ಅ ಕಪ್ ಓಫ್ ಕಾಫಿ ... ಸಿಪ್- ೧೧

ಅ ಕಪ್ ಓಫ್ ಕಾಫಿ ... ಸಿಪ್- ೧೧

 ಸಿಪ್ ೧೧ 

 

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....

ಹಿಂದಿನ ಸಿಪ್ 

 


ಸಿಪ್ ೧೧ 


"ಹಲೋ ವೈಭು"

ಐದು ತಿಂಗಳ ಹಿಂದೆ ಕೇಳಿದ ದನಿ ಮಾಸುವ ಮೊದಲು ಮತ್ತೆ ಅದು ಕನವರಿಸಿತು.

"ಹೇ .. ವೈಭು ಎಲ್ಲಿದ್ದಿಯಾ... ನಮ್ಮನ್ನೆಲ್ಲ ಮರೆತೆಯಲ್ಲಾ..." ಆ ಬದಿಯಿಂದ ಅವಳು ನನ್ನನ್ನು ದೂರುತಿದ್ದಳು.

"ಇಲ್ಲ ಕಣೇ, ಮರ್ತಿಲ್ಲ ... ಹೇಳು .. ಹೇಗಿದ್ದಿಯಾ..."

"ನಾನು ಆರಾಮ್, ನೀನು ಹೇಗಿದ್ದಿಯಾ ...?"

"ನಾನು, ಎಲ್ಲಿದಮ್ಮಾ ನನ್ನ ಪುಣೆ ನಂಬರ್ ನಿನಗೆ ಸಿಕ್ಕಿದ್ದು...?"

"ಏನಪ್ಪಾ ನಿನ್ ಮಾತಿನ ಅರ್ಥ ...?ಚೆನ್ನೈ ಬಿಟ್ಟು ಪುಣೆ ಹೋದ್ರೆ ನೀನು ಎಲ್ಲರಿಂದ ಮರೆ ಆಗಬಹುದು ಅನ್ಕೊಂಡಿದ್ದಿಯಾ...? ಬಿಡಲ್ಲಪ್ಪ ನಾನು ನಿನ್ನನ್ನು.. !!! ನೀನೆ ಅನ್ತಿದ್ದಿಯಲ್ಲ ನಾನು ಬೆನ್ನು ಬಿಡದ ಭೂತ ಅಂತ !!!"

"ಹೌದಮ್ಮಾ , ನೀನು ಬೆನ್ನು ಬಿಡದ ಭೂತಾನೆ...!!! ಮತ್ತೆ ಹೇಳು ಹೇಗಾಗ್ತಿದೆ ಬೆಂಗಳೂರಿನ ಜೀವನ"

"ಆಯ್ತು ಇನ್ನು ಬರೇ ೨ ದಿನ, ಸೋಮವಾರದಿಂದ Dream -Tech !!!"

"ಅಂದ್ರೆ ನಿಂಗೆ ಕಾಲ್ ಲೆಟರ್ ಬಂತಾ !!!"

"ಹೌದಪ್ಪ, ನಾನು ಪುಣೆಗೆ ಬರ್ತಿದ್ದೇನೆ, ಭಾನುವಾರ ಅಲ್ಲಿರ್ತೇನೆ !!!"


ಪ್ರೀತಿ, ಕಾಲೇಜ್ ಸೇರಿದಾಗಿಂದ ಬೆನ್ನು ಬಿಡದ ಭೂತ, ಇವತ್ತು ಪುನಃ ತನ್ನ ಅಸ್ತಿತ್ವ ತೋರಿಸಲು ಕರೆ ಮಾಡಿದ್ದಳು. Dream -Tech ನ ರೆಜೆಕ್ಶನ್ ಲೆಟರ್ ಬಂದಾಗ ನನ್ನ ಅಪ್ಪಿ ಕೊರಗಿದಾಗ, ನನಗೆ ಬಂದ ಕಾಲ್ ಲೆಟರ್ ಅವಳಿಗೆ ನೀಡಿ ಕಣ್ಣೋರೆಸುವಷ್ಟುಹತ್ತಿರವಾಗಿದ್ದರೂ ಅವಳು ವಿವೇಕ್ ನ ಸೊತ್ತು ಎಂದು ಅರಿತು ಅವಳಿಂದ ಮೆಲ್ಲನೆ ದೂರಕ್ಕೆ ಹಾರಿದ್ದ ಕಠಿಣ ನಿರ್ದಾರದ ನೆನಪಾಯಿತು. 


ಮುಂದೆ ನಾನು ಚೆನ್ನೈಗೆ ಬಂದಾಗಿಂದ ಎರಡೇ ಬಾರಿ ಅವಳಿಗೆ ಕರೆ ಮಾಡಿದ್ದೆ. ಆ ದಿನಗಳಲ್ಲಿ ಅವಳು ತುಂಬಾ ಡಿಪ್ರೆಸ್ಸ್ ಆಗಿದ್ದಳು. ಕೊನೆಗೆ ಯಾವುದೋ ಕನ್ಸಲ್ಟೆಂಟ್ ನಲ್ಲಿ ಎರಡು ಲಕ್ಷದ ಬಾಂಡ್ ಬರೆಯಿಸಿ ಕಾಲ್ ಸೆಂಟರ್ ನ ಕೆಲಸಗಿಟ್ಟಿಸಿಕೊಂಡಿದ್ದಳು.ಪುಣೆಗೆ ಬಂದಾಗಿಂದ ಅವಳನ್ನು ಆಕೃತಿಯ ಗುಂಗಲ್ಲಿ ಮರೆತಂತಾಗಿತ್ತು.


"ಓಯ್ , ಡ್ರೀಮ್ ಬಾಯ್, ಎಲ್ಲಿ ಹೋದಿ...?"

"ಎಲ್ಲೂ ಇಲ್ಲಾ .. ಇಲ್ಲೇ ಇದ್ದೇನೆ ನಿನ್ನ ಕೇಳ್ತಾ ಇದ್ದೇನೆ.... ಹೇ ಪ್ರೀತಿ.. ಆ ಕಾಲ್ ಸೆಂಟರ್ ಗೆ ಎರಡು ಲಕ್ಷ ಕೊಡ ಬೇಕಾಗುತ್ತೆ ಅಲ್ಲಾ ...?? "

"ಹೌದು.. ಕೊಡಬೇಕಾಗುತ್ತೆ.. Dream -Tech  ನನ್ನನ್ನು ಕರಿಯುತ್ತಾರೆ ಅಂತ ಯಾರು ಅಂದುಕೊಂಡಿದ್ದರು, ಅದಕ್ಕಾಗಿ ಆ ಬಾಂಡ್ ಗೆ ಒಪ್ಪಿಕ್ಕೊಂಡಿದ್ದೆ. ಈಗ ನೋಡು ಇವರು ಕರ್ದಿದ್ದಾರೆ, ಎರಡು ಲಕ್ಷ ... ದೊಡ್ಡ ಅಮ್ಮೌಂಟ್ ಕೊಡ್ಬೇಕು... ಮನೆಯವರಿಗೆಹೇಳಿದ್ದೇನೆ, ಅವರು ಹೇಗಾದರೂ ಮಾಡಿ ಒಟ್ಟು ಮಾಡಿಕೊಳ್ತಾರೆ. ಅದು ಬಿಡು ಹೇಗಿದೆ ಪುಣೆ ..?"

"ಪುಣೆ ಏನೋ ಚೆನ್ನಾಗಿದೆ, ಆಫೀಸ್ ಅಷ್ಟಕಷ್ಟೇ !!!"

"ಪರವಾಗಿಲ್ಲ, Dream -Tech ಇವತ್ತಲ್ಲಾ ನಾಳೆ ಬೆಳ್ದೆ ಬೆಳೆಯುತ್ತೆ.. ಜೊತೆಯಲ್ಲಿ ನಾವು ಬೆಳೆಯುವಾ ... ಏನಂತಿಯಾ ..?? "

"ಹೌದು .. ಭಾನುವಾರ ಎಷ್ಟು ಹೊತ್ತಿಗೆ ತಲುಪುತ್ತಿಯಾ ...? ಟ್ರೈನ್ ಆ ಬಸ್ಸಾ ...?"

"ಟ್ರೈನ್ ಮತ್ತು ಇತರ ವ್ಯವಸ್ತೆ Dream -Tech ಅವರು ಮಾಡಿದ್ದಾರೆ"

"ಅಂದ್ರೆ ಅದೇ ಫ್ಯೂಚರ್ ಡೇಸ್ ಗೆಸ್ಟ್ ಹೌಸ್ ನಲ್ಲಿ ಟಿಕಾಣಿ ಅಂತ ಹೇಳು"

"ಹೌದು ಫ್ಯೂಚರ್ ಡೇಸ್ !!!" 

"ಪುಣೆಗೆ ತಲುಪಿದ ತಕ್ಷಣ ಕರೆ ಮಾಡು, ಗೆಸ್ಟ್ ಹೌಸ್ ಗೆ ಬರ್ತೇನೆ"

"ಹಮ್ , ಶೂರ್, ನಂಗೆ ಬರುವಾಗ ಒಂದು ಮಹಾರಾಷ್ಟ್ರ ಸಿಮ್ ರೆಡಿ ಮಾಡು!!!"

"ಅಬ್ಬಾ ಹುಡುಗೀರು ಅನ್ನೋದು ಇದಕ್ಕೆ, ಒಮ್ಮೆ ಬಗ್ಗಿದ್ದರೆ ಸಾಕು ಬಗ್ತಾನೆ ಇರ್ಬೇಕು ಪಾಪ ಹುಡುಗ್ರು !!!"

"ಹೇ ಒಂದು ಫ್ರೆಂಡ್ ಗೆ ಇಷ್ಟು ಮಾಡ್ಲಿಕ್ಕೆ ಆಗ್ಲಿಲ್ಲ ಅಂದ್ರೆ ನೀನು ಯಾವ್ ರೀತಿಯ ಫ್ರೆಂಡ್ ನೋ ..?"

"ಹೇ ಪ್ರೀತಿ ತಮಾಷೆ ಮಾಡ್ತಿದ್ನೆ .. ತೆಕೊಂಡಿರ್ತೇನೆ"

"ಹೇ ನಂಬರ್ ೦೫ ನಿಂದ ಎಂಡ್ ಆಗುವಂತಹ ಸಿಮ್ ಇರ್ಲಿ ..."

"ತಕೊಳಪ್ಪಾ ... ಇನ್ನೊಂದು ಆರ್ಡರ್"

"ಹೇ ಅದು ನನ್ ಲಕ್ಕಿ ನಂಬರ್ ಕಂ ನನ್ ಬರ್ತ್ ಡೇ ನೋ .. ಅದಕ್ಕಾಗಿ ಸ್ಪೆಷಲ್ ಕನ್ಸರ್ನ್ ಅಬೌಟ್ ನಂಬರ್ ೫" ಅಂದ್ಳು.

"ಆಯ್ತಮ್ಮ ಒಳ್ಳೆ ನಂಬರ್ ನ ಸಿಮ್ ತೆಕ್ಕೊಂಡಿರ್ತೇನೆ... ಹೆದ್ರ ಬೇಡ"

"ಥ್ಯಾಂಕ್ಸ್ ವೈಭು.. ಸೂ ಸ್ವೀಟ್ ಆಫ್ ಉ ...."

"ಹೇ ಥ್ಯಾಂಕ್ಸ್ ಗೀನ್ಗ್ಸ್ ಬೇಡಮ್ಮ , ಬಾ ಇಲ್ಲಿ ಅಷ್ಟು ಸಾಕು"

"ಓಕೆ ಕಣೋ, ಬೆಂಗಳೂರು ಬಿಡುವ ಮೊದಲು ಕಾಲ್ ಮಾಡ್ತೇನೆ ಬಾಯ್ .." ಎನ್ನುತ್ತಾ ಕಾಲ್ ಕಟ್ ಮಾಡಿದಳು.


ಮೊಬೈಲಿನಲ್ಲಿ ಅವಳು ಉಲಿಯುತಿದ್ದರೂ, ನನಗೆ ಗದ್ದೆ ಮಠದ ಆ ಸಂಜೆಯ ಸಂಭಾಷಣೆ ಯಂತೆ ಹತ್ತಿರದಲ್ಲಿ ಭಾಸವಾಗುತಿದ್ದಳು. ನಡುವಲ್ಲಿ ವಿವೇಕ ಎಂಬ ವಿವೆಕತೆ ನೆನಪಾಗಿ ಸುಮ್ಮನಾದೆ.


*****************


"ತಾವು ... ಹೇ ಸಿಮ್ ಲೆತೋ...ಮಲ ಹೇ ನಂಬರ್ ಪಯಿಜೆ ..." ಒಂದು ತಿಂಗಳ ಅವದಿಯಲ್ಲಿ ಮರಾಟಿ ಯ ಚಾಲ್ತಿಯಲ್ಲಿರುವ ಕೆಲವೊಂದು ಶಬ್ದಗಳನ್ನು ಕಲಿತಾಗಿತ್ತು. ಇವ್ವು ಹಿಂದಿ ಗೊತ್ತಿಲ್ಲದ ಕೆಲವೊಂದು ಅಂಗಡಿಯವರಲ್ಲಿ, ಮನೆಕೆಲಸದವರಲ್ಲಿಮಾತಾಡಲು ಸಹಾಯವಾಗಿತ್ತು. ಉಳಿದಂತೆ ಎಲ್ಲ ಕಡೆ ಹಿಂದಿ ನಡೆಯುತ್ತಿತ್ತು.


ಕಾಲು ಗಂಟೆ ಮೇಲೆ ಕೆಳಗೆ ಮಾಡಿ ತಂದಿಟ್ಟ ಮೂರು ಬ್ರಾಂಡ್ ನ ೫೦ಕ್ಕೂ ಮೇಲಿನ ಸಿಮ್ ಗಳಲ್ಲಿ ಒಂದನ್ನು ಸೆಲೆಕ್ಟ್ ಮಾಡಿಕ್ಕೊಂಡೆ, ಅವಳಿಗೆ ೦೫ ಪ್ರಿಯೋರಿಟಿ ಆಗಿದ್ದರೆ ನನಗೆ ಅವಳಿಗಾಗಿ ನನ್ನ ಬ್ರಾಂಡ್ ನ ಸಿಮ್ ಖರೀದಿಸುವುದೇ ಪ್ರಿಯೋರಿಟಿ ಆಗಿತ್ತು.ಕೊನೆಗೆ ನನ್ನ ಮೊಬೈಲ್ ನಂಬರ್ ಅನ್ನೇ ಹೋಲುವ ಬರೇ ನಡುವಿನ ಎರಡು ನಂಬರ್ ಮತ್ತು ಕೊನೆಯ ಎರಡು ನಂಬರ್ ಬದಲಿದ್ದ ಸಿಮ್ ದೊರಕಿತು. ನನ್ನ ಹೆಸರಿನಲ್ಲೇ, ನಮ್ಮ ಲೋಕಲ್ ಅಡ್ರೆಸ್ ಪ್ರೂಫ್ ಕೊಟ್ಟು ಆ ಸಿಮ್ ಅನ್ನು ಖರೀದಿಸಿ ಕೊಂಡೆ.


ಬೆಂಗಳೂರಿನಿಂದ ಹೊರಡುವಾಗ ಕರೆ ಮಾಡುತ್ತೇನೆ ಅಂತ ಹೇಳಿದ ಪ್ರೀತಿ ರಾತ್ರಿ ೯ ಆದರು ಕರೆ ಮಾಡಿರಲಿಲ್ಲ.

'ಹುಡುಗೀರು ಕರೆ ಮಾಡಲ್ಲ.. ಮಿಸ್ ಕಾಲ್ ಒಂದೇ ಅವರ ದಿಷ್ಣರಿಯಲ್ಲಿರುವ ಶಬ್ದ!!!'

ನಾನೇ ಅವಳಿಗೆ ಕರೆ ಮಾಡುವುದು ಸೂಕ್ತ ಎಂದು ಮೊಬೈಲ್ ಕೈಗೆತ್ತಿಕ್ಕೊಂಡೆ.


"ಅರ್ರೆ, ಸಿಮ್ಮೆ ಬದಲಾಯಿಸಿಲ್ಲ, !!!" ಅಂಗಡಿಯವ ನನ್ನ ಮೊಬೈಲ್ ನಲ್ಲಿ ಆ ಸಿಮ್ ಹಾಕಿ ಅದನ್ನು ಚಾಲೂ ಮಾಡಿದ ಬಳಿಕ ಪಾವ್ ಭಾಜಿ, ಉಸಳ್ ಅನ್ನು ಮುಕ್ಕುವುದರಲ್ಲಿ ಬುಸಿಯಾಗಿದ್ದ ನನಗೆ ಅದು ಮರೆತೇ ಹೋಗಿತ್ತು.


ನನ್ನ ಸಿಮ್ ನೆನೆಹಾಕಿದ ಜೀನ್ಸ್ ನ ಹಿಂದಿನ ಪೋಕ್ಕೆಟ್ ನಲ್ಲಿ ಸಿಕ್ಕಿ ನೊರೆಯ ನಡುವೆ ಮಲಗಿತ್ತು. ಮತ್ತೆ ಅದನ್ನು ಮೊಬೈಲ್ ಗೆ ಸಿಕ್ಕಿಸಿ ಮೊಬೈಲ್ ಚಾಲೂ ಮಾಡಿದೆ.

೧ ಮೆಸ್ಸೇಜ್ ಮತ್ತು ೫ ಮಿಸ್ ಕಾಲ್.


 

"ನಾನು ನಿನಗೆ ಕರೆಮಾಡಲು ಪ್ರಯತ್ನಿಸಿದೆ ಅದು ನಾಟ್ ರೀಚೆಬಲ್ ಇತ್ತು, ನಾನು ಟ್ರೈನ್ ನಲ್ಲಿ ದ್ದೇನೆ. ಮೆಸ್ಸೇಜ್ ಸಿಕ್ಕೊಡನೆ ಕರೆ ಮಾಡು" ಎಂದು ಪ್ರೀತಿಯ ಮೆಸ್ಸೇಜ್.


೫ ರಲ್ಲಿ ಒಂದು ಪ್ರೀತಿಯ ಮಿಸ್ ಕಾಲ್ ಮತ್ತು ೪ ಅನ್ನೋನ್ ನುಂಬರ್ !!! ಅದು ಅವಳೇ ಮಾಡಿರಬಹುದು ಅಂದುಕ್ಕೊಂಡೆ 


ಮೊದಲಿಗೆ ಪ್ರೀತಿಯ ನಂಬರ್ ಗೆ ಕರೆಮಾಡಲು ಅದು ನಾಟ್ ರೀಚಬಲ್ ಎಂದು ಒಂದೇ ರಾಗ ಹಾಡುತ್ತಿತ್ತು. ಸರಿ ಎಂದು ಆ ಅನ್ನೋನ್ ನಂಬರ್ ಗೆ ಕರೆ ಮಾಡಿದೆ.


"ಹಲ್ಲೋ ..."

"ಹಲೋ ...ವೈಭು ..." ಆ ಬದಿಯಲ್ಲಿ ಕೇಳಿದ ಸ್ವರ ಅಪರಿಚಿತವಾಗಿದ್ದರೂ, ಮಾತಾಡುವ ವ್ಯಕ್ತಿ ತುಂಬಾ ಪರಿಚಿತನಂತೆ ನನ್ನನ್ನು ಸಂಬ್ಹೊದಿಸುತಿದ್ದ.

ನಾನು "ಸಾರೀ .. ಮೇ ಐ ಕ್ನೋ ಯು .." ಎಂದು ಕೇಳಿದೆ.

"ಹೇ, ವೈಭು ಇದು ವಿವೇಕ್!!!"


ಅಬ್ಬಾ ಹೃದಯದಲ್ಲಿ ಪ್ರೇಮರವಿಯನ್ನು ಮೂಡುವ ಮೊದಲೇ ಆವರಿಸಿಕ್ಕೊಂಡ ಗ್ರಹಣ !!!


"ಹಾಂ ವಿವೇಕ್ ಹೇಳೋ ..." ನಾಲ್ಕು ವರ್ಷ ಒಂದೇ ಕಾಲೇಜ್ ನಲ್ಲಿ ಓದಿದ್ದರೂ ಇಲ್ಲಿ ವರೆಗೆ ಅವನು ನನ್ನಲ್ಲಿ, ನಾನು ಅವನಲ್ಲಿ ಮಾತಾಡಿರಲಿಲ್ಲ, ಆದರೆ ಇವತ್ತು ಪ್ರಿಯತಮೆಗಾಗಿ ದಾಸನಾಗಲು ಹತ್ತಿರದ ಗೆಳೆಯನಂತೆ ಮಾತನಾಡುತಿದ್ದ ಆ'ವಿವೇಕನ ಹೆಸರು ಕೇಳಿ ನಾನು ದಂಗಾದೆನು.

"ಹೇ, ಪ್ರೀತಿ ಪುಣೆಗೆ ಬರ್ತಿದ್ದಾಳೆ... ಅವಳಿಗೆ ಅಲ್ಲಿ ಯಾರು ಇಲ್ಲ,ನೀನು ಅಲ್ಲಿದ್ದಿಯ ಅಂತ ತಿಳೀತು ಹಾಗಾಗಿ ನಿನಗೆ ಕಾಲ್ ಮಾಡ್ತಿದ್ದೇನೆ"

"ವಿವೇಕ್ ನಂಗೆ ಗೊತ್ತು ಅವಳು ನಿನ್ನೆ ಕಾಲ್ ಮಾಡಿದ್ದಳು, ನಾನಿದ್ದೇನೋ, ಟೆನ್ಶನ್ ತಕೋ ಬೇಡ"

"ಥ್ಯಾಂಕ್ಸ್, ಗೆಳೆಯಾ !!!"

"ಬಿಡೋ ಅದೆಲ್ಲ, ನೀನು ಎಲ್ಲಿದ್ದಿಯಾ ಏನು ಮಾಡ್ತಾ ಇದ್ದಿಯಾ..?"

"ಸದ್ಯಕ್ಕೆ ಏನು ಇಲ್ಲವೋ.. ಈಗ ಏನಿದ್ರು IT BT  ಅಂತಾರೆ , ನನ್ನಂತಹ ಕೋರ್ ಸಬ್ಜೆಕ್ಟ್ ಯಾರು ಮೂಸಲ್ಲ .. ಸುಸ್ತಾದೆ ಕೆಲಸ ಹುಡುಕಿ ಹುಡುಕಿ .. ಇನ್ನು MBA ಇಲ್ಲ M.Tech ಮಾಡುವ ಅಂತಿದ್ದೇನೆ."

"ಓಕೆ ಅಣ್ಣಾ , ಓದು ಮುಂದೆ ಓದು ಒಳ್ಳೆ ಒಪರ್ಚುನಿಟಿ ಸಿಗಬಹುದು"

"ಅದೆಲ್ಲಾ ಬಿಡು, ನಿನ್ನಿಂದ ಒಂದು ಸಹಾಯ ಬೇಕು"

"ಕೇಳು"

"ಏನು ಇಲ್ಲ, ನಾಡಿದ್ದು ಅವಳ ಬರ್ತ್ ಡೇ, ಅವಳಿಗೆ ಸರ್ಪ್ರೈಸ್ ಪಾರ್ಟಿ ಕೊಡ್ಬೇಕು ಅಂತಿದ್ದೆ ಆದ್ರೆ ಅವಳು ಇಲ್ಲಿಲ್ಲ, ಅಲ್ಲಿ ನಿಂಗೆ ನನ್ನ ಬಿ ಹಾಫ್ ಅರ್ರೆನ್ಜ್ ಮಾಡಲಾದೀತೇ...?"

"ಶೂರ್ ಗೆಳೆಯ , ಡೀಲ್ ... ಮಾಡ್ತೇನೆ"

"ಥ್ಯಾಂಕ್ಸ್ ಗೆಳೆಯ, ಆದ್ರೆ ಒಂದ್ ರಿಕ್ವೆಸ್ಟ್, ಇದು ನನ್ನ ಪ್ಲಾನ್ ಅಂತ ಅವಳಿಗೆ ಹೇಳಬಾರದು"

"ಇಲ್ಲ ಹೇಳಲ್ಲ..." 


"ಇವನ ಪ್ಲಾನ್ ಅಂತ ಯಾಕೆ ಹೇಳ್ಬೇಕು, ಕೆಲಸ ನಾನು ಮಾಡಿ ಇವನಿಗೆ ಯಾಕಾಗಿ ಕ್ರೆಡಿಟ್ಸ್ ಕೊಡ್ಬೇಕು..? ಸಿಕ್ಕಿದ ಚಾನ್ಸ್ ಅನ್ನು ಸರಿಯಾಗಿ ಉಪಯೋಗಿಸಿ ಕೊಳ್ಳ ಬೇಕು, ಅವಳನ್ನು ತನ್ನಲ್ಲಿಗೆ ಸೆಳೆಯಬೇಕು" ಹೃದಯದಲ್ಲಿ ಗ್ರಹಣಕ್ಕೆ ಸಿಕ್ಕ ಸೂರ್ಯ ಮಾತಾಡುತಿದ್ದ


ಆ ಬದಿಯಲ್ಲಿ ವಿವೇಕ್ "ಇನ್ನೊಂದು ರಿಕ್ವೆಸ್ಟ್ ... ಆ ದಿನ ಅವಳಿಗೆ ನಾನೇ ಮೊದಲು ವಿಶ್ ಮಾಡ್ಬೇಕು !!! ನನ್ನ ವಿಷಸ್ ಆದ ಬಳಿಕ ನೀವು ವಿಶ್ ಮಾಡ್ಬೇಕು"


ನಾನು ಮೌನವಾಗಿದ್ದೆ, ಪ್ರಖರವಾಗುತಿದ್ದ ಸೂರ್ಯ "ಪೋಸ್ಸೇಸ್ಸಿವ್ ಪಾರ್ಟಿ , ಹೋಗ್ಲಿ ಬಿಡು ಅವನೇ ವಿಶ್ ಮಾಡ್ಲಿ, ಒಪ್ಕೋ ವೈಭು" ಎನ್ನುತಿತ್ತು.


"ಓಕೆ .. ನಿನ್ನಿಷ್ಟಪ್ಪಾ, ನೀನು ಕಾಲ್ ಕಟ್ ಮಾಡಿದ್ಮೇಲೆ  ನಾವು ಪಾರ್ಟಿ ಮಾಡ್ತೇವೆ, ಚಿಂತಿಸಬೇಡ" ಅಂದೆ 

"ಸರಿ ಥ್ಯಾಂಕ್ಸ್ ಅ ಲೋಟ್ ವೈಭು .. ನನ್ ನಂಬರ್ ಸೇವ್ ಮಾಡ್ಕೋ ಅಗತ್ಯ ಬೀಳುತ್ತೆ ..."ಹೇಳುತ್ತಾ ಕರೆ ಕಟ್ ಮಾಡಿದ.


"ಈ ಪುಣ್ಯಾತ್ಮನಿಗೆ ನನ್ನ ಅಗತ್ಯ ಬೀಳಬಹುದು ವಿನಃ ನನಗ್ಯಾವ ಉಪಯೋಗ ಇವನ್ನಿಂದ !!" ಮತ್ತೆ ಸೂರ್ಯ ನನ್ನೊಳಗೆ ಉಸುರಿದ.


ನಂಬರ್ ಅನ್ನು ಸೇವ್ ಮಾಡುವ ಬದಲಿಗೆ ಮೊದಲು ಡಯಲ್ ಮಾಡಿದ್ದ ಪ್ರೀತಿಯ ನಂಬರ್ ಗೆ ಕರೆ ತಿರುಗಿಸಿದೆ. ಇನ್ನು ಅದು ಔಟ್ ಆಫ್ ಕಾವೆರಾಜ್ ಏರಿಯ ಎಂಬ ರಾಗದಲ್ಲೇ ಹಾಡುತ್ತಿತ್ತು.


೧೨ ರ ವರೆಗೆ ಪ್ರಯತ್ನಿಸಿ ಆಗದೆ ಬಳಿಕ "ಪುಣೆ ಗೆ ಬಂದೊಡನೆ sms ಮಾಡು ಗುಡ್ ನೈಟ್ ಸ್ವೀಟ್ ಡ್ರೀಮ್ಸ್" ಹೇಳಿ ಮೆಸ್ಸೇಜ್ ಕಳುಹಿಸಿ ನಿದ್ದೆಗೆ ಜಾರಿದೆ.


ಅವಳನ್ನು ಸ್ಟೇಷನ್ ನಲ್ಲೆ ಸ್ವಾಗತಿಸ ಬೇಕೆಂದು ಕೊಂಡಿದ್ದವನಿಗೆ ಅವಳ ಬರುವಿನ ಸಮಯ ತಿಳಿಯದೆ ಬೇಜಾರಾಯಿತು. ದೇಹ ಮನಸ್ಸು ದಿನದ ಬಳಲಿಕೆ ಇಂದ ಸುಸ್ತಾಗಿ ಮಲಗಿದರು ಗ್ರಹಣಕ್ಕೆ ಸಿಕ್ಕ ಪ್ರೇಮ ರವಿ ಗ್ರಹಣ ಕಳಚಿ ಕನಸಲ್ಲಿ ವಿಹರಿಸಲು ಶುರುಮಾಡಿದ.


ಮುಂದಿನ ಸಿಪ್

Rating
No votes yet