ನಿಮಗ್ಯಾಕ್ ಸ್ವಾಮೀ ನಮ್ಮೂರ ಸಮಾಚಾರ....

ನಿಮಗ್ಯಾಕ್ ಸ್ವಾಮೀ ನಮ್ಮೂರ ಸಮಾಚಾರ....

ಇನ್ನೇನು ಸಂಜೆಯಾಗುವ ಸಮಯ, ಕಾನನದಿ ಇರುವ ದಟ್ಟ ಅಡವಿಯ ಮರಗಳ ಮಧ್ಯದಲ್ಲಿ ಸೂರ್ಯರಶ್ಮಿ ತಿಣಿಕುತ್ತಾ ಕೊನೆಯದಾಗಿ ಇಣುಕು ನೋಡುತ್ತಿದ್ದವು. ಅದೇ ಸಮಯದಲ್ಲಿ ಮಲೆನಾಡಿನ ಮಧ್ಯನಲ್ಲಿ ನದೀ ತೀರದಲ್ಲಿ ಇರುವ ಕೆಂಚಿಯ ಗುಡಿಸಲೊಳಗೆ ಗಡಿಬಿಡಿಯಿಂದ ತಿಮ್ಮೇಗೌಡ ಧಾವಿಸುತ್ತಾ ಕೆಂಚಿಯನ್ನು ಅನಾಮತ್ತಾಗಿ ಎತ್ತಿಕೊಂಡು ನದೀ ತೀರದಲ್ಲಿ ಇರುವ ಹುಲ್ಲಿನ ಬಣವೆಯತ್ತ ಮೆಲ್ಲಗೆ ಹೋಗಿ ಬಣವೆಯ ಆಚೆ ಮರೆಯಾದ...
ಪಡುವಣದಿಂದ ಬೀಸುವ ಕುಳಿರ್ಗಾಳಿ...
ಎಂಥಾ ಅರಸಿಕನೂ ಮೈಮರೆತು ಪೃಕೃತಿಯ ಸೌಂದರ್ಯದಲ್ಲಿ ಕರಗಿ ಹೋಗುವ ಸಮಯದಲ್ಲಿ...
ತಿಮ್ಮೇಗೌಡನ ಬಾಹುಬಂಧನದಲ್ಲಿ ಕೆಂಚಿಯ ಯೌವನ ಕರಗುತ್ತಿತ್ತು...
ರಸಮಯವಾಗಿ ಹೇಳುತ್ತಾ ವಿಮರ್ಶಕರೊಬ್ಬರು ಹೇಳಿದ್ರು....
"ಈಗ ಇಲ್ಲಿ ನಾವು ಬೆಳಕು ಚೆಲ್ಲೋಣ..."

"ಅಯ್ಯೋ ಬೇಡ ಬುದ್ದೀ...." ದೂರದಿಂದ ಧ್ವನಿ ಮೊಳಗಿತು....
"ಯಾಕಲಾ ಏನಾಯ್ತು !!!!"
"ಇದನ್ನು ಬಿಟ್ಟು ಬೇರೆ ಏನಾದ್ರೂ ಮಾಡಿ ಸ್ವಾಮಿ"
"ಯಾಕಲಾ ನಾನೇನು ಮಾಡಿದೆ ಅಂತಹದು ??"
"ಯಾಕ್ ಸ್ವಾಮಿ ಇಂಥಾ ಅನೈತಿಕ ಚಟುವಟಿಕೆಗಳಿಗೆ ನೀವು ಬೆಳಕು ಚೆಲ್ಲುವುದು !!!"
"ನಾನು ಹೇಳೋದನ್ನು ಸ್ವಲ್ಪ ತಿಳ್ಕೊಳ್ರಪ್ಪಾ...."
"ಅದೆಲ್ಲಾ ಆಗಾಕಿಲ್ಲ ಸ್ವಾಮೀ....


ಕಳೆದ ಸಲ ನಮ್ಮ ಬೀರ ಕೊನೆ ಮನೆಯ ಸುಂದ್ರೀ ಜೊತೆ ಹಿಂಗೇ ಸರಸವಾಡ್ತಾ ಇರಬೇಕಾದ್ರೇ...."
"ಏನಾಯ್ತು ಬೊಗಳೋ.... ಅದಕ್ಕೂ ಇದಕ್ಕೂ ಏನ್ ಸಂಬಂಧ !!!"
"ಅದೇ ಸಾಮೀ.... ಯಾರೋ ಅವತ್ತು ಟಾರ್ಚ್ ತಗೊಂಡು ಬೆಳಕು ಚೆಲ್ಲಿದಾಗ....
ಜೈಲು ಕಂಡಿರುವ ಬೀರ ಇನ್ನೂ ಮರಳಿ ಬಂದಿಲ್ಲ....
ಅವರವರ ಕರ್ಮ ಅವರು ಏನಾದ್ರೂ ಮಾಡ್ಕೋಳ್ಳಿ...
ನೀವು ಕಲಿತವರಂಗೆ ಕಾಣ್ತೀರಿ...
ನಿಮಗ್ಯಾಕ್ ಸ್ವಾಮೀ ನಮ್ಮೂರ ಕಥೆ/ವ್ಯಥೆ"

Comments