ಕಾಡುತ್ತಿದೆ ಹಳೆಯ ಮಧುರವಾದ ನೆನಪುಗಳು

ಕಾಡುತ್ತಿದೆ ಹಳೆಯ ಮಧುರವಾದ ನೆನಪುಗಳು

ಕವನ

 ಕಾಡುತ್ತಿದೆ ಹಳೆಯ
ಮಧುರವಾದ ನೆನಪುಗಳು
ಗೋಲಿ, ಕುಂಟೆಬಿಲ್ಲೆ, 
ಲಗೋರಿ, ಚೌಕಬಾರ
ಆಟಗಳ ವೈಖರಿಯ ಪರಿ
ವರ್ಣಿಸಲಾಸಧ್ಯ...

ಕಾಡುತ್ತಿದೆ ಹಳೆಯ
ಮಧುರವಾದ ನೆನಪುಗಳು
ಬಾಡಿಗೆ ಮನೆಗಳ ಬದಲಾವಣೆ
ಹೊಸ ಸ್ನೇಹಿತರ ಹುಡಕಾಟ
ಹಳೆಯ ಸ್ನೇಹಿತರ ಒಡನಾಡ
ದಿನಕ್ಕೊಂದು ಕನಸು
ದಿನಕ್ಕೊಂದು ಆಟ...

ವಯಸ್ಸಿನ ಅರಿವಿರಲಿಲ್ಲ
ಓದಿನ ಸ್ಪಷ್ಟ ಕಲ್ಪನೆಯಿರಲಿಲ್ಲ
ದುಡಿಮೆಯ ಅನಿವಾರ್ಯವಿರಲಿಲ್ಲ
ತಂದೆ ತಂದುದ್ದು 
ತಾಯಿ ಮಾಡಿದ್ದು
ತಾನು ಉಡಿದ್ದು...

ನನ್ನನ್ನು ತಿದ್ದವರೆಷ್ಟು ಮಂದಿಯೋ
ಸ್ಪಷ್ಟತೆ ಇಲ್ಲದ ಆ ಬದುಕಿಗೂ
ಸ್ಪಷ್ಟತೆ ಇರುವ ಈ ಬದುಕಿಗೂ
ಬಹಳಷ್ಟು ವ್ಯತ್ಯಾಸ
ಮದುವೆಯೆಂಬ ಸಂಕೋಲೆಗೆ
ಬಿದ್ದಾಗ ತಂದೆ-ತಾಯಿಯರ ಪಟ್ಟ
ಕಷ್ಟದ ಅರಿವು ಮನದಲ್ಲಿ ಕಾಡುತ್ತಿಹುದು...