ಬೆಂಗಳೂರಿನ ಜನ ಬಿಡಿ

ಬೆಂಗಳೂರಿನ ಜನ ಬಿಡಿ

 ಬೆಂಗಳೂರಿನ ಜನ ಬಿಡಿ..

 

ಬೆಂಗಳೂರಿನ ಜನ ಬಿಡಿ

ಸಾಮಾಜಿಕ ಜೀವನ ಸ್ವಲ್ಪ ಜಾಸ್ತಿ

ಮೀಟಿಂಗ್ ಪಾರ್ಟಿಗಳು ಜಾಸ್ತಿ

ಸಂಘ ಸಂಸ್ಥೆಗಳಲ್ಲಿ ಓಡಾಟ ಜಾಸ್ತಿ

ಹಾಗೆ ಮನೆಗೆ ಬಂದರೆ

ಮನೆಯವರ ಜೊತೆ ಮೌನ ಜಾಸ್ತಿ

ಅಕ್ಕಪಕ್ಕದ ಮನೆಯವರ ಜೊತೆ ಮಾತು ನಾಸ್ತಿ!


ಬೆಂಗಳೂರಿನ ಜನ ಬಿಡಿ

ಸಾಮಾಜಿಕ ಜೀವನ ಸ್ವಲ್ಪ ಜಾಸ್ತಿ

ಹಗಲೆಲ್ಲ ಅನಾಥಾಶ್ರಮದಲ್ಲಿ ಓಡಾಟ

ಸಾಲದೆಂಬತೆ ವೃದ್ದಾಶ್ರಮದಲ್ಲಿ ಆಸಕ್ತಿ

ಮನೆಯಲ್ಲಿನ ತಂದೆ ತಾಯಿಯರು

ಹೊರ ಹಾಕುವ ನಿಟ್ಟುಸಿರಿನ ಬಗ್ಗೆ ಏಕೊ ನಿರಾಸಕ್ತಿ!


ಬೆಂಗಳೂರಿನ ಜನ ಬಿಡಿ

ಸಾಮಾಜಿಕ ಜೀವನ ಸ್ವಲ್ಪ ಜಾಸ್ತಿ

ಸಂಬಂಧಗಳನ್ನು ತೊರೆಯರು

ಮೊಬೈಲ್ ನಲ್ಲಿ ಮೆಸೇಜ್ ಮಾಡುವರು

ಫೇಸ್ ಬುಕ್ ನಲ್ಲಿ ಕಂಟ್ಯಾಕ್ಟ್ ಬಿಡರು

ಟ್ವಿಟರ್ ನಲ್ಲಿ ಮಾತು ಮರೆಯರು

ಎದುರಿಗೆ ಹೋದರೆ ಏಕೊ

ಮೌನ ಮುರಿಯರು !

Rating
No votes yet

Comments