ಜೀವನ ಗಾನ ( ಕವನ )

ಜೀವನ ಗಾನ ( ಕವನ )

ಕವನ

 


 


          ಜೀವನ ಗಾನ


 


ನಿಶ್ಚಲ ರಾತ್ರಿ ಬೆಳದಿಂಗಳಾರಾಶಿ


ತಣ್ಣಗಿನ ಏಕಾಂತ ತುಂಬು ತಿಂಗಳ ರಾತ್ರಿ


ಕೇಳಿ ಬರುತಿದೆ ಮಧುರ ' ವೇಣು ಗಾನ '


 


ಸಾಮಾನ್ಯ ಕೊಳಲು ಎಂಥ ಮಾಧುರ್ಯ


ವೇಣುವಾದಕ ದಿವ್ಯ ಸ್ವರ ಹೊರಡಿಸಬಲ್ಲ


ಬೆರಳುಗಳಿಗೆ ಸಾಧನೆಯ ತಾಲೀಮು ಕೊಡಬಲ್ಲ


 


ಜೀವನವೂ ಸಹ ಒಂದು ಕೊಳಲು


ತಾನು  ಖಾಲಿ ಶೂನ್ಯವಾದರೂ 


ಸಂಗೀತದಪಾರ ಸಾಮರ್ಥ್ಯ ಅದರೊಳಿದೆ


 


ಪ್ರತಿ ಹೃದಯವೂ ಒಂದು ಕೊಳಲು


ಎತ್ತಿಕೊಳ್ಳಿ ನಿಮ್ಮ ವೇಣು ಓಡುತಿದೆ ಕಾಲ


ಕೈಜಾರದಿರಲಿ ನುಡಿಸುವ ಅವಕಾಶ


 


ಬಾಳ ನಾಟಕವಿದು ನಿರಂತರ  ನಾಟಕದ


ಅಂಕ ಪರದೆ ಸರಿಯುವ ಮುನ್ನ


ನುಡಿಸಿಬಿಡಿ ನೀವೊಮ್ಮೆ ' ಜೀವನ ಗಾನ '


 


 

Comments