ಕನಸಿನ ಭ್ರಮೆಯಲ್ಲಿ ( ಕವನ )

ಕನಸಿನ ಭ್ರಮೆಯಲ್ಲಿ ( ಕವನ )

ಕವನ

 


        ಕನಸಿನ ಭ್ರಮೆಯಲ್ಲಿ


 


ನೀರವ ರಾತ್ರಿ ಬೇಸರದ ಕ್ಷಣ


ವಿಶಾಲ ಕಪ್ಪು ದಿಗಂತ ಅಗಣಿತ ತಾರಾಗಣ


ಏಕಾಂಗಿತನ ಮಧು ಮಧುಪಾತ್ರೆಗಳೆ


ಎನ್ನ ಜೀವನ ಸಂಗಾತಿಗಳು


ಬದುಕು ಹೀಗೆಯೇ ಸಾಗಿ ಹೋಗಬಾರದೆ ?


ದ್ವೇಷ ಹಗೆ ಮತ್ಸರ ಗೋಳಾಟಗಳಿಲ್ಲದೆ !


 


ಜೀವನ ಕನಸಲ್ಲ ವಾಸ್ತವ


ಅವುಗಳದೆ  ಬೇರೆಯ ಲೋಕ


ದುಸ್ತರ ಬಾಳು ಸ್ವಾರ್ಥ ಜಗ


ಓಡಿ ಹೋಗ ಬೇಕೆನಿಸುತ್ತದೆ ಆದರೆ ಎಲ್ಲಿಗೆ ?


ವಾಸ್ತವ ಮರೆಯಲು ಮತ್ತದೆ ಕನಸಿಗೆ


ಜಾರಬೇಕು ನೆಮ್ಮದಿ ಪಡೆಯಬೇಕು


 


ಅದೇ ಮಧು ಮಧುಪಾತ್ರೆ


ಅನಂತ ದಿಗಂತ ಅಗಣಿತ ತಾರಾಗಣ


ಮತ್ತದೆ ಕನಸಿನ ಲೋಕ


ಸಾಗುತಿದೆ ನೀರಸ ಜೀವನ


ಮಾಧುವಿನ ಮತ್ತಿನಲಿ ವಾಸ್ತವಕೆ ಬೆನ್ನಾಗಿ


ಕನಸಿನ ಭ್ರಮೆಗೆ ಬಲಿಯಾಗಿ


 

Comments