ತುಂಟ ಕವನ: "ಕನ್ನಡತೀ...!"

ತುಂಟ ಕವನ: "ಕನ್ನಡತೀ...!"

ಕರಾವಳಿಯ ಕನ್ಯೆಯರು


ಭಾವನೆಗಳು ಬರಿದಾದ ಬರಡು ಬೇತಾಳಗಳು.


ಮಲೆನಾಡ ಬೆಡಗಿಯರೋ ಅಬ್ಬ!


ಕುದಿವ ಹಂಡೆ,


ನವಭಾವಗಳು ಉಕ್ಕಿ ಹರಿವ


ಹುಚ್ಚುಹೊಳೆದಂಡೆ!


 


ಮಹಾರಾಜರ ಮೈ


ಸೂರಿನಲ್ಲಿ ಈಗ


ಮಹಾರಾಣಿಯರಾರೂ ಇಲ್ಲ.


ಹೆಜ್ಜೆಹೆಜ್ಜೆಗೆ ಎದುರು `ಸಿಕ್ಕು'


ವವರು ಈ ಗಳಿಗೆ ಮುದ್ದುಕೋಳಿಮರಿ,


ಮರುಗಳಿಗೆ ಉರಿಗಣ್ಣ ಹೆಮ್ಮಾರಿ!


ಇವರೊಡನೆ ಏಗಲು ಆ ಮಹಿಷಾಸುರನೇ ಸರಿ.


 


ಒಂದು ಕೇಜಿ ಹೆಣ್ತನ,


ಕಸು ಒಂದು ದೊಡ್ಡ ಕಪ್,


ಸಣ್ಣಗೆ ಹೆಚ್ಚಿದ ಎರಡು


ದೊಡ್ಡ ಸೈಜಿನ


ನಗೆಗಳು,


ಚಿಟಿಕೆ ಕೋಪ,


ಮುನಿಸು ರುಚಿಗೆ ತಕ್ಕಷ್ಟು;


ಶುದ್ಧ ರಿಫೈನ್ಡ್ ಲವಲವಿಕೆ


ಯಲ್ಲಿ ಹದಿನೆಂಟು ವರ್ಷ ಹದವಾಗಿ


ಹುರಿದರೆ ತುಂಬುತ್ತದೆ ಕಣ್ಣು


ಧಾರವಾಡದ ಹೆಣ್ಣು.


 


 ಧಾರವಾಡದ ಹೆಣ್ಣು


ದಾಳಿಂಬೆ ಹಣ್ಣು


ಜತೆಗಿದ್ದರೆ ಈ ಬದುಕು


ಓಹ್ ಅದೆಷ್ಟು ಚೆನ್ನು!

Rating
No votes yet

Comments