ಅ ಕಪ್ ಓಫ್ ಕಾಫಿ ... ಸಿಪ್ - ೧೬

ಅ ಕಪ್ ಓಫ್ ಕಾಫಿ ... ಸಿಪ್ - ೧೬

ಸಿಪ್ ೧೬

 

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....

ಹಿಂದಿನ ಸಿಪ್ 


ಹಳೆಯ ನಲವತ್ತು ಮತ್ತು ಹೊಸದಾಗಿ ಜೋಯಿನ್ ಆದ ಮೊವತೆಂಟು ಮಂದಿಯ ಸಭೆ. ಎರಡು ತಿಂಗಳ ಹಿಂದೆ ಚೆನ್ನೈ ನಲ್ಲಿ ದಸರಾ ಸೆಲೆಬ್ರೇಶನ್ಗೆಂದು ಕೊಂಡುಕ್ಕೊಂಡ ಕುರ್ತಾ ಇಂದು ಮತ್ತೆ ಇಸ್ತ್ರಿಯೊಂದಿಗೆ ಸೆಟ್ ಆಗಿತ್ತು. ಡಯಾಜ್ ಮೇಲಿಂದ ನೆರೆದಿದ್ದ ಸಭೆ ನೋಡಿದೆ. ಮೊದಲ ಸಾಲಿನಲ್ಲಿ ಕೂತಿದ್ದ ಪ್ರೀತಿ ನನ್ನನ್ನೇ ನೋಡುತಿದ್ದಳು. ಸುಂದರ ಚೆಹರೆ, ಇಪ್ಪತ್ತೆರಡರ ಹೊಸ್ತಿಲು ತುಳಿದ ಆತ್ಮ ವಿಶ್ವಾಸ ಅಲ್ಲಿ ರಾರಾಜಿಸುತ್ತಿತ್ತು ಆದರೂ ಅಲ್ಲಿ ಏನೋ ಮಿಸ್ ಆಗಿದೆ ಅನಿಸುತಿತ್ತು. ಮತ್ತೆ ನಾನು ಆ ನವಿಲು ಧರಿಸಿನ ಆರ್ಕುಟ್ ನ ಪ್ರೀತಿಯೊಂದಿಗೆ ಈ ಚಹರೆಯನ್ನು ಹೋಲಿಸಲು ಶುರುಮಾಡಿದೆ. ಏನು ಮಿಸ್ ಆಗಿತ್ತು ಎಂಬುದನ್ನು ಎರಡೇ ನಿಮಿಷದಲ್ಲಿ ತಲೆಯಲ್ಲಿ ಓಡುತಿದ್ದ ಕ್ವೇರಿ ಫೆತ್ಚ್ ಮಾಡಿತು. ಹೌದು ಅದೇ ಅವಳ ಹಣೆಯಲ್ಲಿ ಇಂದೂ ಬೊಟ್ಟು ಇರಲಿಲ್ಲ.

ಇಂದಿನ ಹುಡುಗಿಯರ ಸೌಂದರ್ಯ ಪ್ರಜ್ಞೆಯ ಕುರಿತು ಚಿಂತಿಸುತ್ತಾ ಗೊಂದಲದಲ್ಲಿ ಬಿದ್ದ ನಿರೂಪಕನನ್ನು ನೋಡಿ ಸಭೆ ಅರೆಕ್ಷಣ ಗೊಂದಲದಲ್ಲಿ ಮುಳುಗಿತು. ಸ್ಟೇಜ್ ನ ಹಿಂಬದಿಯಲ್ಲಿದ್ದ ಆಕೃತಿ "ವೈಭು , ಕಮ್ಮೊನ್ .."ಅಂದು ಪಿಸು ಗುಟ್ಟಿದ್ದು ಕಿವಿಯ ಪಟಲದಲ್ಲಿ ಬಿದ್ದಂತೆ ನಾನು ಬೆಳಗ್ಗೆ ಬಾತ್ರೂಂ ನಲ್ಲಿ ಫ್ರೇಮ್ ಮಾಡಿಕೊಂಡಿದ್ದ ಚೋಟುದ್ದ ಸ್ವಾಗತ ಭಾಷಣ ಹೊರಗುಗುಳಿದೆ.
 
"ಮೊದಲಿಗೆ ಕೀರ್ತನೆ ಆಕೃತಿ ಗೋಪಾಲ್ ನಿಂದ" ಎಂದು ಹೇಳುತ್ತಾ ಹಿಂದೆ ನಡೆದೆ.

ಆಕೃತಿ ಸ್ಟೇಜ್ ಅನ್ನು ಸೇರಿದಳು. ಸಭೆಯನ್ನು ಹಂಸದ್ವನಿ ಆವರಿಸಿತು. ಆಕೃತಿಯ ಮಾಧುರ್ಯ ಭರಿತ ದನಿ ಅವಳಿಗೆ ಮೀಸಲಿಟ್ಟ ಎರಡು ನಿಮಿಷ ದಾಟಿ ಮೂರು ನಿಮಿಷ ಮೀರಿದ್ದರೂ ನೆರೆದಿದ್ದ ಪ್ರೇಕ್ಷಕರನ್ನು ಹಿಡಿದಿಟ್ಟು ಕೊಂಡಿತ್ತು. ಸ್ವರ ನಿಶಾದಕ್ಕೆ ತಲುಪುತಿದ್ದಂತೆ ಸಭೆಯಲ್ಲಿನ ಚಪ್ಪಾಳೆ ಆಕಾಶಕ್ಕೆ ಮುಟ್ಟಿತು. ಮತ್ತೆ ನಾನು ಸ್ಟೇಜ್ ಗೆ ತಲುಪಲು ಮೌನ ಮತ್ತೆ ಆವರಿಸಿತು.

ಕೆಳಗೆ ಕೂತ ಪ್ರೀತಿ ನನಗೆ ತನ್ನ ಹೆಬ್ಬೆರಳು ಮತ್ತು ತೋರುಬೆರಳನ್ನು ಕೂಡಿಸಿ ಚೆನ್ನಾಗಿ ಕಾಣುತ್ತೀಯ ಎಂದು ಸಜ್ನೆ ಮಾಡಿದ್ದು ಒಮ್ಮೆಲೇ ಎಲ್ಲಿಂದಲೋ ನನ್ನಲ್ಲಿ ಮಾತಿನ ಚಿಲುಮೆ ಮೂಡಲು ಪ್ರೇರಣೆ ಯಾಯಿತು. ನಗುಮೊಗದಿಂದಲೇ ಮಾತುಗಳನ್ನುದುರಿಸಲು ಶುರು ಮಾಡಿದೆ. ದಿನೇಶ್ ಅವರನ್ನು ಸ್ಟೇಜ್ ಗೆ ಆಹ್ವಾನಿಸಿ ಕೆಳಗಿಳಿದು ಆಕೃತಿಯ ಪಕ್ಕ ಕುಳಿತುಕ್ಕೊಂಡೆ.

ಮೇಲೆ ಎಚ್ ಆರ್ ತನ್ನ ರೈಲು ಬಿಡುವ ಕೆಲಸ ಶುರು ಮಾಡಿದ್ದ. ಯಾರಾದ್ದೋ ಕೈಯಲ್ಲಿ ಮಾಡಿಸಿದ್ದ ಪ್ರೇಸೇನ್ಟೆಶೇನ್ ಅನ್ನು ತನ್ನ ಶ್ರುಮದಲ್ಲೇ ಮೂಡಿದಂತೆ ಬೀಗುತಿದ್ದ. ಕೆಳಗೆ ನಾನು ಮತ್ತು ಆಕೃತಿ ಮುಂದಿನ ಪಿಕ್ ಆದ ಆಕ್ಟ್ ನ ಟಾಪಿಕ್ ಗಳಿರುವ ಪ್ರಿಂಟ್ ಔಟ್ ಅನ್ನು ಒಂದೊಂದಾಗಿ ಕತ್ತರಿಸಿ ಮಡಚಿ ಒಂದು ಬೌಲ್ ನಲ್ಲಿ ಹಾಕುತಿದ್ದೆವು. ಬೆಳಗ್ಗೆ ಒಂಬತ್ತರಿಂದ ೧೦ ರ ವರೆಗೆ ಒಟ್ಟು ೪೫ ಫುನ್ನಿ ಟಾಪಿಕ್ ಗಳನ್ನೂ ಹುಡುಕಿ ರೆಡಿ ಮಾಡಿಕ್ಕೊಂಡಿದ್ದೆವು.

'ಒರು ಮಾಲೈ' ಮತ್ತೆ ರಿಂಗಿಣಿಸಿತು.

ಮೊಬೈಲ್ ಸ್ಕ್ರೀನ್ ನಲ್ಲಿ ಬಂದ ಕರೆ ಕರ್ನಾಟಕದ BSNL  ನಂಬರ್, ಯಾರಪ್ಪ ಇದು ಎಂದು ಮೊಬೈಲ್ ಕಿವಿಗಿಟ್ಟೆ"ಹಲೋ "
"ವೈಭವ್..."
"..." ಮೌನ್ದಲ್ಲಿದ್ದೆ ಯಾರೆಂದು ತಿಳಿಯದೆ.
"ವೈಭವ್, ಜೀವನ್ ಮಾತಾಡ್ತಿರುವುದು"
"ಹೇಳೋ ..."
"ಏನೋ .. ನೀನು ನಂಗೆ ವಿಶ್ವಾಸ ಕೊಟ್ಟು ಹೀಗ್ ಮಾಡ್ತೀಯಾ...?"
"ನಾನೀನು ಮಾಡಿದನೋ..?" ಏನು ತಿಳಿಯದವನಂತೆ ಅವನನ್ನು ಕೇಳಿದೆ.
"ಅವಳಿಗೆ ಮೊದಲು ನಾನೇ ವಿಶ್ ಮಾಡ್ಬೇಕು ಅಂತಿದ್ದೆ, ಆಗ್ಲೇ ಇಲ್ಲ"
"ಹೋ, ಆ ವಿಚಾರಾನಾ ...?"
"ನಿನ್ನೆ ಇಂದ ಅವಳ ನಂಬರ್ ಗೆ ತಾಗಲೇ ಇಲ್ಲ, ಕೊನೆಗೆ ನಿನ್ನ ನಂಬರ್ ಗೆ ಕರೆ ಮಾಡಿದರೆ ನೀನು ಕಾಲ್ ಎತ್ತಲೇ ಇಲ್ಲ ..ಅದೂ ಐದು ಬಾರಿ"
"ಅರ್ರೆ , ಸಾರೀ ಕಣೋ .. ಬ್ಯುಸಿ ಇದ್ದೆ" ರಾತ್ರಿ ಮನೆಗೆ ಹೋದಾಗ ಮಿಸ್ಸೇಡ್ ಕಾಲ್ ನೋಡಿದ್ದೇ, ಅದು ಯಾವುದೋ ಅನ್ನೋನ್ ನಂಬರ್ ಹೇಳಿ ಕರೆ ಮಾಡುವ ಸೌಜನ್ಯ ತೋರಿಸಿರಲಿಲ್ಲ.
"ಪರವಾಗಿಲ್ಲ, ಏನಾಯ್ತು ನಿನ್ನೆ ..? ಸುರ್ಪ್ರೈಸ್ ಕೊಟ್ರಾ ..?"
"ಹುನ್ ಕಣೋ ಚೆನ್ನಾಗಾಯ್ತು, ಅವಳಿಗೆ ವಿಶ್ವಾಸಾನೆ ಬರ್ಲಿಲ್ಲ.. ತುಂಬಾ ಖುಷಿ ಪಟ್ಲು"
"ಥ್ಯಾಂಕ್ಸ್ ಕಣೋ ..."
"ಅದೆಲ್ಲ ಬಿಡೋ.."
"ಮತ್ತೆ ಎಲ್ಲಿದ್ದಿಯಾ..? ಕೋಡಿಂಗ್ ನಲ್ಲಿ ಬಿಸಿ ಏನೋ ..?"
"ಇಲ್ಲ, ಬೇರೆ ಒಂದು ಪ್ರೊಗ್ರಾಮ್ ನಲ್ಲಿದ್ದೇನೆ"ಎಂದು ಹೇಳುವಷ್ಟರಲ್ಲಿ ದಿನೇಶ್ ತಮ್ಮ ಪ್ರಸಂಟೇಶನ್ ಮುಗಿಸಿದ್ದರು.

ನಾನು"ವಿವೇಕ್ ಇನ್ನ್ಯಾವಾಗ್ಲಾದ್ರು ಮಾತನಾಡುವ ಸಲ್ಪ ಅರ್ಜೆಂಟ್ ನಲ್ಲಿದ್ದೇನೆ ಬಾಯ್ " ಎನ್ನುತ್ತಾ ಕರೆ ಕಟ್ ಮಾಡಿ, ಆಕೃತಿ ಎಡೆಗೆ ಹೋದೆ.

ದಿನೇಶ್ ಕೆಳಗಿಳಿದು ಬರುವಾಗ ಎಲ್ಲ ನ್ಯೂ ಜೋಯಿನಿಸ್ ಹೆಸರಿರುವ ಪ್ರಿಂಟ್ ಔಟ್ ಕೈಯಲ್ಲಿಟ್ಟರು. ಅಲ್ಫಾಬೆಟಿಕಲ್ ಆರ್ಡರ್ ನಲ್ಲಿ ಎಲ್ಲ ೩೮ ಜನರ ಹೆಸರಿದ್ದವು.

ಹೆಸರು ಅಲ್ಫಾಬೆಟಿಕಲ್ ಆರ್ಡರ್ ನಲ್ಲಿದ್ದರೂ ಮೊದಲಿಗೆ ನಾನು "ಹಿಯರ್ ಐ ವೆಲ್ಕಮ್ ಮಿಸ್ ಪ್ರೀತಿ" ಅಂದೆ. ಅಪ್ಪಟ ತಮಿಳಿಯನ್ ಉಡುಗೆಯಲ್ಲಿ ಕೈಯಲ್ಲಿ ಬೌಲ್ ಹಿಡಿದು ನಿಂತ ಆಕೃತಿಯ ಕಣ್ಣಲ್ಲಿ ಜ್ವಾಲಾಮುಖಿ ಹೊಮ್ಮುತಿತ್ತು.

ಸಭೆಯಲ್ಲಿದ್ದ ಎಲ್ಲ ನ್ಯೂ ಜೋಯಿನಿಗಳು "ಬರ್ತ್ಡೇ ಗರ್ಲ್ !!" ಎಂದು ಬೊಬ್ಬಿಟ್ಟರು. ನೆರೆದಿದ್ದವರೆಲ್ಲ ಅವರನ್ನು ಕೂಡಿದರು. ಅವಳು ಸ್ಟೇಜ್ ತಲುಪುವಷ್ಟರಲ್ಲಿ ಎಲ್ಲರು "ಹ್ಯಾಪಿ ಬರ್ತ್ಡೇ ಟು ಯು" ಎಂದು ಹಾಡಲು ಶುರು ಮಾಡಿದರು.ಸ್ಟೇಜ್ ಏರಿದ ಪ್ರೀತಿ ಎಲ್ಲರ ಕೇಂದ್ರ ಬಿಂದಾದಳು. ತಿಳಿ ಗುಲಾಬಿಬಣ್ಣದ ಸಲ್ವಾರ್ ನಲ್ಲಿ ಪ್ರೀತಿ ಗುಲಾಬಿಯಂತೆ ಕಾಣುತಿದ್ದಳು.ಉಳಿದವರೆಲ್ಲ ಅವಳನ್ನು ಸುತ್ತುವ ಭ್ರಮರ ಆಗಿದ್ದರು. ತನ್ನ ಪರಿಚಯ ನೀಡಲು ಗುಲಾಬಿ ಮುಂದೆ ಬಂದಳು. ನನ್ನ ಕೈಯಿಂದ ಮೈಕನ್ನು ಕಸಿದು ತನ್ನ ಪರಿಚಯ ನೀಡುತಿದ್ದಳು, ಅವಳನ್ನೇ ನೋಡುತ್ತಾ ನಾನು ನೀರಾಗುತಿದ್ದೆ, ಹಿಂದೆ ನಿಂತ ಆಕೃತಿ ನನ್ನನ್ನು ಕುಟುಕುತಿದ್ದಳು.ಪರಿಚಯ ಮುಗಿಸಿ ಪಿಕ್ ಅಂಡ್ ಆಕ್ಟ್ ಗೆ ಮುಂದಾದಳು. ಕೋಪದಲ್ಲಿ ಕೆಂಡವಾಗಿದ್ದ ಆಕೃತಿ ಆ ಬೌಲ್ ಅನ್ನು ನನ್ನ ಕೈಯಲ್ಲಿತ್ತು "ನೀನೆ ಮುಂದುವರಿಸು" ಎಂದಳು ಸಿಟ್ಟಿನಿಂದಲೇ .

ಪ್ರೀತಿ ಅದರಲ್ಲಿರುವ ಒಂದು ಚಿಟ್ ತೆಕೊಂಡಳು. ಅವಳಿಗಾಗಿಯೇ ಹಾಕಿದ್ದ 'ಬಾರ್ಬಿ ಡಾಲ್' ಎಂಬ ಚಿಟ್ ಅವಳು ಎತ್ತಿದ್ದಳು.!!

ಅವಳು ಓದಿ ಹಿಂತಿರುಗಿಸಿದ ಚಿಟ್ ಅನ್ನು ಆಕೃತಿಯ ಕೈಗಿಟ್ಟೆ, ಆಕೃತಿ 'ಬಾರ್ಬಿ ಡಾಲ್' ಸುಜ್ಜೆಶನ್ ಕೊಟ್ಟಾಗಲೇ ಬೇಡ ಎಂದವಳು ಈಗ ಪ್ರೀತಿ ಕೈಗೆ ಅದೇ ಸಿಕ್ಕಿದ್ದು ಕಂಡು ಇನ್ನು ತೀಕ್ಷ್ಣಳಾದಳು.  ಪ್ರೀತಿ 'ಬಾರ್ಬಿ ಡಾಲ್' ಅನ್ನು ಅಭಿನಯಿಸಿ ತೋರಿಸುವಲ್ಲಿ ವ್ಯಸ್ತವಾಗಿದ್ದಳು. ಹಿಂದೆ ಆಕೃತಿ ಆ ಚಿಟ್ ಅನ್ನು ಚಿಂದಿ ಚಿಂದಿ ಮಾಡುತಿದ್ದಳು. ಸಭೆಯಲ್ಲಿನ ಜನ ಇವಳ ಅಭಿನಯ ಅರ್ಥವಾಗದೆ ಒಂದೊಂದು ಬಗೆಯ ಕಮೆಂಟ್ ಕೊಡುತಿದ್ದರು. ಕೆಲವರಂತೂ ಪ್ರೀತಿ ಡೋಲ್ ಎನ್ನುತಿದ್ದರು.

ಕಣ್ಣಿ ನಲ್ಲಿ ಜಾರುತಿದ್ದ ಹನಿಗಳು ಗೋಚರ ವಾಗುತಿತ್ತು. ಆಕೃತಿಯ ಬಳಿಗೆ ಹೋಗಿ ತಲೆ ಸವರಿ 'ಹೇ ಟ್ರಾನ್ಸ್ಲೇಟರ್.. ಇಷ್ಟೇನಾ ನಿನ್ ನಂಬಿಕೆ ...?? ಚಿಲ್ ' ಅಂದೆ.
ಅವಳು "ನಾನು ಪೋಸ್ಸಿಸ್ಸಿವ್ ಕಣೋ, ಯಾಕಾಗಿ ನನ್ನ ಈ ತಾರಾ ಕಾಡ್ತೀಯ...?"
"ಹೇ ಸೀನ್ ಕ್ರಿಯೇಟ್ ಮಾಡಬೇಡ, ನಿಜವಾಗಲು ನಾನ್ ಅಂದ್ರೆ ಇಷ್ಟ ಇದ್ರೆ ಬಾ ಸ್ಟೇಜ್ ಗೆ" ಅಂದೆ.

ಅಷ್ಟರಲ್ಲೇ ಇನ್ನೆರಡು ಹನಿಗಳು ಆ ತಿಳಿ ಹಸಿರು ಸೀರೆಯ ಸೆರಗಲ್ಲಿ ಬಿದ್ದು ಕಡು ಹಸಿರಿನ ಚಿತ್ರ ಬಿಡಿಸಿದ್ದವು. ಸೆರಗಿನ ಇನ್ನೊಂದು ತುದಿ ಹಿಡಿದು, ಕಣ್ಣಂಚಿನಲ್ಲಿ ಮೂಡುತಿದ್ದ ಇನ್ನೆರಡು ಹನಿಗಳನ್ನು ಅವಳು ಒರಸಿದಳು.ಕಿಸೆಯಲ್ಲಿದ್ದ ಕರ್ಚಿಫ್ ತೆಗೆದು ಅವಳ ಕೈಗಿಟ್ಟೆ. ಕಣ್ಣೊರೆಸಿ ಕೊಂಡಳು ಮತ್ತು ನನ್ನ ನೋಡಿ ಬಾಡಿದ ಮುಖದಲ್ಲಿ ಹೂ ಅರಳಿಸುವ ಪ್ರಯತ್ನ ಮುಂದುವರಿಸಿದಳು. ಕಣ್ಣಂಚಿನ ಕಾಡಿಗೆ ಬಿಳಿ ಕರ್ಚಿಪ್ ನಲ್ಲಿ ರಂಗೋಲಿ ಬಿಡಿಸಿತ್ತು. ಮುಖದಲ್ಲಿನ ತಿಳಿ ಬಣ್ಣದ ಸ್ನೋ ಆ ರಂಗೋಲಿಗೆ ಬಣ್ಣ ಬಳಿದಿತ್ತು. ಕೈ ಮುಂದೆ ಚಾಚಿ ಅವಳನ್ನು ಸ್ಟೇಜ್ ಗೆ ಕರೆದೆ. ಚಾಚಿದ ಕೈಯನ್ನು ಬಲವಾಗಿ ಬಂಧಿಸಿದಳು, ಮತ್ತು ಕಡುಗೆಂಪು ಬಣ್ಣದ ತುಟಿಗಳಿಂದ ಚುಂಬಿಸಿದಳು. ಬದಿಯಲ್ಲಿ ಕಟ್ಟಿಟ್ಟ ಪರದೆ ಇಬ್ಬರನ್ನು ಉಳಿದ ಸಭೆ ಇಂದ ಮರೆ ಮಾಡಿತ್ತು.

ಆ ಬದಿಯಲ್ಲಿ ಪ್ರೀತಿ ಬಾರ್ಬಿ ಡಾಲ್ ನ ವಿವರಣೆಯಲ್ಲಿ ನಿರತಳಾಗಿದ್ದಳು. ಸಭೆಯ ನಡುವಿಂದ ೩೦ ದಾಟಿದ ವ್ಯಕ್ತಿ 'ಬಾರ್ಬಿ ಡಾಲ್' ಅಂದ, ಉಳಿದವರು ಅವನನ್ನು ಅನುಸರಿಸಿದರು.
ಸ್ಟೇಜ್ ಗೆ ಬಂದ ನಾನು ಆಕೃತಿಯಲ್ಲಿ "ಇಸ್ ಇಟ್ ಬಾರ್ಬಿ ಡಾಲ್ .. ಮೈ ಬಾರ್ಬಿ ..?" ಎಂದು ಪ್ರಶ್ನೆ ಇಟ್ಟೆ. ಸಭೆಯಲ್ಲಿ ಉಳಿದವರೆಲ್ಲ "ಓಹೋ " ಎಂದು ಉದ್ಗರಿಸಿದರು. ನನ್ನ ಹಸಿರು ಸೀರೆಯ ಬಾರ್ಬಿಯ ಕಣ್ಣುಗಳು ಖುಷಿಯಿಂದ ತಾಂಡವ ವಾಡುತಿತ್ತು. ತಿಳಿಗುಲಾಬಿ ಬಣ್ಣದ ಬಾರ್ಬಿ ಅಷ್ಯರ್ಯ ನೋಟದಿಂದಲೇ ನನ್ನನ್ನು ಆಕ್ರಮಿಸಿದಳು.

ಇಬ್ಬರಿಂದ ತಪ್ಪಿಸಿಕ್ಕೊಳ್ಳಲು "ಎಸ ಹು ಸೈಡ್ ದ ಅನ್ಸ್ವೆರ್ .. ಎಸ ಯು ಇನ್ ಬ್ಲೂ ಶರ್ಟ್" ಎಂದು ಆ ನ್ಯೂ ಜೋಯಿನಿಯನ್ನು ಮೇಲೆ ಕರೆದೆ.

ದೇಹ ಮತ್ತು ಅವರ ಉಡುಗೆ ನೋಡಿ ಅವರು ELTP ಅಲ್ಲ ಎಂದು ಗೊತ್ತಾಗುತ್ತಿತ್ತು. ಅವರಲ್ಲಿ ಹೆಸರು ವಿಚಾರಿಸಿದೆ, ಅವರು "ಬಿ , ಮನೋಹರ್ ತಿವಾರಿ" ಎಂದು ತಮ್ಮನ್ನು ಪರಿಚಯಿಸಿಕೊಂಡರು.

ಬಳಿಕ ಒಬ್ಬೊಬ್ಬರಾಗಿ ತಮ್ಮ ಪರಿಚಯ ನಡೆಸಿ, ಬೌಲ್ ನಲ್ಲಿದ್ದ ಚಿಟ್ ಎತ್ತಿ ಅಭಿನಯಿಸಿ ಮರಳುತಿದ್ದರು. ೩೬ ELTP ಗಳಲ್ಲಿ ೧೨ ಹುಡುಗಿಯರು ಬಣ್ಣ ಬಣ್ಣದ ಚಿಟ್ಟೆಗಳಂತೆ ರಾರಾಜಿಸುತಿದ್ದವು. ಆದರೆ ಉಳಿದ ೧೪ ಹುಡುಗರು ಕರಿ ಪ್ಯಾಂಟ್ ಬಿಳಿ ಶರ್ಟ್ ನಲ್ಲಿ ಖೈದಿಗಳಂತೆ ಗೋಚರಿಸುತಿದ್ದರು. ಇದಕ್ಕೆಲ್ಲ ಕಾರಣ ಎಚ್ ಆರ್ ಡಿಪಾರ್ಟ್ ಮೆಂಟ್ ಕಳಿಸಿದ ಜೋಯಿನಿಂಗ್ ಲೆಟರ್ನಲ್ಲಿ ಮೆನ್ಶನ್ ಮಾಡಿದ ಡ್ರೆಸ್ಸಿಂಗ್ ಕುರಿತಾದ ಕಮೆಂಟ್ "ಮೆನ್ ಶುಡ್ ಬಿ ಪ್ರೆಫೆರೆಬಲಿ ಇನ್ ಬ್ಲಾಕ್ ಪ್ಯಾಂಟ್ ಅಂಡ್ ವೈಟ್ ಶರ್ಟ್"

ಅವರನ್ನು ಆ ಉಡುಗೆಯಲ್ಲಿ ಕಂಡು ಮತ್ತೆ ಚೆನ್ನೈನಲ್ಲಿ ಜೋಯಿನ್ ಆದ ಸಂದರ್ಭ ಜ್ಯಾಪಿಸುತ್ತಾ ಆಕೃತಿಯಲ್ಲಿ "ನೋಡು ಪಾಪ ಗಂಡು ಖೈದಿಗಳ ಪರಿಸ್ತಿತಿ !" ಅಂದೆ.
ಅವಳು "
ಮೆನ್ ಶುಡ್ ಬಿ ಪ್ರೆಫೆರೆಬಲಿ ಇನ್ ಬ್ಲಾಕ್ ಪ್ಯಾಂಟ್ ಅಂಡ್ ವೈಟ್ ಶರ್ಟ್" ಎನ್ನುತ್ತಾ ಮುಗುಳ್ನಕ್ಕಳು.

 

ಮುಂದಿನ ಸಿಪ್


 

Rating
No votes yet