ಬುವಿಯ ಅಮೃತ
ತುಟಿಚಿಗುರ ಮುತ್ತಿಡುತ ಕಚ್ಚಿದರೆ ಬೆದರುತಲಿ ಮುಂಗೈಯ ಈ ಚೆಲುವೆ ಹಿಡಿದೆಳೆವಳು; ಬಿಟ್ಟುಬಿಡು ಬಿಟ್ಟುಬಿಡು ನೀನು ಪೋಕರಿಯೆನುತ ಕಟುನುಡಿದು ಹುಬ್ಬುಗಳ ಕುಣಿಸುತಿಹಳು!
ಹುಸಿಯಾಗಿ ಚೀರುತಿಹ ಕೊಂಕಿದಾ ಕಣ್ಣವಳ ಮುತ್ತಿಟ್ಟವನಿಗಿಲ್ಲೆ ಅಮೃತವಿಹುದು; ಇದನೊಂದು ತಿಳಿಯದಾ ತಿಳಿಗೇಡಿಗಳು ತಾನೆ ಕಡಲ ಸುಮ್ಮನೆ ಕಡೆದ ದೇವತೆಗಳು!
ಸಂಸ್ಕೃತ ಮೂಲ (ಅಮರುಕನ ಅಮರುಶತಕದಿಂದ):
ಸಂದಷ್ಟಾಧರಪಲ್ಲವಾ ಸಚಕಿತಮ್ ಹಸ್ತಾಗ್ರಮಾಧುನ್ವತೀ ಮಾಮಾಮುಂಚಶಠೇತಿ ಕೋಪವಚನೈರಾನರ್ತಿತಭ್ರೂಲತಾ | ಶೀತ್ಕಾರಾಂಚಿತಲೋಚನಾಸರಭಸಂ ಯೈಶ್ಚುಂಬಿತಾಮಾನಿನೀ ಪ್ರಾಪ್ತಂತೈರಮೃತಂ ಶ್ರಮಾಯಮಥಿತೋ ಮೂಢೈಃ ಸುರೈಃ ಸಾಗರಃ || -ಹಂಸಾನಂದಿ
ಕೊ: ಅನುವಾದದಲ್ಲಿ ನೆರವಾದ ಗೆಳೆಯ ಮಂಜುನಾಥ ಕೆ.ಎಸ್. ಅವರಿಗೆ ನಾನು ಆಭಾರಿ.
Rating