ರೂಢಿ ನಾಮ ! ! Nick Name !

ರೂಢಿ ನಾಮ ! ! Nick Name !

 

ತಲೆ ಬರಹ ಈ ಲೇಖನಕ್ಕೆ ಸರಿಯಾಗಿ ಕೊಟ್ನೋ ಇಲ್ಲವೋ ಗೊತ್ತಾಗ್ತಿಲ್ಲ. ಆದರೇನು, ಹೇಳಿ ಕೇಳಿ ಬರೆಯುತ್ತಿರುವುದು "ರೂಡಿ ನಾಮದ" ಮೇಲೆ ಅಂದಮೇಲೆ ಏನಾದರೇನು "ತಲೆ ಬರಹ", ಅದೇ ನಮ್ಮ ರೂಡಿಯಲ್ಲವೇ? ಈ ಲೇಖನ ಓದುವ ಮೊದಲು ನನ್ನ ಹಿಂದಿನ ಹೆಸರುಗಳ ಮೇಲಿನ ಲೇಖನ ವನ್ನು ಓದಿ "ಹೆಸರಿನ ಹಸಿರು" ಇದನ್ನೋದಿ. ಹೆಸರುಗಳ ಬಗ್ಗೆ ಎಷ್ಟು ಬರೆದರೂ ತಮಾಷೆ ಇದ್ದೇ ಇರುತ್ತದೆ. ಹೆಸರಿನ ಹಸಿರಲ್ಲಿ ವಿವಿಧ ಹೆಸರುಗಳ ಮೋಜುಗಳನ್ನ ಬರೆದಿದ್ದೆ. ಇದರಲ್ಲಿ ರೂಡಿ ನಾಮ ಅಂದರೆ, ನಿಕ್ ನೇಮ್ ಅಂತ ಇಂಗ್ಲೀಷ್ ನಲ್ಲಿ ಹೇಳ್ತೀವಲ್ಲ ಅದರ ಬಗ್ಗೆ ಸ್ವಲ್ಪ ಉಲ್ಲೇಖಿಸಿ ಮಜಾ ತಗೋಳಣಾ ಅಂತ ಅನ್ನಿಸ್ತು. ಸರಿಯಾಗಿದೆ ಅಲ್ವೇ "ನಾಣಿ ಯವರೆ" ?

"ನಾಣಿ" ಅನ್ನೋದು ಒಂದು "ರೂಡಿ ನಾಮ" . ನಾರಾಯಣ ಅನ್ನುವವರಿಗೆ "ನಾಣಿ" ಅಂತ ಕರೆಯುವುದು ಅಭ್ಯಾಸ. ಅಂದ್ರೇ ನೀವು "ನಾರಾಯಣ" ದೇವರಿಗೂ "ನಾಣಿ" ಅಂತ ಕರೀಬಹುದು. ಏನೂಂದ್ರೆ " ಸ್ವಲ್ಪ ಸಿಟ್ಟಾಗಬಹುದು " ಅಷ್ಟೇ. "ಎಲಾ ಇವನ, ನಾರಾಯಣ ಅಂತ ನನಗೆ ಪೂರ್ತಿ ಹೆಸರು ಕರೆಯೋಕ್ಕೆ ಏನಿವನಿಗೆ ದಾಡಿ ಬಂದಿರೋದು ? ಹೀಗೇ ಬಿಟ್ಟ್ರೇ, ಇನ್ನೂ ಸಹಸ್ರನಾಮ ಎಲ್ಲ "ಹಾಫ್ ಹಜಾರ್" ಮಾಡಿ ಬಿಡುತ್ತಾರೆ ಈ ಮನುಷ್ಯರು" ಅಂತ್ ಬೈಕೋಬಹುದು. ಹೋಗ್ಲಿ ಬಿಡಿ, ಈಗ "ನಾಣಿ" ವಿಷಯಕ್ಕೆ ಬರೋಣ..... ಎಲ್ಲರ ಮನೇಯಲ್ಲೂ ಕಡೇ ಪಕ್ಷ ಒಂದು ನಾಣಿನಾದರೂ ಇರ್ತಾರೆ. ಅಷ್ಟೂ ಸಾಮಾನ್ಯ ಈ ರೂಡಿನಾಮ. ನಾನು ಚಿಕ್ಕವಳಿದ್ದಾಗ, ನಮ್ಮ ತಂದೆಯ ಕಡೆ ಸುಮಾರು ದೊಡ್ದ ಬಳಗದ ಎಲ್ಲರಿಗೂ ಒಂದೊಂದು ರೂಡಿನಾಮಗಳಿಂದ ಕರೆಯುತ್ತಿದ್ದರು. ಹಾಗಾಗಿ ನಮಗೆ ಅವರ ನಿಜವಾದ ಹೆಸರೇ ಗೊತ್ತಿರಲಿಲ್ಲ. ನಾವು ದೊಡ್ದವರಾದಮೇಲೆ ಅವರನ್ನೇ ಹೋಗಿ "ನಿಮ್ಮ ನಿಜವಾದ ಹೆಸರೇನು"? ಅಂತ ಕೇಳಿ ತಿಳಿದುಕೊಳುತ್ತಿದ್ದೆವು. ಒಂದೊಂದು ಸಲ ನಿಜವಾದ ಹೆಸರಿಗೂ, ರೂಡಿನಾಮಕ್ಕೂ ಯಾವ ಸಂಬಂಧವೂ ಇರುತ್ತಿರಲಿಲ್ಲ. ಯಾವ ಆಧಾರದ ಮೇಲೆ ಹೆಸರು ಆಯ್ದಿದ್ದರು ಅನ್ನುವುದನ್ನು ಪತ್ತೇ ಹಚ್ಚಲು ಸ್ವಲ್ಪ ಕಷ್ಟವೇ ಆಗುತ್ತಿತ್ತು.

ಈಗ ಬೇರೆ ಬೇರೆ ರೂಡಿ ನಾಮ ಗಳನ್ನ ನೋಡೋಣ. ನಿಮಗೆ ಗೊತ್ತಿರುವ "ರೂಡಿನಾಮ" ಗಳನ್ನೂ ಪಟ್ಟಿ ಮಾಡಿ ತಿಳಿಸಿರಿ..........

ನಮ್ಮ ಮನೆಯಲ್ಲಿ "ಣ" ಕಾರದಿಂದ ಕೊನೆಗೊಂಡ ತುಂಬಾ ಹೆಸರುಗಳಿದ್ದವು....."ಅಚ್ಚಣ್ಣಿ", "ನಿಂಗಣ್ಣಿ" , "ಮೊಗಣ್ಣಿ", "ಅಮ್ಮಣ್ಣಿ" "ಬಣ್ಣಿ"  .........ನಾನು ಖಂಡಿತಾ ಸುಮ್ನೆ ಬರೀತಿಲ್ಲ, ಇವೆಲ್ಲ ಹೆಸರು ಗಳನ್ನು ಉಪಯೋಗಿಸಿ ನಾವು ಅವರನ್ನ ಕರೀತಿದ್ವಿ.  ನಿಂಗಿ ಅಂತ ಒಬ್ಬ ಕೆಲಸದವಳು ಇದ್ದಳು. ಅದಕ್ಕೇ ಇರಬೇಕು "ನಿಂಗಣ್ಣಿ" ಗೆ "ಣ ಕಾರ ಸೇರಿಸಿದ್ದು ಕಡೆಯಲ್ಲಿ. ಮೊಗಣ್ಣಿ ಗೆ ಯಾಕೆ ಆ ಹೆಸರೋ ಗೊತ್ತಿಲ್ಲ, ಅವರ ಮೊಗ (ಮುಖ) ಏನಾದ್ರೂ "ಣ" ಕಾರವಾಗಿತ್ತೋ ಏನೋ ???? "ಅಚ್ಚಣ್ಣಿ" ಯಾವಾಗಲೂ ಕೆಲಸದಲ್ಲಿ "ಅಚ್ಚುಕಟ್ಟು" ಅದಕ್ಕೇ ಈ ಹೆಸರು ಬಂತೇನೋ??? "ಬಣ್ಣಿ" ನ ಬಣ್ಣಿಸೋಕೇ ಅಸಾಧ್ಯ ಅಷ್ಟೊಂದು ಸುಂದರ ( ಅಥವಾ ವಿಕಾರನೋ) ನೋ ಗೊತ್ತಿಲ್ಲ. ಅಮ್ಮಣ್ಣಿ ವಿಷಯ ನಿಮಗೆ ಗೊತ್ತೇ ಇದೆ. ಯಾವುದಕ್ಕೂ ಒಪ್ಪದಿದ್ದ ಮಹರಾಯಿತಿಗೆ "ಅಮ್ಮಣ್ಣಿ" ಎಂದು ಬಿರುದು ಕೊಟ್ಟಂತಿತ್ತು.

ಪುರುಷ ಪ್ರಧಾನವಾದ "ಣ" ಕಾರಾಂತ್ಯ ರೂಡಿನಾಮಗಳನ್ನ ನೋಡೋಣವಾ?

"ನಾಣಿ" ವಿಷಯ ಮೊದಲೇ ಹೇಳಿದೀನಿ. ಈ ನಾಣಿಗಳು ಬೀದಿಗೊಬ್ಬಬ್ಬರು ಇದ್ದಾರೆ. ನಾಣಿ ಜೊತೆಗೆ "ಮಣಿ", "ಪಾಣಿ", ......

 

ಮುಂದುವರೆಯುವುದು..............

Rating
No votes yet

Comments