ಕಾರಣವಿರದೆ

ಕಾರಣವಿರದೆ

ಕವನ

ಅಂಗ ಅಂ ಗಗಳೆಲ್ಲಾ


ವಕ್ರಗೊಂಡಿದ್ದರೂ


ಅಂಗನೆಯ ಅಂಗಳಕ್ಕೆ


ಕರೆದುಬಿಟ್ಟೆಯಲ್ಲೊ!


ನಿನ್ನ ಕಾಮರಾಗವೋ,


ಪ್ರೇಮರಾಗವೋ,


ಅಂತಃಪುರದ,


ಸುಕನಿದ್ದೆಯ ಕಂಗಳನ್ನೂ


ತೆರೆಸಿಬಿಟ್ಟವೆಂದರೆ!


ನಿನ್ನ ಗಾನದ ರಾಗಕ್ಕೆ ವಕ್ರತೆಗಳಿಲ್ಲ.


ನಿನ್ನಂತ ಕಲೆಗಾರನಿರುವವರೆಗೂ


ಅಮ್ರತಮತಿಯರೂ ಇರುತ್ತಾರೆ.


ಕಾಮನ ಕ್ಯಯ ಕೂರಸಿಗಳು.


ಕಾರಣವಿದ್ದೊ,


ಇಲ್ಲದೆಯೋ ,


ಪ್ರೇಮಿಸಿಬಿಡುತ್ತಾರೆ.


ಎದೆಯೊಳಗೆ ಅವಿತೋ


ದನಿಯಾಗಲು ಮರೆತೋ


ಬಯಲಲ್ಲಿ ಬೆರೆತೋ


ಯಾವುದೋ ಯಶೋದರನ


ಆಲಿಂಗನದೊಳಗೆ,


ಅಂತಃಪುರದ ಬೋಗದೊಳಗೆ


ಅಂತರಂಗದ ಕದದೊಳಗೆ


ಅಮ್ರತಮತಿಯರೂ ಅಮರರಾಗುತ್ತಾರೆ.