ಮಾನಸಿ

ಮಾನಸಿ

 ಇದೇನಿದು ನನ್ನ ಹೆಸರಲ್ಲಿ ಲೇಖನ ಅಂತ ಭಾವಿಸದಿರಿ :). ಯಾವಾಗಲು ಪುಸ್ತಕ ಕೊಳ್ಳುವಾಗ ಏನಾದರು ಒಂದು ಆಕರ್ಷಣೆ ಇರುತ್ತೆ( ಶೀರ್ಷಿಕೆಯಾಗಲಿ, ಲೇಖಕರಾಗಲಿ ). ನವೆಂಬರ್ ೧ ಕನ್ನಡ ಪುಸ್ತಕ ಕೊಳ್ಳೋಣ ಎಂದು ಪುಸ್ತಕ ಭಂಡಾರದಲ್ಲಿ ಕಣ್ಣಾಯಿಸಿದಾಗ ಕಂಡಿದ್ದು "ಮಾನಸಿ", ಅರೆ ನನ್ನ ಹೆಸರು :) ಅಂಥ ನನ್ನ ಆಕರ್ಷಿಸಿತು ಟಾಗೋರ್ ರವರ ೧೫೦ ಜಯಂತಿಯಾ ನೆನಪಿಕೋಸ್ಕರ ಪುಸ್ತಕ ಕೊಂಡೆ.  ಈ ಪುಸ್ತಕದಲ್ಲಿ  ರವೀಂದ್ರ ಟಾಗೋರ್ ಗೀತೆಗಳನ್ನು ಪಂಚಾಕ್ಷರಿ ಹಿರೇಮಠರವರು ಅನುವಾದಿಸಿದ್ದಾರೆ. ೯೦ ಪುಟಗಳಲ್ಲಿ ಟಾಗೋರ್ ರ "ಗೀತಾಂಜಲಿ, ನ್ಯೆವೇದ್ಯ , ಗೀತವಿತಾನ, ರವೀಂದ್ರ  ರಚನಾವಲಿ" ಮುಂತಾದ ಸಂಗ್ರಹಗಳಿಂದ ಆಯ್ದ ನಲವತ್ತ್ಯೆದು ಗೀತೆಗಳಿವೆ. ಎಲ್ಲ ಗೀತೆಗಳು ಸೊಗಸಾಗಿತ್ತು, ಕೆಲವನ್ನು ಈ ಲೇಖನದ ಮೂಲಕ ಹಂಚಿಕೊಳುತ್ತಿದ್ದೇನೆ :

 
೧. ಕವಿಗೆ - 
 
ಏಳು, ಬಾ ಓ! ಕವಿಯೆ,
ಇದೆಯೆ ಪ್ರಾಣಾದಿ ಚೇತನ
ಅಂತರಗದಿ ಚಿಂತನ?
ಬಗೆಯೋಳಿರ್ದೋಡೆ ಸ್ಪಂದನ,
ಅದನಿಂದು ಮತ್ಯರ್ದಲಿ ಒಡಮೊಡಿಸು!
ಈ ನೆಲದೊಳದನಿಂದು ಅಮರಗೊಳಿಸು!
 
೨. ನಾನು  ಪೃಥಿವಿಯ ಶುಭಕವಿ 
 
ಈ ಧರಿತ್ರಿಯ ಮೂಲೆ ಮೂಲೆಗೆ
ಸ್ನೇಹ ಮೈತ್ರಿಯ ಎಲ್ಲ ನಿಲುವಿಗೆ 
ಯಾವ ಧ್ವನಿಯೇ ಹೊಮ್ಮಲಿ 
ಯಾವ ಸ್ವರವೇ ಚಿಮ್ಮುಲಿ;
ಆ ಕ್ಷಣವೇ  ಮೂಡುವುದು
ಪಡಿದನಿಯು ಸ್ಫುರಿಸುವುದು !
ಈ ಅನಂತದ ಕೊಳಲಲಿ
ನನ್ನ ಕೊರಳಿನ ಗಾನದಿ 
ನಾನು  ಪೃಥಿವಿಯ ಶುಭಕವಿ 
 
೩. ಬೆಳಗಿನ ಚಂದಿರ 
 
ಬೆಳಗಿನಲಿ ಉದಯಿಸಿ ಬರುವ 
ಸೂರ್ಯನಿಂದ ತನ್ನ ಪ್ರಕಾಶ 
ಮಾಯವಾಗುವುದೆಂಬುದನು ಅರಿತೂ
ಬೆಳಗಿನ ಜಾವದ ಚಂದಿರ 
ಶಾಂತ, ಭೃತ್ಯನಾಗಿ  ಹೀಗೆ ಹೇಳಿದ -
"ಅಸ್ತ  - ಸಿಂಧುವಿನ ತಟದಲಿ
ನಿಂತು ಅದೆಷ್ಟೋ ಕಾಲದಿಂದ 
ನಿನ್ನ ಪ್ರತಿಕ್ಷೆಯಲ್ಲಿದ್ದೇನೆ 
ಓ! ಸೂರ್ಯದೇವ;
ನೀನು ಉದಯಿಸಿ ಬಂದ ತಕ್ಷಣ 
ನಿನಗೆ ಪ್ರಣಾಮ ಸಲ್ಲಿಸುತ್ತ
ಇಲ್ಲಿಂದ ನಿರ್ಗಮಿಸಬೇಕೆಂದಿರುವೆ,
ಓ! ಸೂರ್ಯದೇವ!
 
೪. ಹಾಡಾಗಲಿಲ್ಲ
 
ಓ ! ಪ್ರಿಯತಮ ;
 
ಯಾವ ಹಾಡನ್ನು 
ಹಾಡಲೆಂದು 
ನಿನ್ನ ಈ ಸಭೆಯಲ್ಲಿ 
ಬಂದಿದ್ದೆನೋ
ಆ ಹಾಡನ್ನು ಇಂದಿನವರೆಗೂ
ಹಾಡಾಗಲಿಲ್ಲ !
 
ಈ ಸಮಸ್ತ ಜೀವನ 
ಕೇವಲ ವೀಣೆಯ
ತಂತಿಗಳ 
ಸ್ವರ ಸಾಧನೆಯಲ್ಲಿಯೇ 
ಕಳೆದು ಹೋಯಿತು !
 
೫. ಆಶೆ 
 
ನಿನ್ನಲಿ ನಾನು ಪೂರ್ಣರೂಪದಲಿ 
ಸಾಮರಸ್ಯ ಹೊಂದುವ ಆಶೆ!
 
ನಿನ್ನನು ಸಕಲ ದಿಕ್ಕುಗಳಲಿ 
ಕಂಡು ಸುಖಿಸುವ ಆಶೆ!
 
ಹಗಲು -ಇರುಳು  ಪ್ರತಿಯೊಂದು ಕ್ಷಣದಲ್ಲೂ 
ನನ್ನ ಪ್ರೇಮವನು ನಿನಗರ್ಪಿಸುವ ಆಶೆ!
 
ನಿನ್ನ ಲೀಲೆಯೇ ನನ್ನ ಸಂಪೂರ್ಣ 
ಜೀವನದಲಿ ಸಂಚರಿಸಲೆಂಬ ಆಶೆ!
 
ನಿನ್ನ , ಕೇವಲ ನಿನ್ನ ಪ್ರೇಮಪಾಶದಲಿ 
ಸದಾ ಬಂಧಿತನಾಗಿರುವ ಆಶೆ!
 
ನನ್ನ ಜೀವನದಲಿ  ನಿನ್ನ ಇಚ್ಛೆಗಳೇ 
ಪುರ್ಣಗೊಳ್ಳುತಿರಲೆಂಬ ಆಶೆ!
 
೬. ಮಹಿಮೆ 
 
ಎಲ್ಲಿ ವಿಪುಲ 
ವಿರತಿಯಿದೆಯೋ;
ಅಲ್ಲಿ ಅಪಾರ 
ಶಾಂತಿ ಇದೆ.
ಅಲ್ಲಿ,
ಧೀರ ಗಂಭೀರ 
ಮೌನ ಮಹಿಮೆ 
ಇದೆ.
 
Rating
No votes yet

Comments