ಏನೆನ್ನಲಿ ನಿನ್ನ?

ಏನೆನ್ನಲಿ ನಿನ್ನ?

ಅದೇನೆಂದು ಬಣ್ಣಿಸಲಿ ನಿನ್ನ?

        ಕಳ್ಳನಂತೆ ನನ್ನ ಮನದೊಳಗಿಣುಕಿ
            ಭಾವನೆಗಳನೆಲ್ಲ ಹೆಕ್ಕೆಕ್ಕಿ
        ಒಂದೊಂದಾಗಿ ಗರಿಗೆದರುವಂತೆ
            ನವಿರಾಗಿ ಸವರಿದವನೆಂದೇ?

ಕಣ್ಣಲ್ಲಿ ಕಣ್ಣಿಟ್ಟು
    ಮನದಾಳಕೆ ಬೇರನಿಳಿಬಿಟ್ಟು
ಅಚಲ ಆಲದಂತೆ
    ನನ್ನಲೊಂದಾಗಿ ಉಸಿರಾದವನೆಂದೇ?

        ಕಂಪಿಸುವ ತುಟಿಗಳಿಗೆ
            ಬೆಚ್ಚಗಿನ ಸ್ಪರ್ಶವನಿತ್ತು
        ನಾನಿರುವೆ ಕೊನೆವರೆಗೆ
            ಹೆದರದಿರು ನೀನೆಂಬ ಅಭಯ ತಂದವನೆಂದೇ?

ಸವಿಗನಸುಗಳ ಕಂಗಳಲಿ ತುಂಬಿ
    ಕೈಗಳನು ಚಾಚಿ ಮೊಗೆದುಕೋ ನೀನೆಂದು
ಹೊರಲಾರದ ತುಂಬು ಪ್ರೀತಿಯ
    ಕೇವಲ ನನಗಾಗಿ ಕಾದಿಟ್ಟ ಇನಿಯನೆಂದೇ?

Rating
No votes yet

Comments