ದೈವ ಸಂಕಲ್ಪ
ಕವನ
ಕೀವಿನೊಳು ಕುಚ್ಚಿಟ್ಟ ಅನ್ನ ತಂದಿಟ್ಟಿಹರು
ತಿನ್ನಲೇಬೇಕು. ಅನಿವಾರ್ಯ.
ತಪ್ಪು ನನ್ನದೇ. ಅಹುದು. ಬಲುಹಸಿವೆ ಎಂದದ್ದು !!
ತೋರಿದರು ಅವರ ಔದಾರ್ಯ.
ಕಡುಬು,ಹೋಳಿಗೆ,ಖೀರು ರಸಕವಳ ಸವಿಯೂಟ
ಹವಣಿಸಿದೆ ಬಯಸಿ ಬಯಸಿ
ಇದ್ದದ್ದು ತಂದು ಹಾಕಿದರು. ಪಾಪ !! ಅವರ ತಪ್ಪಿಲ್ಲ
ಮರುಕ ಹಣೆಬರಹ ನೆನೆಸಿ.
ನೋಡ ನೋಡುತ ದು:ಖ ಉಮ್ಮಳಿಸಿ ಬರುತಿಹುದು.
ಹೇಸಿಗೆಯು ನನ್ನ ಕರ್ಮ.
ದೈತ್ಯ ಕಣ್ಗಾವಲೊಲು ಓಡಿಹೋಗಲು ಬರದು.
ದೇವನಿಗೆ ಇದುವೆ ಧರ್ಮ.