ಗೆಳತಿ.....!!!!????

ಗೆಳತಿ.....!!!!????

ಕವನ

 
 
 
 
 
 
 
 
 
 
 
 

 

 

 

 

 

 

ಗೆಳೆಯಾ,
ಎಲ್ಲವನ್ನೂ ಬಿಟ್ಟೆ.............
ನಾಚಿಕೆ, ಮಾನ, ಮರ್ಯಾದೆ, ಕಡೆಗೆ ನನ್ನ ಪ್ರೀತಿಯನ್ನೂ ಸಹ!
-- ನೀ ಕೇಳಿದೆಯೆಂದು.
ಆದರೆ ಯಾವುದಕ್ಕೂ ವಿಷಾದಿಸುತ್ತಿಲ್ಲ!
ವಿರಹದುರಿ ಭೇದಿಸುತಿದೆ ಮನವ, ಆದರೂ..........
ಆದರೂ ಬಿಡಲಾರೆ ಈ ಸುಂದರ ಸ್ನೇಹವನ್ನು, ನನ್ನೀ ಜೀವವನ್ನೂ -- ಹೇಡಿಯಲ್ಲ ನಿನ್ನ ಗೆಳತಿ.....
ಕ್ಷಮೆಯಿರಲಿ ಗೆಳೆಯಾ, ನಿನಗಾಗಿ ನನ್ನಿಂದಾಗುವುದಿಷ್ಟೇ...........
ನಿನ್ನ ಒಂದು ಕುಡಿನೋಟ, ಸಣ್ಣ ಸವಿ ಮಾತು, ಒಂದರೆಕ್ಷಣದ ಸಮಾಧಾನ,
ಅಪರೂಪಕ್ಕಾದರೂ ಒಂದು ಕಾಳಜಿ -- ನಿನಗೆ ಮನವಿಲ್ಲದಿದ್ದರೂ -- ಇವಿಷ್ಟೇ ಸಾಕು ಗೆಳೆಯಾ!
ಕಡೇ-ಪಕ್ಷ, ಏಕಾಂಗಿತನದ ಈ ಕಣ್ಣೀರಳಿಯಲಿ, ನನ್ನ ನೋವು ಸಾಯಲಿ...
ಇಲ್ಲವೇ ನನ್ನ ಕಂಡು ಸಾವಾದರೂ ನೋಯಲಿ, ಕರುಣೆ ಬೀರಲಿ, ದಾರಿ ತೋರಲಿ......
ಕಾದಿರುವೆ ಗೆಳೆಯಾ, ಇದೇ ಆಸೆಯನಿಂದೂ ಜೀವಂತವಿರಿಸಿಕೊಂಡು.....
ಇಂತಿ ನಿನ್ನವಳು...........!!!????
.....................................................ಗೆಳತಿ!!!!????


 

Comments