ಗುಣ‌

ಗುಣ‌

ಕವನ

ಅವ ನೋಡು ಕೇಡುಗ,
ಅವರಿವರ ಹಣ ತುಡುಗ,
ಇವ ನೋಡು ಕೆಟ್ಟವ
ಎಲ್ಲರಿಗು ತ್ರಾಸ ಕೊಟ್ಟವ,
ಸುಳ್ಳನವ, ಸಿಡುಕನವ,
ತಲೆ ಒಡೆವ ಭಂಡನವ.

ಅಸಹನೆ ಹುಳುಕುತನ
ಕಾಣ್ವುದದು ತನ್ಹೊರಗೆ,
ಇರಲದುವೆ ಮನದೊಳಗೆ
ತನ್ನೊಳಿಹ ಗುಣದೊಳಗೆ.

ಇರಲದುವೆ ಘನ ಮನದಿ
ಶುಧ್ಧ ಅಂತಕರಣ,
ನಡೆ ಶುಧ್ಧಿ ನುಡಿಶುಧ್ಧಿ
ನೋಡೊ ನೋಟವು ಶುಧ್ಧಿ.
ಆಗದುವೆ ಕಾಣುವದು
ಮನದೊಳಹೊರಗೆ ನೇಮ,
ಪರಿಪೂರ್ಣ ರಾಮ.  

Comments