ಮರುಭೂಮಿಯ ಮರೀಚಿಕೆಯ೦ತೆ

ಮರುಭೂಮಿಯ ಮರೀಚಿಕೆಯ೦ತೆ

ಕವನ

ಮರುಭೂಮಿಯ ಮರೀಚಿಕೆಯ೦ತೆ ಕಾರ್ಯೋನ್ಮತ್ತ ಈ ಜನಸಾಗರ ನರಿಯ೦ತಾ ಬುದ್ದಿ ಕುರಿಯ೦ಧಾನುಕರಣೆ ಬರಿ, ಮರುಭೂಮಿಯ ಮರೀಚಿಕೆಯ೦ತೆ ಬರಿ ಮೋಸ ನೀರಿನಾಭಾಸ ಆಶ್ವಾಸನೆ ನೀಡುವುದು ಆ ಶ್ವಾನದ೦ತೆ ಹಿ೦ದೋಡುವುದು ಪಾಪ, ಬರಗಾಲ ಬಡವರ ಉಪವಾಸ ಬರಿಹೊಟ್ಟೆ...ಅಯ್ಯೋ...ನರಳಾಟ ಉರಿಬಿಸಿಲ ಚೆ೦ಡಾಟ ಬರಿಗಾಲ ನಗ್ನ ತಿರುಗಾಟ ಕೇಳ್ರೋ ಎ೦ದರೆ ಕೇಳುವವರಿಲ್ಲ ಕೊಳ್ರೋ ಎ೦ದರೆ..? ಕೊಳ್ಳುವರೇ ಎಲ್ಲಾ ಬಿಟ್ಟಿ. ಆದ್ರೆ ಮಾತ್ರ, ಕೊಟ್ಟೆ ಎ೦ದರೆ ಎಲ್ಲಾ ತಿರುಗೇಟೆ. ಇಷ್ಟೇ ಈ ಜನಸಾಗರದ ತಲಾರಟೆ. ಮರುಭೂಮಿಯ ಮರೀಚಿಕೆಯ೦ತೆ.