ಮಡೆಸ್ನಾನದ ಬಲವಂತ ಹಾಗೂ ಬೇಡ, ಹೀಗೂ ಬೇಡ

ಮಡೆಸ್ನಾನದ ಬಲವಂತ ಹಾಗೂ ಬೇಡ, ಹೀಗೂ ಬೇಡ

Comments

ಬರಹ

  ’ಮಡೆಸ್ನಾನ ನಡೆಯಬೇಕೇ, ಬೇಡವೇ’ ಎಂದು ಜಿಲ್ಲಾ ಪ್ರಶಾಸನವೇ ’ಅಷ್ಟಮಂಗಲ ಪ್ರಶ್ನೆ’ ಕೇಳಹೊರಟಿದೆಯಂತೆ.ಹೀಗೆಂದು ನ. 29ರ ಪ್ರಜಾವಾಣಿಯಲ್ಲಿ ವರದಿಯಿದೆ. ಇದು ನಿಜವಾಗಿದ್ದಲ್ಲಿ, ಇಂಥಾ ಅಧೀಕೃತ ಕ್ರಮ, ಅಯೋಗ್ಯತನದ ಪರಮಾವಧಿಯಾದೀತು!

  ಸಾಲ-ಸೊಲ, ಮದುವೆ-ಸೀಮಂತ, ಪಾಸು-ಫೇಲು ಇತ್ಯಾದಿ ವೈಯಕ್ತಿಕ-ಕೌಟುಂಬಿಕ ವಿಚಾರಗಳಲ್ಲಿ, ವ್ಯಕ್ತಿಗಳು, ಮನೋವೈಜ್ಞಾನಿಕ ನೆಮ್ಮದಿಗಾಗಿ ದೈವದಲ್ಲಿ ಕೇಳಿಕೊಳ್ಳಲಿ, ತೊಂದರೆಯಿಲ್ಲ; ಬ್ಯುರಾಕ್ರಸಿ ಎಂಬ, ಆಡಳಿತ ಯಂತ್ರಕ್ಕೇ ಇಂಥದೊಂದು ತುಮುಲವೆ?!

  ಹಿರಿಯರು ಮತ್ತು ಗುರುಸಮಾನರಾದವರ ಮುಂದೆ ಆತ್ಮಸಮರ್ಪಣೆ ಎಂಬಂತೆ, ಮುಗ್ಧರು, ಇಂತಹ ಅಸಹ್ಯದಿಂದ ಮಾನಸಿಕ ನೆಮ್ಮದಿ ಪಡೆದುಕೊಂಡರೆ ಅದು ಅವರವರ ಮನಸ್ಸಿಗೆ ಬಿಟ್ಟಿದ್ದು, ಬೇರೆಯರು ನೆಮ್ಮದಿ ಕೆಡಿಸಿಕೊಳ್ಳಬೇಕಾದ್ದಿಲ್ಲ. ಆದರೆ ಬ್ರಾಹ್ಮಣರೆಲ್ಲರೂ ಮತ್ತು ಬ್ರಾಹ್ಮಣರು ಮಾತ್ರವೇ ಭಕ್ತೋತ್ತಮರು ಎನ್ನುವುದು ಮೂರ್ಖದಲ್ಲಿ ಮೂರ್ಖವಾದ ಮೂಢನಂಬಿಕೆ. ತಾವು ಹಿರಿಯರು; ಸಮಾಜಕ್ಕೆ ನಿಸ್ವಾರ್ಥವಾಗಿ ಮಾರ್ಗದರ್ಶನ ಮಾಡಬಲ್ಲ ಸಮರ್ಥರು ಎಂದು ಎದೆತಟ್ಟಿ ಹೇಳಿಕೊಳ್ಳುವ ಎದೆಗರಿಕೆಯುಳ್ಳವರೂ, ದೈವಭೀತರೂ, ಜಾತಿಭೇದವಿಲ್ಲದೆ ಅವರಾಗೇ ಮೊದಲ ಪಂಕ್ತಿಯಲ್ಲಿ ಊಟಕ್ಕೆ ಕೂಡಲಿ; ಇಷ್ಟಪಟ್ಟವರು ಆ ಎಂಜಲೆಲೆಯಮೇಲೆ ಹೊರಳಾಡಲಿ.

  ಆದರೆ ಇಂತಹ ಹರಕೆಗಳಿಂದ ಯಾರಿಗೂ ಯಾವ ಪ್ರಯೋನವೂ ಇಲ್ಲವೆಂಬುದು ಸತ್ಯ, ಸತ್ಯ, ಸತ್ಯ. ಅದರ ಬದಲು ನಾಲ್ಕೂ ಜನಕ್ಕೆ ಪ್ರಯೋಜನವಾಗುವಂಥಾ ಹರಕೆಗಳನ್ನು ಹೊರುವುದು ಸ್ವಾಮಿಪ್ರೀತಿಯಾದೀತು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet