ಅಳಿದುಳಿದ ಸಾಲುಗಳು
ಕವನ
ನಿನ್ನ ನೆನಪಲ್ಲಿ
ತೊಟ್ಟಿಕ್ಕುವ
ಪ್ರತಿ
ಕಣ್ಣೀರ ಬಿಂದು
ಸದ್ದಿಲ್ಲದೇ
ಜಾರಿ
ಹೋಗುತ್ತದೆ
ಗೀಚಿದ
ಸಾಲುಗಳಲಿ
ಬಿದ್ದು,
ಸತ್ತು
ಅರಿವಿಲ್ಲದೇ
ಆವಿಯಾಗುತ್ತದೆ………….
+++++++++++++++++++++++++
ನಿನ್ನ
ಅಂದ
ಒಲುಮೆಯನ್ನ
ಸಾಲುಗಳಲಿ
ಕಟ್ಟಹೋಗಿ
ಪ್ರತಿ ಬಾರಿ
ಸೋಲುತ್ತೇನೆ…………..
+++++++++++++++++++
ಪ್ರತಿ ದಿನ
ಮನೆ ಮುಂದಿನ
ಮಂದಾರ
ಅರಳಿದಾಗ
ನನ್ನೊಳಗೇ
ಸಂಭ್ರಮಿಸುತ್ತೇನೆ
ಸಂಜೆ
ಮುದುಡಿದಾಗ
ಆದ
ಹತಾಶೆಯನ್ನ
ಈ
ಕವಿತೆಯಲ್ಲಿ
ಸಾಯಿಸುತ್ತೇನೆ
+++++++++++++++++
ಕನಸುಗಳು
ಮರಾಟಕ್ಕಿವೆ
ಎಂಬ
ಬೋರ್ಡು
ನೋಡಿ
ನಿದ್ದಯಿಲ್ಲದ
ಕಂಗಳು
ಕುಹಕದ
ನಗು
ಬೀರಿದವು
+++++++++++++++++++
ಅವಳ
ನೆನಪುಗಳು
ನನ್ನೆದೆಯಲಿ
ಹಾಗೇ
ಸತ್ತು
ಹೋಗುತ್ತಿದ್ದವೇನೋ
ಸುಮ್ಮನೆ
ಗೀಚಿಟ್ಟೆ
ಇಂದು
ಜಗತ್ತೇ
ಸುಂದರ
ಕವಿತೆಗಳೆಂದು
ಅವನ್ನು
ಕೊಂಡಾಡುತ್ತಿವೆ…………
+++++++++++++++++
ನಿನ್ನ
ನೆನಪಲ್ಲೇ
ಹುಟ್ಟಿ
ಬೆಳೆದು
ಬದುಕಿ
ಸತ್ತ
ನನ್ನ
ಅದೆಷ್ಟೋ
ಕನಸುಗಳನ್ನ
ಹೂತಿಟ್ಟ
ಗೋರಿಗೆ
ಪ್ರೀತಿಯೆಂಬ
ಹೆಸರಿಟ್ಟದ್ದೇನೆ………
Comments
ಉ: ಅಳಿದುಳಿದ ಸಾಲುಗಳು
In reply to ಉ: ಅಳಿದುಳಿದ ಸಾಲುಗಳು by santhosh_87
ಉ: ಅಳಿದುಳಿದ ಸಾಲುಗಳು
In reply to ಉ: ಅಳಿದುಳಿದ ಸಾಲುಗಳು by makara
ಉ: ಅಳಿದುಳಿದ ಸಾಲುಗಳು
In reply to ಉ: ಅಳಿದುಳಿದ ಸಾಲುಗಳು by santhosh_87
ಉ: ಅಳಿದುಳಿದ ಸಾಲುಗಳು
In reply to ಉ: ಅಳಿದುಳಿದ ಸಾಲುಗಳು by santhosh_87
ಉ: ಅಳಿದುಳಿದ ಸಾಲುಗಳು
In reply to ಉ: ಅಳಿದುಳಿದ ಸಾಲುಗಳು by bhalle
ಉ: ಅಳಿದುಳಿದ ಸಾಲುಗಳು
ಉ: ಅಳಿದುಳಿದ ಸಾಲುಗಳು
In reply to ಉ: ಅಳಿದುಳಿದ ಸಾಲುಗಳು by Kodlu
ಉ: ಅಳಿದುಳಿದ ಸಾಲುಗಳು
ಉ: ಅಳಿದುಳಿದ ಸಾಲುಗಳು
In reply to ಉ: ಅಳಿದುಳಿದ ಸಾಲುಗಳು by manju787
ಉ: ಅಳಿದುಳಿದ ಸಾಲುಗಳು
In reply to ಉ: ಅಳಿದುಳಿದ ಸಾಲುಗಳು by manju787
ಉ: ಅಳಿದುಳಿದ ಸಾಲುಗಳು
In reply to ಉ: ಅಳಿದುಳಿದ ಸಾಲುಗಳು by prasannakulkarni
ಉ: ಅಳಿದುಳಿದ ಸಾಲುಗಳು