ಯೋಚನಾಲಹರಿ

ಯೋಚನಾಲಹರಿ

 ನೀವು ಏನೇ ಅನ್ನಿ... ಮನಸ್ಸಿನಲ್ಲಿ ಲೆಕ್ಕವಿಲ್ಲದಷ್ಟು ಯೋಚನಾಲಹರಿಗಳು, ಅವು ಸಂದರ್ಭಕ್ಕೆ ತಕ್ಕಂತೆ, ನಾವು ಇರುವ ಜಾಗ, ಪರಿಸರ, ನಮ್ಮ ನೋಟವನ್ನು ಬಿಂಬಿಸಿ ಹಲವು ಯೋಚನಾಲಹರಿಗಳು ಬಿಂಬಿತವಾಗುತ್ತವೆ. ಈ ಯೋಚನೆಗಳು ಆ ಕ್ಷಣಕ್ಕೆ ಬಿಂಬವಾಗುವ ಭಾವದ ರೂಪವಾದ ನೋವು, ನಲಿವು, ಸುಖ, ದುಃಖ, ಕೋಪ, ದ್ವೇಷ ಎಲ್ಲವೂ. ನಮ್ಮನ್ನು ಸೃಷ್ಟಿಸಿದ ಆ ಬ್ರಹ್ಮನಿಗೂ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ ಭಾವಗಳ ಲೆಕ್ಕ...? ನಮ್ಮಲ್ಲಿ ಸಂದರ್ಭಕ್ಕನುಗುಣವಾಗಿ ವ್ಯಕ್ತವಾಗುವ ಭಾವನೆಗಳನ್ನು ಕಡಿವಾಣ ಹಾಕುವ ಕೆಲಸ ನಮ್ಮ ಅಂತರಾತ್ಮ ಇನ್ನು ಅಚ್ಚುಕಟ್ಟಾಗಿ ಮಾಡುತ್ತದೆ. ಒಳ್ಳೆಯದರ ಅರಿವು ನೀಡುತ್ತದೆ... ಅದಕ್ಕೆ ಅವಕಾಶ ಕೊಟ್ಟಾಗ ಸುಖಾಂತ್ಯ... ಇಲ್ಲದಿದ್ದಾಗ ದುಖಾಂತ್ಯ...