ಚಿನ್ನದ ಮಲ್ಲಿಗೆ ಹೂವೇ

ಚಿನ್ನದ ಮಲ್ಲಿಗೆ ಹೂವೇ

ಬೆಳಗ್ಗೆ ಎದ್ದು ರೆಡಿಯಾಗಿ ತಿಂಡಿ ಮಾಡಿ ಆಫೀಸಿಗೆ ಅವಳು ಹೊರಟಳು. ತನ್ನ ಆಫೀಸ್ ಬಸ್ಸನ್ನು ಹಿಡಿಯಲು ಅವಳು ೧ ಕಿ.ಮೀ ನಡೆಯಬೇಕಾದ್ದರಿಂದ ತನ್ನ ವ್ಯಾನಿಟಿ ಬ್ಯಾಗಿಂದ ಇಯರ್ಫೋನನ್ನು ತೆಗೆದು ಮೊಬೈಲ್ಗೆ ಚುಚ್ಚಿ ಎಫ್ ಎಂ ಆನ್ ಮಾಡಿ ಹಾಡು ಕೇಳುತ್ತಾ ರಸ್ತೆಬದಿಯಲ್ಲಿ ಹೋಗುತ್ತಿದ್ದಳು. ವಾಹನಗಳ ಶಬ್ಧ, ಜನಗಳು ಮಾತಾಡುವ ಶಬ್ಧ ನಿಧಾನಕ್ಕೆ ಕೇಳಿಸುತ್ತಿತ್ತು. ಚಿನ್ನದ ಮಲ್ಲಿಗೆ ಹೂವೇ ಹಾಡು ಎಫ್ ಎಂನಿಂದ ಅವಳ ಕಿವಿಗೆ ಇಯರ್ಫೋನ್ ಮೂಲಕ ರವಾನೆಯಾಗುತ್ತಿತ್ತು. ಅಷ್ಟರಲ್ಲಿ ಯಾರೋ ಹಿಂದಿಂದ ಕೈ ಹಾಕಿ ಸರ ಕಿತ್ತಂತಾಯ್ತು. ತಿರುಗಿ ನೋಡುವಷ್ಟರಲ್ಲಿ ಆಸಾಮಿ ಕಣ್ಮರೆಯಾಗಿದ್ದ.
.
.
.
.
.
.
.
.
.
.
.
.
.
.
.
ಚಿನ್ನದ ಸರ ಕಾಣೆಯಾಗಿತ್ತು, ಮುಡಿದ ಮಲ್ಲಿಗೆ ಹೂವು ಬಾಡಿಹೋಗಿತ್ತು.

Rating
No votes yet

Comments