ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )-೬

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )-೬

 

 
 

'ಬಡ ಬೋರನ' ಮನೆಗೊಗ್  ಅವ್ನು ' ಕುರ್ಚಿ ಮೇಲ 'ಕುಳಿತ ಭಂಗಿ ನೋಡಿ ,ಚಾರಿ-ಪಾರಿ-ಚಿನ್ನಿ  ಮುಂತದವ್ರ್ಗೆಲ್ಲ  ಹೊಟ್ಟೆಲಿ 'ನವಣೆ  ಕುಟ್ಟಿದಂಗಾಗಿ'  ,ಉಕ್ಕಿ ಬಂತು   'ಆಶೆ ' ,ತಾವೂ ಕುರ್ಚಿ ಮೇಲೆ ಕೂರ್ಬೇಕಂತ.

 

ಅವರೆಲ್ಲ ತಮ್ಮ  ಕುರ್ಚಿ ಹತ್ತೋ  ಆಶೆಯನ್ನ ಪೂರೈಸ್ಕೊಲೋದ್ಕಾಗ್  'ಬಡ ಬೋರನ' ಬಹು ಪರಾಕ್ ಶುರು ಹಚ್ಚಿಕೊಂಡರು,

ಲೋ ಬೋರ  ನೀ ಕುರ್ಚಿ ಮ್ಯಾಲೆ  ಕುಳ್ತಿದ್ ನೋಡ್ತಿದ್ರೆ ಸಾಕ್ಷಾತ್  ಪ್ರಧಾನೀನೆ  ಕುಂತಂಗಿದೆ:))  ಚಾರಿ- ಹೇಳ್ತಾನೆ

 

ಪಾರಿ- ಸುಮ್ನಿರೋ ಚಾರೀ , ಬೋರ ಕುರ್ಚಿ ಮೇಲೆ ಕುಳ್ತಿರೋದ್ ನೋಡಿದ್ರೆ  ನಂಗೆ 'ರಾಜ್ಕುಮಾರು'  ರಣಧೀರ  ಕಂಟೀರವ  ಸಿನ್ಮಾದಲ್ಲಿ ಟೀವಿಯಿಂದ ಕುಳಿತಂಗಿದೆ!]

 

ಅವರಿಬ್ಬರ ಹೊಗಳಿಕೆ ಮಾತು  ಆಯ್ತು ,ಆದ್ರೆ 'ಚಿನ್ನಿಗೆ' ಮಾತ್ರ ಬೋರನನ್ನ  ಯಾವ ರೀತಿ ಹೊಗಳಿ  ನಾ 'ಅದ್ರ' ಮೇಲೆ ಕೂರಲಿ? ಅನ್ನೋ ಚಿಂತೆ.

 

ಎಲ್ರೂನೋವೆ  ಏನೆಲ ಹೇಳಿದ್ರೂ ' ಚಿನ್ನಿ' ಏನೂ ಹೇಳದಿದ್ದುದು  ಬೋರನಿಗೆ  ಸರಿ ಕಾಣಲಿಲ. 'ಏನೇ ಚಿನ್ನಿ ನೀನೇನೂ ಹೇಳಲಿಲ್ಲ?

ನಿದ್ದೆ ಮಾಡ್ತಿದ್ದವ್ರ್ಣ ಎಬ್ಬಿಸಿ  ಪ್ರಶ್ನೆ ಕೆಲ್ದಂಗಿತ್ತು  ಬೋರನ ಪ್ರಶ್ನೆ:)

ಧುತ್ತನೆ ಬಂದ 'ಪ್ರಶ್ನ ಬಾಣಕೆ' ಏನುತ್ತರ ಕೊಡ್ವದೋತುಸು ಯೋಚಿಸಿ  ಹಿಂಜರಿಕೆಯಿಂದಲೇ ಹೇಳ್ದ್ಲು ಚಿನ್ನಿ -

>>'ಬೋರ ' ನೀ ಕುರ್ಚಿ ಮೇಲೆ  ಕುಳಿತಿದ್ ನೋಡುತ್ತಿದ್ದರೆ ನಂಗೆ  ಅನ್ಸ್ತಿದೆ 'ನೀ ಎಂದಾರೋಮ್ಮೆ ನಾಡಿನ ಸೀ ಎಮ್ಮು' ಆಗೇ ಆಗ್ತೀಯ

ತಗೊಳ್ಳಪ್ಪ! ಉತ್ತರ 'ಬೋರನನ್' ಕ್ಷಣ ಕಾಲ ಮೂಕವಿಸ್ಮಿತನನ್ನಗಾಗಿ  ಮಾಡಿ 'ಯಾವ್ಯಾವ್ದೋ' ಕಲ್ಪನೆಲ್ ತೇಲೋ ಹಾಗ್ ಮಾಡ್ತು..!! 

ಚಿನ್ನಿ ಹೇಳಿದ ಮಾತಿಂದ 'ಬೊ ಉತ್ತೆಜಿತನಾಗ್  ಮತ್ತು ರೋಮಾನ್ಚಿತ್ನಾದಬಡ ಬೋರ  ಹೇಳಿದ , ಬಾರೆ  ಚಿನ್ನಿ ಕುರ್ಚಿ ಮೇಲೆ 'ಒಮ್ಮೆ' ಕೂರೆ , ನನ್ನ ಬಿಟ್ಟರೆ ' ಕುರ್ಚಿ' ನೀ ಮಾತ್ರ ಹತ್ತಬಹುದು.

 

'ತಾವೆಲ್ಲ' ಇರ್ಬೇಕಾದ್ರೆ  'ಚಿನ್ನಿಯನ್ನ' ಮಾತ್ರ ಅಕ್ಕರೆಯಿಂದ ಮಾತಾಡ್ಸಿ , ಅವಳಿಗೆ ತನ್ನ ಸೀಟು ಬಿಟ್ತು ಕೊಡಹೋದ  ಬೋರನ ನಡೆ-ನುಡಿಯನ್ನ  ಅನುಮಾನಿಸಿದ ಅವನೆಲ್ಲ ಉಳಿದ ಸ್ನೇಹಿತರು  ದುರ್ದಾನ ತೆಗೆದುಕೊನ್ದವರಂತೆ  ಮುಖವನ್ನ ಸೀದು ಹೋದ  ಹೆಂಚಿನ ತರಹ ಮಾಡಿಕೊಂಡು , ಅಲ್ಲಿಂದ  ಜಾಗ ಖಾಲಿ ಮಾಡಿದರು ಮನಸ್ಸಲ್ಲೇ  ಅಂದುಕೊಳ್ಳುತ್ತ   ' ಅದೆಷ್ಟು ದಿನ  ಬೋರ ಮತ್ತು ಅವಳು' ಕುರ್ಚಿ ಮೇಲೆ ಕೂರ್ತಾರೆ?

 

ಕೂರೋಕೆ ನಾವ್  ಬಿಡಲೇಬಾರದು:))  ಅಲ್ಲ ಕುರ್ಚಿ ಸಿಕ್ತೂ ಅಂದ ಮಾತ್ರಕ್ಕೆ 'ಅವ್ಳು' ಅವನನ್ನ ಹೊಗಳಿ ಅಟ್ಟಕ್ಕೆ ಏರ್ಸ್ದ್ಲು ಅಂತ  'ನಮ್ಮನ್ನೇ' ಮರ್ತ್ ಮಾತಾಡೋದ? ಜೊತೆಗೆ ಬಂತು ಇನ್ನೊಂದು  ಭಾವನೆ- 'ಅವ್ಳು' ಹೇಳಿದ್ದು ಅವನಿಗೆ ಹಿಡಿಸ್ತು, 'ನಾವೂ' ತರ್ಹದ್ದೆನರ' ವಿಶೇಷವದ್ದನ್ನ ಹೇಳಿ ಅವ್ನ ಮನ ಗೆಲ್ಲಬೇಕಿತ್ತು ಛೆ ಛೆ!!

 

ಇನ್ನು 'ನಾ ತಾಳಲಾರೆಎಂಬ ಭಾವನೆ ಬಂದು ತಾ-ಮು ಹೇಳಿದರು  'ಯ್ಯೋ ಡೀ ಅಯ್ಯ್ ಜೀ' ನಿನ್ನನ್ನ ಜಾಗಕ್ಕ್ ತಂದಾಕಿದ್ದು , ನೀ 'ತಿಂದುಂಡು ಗುಂಡ-ಗುಂಡಗೆಆಗ್ಲಿ ಅಂತ ಅಲ್ಲ, 'ಒಂದು ಕುರ್ಚೀನ' ಹುಡ್ಕಿ ಕೊಡೋಕಾಗ್ದ ನಿಮ್ಮ ಪೊಲೀಸರು ಮತ್ತು ನಿಮ್ಮ 'ಕ್ಯಪಾಸಿಟಿ' ಬಗ್ಗೆಯೇ ನಂಗೆ ಅನುಮಾನವಿದೆ ಎಂದರು.

 

ಅಲ್ಲ ನನ್ನ ಸರ್ವೀಸು ಮುಗಿಯಲು ಇನ್ನು ಕೇವಲ ' ತಿಂಗಳಿ'ರುವಾಗ   '  ದರಿದ್ರ ಕುರ್ಚಿಕಾಣೆಯಗ್ಬೇಕ? ನಾ ' ಸೀಟಿಗೆ' ಬರೋದನ ಸಹಿಸದಿದ್ದ ' ನನ್ನ ಹಿತ ಶತ್ರು ಸಹೋದ್ಯೋಗಿಗಳ' ಕೈ ವಾಡವೆನಾರ ಇದ್ದೀಯ ಇದ್ರಲ್ಲಿಎಲ್ಲ ನನ್ನ ದುರಾಧೃಸ್ಟ  'ಅದ್ನ' ಎಲ್ಲೀಂತ ಹುಡುಕಲಿ? ಹುಡುಕಿಸಲಿ? ' ಮುಖ್ಯಮಂತ್ರಿ' ಬೇರೆ ನನ್ನನ್ನೇ  ಖುದ್ದಗ್ 'ಅದ್ನ' ಹುಡುಕಿ ವಾಪಾಸ್ ತರೋಕೆ ಹೇಳತವ್ನೆ 'ಗ್ರಹಚಾರ ಕೆಟ್ಟರೆ ಬದ್ನೆಕಾಯ್ ಕೂಡ್ವೆ ದೆವ್ವವಾಗುತ್ತೆಂತ' ಸುಮ್ನೆ ಹೇಳಿದಾರ? ಉಸ್ಸಪ್ಪ!! ಹೆಂಗೋ ಅದ್ನ ಹುಡ್ಕಿ ವಾಪಾಸ್ ತಂದಿಟ್ಟರೆ ಸಾಕಸ್ಟೆ ..

ಧುತ್ತನೆ ತಾ-ಮು ಗಳು ತಮ್ಮ ಮೇಲೆ ಪ್ರಶ್ನೆ ಮತ್ತು ತಮ್ಮ ಕ್ಯಪಾಸಿಟಿಯ ಬಗ್ಗೆಯೇ  ಹೇಳಿದ ಮಾತು 'ಡೀ ಆಯ ಜೀ ಗೆಆಘಾತವನ್ನುಂಟು ಮಾಡಿತು. ಆದರೂ ಸಾವರಿಸಿಕೊಂಡು ಸ್ಸಾ ~ಒಂದು ಯಕಶಿತ್ ಕುರ್ಚೀಗ್ ಅದ್ಯಾಕ್ ಸಾರ್  ಅಸ್ಟು 'ಮಹತ್ವ' ಕೊಡ್ತಿದೀರ? ಆದ ಕಳೆದೊದ್ರೆ  ಇನ್ನೊಂದು ತಂದ್ರಾಯ್ತು, ಅಲ್ಲದೆ ಒಂದು ಕುರ್ಚಿಯನ್ನ  ನಾವ್ ಹುಡುಕಲು ಶುರು ಮಾಡಿದರೆ  ಅದರ ಕರ್ಚೆಸ್ಟು ಆಗುತ್ತೆ ಅದ್ರ ಬದಲಿಗೆ 'ಇನ್ನೋನು ಕುರ್ಚೀನನಾನೇ ತಂದು ಕೊಡ್ತೀನಿ

 

'ಕುರ್ಚೀ' ಹುಡ್ಕೋ ಬಗೆ  ಹೇಳು ಅಂದ್ರೆ ಅದ್ರ ಮೂಲವನ್ನ  ಕೆಳ್ತಾವ್ನಲ್ಲ 'ಡೀ ಆಯ ಜೀ' ಅಂತ ರೇಗಿ ಹೋದ  ತಾ-ಮು  ಹೇಳಿದ್ರು  ಯ್ಯೋ  ಅದೇನ್ 'ಬೋಂಡ -ಬಜ್ಜಿ'   ಅನ್ಕಂಡ

ಯ್ಯೋ ಅದು ವಿಶೇಷ ಕುರ್ಚಿ  ಅದು ಕಳೆದು ಹೋಗಿದ್ದಕ್ಕೆ 'ಅವ್ರು' ಅಲ್ಲಿ ಅದೆಸ್ಟು  ವ್ಯಥೆ ಪಡ್ತವ್ರೆ ನಿನ್ಗೆನಯ್ಯ ಗೊತ್ತು? ಅದ್ಯಾವ್ದೋ  ಮಾಮೂಲಿ ಕುರ್ಚಿ ಆಗಿದ್ದರೆ ನಾನೂ ಅದನೆ ಮಾಡ್ತಿದ್ದೆ, ಆದರೆ ಅದು ತುಂಬಾನೇ ಸ್ಪೆಸಲ್  ಮತ್ತದು ಎಸ್ಟೆ ಕರ್ಚಾದರೂ ವಾಪಾಸ್ಸು ಬರಲೇಬೇಕು... ಅದು ವಾಪಾಸು ಬರದೆ ಹೋದರೆ 'ನಾಳೆ' ಅವ್ರು ಬಂದು ಅದೆಲ್ಲಿ ಅಂದರೆ  ನಾನೇನು ಹೇಳಲಿ? 'ಅವರ' ನಂಬಿಕೆಯ ಭಂಟನಾಗ್ ನಾ ಅವ್ರಿಗ್ ಕೊಟ್ಟ  ಮಾತು ಉಳಿಸಿಕೊಳ್ಳಬೇಡವೇ?

 

ತಾ- ಮು ಗಳ 'ಅದೇ ಮೊದಲ ಕೊಪಾವೇಶದ' ಮಾತಿಂದ ಕಂಗಾಲಾದ  'ಡೀ ಆಯ ಜೀಹೇಳಿದ್ರು ಸ್ಸಾ~ ತಪಾತು ಕ್ಷಮಿಸಿ, ನಂಗೆ 'ಅದ್ರಬಗ್ಗೆ ಗೊತ್ತಿರಲಿಲ್ಲ,

ಸ್ಸಾ~ ಹಿಂಗೆ ಮಾಡಿದ್ರ ಹೆಂಗೆ?

ತಾ-ಮು ಗಳಿಗೆ  ಡೀ ಆಯ ಜೀ ಗೆ ಏನೋ ಮಹತ್ತರವಾದುದು  ಹೊಳೆದಿರಬೇಕು ಅನ್ಕಂಡು  ಅವರ ಮುಖವನ್ನ ಪ್ರಶ್ನಾರ್ಥಕವಾಗ್ ನೋಡಲು

ಡೀ ಆಯ ಜೀ - ಸ್ಸಾ~ ನಾವ್ ಅದ್ನ ಹುಡುಕೋಕೆ  ' ರೂಟಲ್ಲಿ' ಹೋದ್ರೆ ಆಗಲ್ಲ, ನಾವು ಅದನ್ನು ಪತ್ತೆ ಮಾಡಲು 'ಕಳ್ಳರ ವೇಷವೆ' ಹಾಕಬೇಕಾಗುತ್ತೆ, ಅವರ ಜಾಡನ್ನು ಹಿಡಿಯಲು  ನಾವು 'ಅವರದೇ 'ರೀತಿ ಪ್ರಯತ್ನಿಸಿದರೆ ಹೆಂಗೆ?

ತಾ- ಮುಗಗೆ  ಗೊತ್ತಾಯ್ತು  'ಡೀ ಆಯ್ ಜೀ' ಉದ್ದೇಶ , ಇಲ್ಲಿ 'ಪ್ರಯತ್ನಕ್ಕಿಂತ ಫಲವೇ' ಅವ್ರಿಗ್  ಮುಖ್ಯವಾಗಿತ್ತು.. ಮನದಲ್ಲೇ ಅನ್ಕಂದ್ರು  ಪರವಾಗಿಲ್ಲವೇ  ವಯ್ಯನ್ನ  ' ಸೀಟಿಗೆ' ತಂದಿದ್ದಕ್ಕು 'ಚೆನ್ನಾತು' ಅದ್ಕೆ  'ಲಾಯಕ್ಕಾದವ್ನೆ'.

 

'ಕುರ್ಚಿ' ಕಾಣೆಯದ್  ಸುದ್ಧಿ    ಕರುನಾಡಿನ ಹಳ್ಳಿಗಳನ್ನೆಲ ತಲುಪಿಯಾಗಿತ್ತಲ್ಲಈಗಂತೂ ಎಲ್ಲೆಡೆ ಟೀ ವೀ -ಪತ್ರಿಕೆ ಜನರ ಕೈ ಸೇರುತ್ತಿತ್ತಲ. ' ಸುದ್ಧಿಬಡ ಬೋರನ ಊರ್ಗೂ ಬಂದು ತಲುಪಲು ಹೆಚ್ಚ್ ದಿನವೇನು ಆಗಲಿಲ್ಲ, ಮೊದಲು ಸುದ್ಧಿ ಓದಿದವ್ರಿ ಗೆ - ನೋಡಿದವ್ರಿಗ್ ಅದೇನು 'ಮಹತ್ತರವಾದ ಸುದ್ಧಿ ' ಅನ್ನಿಸಲಿಲ್ಲ. ಒಂದು ಕುರ್ಚಿ ಆದರೆ ಏನಾತು? ನೂರಾರು ಸಿಗ್ತವೆ 'ಯಾವ್ದಾರ ಒಂದನ್ನ' ಕೊಂಡು ತಂದ್ರಾಯತಪ್ಪ, ಅದ್ನೂವೆ ಅದೇನೋ 'ಮಹಾನ್ ಸುದ್ಧಿ' ಅಂತ ಪತ್ರಿಕೆಯವರೂ  ಟೀ ವೀ ಯವರೂ ಹೇಳಿದ್ನೆ ಹೇಳ್ತಾರಲ್ಲ 'ಅವ್ರಿಗ್ ಬುಧ್ಹಿ ' ಇಲ್ಲವ? ಅಸ್ಲಿಗೆ ಅದೂ ಒಂದು ಸುದ್ದ್ಜಿಯ? ತತ್!! 

 

ಅದಾಗಲೇ  ಬಡ ಬೋರ ಕುರ್ಚಿಯೊಂದಣನ್ ಹೆಗಲ ಮೇಲೆ ಹೊತ್ತೊಯ್ದದ್ದು  ಕೆಲವರು ನೋಡಿದ್ದರಲ್ಲ, ಅವರಿಗೆಲ್ಲ  'ಅದು-ಇದೆ' ಇರಬಹುದಅನ್ನುವ ಸಂಶಯ ಬಂದೆ ಬಿಟ್ಟಿತು. ಸ್ಸರಿ ಎಲ್ರೂನೂವೆ   'ಬಡ ಬೋರನ್'   ಆಪ್ತೆಸ್ಟಿಯಾಗಿದ್ದ 'ಸ್ಸಾಬರ ಹಾಜೀನ' ವಿಚಾರಿಸಿದರು  ಲ್ಲೋ ಹಾಜೀ ನಿಜ ಹೇಳೋ ಅದು 'ಅದೆನ'?

ಹಾಜಿಗೆ ಇದ್ದಕ್ಕಿದ್ದಂತೆ 'ಅವೊತ್ತು' ತಾ ಎದರು ಸಿಕ್ಕಾಗ ಬಡ ಬೋರ ಹೇಳಿದ 'ಬಾ ಒಮ್ಮೆ ನೋಡ್ ಹೋಗುವಿಯಂತೆ' ಎನ್ನುವ ಮಾತು ಮಾರ್ಧನಿಸಿ ,  'ವಸ್ತು ಸ್ತಿತಿಏನೂಂತ  ಗೊತ್ತಾಗ್, 'ಇದ್ರಲ್ಲಿ' ನಿಜ ಹೇಳಿದ್ರೆ ನನಗೇನು ಲಾಭವಿದೆ? ಸುಳ್ಳು ಹೇಳಿದ್ರೆ  ನಸ್ಟವೇನು? ಎನ್ನುವ 'ಲೆಕ್ಕಾಚಾರದಲ್ಲಿ' ತೊಡಗಿದ.

 

ಸ್ಸರಿ ಡೀ ಆಯ್ ಜೀ ಗಳ  ಪ್ಲಾನಿನ ಪ್ರಕಾರ  'ಕಳುವಾದ' ಚೇರನ್ನು ಹುಡುಕಿಕೊಟ್ಟರೆ ಅದನ್ನು ಹುಡುಕಿದ 'ಯಾರಿಗೆ' ಆಗಲಿ ' ಕೋಟಿ' ಬಹುಮಾನವನ್ನ ತಾ-ಮು ಗಳು ಕೊಡ್ವರೆಂದು ಆದರೆ ' ವಿಷ್ಯ' ಬೊ ಗುಟ್ಟಾಗಿ ಇಡ್ವಂತೆ ಹೇಳಿದರು, ಅಪ್ಪಿ ತಪ್ಪಿಯೂ ಮೀದಿಯಾದವ್ರಿಗೆ ಮತ್ತು ಜನ ಸಾಮಾನ್ಯರಿಗೆ ಇದು ಗೊತ್ತಾಗಬಾರದು ಎಂದರು  ತಮ್ಮ ಪೊಲೀಸರಿಗೆ. 'ಡೀ ಆಯ್ ಜೀ'    ಆಜ್ಞೆಯಂತೆ 'ಕೆಲ  ನಂಬಿಕಸ್ತ  ಪೊಲೀಸರುವೇಷ ಮರೆಸಿಕೊಂಡು ಇಡೀ ಕರುನಾಡಿನಾದ್ಯಾ0ತ್  ' ಕುರ್ಚಿ'ಕಳ್ಳರ್ಣ  ಹಿಡಿಯಲು ಅದ್ನ ಖರೀದಿಸುವ' ನೆಪದಲ್ಲಿ  'ಕಳ್ಳ ಮಾಲಿನ ವರ್ತಕರಾಗ್' ಫೀಲ್ಡಿಗೆ ಇಳಿದರು..

 

ಪ್ರತಿಯೊಬ್ಬ ಪೋಲೀಸಂಗೂ  ' ಒಂದು ಕೋಟಿನಿಜವಾಗಲೂ ಕೊಡ್ತಾರ? ಅಥವ 'ಹಿಂದೆ' ಹೇಳಿದ ಹಾಗೆ ಆಶ್ವಾಸನೆ ನೀಡಿ ,ಆಶೆ  ಹುಟ್ಟಿಸಿ ,ತಾವು ಸರ್ಕಾರವನ್ ನಂಬಿಕೊಂಡು 'ಎಲ್ಲೆಲ್ಲೋ ಸಾಲ ಮಾಡಿ ತುಪ್ಪ ತಿಂದು' ಆಮೇಲೆ ಇವ್ರು ಕೈ ಎತ್ತಿದ್ದು , ಆಮೇಲೆ ಹೆಂಡ್ತಿ  ಮೈ ಮೇಲಿದ್ದ  ಆಭರಣಗಳನ್ನ 'ಅಡವಿಟ್ಟು' ಸಾಲ ತೀರ್ಸಿದ್ದು ನೆನಪಿಗ್ ಬಂದು ಮನಸು ಭಾರವಾಯ್ತು. ಸಾರಿ ಯಾವದೇ ಕಾರಣಕ್ಕೂ 'ಸಾಲ ಮಾಡಿ ತುಪ್ಪ ತಿನ್ನಬಾರದು' ಅನ್ತ ಎಲ್ರೂನೂವೆ ಡಿಸೈಡ್  ಮಾಡಿದ್ರು:))

 

ಅವರೆಲ್ಲ ಮುಖಭಾವ  ನೋಡಿಯೇ ಡೀ ಆಯ್ ಜೀಗೆ ಗೊತಾತು  ಒಹ್ಹಳೆದ್ ನೆನಪಿಗ್ ಬಂದಿರಬೇಕು ಇವ್ರೆಲ್ಲರ್ಗೂ, ಯೋಚಿಸ್ಬೇದ್ರಪ್ಪ ನೀವ್ ಹುಡಿಕೊಂಬನ್ನಿ  ಅದಾಗಲೇ  ತಾ ಮು ಗಳು ನಾನಾ ಕೈಗೆ ಬೆಲೆಯ ಚೆಕ್ಕು ಕೊಟ್ಟವ್ರೆ 'ಅದ್ನ' ನಾ ಕ್ರಾಸ್ ಚೆಕ್ ಮಾಡ ನೋಡಿದಾಗ 'ಖಜನೆಲಿ' ಹಣ ಇದೆ ಅಂತ ಗೊತ್ತಾತು  ಸಾರೀ ಮೋಸ ಹೋಗಲು ಸಾಧ್ಯವೇ ಇಲ್ಲ. ನೀವೆಲ್ಲ 'ನನ್ನ ನಂಬಿ ನಂಬಿ' ಮೊದ್ಲು ಅದ್ನ ಹುಡ್ಕಿ ತನ್ನಿ  ಅಂದ್ರು. ಎಲ್ಲ ಪೋಲೀಸರ್ಗೂ ಎಗ್ಗ-ಮಗ್ಗ  ಆಶೆ-ದುರಾಸೆ- ಬಂದು 'ಅದು' ನಮಗೆ ಒಬ್ರಿಗೆ' ಸಿಗಬೇಕು 'ಒಂದು ಕೋಟಿ ಚೆಕ್ಕನ್ನನಾವೇ-ನಾವ್ ಮಾತ್ರವೇ ಜೇಬಿಗಿಳಿಸಬೇಕು ಅನ್ನುವ 'ಐನಾತಿ   ಐಡಿಯಾಗಳುಬಂದವು..

 

ಹೀಗೆ ಕುರ್ಚಿಯನ್ನ ಹುಡುಕಲು, ಕಳ್ಳರ್ಣ ಹಿಡಿಯಲು  ಪೊಲೀಸರು ಹೆಂಗೆಂಗೋ ಬಲೆ ಬೀಸುತ್ತಿದ್ದರೆ ಇಲ್ಲಿ 'ಬಡ ಬೋರ ಮಾತ್ರ' ಜಪ್ಪಯ್ಯ ಅಂದ್ರೂ-ಜೋಗಯ್ಯ ಅಂದ್ರೂ ಉಗಿದರೂ-ಹೊಗಳಿದರೂ, ಹೆದರ್ಸಿದ್ರೂ  ಹೂ )) ಯಾವುದಕ್ಕೂ ಜಗ್ಗದೆ 'ಯಾರೇ ಕೂಗಾಡಲಿ-ಊರೆ  ಹೋರಾಡಲಿ- ನನ್ನ ನೆಮ್ಮದಿಗೆ ಭಂಗವಿಲ್ಲ ಅಂತ , ಕುರ್ಚೀನ ಬಿಟ್ಟು ಕೆಳಗೆ ಇಳಿಯದೆ  ಒಂದೊಮ್ಮೆ ಇಳಿದರೆ 'ಅದ್ಕಾಗೆ ಕಾಯ್ತಿದ್ದ ಯಾರಾದ್ರೂ' ಅದ್ರ ಮೇಲತ್ತಿ ಕುಳಿತ ಬಿಟ್ರೆ":)) ಎನ್ನುವ ಸಂಶಯ ಅನುಮಾನ ಬೇರೆ.

ಹೀಗಾಗಿ ಊಟ,ನಿದ್ರೆ ಎಲ್ಲವನ್ನೂ ಅದ್ರ ಮೇಲೆ ಕುಳಿತೆ ಮಾಡಲು ಶುರು ಮಾಡಿದ  ಅವನ್ ವರ್ತನೆ  ಮನೆವ್ರಿಗ್  'ಆವನ್ಗೆನರ' ಹುಚ್ಚ್-ಗಿಚ್ಕ್ ಹಿಡೀತ ಎನ್ನುವ  ಸಂಶಯದ ಹುಳ ಹೊಕ್ಕು  'ಕೆಮ್ಮೀರಪ್ಪ' ಅದಾಗಲೇ ಹೆಚ್ಚಾಗುತ್ತಿದ್ದ ಜಗತ್ತಿನ ತಾಪಮಾನವನ್ನ  ಇನ್ನಸ್ಟು ಹೆಚ್ಹ್ಸಿಸಲು  ಒಂದರ ಹಿಂದೆ ಒಂದು  'ಹೊಗೆಯ-ಚಕ್ರ-ಬಂಡಿ- ಬಿಡುತ್ತ ಹಿಂದೊಮ್ಮೆ   'ಸುರ-ಅಸುರರು' ಕಡೆದು  ನಾ ಒಲ್ಲೇ- ಒಲ್ಲೇ ಅಂದು ಬಿಟ್ಟ  'ಕಾರ್ಕೋಟಕ ವಿಷವನ್ನ' ಒಂದೇ ಸವನೆ ಕೆಮ್ಮಿ -ಕೆಮ್ಮಿ ಉಗಿಯೋಕೆ ಶುರು ಹಚ್ಕೊಂಡ... ಇತ್ತ ಊರಲ್ಲಿ ಊರವರ  ಪ್ರಶ್ನೆಗ್ 'ಅದು' ಅದಲ್ಲ ಅಂತ ಹೇಳಿ , ವಿಷಯಾನ ಬಡ ಬೋರನ್ ಕಿವಿಗ್ ಹಾಕ್, ಜಾಗ್ರತೆಯಗಿರಲು ಹೇಳ್ಬೇಕು,

ಮತ್ತು ಯಾರ್ಗೂನವೆ  ಗೊತ್ತಾಗದಂಗೆ 'ಅದ್ನ' ಯಾರಿಗಾರ ಮಾರಿ ಕೊಂಚ ಕಾಸು ಮಾಡ್ಕಂದ್ರೆ ಹೆಂಗೆ ಎನ್ನುವ  'ಖತರ್ನಾಕ ಅಯಿಡಿಯಾವೂ ' ಸ್ಸಾಬರ ಹಾಜೀಗೆ ಬಂತು. ಅದ್ಕಾಗ್ ಬೋರನ ಮೆನೆಗೆ  ಎದ್ದೋ-ಬಿದ್ದೋ ಅಂತ ಓಡೋ ಭರದಲ್ಲಿ ಮುಂದಿದ್ದ  ' ಊರವರ ಸಮಸ್ತ ಕೊಳಕನ್ನ ತುಂಬಿಕೊಂಡಿದ್ದ  ಗಟಾರದಲ್ಲಿ' ಮಕಾಡೆ ಬಿದ್ದ:)).. ಆದರೂ ಎದ್ದು ತನ್ನನ್ನ ತಾನೆ ಬೈದುಕೊಳ್ಳುತ್ತಾ  ಮೂಗು ಮುಚ್ಚಿಕೊಂಡು  ಛೀ ಅಸಹ್ಯ!! ಅಂದ, ಮತ್ತು ಮೈಗತ್ತಿದ್ದ  ಕೊಚೇ ಕೊಳೆಯನ್ನ ಲೆಕ್ಕಿಸದೆ  ಓಡೋಕೆ ಶುರು ಮಡಿದ.

 

ಅಲ್ಲಲ್ಲಿ ದಾರೀಲಿ ಹಾಯಾಗಿ ಮಲಗಿ ನಿದ್ರಿಸುತ್ತಿದ್ದ, 'ಶುನಕಗಳಲ್ಲೆಲ್ಲಹಾಜಿಯ ಕಲ್ಲಿನ ಶಬ್ಧಕ್ಕೆ ಎಚ್ಚೆತ್ತು ತಮ್ಮ ನಿದ್ದೆ ಹಾಲು ಮಾಡಿದ  ಹುಲು ಮಾನವನಿಗೆ ಅದೆಸ್ಟು  ಧೈರ್ಯ? ನಾವೆಂದರೆ ಭಯವೇ ಇಲ್ಲವೇ? ಎಲ್ಲವೂ ಒಟ್ಟಾಗಿ  'ಹಾಜಿಯತ್ತ' ನುಗ್ಗಿ ಬಂದವು ಎಲ್ಲ ನಾಯಿಗಳು ಅವನನ್ನ ಅಟ್ಟಿಸಿಕೊಂಡು ಹೋಗಲು  ಆಯಾಯ ಓಣಿಯ-ಕೇರಿಯ ನಾಯಿಗಳು  ಅವನ್ಯಾಕೆ ಓಡ್ತವ್ನೆ? ತಮ್ಮ 'ಬಾಂಧವರೆಕೆಅವ್ನ ಹಿಂದೆ  ಬಿದ್ದವ್ರೆ ಅಂತಾನೂ ಯೋಚಿಸದೆ  ತಮ್ಮ ಬಾಂಧವರನ ಸೇರಿಕೊಂಡವು :

 

)

' ಸೀನು' ನೋಡಲು  ನಾಯಿಗಳ ಸೈನ್ಯ  ಯಾರ ಮೇಲೋಯುದ್ಧಕ್ಕೆ ಹೊರಟ ಹಾಗಿತ್ತು.  :)) 

ಅವುಗಳ ಮುಂದೆ 'ಸ್ಸಾಬಾರ್ ಹುಡ್ಗ ಹಾಜಿ' ಅಂಗೈಲಿ  ಜೀವ ಹಿಡ್ಕೊಂಡು ' ಹಾಳಾದ್ ಕುರ್ಚಿ' ದೆಸೆಯಿಂದಾಗ್ ನಂಗೆ ಗತಿ ಬಂತು, ನಾ ಮಾತನ್ -ಚಿಕನ್ -ಮೊಟ್ಟೆ ಹಾಕಿದ ನಾಯಿಗಳೇ ನಂಗೆ ಕಚ್ಚ್ಹೊದು  ಅಂದ್ರೆ?

ತತ್ !! ಬೆಶರಂ  'ದಲಿಂದರ್ ಕುತ್ತೋ'    'ನಿಮ್ದುಕೆ ಕೈಮ' ಮಾಡದಿದ್ರೆ ನಾ 'ಹಾಜೀನೆ' ಅಲ್ಲ:))

 

ಉಳಿದಿದೆ....

 
 
 
 

ಚಿತ್ರ ಕೃಪೆ: ಗೂಗಲ್ ಸರ್ಚ್ 

Comments