದ ಮಾತ್ರ 'ಸ್ಪುಷ್ಟವಾಗ್'  ಕೇಳ್ಸಿ ಮೈ 'ರೋಮಾನ್ಚವಾಯ್ತು':೦ 

ಯೋಪ್ಪೋ  ನಿಂದೊಳ್ಳೆ ಕಥೆಯಾಯ್ತಲ್ಲ, ಅಲ್ಲ ಇರೋದ್ನೆ ಹೇಳಿದ್ರೆ ನೀ  ನಮ್ಬದಿದ್ರೆ ನಾ ಎಂತ  ಮಾಡ್ಲಿ?  ಆದರೆ ನಾ ಹೇಳೋದೆಲ 'ದಿಟ್ವೆ', ಅಸ್ಟ್ ಹೇಳಿ ಕುರ್ಚಿಂದ  ಇಳ್ದು ಬಚ್ಚಲಿನೆಡೆಗೆ ನಡೆದ  ಮುಖ ತೊಳೆದ ಕೊಂಡು ಸ್ವಲ್ಪ ಮುದ್ದಿನ ತಿಂದ 'ಅಪ್ಪ್ಪಜಿಯವ್ರು' ಹೊರಗಡೆ ಹೊದ್ಮೆಲ್  'ಚಿಕ್ಕ -ಪಿಕ್ಕ-ಚಾರಿ-ಪಾರಿ--ನಾಗ-ಶಿನ್ನಿ' ಮುಂತಾದ ತನ್ನೆಲ್ಲ ಸ್ನೇಹಿತೂರ್ನೂವೆ  ಕರ್ಕೊಂಡ್ ಬಂದು 'ಆ ಕುರ್ಚೀನ ' ತೋರಿಸಿದ್ರಾಯ್ತು. ತಾ ಕುರ್ಚೀಲ್ ಕುಳಿತ್ ಕೊಳ್ಳೋದು  'ಅವರೆಲ್ಲ' ಆಶೆ-ಹೊಟ್ಟೆ ಕಿಚ್ಚಿಂದ ಅದ್ನ ನೋಡ್ತಾ 'ಕೊರಗೋದ್-ಮರುಗೋದ್' ಕಲ್ಪಿಸ್ಕೊಂಡೆ 'ಬಡ ಬೋರಂಗೆ' ೧ ಥರಾ  'ವಿಚಿತ್ರ ಖುಷಿಯಾಯ್ತು'.

 

ಇತ್ತ ಹಳ್ಳಿಯಲ್ಲಿ 'ಬಡ ಬೋರ'  ಕುರ್ಚೀಲ್ ಕುಳಿತು ಆನಂದ ಪಡ್ತಿದ್ರೆ ಅತ್ತ 'ಮಹಾನಗರದಲ್ಲಿ'  ಹೆಸರಲ್ಲೇ 'ಆನಂದವನ್ನ ಸದಾ'  ಬೇಕಾದಸ್ಟು ಇಕ್ಕೊಂಡಿದ್ದ 'ನಮ್ಮ  ತಾತ್ಕಾಲಿಕ ಮು-ಮ ಗಳಿಗೆ'  ಈ ಕುರ್ಚಿ ನಾಪತ್ತೆ ಮತ್ತು ಅದರ ಸುಳಿವು ಸಿಗದಿದ್ದುದು  ಮತ್ತು ಅದು ಸಿಗದಿದ್ದರೆ ಶ್ರೀ ಕೃಷ್ಣ ಜನ್ಮ ಸ್ಥಾನದಿಂದ  ಬಹುಶ :) ವಾಪಸ್ಸು ಬರ್ವ 'ಅವ್ರಿಗೆ' ಎಂತ ಹೇಳೋದು? ಎನುವ ಚಿಂತೆ ಕಾಡ್ತಾ  ಯಾರೊಡನೆಯೂ ಹೇಳ್ಕೊಲೋಕಾಗದ  'ವಿಚಿತ್ರ' ಸಂಕಟವನ್ನ ಅನುಭವಿಸಿದರು. ಅಲ್ಲ ಅದ್ಯಾವ್ 'ಮಹಾನುಭಾವ ಕಳಂಗೆ' ಆ ಕುರ್ಚಿ ಮೇಲೆ ಕಣ್ಣು ಬಿತ್ತು? ಬೇಕೊಂದಿದ್ರೆ ನಾನೇ  ಲೋಡುಗಟ್ಟಲೆ 'ಬೇರೆ ಕುರ್ಚೀನ' ಕಳಿಸಿಕೊಡ್ತಿದ್ದೆನಲ್ಲ .. ಹೊಗೊಗ್..

 

ಇದರ ಮಧ್ಯೆ 'ವಿರೋಧ ಪಕ್ಷಗಳ' ಕಾಲೆಲ್ದು ಬೀಳಿಸಿ ಮಜಾ ನೋಡೋ ಪ್ರವೃತ್ತಿ ಬೇರೆ:)) ಕಾಲ ಚಕ್ರದಲ್ಲಿ ತಾವು ವಿರೋದ ಪಕ್ಷದವ್ರಾಗಿದ್ದಾಗ ಇದೆ ತರಹ ಹಲ ವಿಷಯಗಳಲ್ಲಿ 'ಅವರನ್ನ' ಕಾಲೆಳದದ್ದು  ಬೇಡ-ಬೇಡ ಅಂದ್ರೂ ನೆನಪಿಗ್ ಬಂದು, ಅನ್ಕೊನ್ದ್ರು 'ಅತ್ತೆಗೊಂದು ಕಾಲ ಸೊಸೆಗೆ ಒಂದು ಕಾಲ'!

 

 

ಸರಿ ಶುರುವಾಯ್ತು ' ಆಡಳಿತ ಪ್ರತಿ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆ'

 

ಆಡಳಿತ ಪಕ್ಷದವರು- ಆ ಕುರ್ಚಿ ಕಾನೆಯಗಿರುವದ್ರ ಹಿಂದೆ ವಿರೋಧ ಪಕ್ಷಗಳ ಷದ್ಯಂತ್ರವಿದೆ -ಪಿತೂರಿ ಇದೆ. 'ಆ ಪಕ್ಷದಲ್ಲಿ' ಹಲವ್ರ್ಗೆ ವಯಸ್ಸಾಗ್ತಾ'  ಬಂತಲ್ಲ ಹೆಂಗೂ 'ವಿಧಾನ ಸೌಧದಲ್ಲೇ' ಆ 'ಕುರ್ಚಿ' ಮೇಲೆ  ಕೂರೋಕ್ ಆಗಲ್ವೇನೋ 'ಅದ್ನ' ಮನೇಲೆ ಇಕ್ಕೊಂಡು ಜೀವನದಲ್ಲಿ ಕೊನೆ ಉಸಿರ್ಗಂತ ಅದ್ರ ಮೇಲ ಕುಳಿತು ಖುಷಿ ಪಡ್ಬೇಕ್ ಆಶೆಯಿಂದಲೋ  ಅಥವ ನ್ಯಾಯವಾಗ್ ಸಿಗಲಿಲವಲ್ ಎಂಬ  'ಹತಾಶ' ಭಾವನೆಯಿಂದ 'ಕುರ್ಚೀನ'  ಎತ್ತಕೊನ್ದೊಗಿರ್ಬೇಕು..

ಈ ಆದಳಿತ ಪಕ್ಷದವರ ವಿರೋಧಿ ದೂಷಣೆ-ಆರೋಪ  ಸುದ್ಧಿ ಪತ್ರಿಕೇಲಿ - ಟೀ ವಿನಲ್ಲಿ  ಬಂದದ್ದೆ  ತಡ ,

ವಿರೋಧ ಪಕ್ಸ್ದವ್ರಲ್ಲಿ ಹಲವರು  'ಈ ಹೇಳಿಕೆ' ಖಂಡಿಸಿ 'ಮಹಾನಗರದಲ್ಲಿ' ಸದಾ ಟ್ರಾಫಿಕ್ ಜಾಮಾಗುವ ರಸ್ತೆಗಳ ಮೇಲೆಲ್ಲಾ  ಟೈರು  ಸುಟ್ಟು ಪ್ರತಿಕೃತಿ ದಹಿಸಿ ಮೈಕಲ್ಲಿ ಕರ್ಕಶವಾಗ್ ಕಿರಿಚುತ್ತ  ಅದಾಗಲೇ ಭೂಮೀಲ್  ಹೆಚ್ಚಗ್ತಿದ್ದ 'ವಾಯು ಮಾಲಿನ್ಯಕ್ಕೆ-ಶಬ್ದ ಮಾಲಿನ್ಯಕ್ಕೆ' ತಮ್ಮ ದುರ್ದಾನದ ಕೊಡ್ಗೆ  ನೀಡಿದರು. ಈ ಕಾರನವಾಗ್ ಆಫೀಸಿಗೆ ಲೆತಾಗ್ ಹೋದವರು, ಬಸ್ಸು-ರೈಲು- ವಿಮಾನ ತಪ್ಪಿಸಿಕೊಂಡವರು ಆಡಳಿತ- ವಿರೋಧ ಪಕ್ಷಗಳ ಈ 'ಆದುನಿಕ ಅಸುರರಿರ್ಗೆ' 'ಹಿಡಿ ಶಾಪ' ಹಾಕಿ ಯಥಾ ಪ್ರಕಾರ ತಮ್ಮ ತಮ್ಮ ಜಂಜಾಟದಲ್ಲಿ 'ಬಿಜಿ' ಆದರು.

 

ವಿರೋಧ ಪಕ್ಷದವರು-  'ಯಕಶಿತ್ 'ಒಂದು ಕುರ್ಚಿಯನ್ನ ಅಸ್ಟು ರಕ್ಷಣೆ ಇರೋ ವಿಧಾನ ಸೌಧದಲ್ಲೇ ರಕ್ಷಿಸಲಾಗದ ಅವ್ರು(ಆಡಳಿತ ಪಕ್ಷದವರು) ಈ ರಾಜ್ಯವನ್ನ ಜನರನ್ನ ಅದೇಗೆ ರಕ್ಷಿಸುತ್ತಾರೆ?  ತಮ್ಮ 'ಹುಳುಕನ್ನ'  ಮುಚ್ಚಿಹಾಕೊಕೆ  ನಮ್ಮ ಮೇಲೆ 'ಗೂಬೆ' ಕೂರಿಸುತ್ತಿದ್ದಾರೆ. ನಮಗೆ ಸಂಶಯವಿದೆ 'ಆ ಆಡಳಿತ ಪಕ್ಷದಲ್ಲೇ' ಹಲವ್ರ್ಗೆ  ಆ ಕುರ್ಚಿ ಮೇಲ ಕುಳಿತುಕೊಳ್ಳೋ ಆಶೆ ಆಕಾಕ್ನ್ಕ್ಷೆ ಇತ್ತು, ಅವರಲ್ಲೇ ಯಾರೋ ಅದ್ನ ಪಟಯ್ಸಿರ್ಬೇಕು.  ನಾವು ಈ ವಿಷಯವಾಗಿ ಮುಮ್ಬರ್ವ ದಿನಗಳಲ್ಲಿ 'ಬೃಹತ್ ಪ್ರತಿಭಟನೆ' ನಡೆಸಿ ಕೇಂದ್ರಕ್ಕೆ ಇದರ ಬಗ್ಗೆ ಸಿ ಬಿ ಐ  ತನಿಖೆ ನಡೆಸಬೇಕೆಂಬ  ಮನವಿ ಮಾಡುತ್ತೇವೆ, .ನಮಗೂ 'ಆ ಕುರ್ಚಿ' ಮೇಲೆ ಕೂರೋ ಆಶೆ ಇದೆ  ಹಾಗಂತ ಅದ್ರ ಮೇಲೆ ಕದ್ದು ಮುಚ್ಚಿ ಕೂರೋಕೊಗಲ್ಲ, ನ್ಯಾಯವಾಗೆ ಜನರಿಂದ ಆರಿಸಿಬಂದು ಅದ್ನ ಹತ್ತುತ್ತೇವೆ. > ಕಿಸ್ಸಕ್ಕನೆ ನಕ್ಕರು ಹಲ ಪತ್ರಕರ್ತರು ಅವರಿಗೆ ಅದಾಗಲೇ ಇವರ ಮಾತು ಕೇಳಿ 'ಸರ್ಕಾರ' ಬೀಳ್ಸೋಕೆ ಅವ್ರು 'ಹಿಂದಿನಿಂದ' ಮುಂದಿನಿಂದ- ಅಕ್ಕಪಕ್ಕದಿಂದ ಮೇಲೆ ಕೆಳಗೆ' ಹೀಗೆ ಎಲ್ಲೆಲ್ಲಿ -ಹೇಗೇಗೆ ಸಾಧ್ಯವೋ ಅಸ್ಟು ರೀತಿಯಲ್ಲಿ ಪ್ರಯತ್ನಿಸಿದ್ದು ಇನ್ನು ಕಣ್ಣಿಗೆ ಕಟ್ಟಿದಂಗಿದೆ ನಗು ಬರದೆ ಇನ್ನೇನು?

 

ಹೌದು ಇಸ್ಟೆಲ್ಲಾ -ಹಡವುಡಿ' ಗಜಿಬಿಜಿ ಗದ್ದಲಕ್ಕೆ ಕಾರಣವಾದ  'ಆ ಕುರ್ಚಿಗ್' ಅದೇನ್ ಅಸ್ಟು ಮಹತ್ವ ಇದೆ? ಅದ್ಯಾಕ್         ' ಯಕಶಿತ್'  ಒಂದು ಕುರ್ಚಿಗಾಗಿ ಅದು ಕೇವಲ 'ವಿಧಾನ ಸೌಧದಿಂದ' ಹೊರ ಹೊಯ್ತೆನ್ನೋ ಕಾರಣಕ್ಕೆ ರಾದಾಂತ- ರಂಪಾಟ ಮಾಡ್ಬೇಕು?

ಅದಕ್ಕೆ ಕಾರಣ  ಅದು ಹಿಂದಿನವರಂತೆ  'ಯಾವ್ಯಾವ್ದೋ ಮನಸಿಗ್ ತೋಚಿದ್  ಕುರ್ಚೀಲಿ' ಕುಳಿತು ಅಧಿಕಾರ ನಡೆಸಿದಂತ  'ಸಾಧಾರಣ ಮಾಮೂಲಿ' ಕುರ್ಚಿ ಅಲ್ಲ. ಕೃಷ್ಣ ಜನ್ಮ ಸ್ಥಾನ ಸೇರಿದ್ದ ಮಾ-ಮು  ಗಳು 'ಯಾವ್ಯಾವ್ದೋ ಮಠ ಮಂದಿರಗಲ್ಗೆ' ಅದಿದ್ಯ ಇಲ್ಲವೋ ಅನುವ ಆಲೋಚನೆಯೂ ಮಾಡದೆ  'ಕೇಳಿದಸ್ಟು ಧಾನ' ಮಾಡಿಯೂ  ಕೇವಲ ಒಂದು ವಾರ ಅಧಿಕಾರ ನಡೆಸ್ 'ಒಲ್ಲದ  ಮನ್ಸಿಂದ' ಅಧಿಕಾರ ಬಿಟ್ಟು ಬಿಡಬೇಕಾಗ್ ಬಂದದ್ದು ಆಗ  ಯ್ರಾಯ್ರದೋ ಹಿತೈಶಿಗಲ್' ಮಾತು ಕೇಳಿ 'ಶ್ರೀ ಶ್ರೀ ಶ್ರೀ ಬೂದಿನಾಥಸ್ವಾಮಿಗಳ' ಕಾಲಿಗ್ ಅಡ್ಡಡ್ಡ-ಉದ್ದುದ್ದ ಬಿದ್ದು ಇನ್ಮೇಲೆ ನಾ 'ನಾನಾಗೆ' ಕುರ್ಚಿ ಬಿಡೋವರ್ಗೆ ಆಡಳಿತ ನಡೆಸುವಂತೆ ಅನುಗ್ರಹ್ಸಿ ಅಂದಾಗ್

 

ಸ್ವಾಮಿಗಳ ಅಪ್ಪಣೆ-ಅನುಗ್ರಹ - ಆಗ್ರಹದ ಮೇರೆಗೆ 'ಎಲ್ಲೆಲಿನ್ದ್ಲೋ' ಆ ಕುರ್ಚೀಗ್ ಬೇಕಾದ ವಸ್ತುಗಳನ್ನ 'ಗುಟ್ತಾಗ್' ತರ್ಸಿ ಕೆತ್ತಿಸಿ  ರಹಸ್ಯ  ಪೂಜೆ ಮಾಡಿಸಿ  ಶುಭ ಮುಹೂರ್ತವೊಂದರಲ್ಲಿ  ಅದ್ನೇರಿ ಕುಳಿತು ಇಳಿದು , ಇಡೀ ನಾಡಿನಾದ್ಯಂತ  'ಕಾಲಿಗೆಚಕ್ರ' ಕಟ್ಟಿಕೊಂಡವರಂತೆ  ಅಡ್ಡಾಡಿ   'ಕೈ ಮುಗಿದು ಕಣ್ಣೇರು' ಹಾಕಿ 'ಮುಕ್ಕಾಲ್ ಬಹುಮತದೊಂದಿಗ್'  ಆರ್ಸಿ ಬಂದು ಸರ್ಕಾರ ರಚಿಸಬೇಕಾಗ್ ಬಂದಾಗ್  'ಅವರಗೆ' ಮತ್ತೆ  ಅನುಮಾನ ' ಸ್ವಾಮಿಗಳ ಹೇಳಿಕೆ' ನಿಜವಗ್ತಾ? ಬಹುಮತಕ್ಕೆ ಕೊರತೆ ಇದೆ ಆದ ಹೇಗೆ ನಾ  ಅ ಕುರ್ಚಿ ಹತ್ತಿ  ನಾನಾಗೆ ಬಿದ್ವರ್ಗೆ ಅದ್ರಲ್ಲಿ ಕುಳಿತಿರಬಹುದು? ಸಂಶಯ ನಿವಾರಣೆಗ್  ಮತ್ತೆ 'ಶ್ರೀ ಶ್ರೀ ಶ್ರೀ' ಗಳವರ ಆಶ್ರಮಕ್ಕೆ ಎಡ ತಾಕಿದರು. ಸ್ವಾಮಿಗಳು ಆಶೀರ್ವದಿಸಿ ಸಮಸ್ಯೆ ಸೃಸ್ತಿಸುವವನು  'ಅವ್ನೇ',  'ಅವ್ನೆ' ದಿಕ್ಕು ತೋರಿಸ್ತಾನೆ ನೀ ಹೊರಡು ಅಂದ್ರು.  'ಆ ಅವ್ನು' ಯಾರೂಂತ  'ಅವ್ರಿಗ್' ಅರ್ಥವಾಗದೆ ಕಣ್ಣು ಪಿಳಿ ಪಿಳಿ ಬಿಟ್ತಾಗ್ 'ಅವ್ರ ' ಪೀ ಏ ಹೇಳಿದ ನನಗ್ಗೊತ್ತು ಬನ್ನಿ. ಆಮೇಲೆ 'ಯಾರ್ಯರ್ನೋ' ಖರೀದಿಸಿ, ಆಸೆ -ಆಮಿಶವೋಡಿ ಪಕ್ಷದಿಂದ ಪಕ್ಷಕ್ಕೆ 'ಕೋತಿ ಜಿಗಿತ ' ಮಾಡಿಸಿ ಸರ್ಕಾರ ಸುಭದ್ರಗೊಲಿಸಿದ್ದಯ್ತು.. ಆ ಕುರ್ಚಿ ಮಹಿಮೆಯಿಂದ 'ಹಲವ್ರ್ಗೆ' ತಮ್ಮದೇ ಪಕ್ಷದ  ಮತ್ತು ವಿರೋಧ  ಪಕ್ಷದವರ 'ಕೆಟ್ಟ ದೃಷ್ಟಿ'  ಬಿದ್ದು ಅದು ಕಣ್ಮರೆಯಾಗೋದು ಅಂದ್ರೆ?

  ಕೃಷ್ಣ ಜನ್ಮ ಸ್ಥಾನದಲ್ಲಿ 'ಅವ್ರು '  ಮತ್ತು ಇಲ್ಲಿ ತಾ- ಮು ಗಳು ಅದಕಾಗೆ  'ಶಾನೆ ವರಿ' ಮಾಡ್ಕಂಡಿದು.

 

ತನ್ನ 'ವಿಶೇಷ ಶಕ್ತಿ' ಯಿಂದಾಗಿ ಫೆಮಸ್ಸದ 'ಆ ಕುರ್ಚಿ' ಈಗ ಅದ್ಯಾವ್ದೋ ಹಳ್ಳಿಲಿ  'ಬಡ ಬೋರನ' ಅಂಡಿನ ಕೆಳಗೆ ತನ್ನ ಕರ್ತವ್ಯ ನಿರ್ವಹಿಸುತ್ತಿತ್ತು. ಅತ್ತ ಅದಾಗಲೇ 'ಆ ಕುರ್ಚಿ' ಪ್ರಭಾವದಿಂದಾಗ್ 'ಬಡ ಬೋರಂಗೂ' ಯರ್ಯಾರ್ಗೋ' ಏನೇನನ್ನೋ  'ನಂದಲ್;ದಿದ್ರೂ' ನನ್ನ ಹತ್ತಿರವಿಲ್ಲದಿದ್ದರೂ  ಧಾನ ಧರ್ಮ ಮಾಡ್ಬೇಕು ಕೊಡ್ಬೇಕು, 'ನಂಗೆ'ನನವ್ರ್ಗೆ' ಹಿತೈಶಿಗಲ್ಗೆ ಎದುರು ಬಿದ್ದವರ ಬಾಯ್ ಮುಚ್ಚಿಸೋಕು ಕೊಡ್ಬೇಕು ಅಂತ ಅನಿಸಲಿಕ್ಕೆ ಶುರುವಾಯ್ತು:))

ಚಿತ್ರ ಕೃಪೆ: ಗೂಗಲ್  ಸರ್ಚ್

ಸಶೇಷ :೦ 

 

 

 

Comments