ನೋವಿನ ಹಣತೆಯು ಆರದಿರಲಿ ಎದೆಯಲಿ

ನೋವಿನ ಹಣತೆಯು ಆರದಿರಲಿ ಎದೆಯಲಿ

ಕವನ

ನೋವಿನ ಹಣತೆಯು ಆರದಿರಲಿ ಎದೆಯಲಿ,

ಮನಸ್ಸೊಂದು ಮೌನವಾಗಿ ಮಿಡಿಯುತಿರಲಿ ನಿನಗಾಗಿ,

ನೀ ಮಾಡಿದಾ ಮೋಸಾ ಕಣ್ಣೆದುರು ಸವಿಯಾಗಿ,

ನಾ ಬರೆವ ಕವಿತೆಗಳ ಚರಣ-ಪಲ್ಲವಿಯ ಜೀವಾಳವಾಗಿರಲಿ

 

ನೀ ತೊರೆದ ಘಳಿಗೆಯಲಿ,ಕಣ್ಣಲ್ಲಿನ ಕಂಬನಿ,

ಭುವಿಯಲಿ ಬಿಡಿಸಿಟ್ಟ ನಿನ್ನದೆ ಚಿತ್ತಾರ,

ನನ್ನ ಈ ಕವಿತೆಯ ಮೊದಲ ನುಡಿಯ ಸಂವೇದ.

ನೀನಾಡಿದಾ ಕಟು ಪದಗಳು ನನ್ನೇದೆಯಲಿ

ಜಿನುಜಿನುಗುತಾ ಚಿತ್ರ ವರ್ಣವಾಗಿ ಹೊಮ್ಮುತಿಹೆ,

 ಈ ಕವಿತೆಯ ಝೆಂಕಾರ

 

ಭಾವನೆಗಳ ಮಹಲಿನಲಿ ಓಂಟಿಯಾಗಿ ಕೂಗಿದ

 ನಿನ್ನ ನಾಮದೆಯ ಸ್ಮರ್ಣಪಟಲದಲಿ ನಿಂತು,

ಮೂಡಿದೆ ಈ ಕವಿತೆಗೆಂದೆ ಹೊಸ ರಾಗ,

ನಿನ್ನ ಕಣ್ಣಲಿ ಹುಸಿಮುಸಿಗೊಂಡ ಆ ಮೂಂಗೋಪ

ನನ್ನ ಕಣ್ಣಗಳ ಸ್ಮೄತಿ ಪಟಲದ ಶಾಶ್ವತ ಭಾವಚಿತ್ರ

ನನ್ನೀ ಕವಿತೆಯ ಭಾವ

 

ಜಗವಿದು ಶೂನ್ಯ, ಜೀವನ ಶೂನ್ಯ,

ನಿನ್ನಯ ನೆನಪೆ ನನಗೆಂದೂ ಅನನ್ಯ,

ನೀ ನೀಡಿದಾ ಆ ನೋವು ನೂರಾರು ಕವಿತೆಗಳ ಆಗರ

ನೋವೊಂದೆ ಸಾಕು ಈ ಜೀವನ ಅಜರಾಮರ

 

                                                                                                        ಸ್ನೇಹದಿಂದ

                                                                                                         ಮಹಾಂತೇಶ(ಮಾನು)

Comments