ಹೆಜ್ಜೆ ಮೂಡದ ಹಾದಿ
ದಟ್ಟ ಕಾನನದಲ್ಲಿ ಎರೆಡ್ಹಾದಿ ಒಗ್ಗೂಡಿ ಕವಲೊಡೆದಿರಲು
ಕ್ಷಮಿಸಿ, ಸಾಗಾಲಾರೆನು ನಾನೆರೆಡ್ಹಾದಿಯಲಿ
ಒಬ್ಬೊಂಟಿಯಾಗಿ ನಾ ಕ್ರಮಿಸಿದ ಹಾದಿ ಕಮ್ಮಿಯೇನಲ್ಲ,
ನನಗೆ ದಿಟ್ಟಿಸುವಷ್ಟನ್ನು ದಿಟ್ಟಿಸಿದೆನೆರಡನ್ನು
ಮತ್ತೆಲ್ಲಿಯಾದರೊ ದಾರಿ ಕವಲೊಡೆದಿರಬಹುದೆಂದು,
ನ್ಯಾಯಸಮ್ಮತವಾಗಿ ಅಯ್ಕೆಗೊಳಿಸಿದೆನೊಂದು,
ಏಕೆಂದರದರಲ್ಲಿ ಹಚ್ಹಸಿರು ಗರಿಕೆ ತನ್ನನೆ ತೊಡಲೆಂದು
ಆಹ್ವಾನಗೈದಂತಿರಲು, ಹೆಜ್ಜೆ ಮೂಡದ ಹಾದಿ;
ಎನಾದರಿರಲಿ ಹಾದಿ ಸಾಗುತಲಿರಲು,
ನಿಜಕೊ ವ್ಯತ್ಯಾಸವೇನಿರಲಿಲ್ಲ ತೊಟ್ಟಿದ್ದರೆರಡರಲಾವುದನೊ;
ಮುಂಜಾನೆಯ ಮಂಜು ಬಿದ್ದು ತರಗೆಲೆಗಳು ನಳನಳಿಸು
ತಿರಲಿನ್ನೊ, ಸಾಕ್ಷಿ ಬೇಕಿರಲಿಲ್ಲ
ಕಾಲ್ತುಳಿತಕ್ಕೆ ಸಿಕ್ಕದೆಲೆ ತರಗೆಲೆಗಳು ಇನ್ನೊ ಕೊಳೆತು ಕಪ್ಪಾಗಿರದಿರಲು
ಚಿಕಿತಗೊಂಡೆನು, ನಿನ್ನೆ ನಾ ನೆಟ್ಟ ಹೆಜ್ಜೆಗಳ ನೆನೆದು!
ಗೊತ್ತಿದ್ದೊ, ಹೇಗೆ ಹಾದಿ ಹಾದಿಗೆ ಹಾದಿಯಾಗಬಹುದೆಂದು;
ಮತ್ತೆ ಬರುವೆನೆ ನಾ ಹಿಂದಿರುಗಿ ಈ ಹಾದಿಯಲಿ, ಎಂಬನುಮಾನ ಮೂಡಿರಲು
ನಾನೇಳಬಹುದೇನೊ ಮುಂದೊಂದು ದಿನ ನಿಟ್ಟುಸಿರಿಟ್ಟು
ಅಜ್ಜ್ನಾತ ಕಾಲದ ಕಳವಳವನ್ಹೇಳಬಹುದೇನೀಗ, ಈ-ಹೊತ್ತಿನಿಂದ;
ದಟ್ಟ ಕಾನನದಲ್ಲಿ ಹಾದಿ ಕವಲೊಡೆದಿರಲು, ಮುನ್ನಡಿಯನಿಟ್ಟೆ
ನಾ ಹೆಚ್ಹು ಹೆಜ್ಜೆ ಮೂಡದ ಹಾದಿಯಲಿ
ಅದುವೇ ಮೂಲವಾಯ್ತೆಲ್ಲಾ ಬದಲಾವಣೆಗೆ
("The Road Not Taken" by Robert Frost ರ ಕವನದ ಅನುವಾದ)
Comments
ಉ: ಹೆಜ್ಜೆ ಮೂಡದ ಹಾದಿ
In reply to ಉ: ಹೆಜ್ಜೆ ಮೂಡದ ಹಾದಿ by santhosh_87
ಉ: ಹೆಜ್ಜೆ ಮೂಡದ ಹಾದಿ
ಉ: ಹೆಜ್ಜೆ ಮೂಡದ ಹಾದಿ
In reply to ಉ: ಹೆಜ್ಜೆ ಮೂಡದ ಹಾದಿ by ಹೇಮ ಪವಾರ್
ಉ: ಹೆಜ್ಜೆ ಮೂಡದ ಹಾದಿ
ಉ: ಹೆಜ್ಜೆ ಮೂಡದ ಹಾದಿ
In reply to ಉ: ಹೆಜ್ಜೆ ಮೂಡದ ಹಾದಿ by ಹೇಮ ಪವಾರ್
ಉ: ಹೆಜ್ಜೆ ಮೂಡದ ಹಾದಿ
In reply to ಉ: ಹೆಜ್ಜೆ ಮೂಡದ ಹಾದಿ by ಹೇಮ ಪವಾರ್
ಉ: ಹೆಜ್ಜೆ ಮೂಡದ ಹಾದಿ