ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ.. (ಹಾಸ್ಯ )-೯

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ.. (ಹಾಸ್ಯ )-೯

 


ಸರ್ಯಾಗ್  .೩೦ಕ್ಕೆ  'ಲಗುಬಗೆಯಿಂದ'  ಊಟ ಮುಗಿಸಿ  ಮೂಲೆಲಿದ್ದ ಬಟ್ಟೆ ಗಂಟಿಂದ ಒಂದು ಕಡು ಕಪ್ಪು ಅಂಗಿ ಮತ್ತು ಶಲ್ಯ  ಪಂಚೆಯನ್ನ ಎತ್ತಿಕೊಂಡು  ಅದ್ನ ಹಾಕೊಂಡು ರೆಡಿ ಆಗ್  ಸಮಯ ೧೧ ಆಗುವುದನ್ನೇ  ಕಾಯ್ತಾ ಕುಳಿತ  ಮುನಿಯಂಗೆ  ಅನ್ಸತು' ಹಾಳಾದು ಟೈಮು ಬೇಗ ಆಗ್ಬಾರ್ದ'. ಗಂಟೆ ೧೧ ಆಗಿದ್ದೆ ತಡ  ಮನೆಯಿಂದ ಹೊರಬಿದ್ದ  ಅವ್ನು ಸೀದಾ  ಬಡ ಬೋರನ ಮನೆ ಹತ್ರ ಹೋದ ಅದಾಗಲೇ ಜನ ಮಲಗಿದ್ದರಿಂದ ಯಾರೊಬ್ಬರೂ ಅವಂಗೆ ಎದುರ್ ಬರಲಿಲ್ಲ.ಅಲ್ಲಲ್ಲಿ ಕೆಲ ವಯಸ್ಸಾದವರ ಕೆಮ್ಮೋ  ಶಭ್ದ  ಮಾತ್ರ ಕೇಳಿಸ್ತಿತ್ತು.

ಅದಾಗಲೇ ಅಲ್ಲಿ 'ಮುನಿಯನಿಗಾಗ್'  ಎದುರ್ ನೋಡ್ತಾ ನಿಂತಿದ್ರು  ನಾಣಿ-ಶೀನ- ಕರಿಯ ಕಪ್ಪು ಡ್ರೆಸ್ಸಿನಲ್ಲಿ.ಇವರು ಬರುವ ಸ್ವಲ್ಪ ಹೊತ್ತಿನ ಮುಂಚೆ ಅಸ್ಟೇ ಊಟ ಮುಗ್ಸಿ ಕುರ್ಚಿ ಪಕ್ಕ ವೆ ಮಲಗಿ ಭಯಂಕರ  ಗೊರಕೆ ಹೊಡಿತಿದ್ದ 'ಬಡ ಬೋರ'  ಮುಂದಾಗುವ ಏನೊಂದು  ತಿಳಿಯದೆ.

 

ಹೊರಗಡೆ ಕಿಟಕಿಯಲ್ಲಿ ಬಗ್ಗಿ ನೋಡಿ  ಅಲ್ಲಿ ಕುರ್ಚಿ ಪಕ್ಕವೇ ಮಲಗಿದ ಬೋರನನ್ನು  ನೋಡಿ, ಅವನಿಗೆ ಗೊತ್ತಾಗದ ಹಾಗೆ ' ಕುರ್ಚೀನ' ಹೇಗಪ್ಪ ತರ್ವದು ಎನ್ನುವ  ಚಿಂತೆ ಮೂಡಿತು.  ಅದನ್ನು  ಮೊದಲಿಗೆ ಕರಿಯನಿಗೆ ಹೊಳಗೆ ಹೋಗಿ ನಾಣಿ-ಶೀನ-ಕರಿಯಂಗೆ  ಹೇಳಿದಾಗ ಅವರು ಒಂದು ಉಪಾಯ ಹೇಳಿದರು ಹೆಂಗೂ ಕಡು ಕಪ್ಪು  ಬಟ್ಟೆಲಿ ನಾವ್ ನೋಡೋಕೆ 'ಭಯನ್ಕರವಾಗಿದೀವಿ' ಮುಖಕ್ಕೆ ಕೊಂಚ 'ಸುಣ್ಣ ಬಳ್ಕೊಂಡು'  ಒಳಗಡೆ  ಹೋಗೋಣ ಒಂದ್ವೇಳೆ  ಅವ್ನು ನಾವ್ ಮಾಡೋದನ  ನೋಡಿದ್ರೆ  ನಮ್ಮನ್ನ ಕಂಡು    ಭಯ ಬಿಳೋದ್ ಖಾತ್ರಿ. ನಡೀರಿ ಅಂಗಳಕ್ಕೆ ಅಲ್ಲಿ ಮೂಲೇಲಿ ಸುಣ್ಣ ಬಿರಿಯಲು  ಒಂದು ಗಡಿಗೆಲಿ ಕಲೆಸಿ ಇಟ್ಟಿದ್ದಾರೆ.

 

ಹಳ್ಳಿಕಡೆ 'ಮೂಟೆ ಮೂಟೆ ಕಲ್ಲು ಸುಣ್ಣ' ತಗೊಂಡ್ ಅದ್ನ ಗಡಿಗೆಲಿ ಹಾಕಿ ನೀರ್ ಹುಯ್ದು  'ಬಿರಿಯೋಕ್' ಬಿಡೋದ್ ಮಾಮೂಲಿ  ಹೀಗಾಗ್ ನಮ್ಮ ಮುನಿಯ ಮೂವರನ್ನ ಕರ್ಕೊಂಡ್  ಅಂಗಳಕ್ಕೆ ಇಳಿದ. ಮೂಲೆಲಿದ್ದ ಗಡಿಗೆಲಿ  ಕೋಲ್ ಒಂದನ್ನ ಹಾಕಿ  ಕೊಂಚ ಸುಣ್ಣ ತೆಗೆದುಕೊಂಡು ಅಲ್ಲೇ ಕಟ್ಟಿ ಆಮೇಲೆ ಹಾಕಿದ ಮತ್ತು ಅದ್ಕೆ ಸ್ವಲ್ಪ ನೀರು ಹಾಕಿದ. ಗಡಿಗೆ ಒಳಗಡೆ ಸುಣ್ಣ ಕೊತ -ಕೊತ ಕುದಿತಿರ್ತೆ  ಅದ್ನೆನರ ಕೈಯಿಂದ ಮುಟ್ಟಿದರೆ  ಸುಟ್ ಹೋಗೋದ್ ಪಕ್ಕಾ ಅದ್ಕೆ ಮುನಿಯ  ಕೋಲು ಉಪ್ಯೋಗ್ಸಿದ್.

 

ಸ್ವಲ್ಪ  ಹೊತ್ ಬಿಟ್ಟು ಸುಣ್ಣ ತನ್ನಗಾದಮೇಲೆ ಅದನ್ನ ತೆಗೆದುಕೊಂಡು ನಾಲ್ವರೂ ಮುಖಕ್ಕೆ ಬಳಿದುಕೊಂಡು ಮೆಲ್ಲಗೆ ಬಿದಿರಿನ ಬಾಗಿಲು ತಳ್ಳಿ  ಒಳ  ಅಡಿ  ಇಟ್ಟರು . ಅರೆ -ಬರೆ ಕತ್ತಲಲ್ಲಿ ' ಭವ್ಯವಾದ ಕೆತ್ತನೆಯ ಕುರ್ಚಿ' ನೋಡಿ ಕರಿಯ-ನಾಣಿ-ಶೀನಿಗೆ ಬತ್ತಿಹೋಗಿದ್ದ 'ಆಶೆಯ ಸೆಲೆ'  ಮರು ಉಕ್ಕಿತು:)) ಮುನಿಯನ ಮಾತು ಕೇಳ್ಕೊಂಡು ಇಲ್ಲಿಗ್ ಬಂದದ್ದಕ್ಕೂ ಸಾರ್ಥಕವಾಯ್ತು ಅನ್ಸ್ತು. ಈಗ ಅದ್ನ  ಮೆತ್ತಗೆ 'ಬೋರಂಗೆ' ಗೊತ್ತಾಗದಂಗೆ  ಹೊರ ಸಾಗ್ಸೋದು ಮುಖ್ಯ.

ಕುರ್ಚಿ ಬಳಿ  ಹೋಗಿ ನಿಂತ ಪ್ರತಿಯೋಬ್ಬರ್ಗು 'ಒಮ್ಮೆ' ಇದರ ಮೇಲೆ ಕೂತರೆ ಹೆಂಗಿರ್ತೆ ಎನ್ನುವ ಆಲೋಚನೆ ಬಂತು. ಕರಿಯ-ನಾಣಿ-ಶೀನಿ ಅದ್ನ ಬಿಟ್ಟಗಣ್ಣು  ಬಿಟ್ಟಂತೆ ಆಶೆಯಿಂದ ನೋಡ್ತಿರಲು ಅವರೆಲ್ಲರ ಮನದಲ್ಲಿ ಏನಿರಬಹುದು ಎನ್ನುವುಅ  ಊಹೆ ಮುನಿಯಂಗೆ ಬಂತು ಮತ್ತು ಅದ್ಕೆ ಮೆತ್ತಗೆ ಹೇಳಿದ ಈಗ ಸಮಯವಿಲ್ಲ  ಬೇಗ  ಅದ್ನ ಮೆತ್ತಗೆ ಎತ್ತಿಕೊಂಡು  ಹೊರ ಸಾಗ್ಸೋಣ  ಆಮೇಲೆ ಅದ್ನ ಎಲ್ಲಿಡಬೇಕು ಅಂತ ಯೋಚ್ಸೋಣ. ಒಬ್ಬೊಬ್ಬರು ಒಂದು ಕಾಲು ಹಿಡಿದುಕೊಂಡು  ಮೆತ್ತಗೆ ಅದನ್ನು ಎತ್ತಿ ಸಾವಕಾಶವಾಗ್ ನಡೆಯ ಹೊರಟರು ಆಗಲೇ 'ಬೋರನಿಗೆ' ಎಚ್ಚರವಾಗಬೇಕೆ:)

 

  ಅವ್ನು ತನ್ನಷ್ಟಕ್ಕೆ ತಾನೇ ಮೇಲೆದ್ದು ನಿಂತಿರುವ ಕುರ್ಚೀನ ನೋಡ್ ,ಅದ್ ಹಾಗ್ ತನ್ನಸ್ತಕ್ಕ್ ತಾನೇ ಹೇಗ್ ನಿಲೋಕ್ ಸಾಧ್ಯ ಏನೋ 'ಹಾಳಾದ್ ಕನಸಿರಬೇಕು' ಅಂತ ಪಕ್ಕಕೆ    ಹೊರಳಿ ಮಲಗಿಕೊಂಡ .  ಜೀವವೇ ಕೈಗೆ ಬಂದಂತಾಗ್ ಮುಂದೇನಾಗಬಹುದು ಅಂತ ನಿಂತಿದ್ದ ನಾಲ್ವರಿಗೂ ಶಾನೆ ಸಂತೋಷವಾಗ್ ಮೆತ್ತಗೆ ಹೆಜ್ಜೆ ಇಡ್ತಾ ಮುಮ್ಬಾಗಿಲಿಂದ ಹೊತ್ತುಕೊಂಡು  ಹೊರಬಂದರು..  ಕೆಲಸ ಇಷ್ಟು ಸರಳವಾಗ್ ನೆರವೆರ್ತೆ ಅನ್ನೋ ಕಲ್ಪನೆನೆ ಯಾರ್ಗೂ ಇರ್ಲಿಲ್ಲ. ಭಾರವಿದ್ದ ಕುರ್ಚೀನ ಕೆಳಗಡೆ ಇಳಿಸಿ ಉಸ್ಸಪ್ಪ ಅಂತ  ಬೆವರನ್ನ ಒರೆಸ್ಕೊನ್ದ್ರು ನಾಲ್ವರು.

 

ಬೆಳಗಾಗೆದ್ದು  ಕುರ್ಚಿ ಕಾಣದೆ ಬೋರ 'ಬಾಯ್-ಬಾಯ್ ಬಡ್ಕೊಲೋ' ದೃಶ್ಯವನ್ನ ಕಲ್ಪಿಸಿಕೊಂಡು ಕಿಸ ಕಿಸ ನಕ್ಕರು ನಾಲ್ವರು.ಇನ್ನು ತಡ ಮಾಡ್ವ ಹಾಗಿಲ್ಲ ಇದನ ಸಾಗ್ಸೋದು ಒಳ್ಳೇದ್ ಎಂದ ಕರಿಯ, ಆಗಲೇ ಮುನಿಯಂಗೆ 'ನೆನಪಿಗ್' ಬಂದದ್ದು ಎಲ್ಲಿಗ ಸಾಗ್ಸೋದ್ ಎಲ್ಲಿ ಇಡೋದು? ಅದಾಗಲೇ ನಾ ಒಮ್ಮೆ ಬೋರನ ಮನೆಗೊಗ್ ಕುರ್ಚಿ ತರದೆ 'ವಾಪಾಸ್' ಬಂದಿದ್ದೇನೆ, ಈಗ ಇದನ ನಮನೆಗ್ ಹೊಯ್ದರೆ ಮೊದಲು ಬೋರನಿಗ್ ನನ್ ಮೇಲೆಯಾ ಸಂಶಯ ಬರೋದ್, ಹಾಗಾದ್ರೆ ಕರಿಯನ-ನಾಣಿ-ಶೀನ ಮನೇಲೂ ಇಡೋ ಹಾಗಿಲ್ಲ, ಅವ್ರ ಚಿಳ್ಳೆ-ಪಿಳ್ಳೆಗಳು ಇಲ್ಲ ಹೆಂಡ್ತೀರು ವಿಷಯವನ್ನ ಖಂಡಿತ ಬಯಲು ಮಾಡ್ತಾರೆ.

 

 

ಮುನಿಯನ ದ್ವಂದ್ವ  ಸ್ತಿತಿ ಮೂವರಿಗೂ ಗೊತ್ತಾಯ್ತು, ಅದ್ಕೆ ಕರಿಯನೆ ಒಂದು ಆಯಡಿಯಾ ಕೊಟ್ಟ, ಮುನಿಯ ಅದ್ನ ನಿಮ್ಮನೆಲು ನಮ್ಮನೇಲು ಇಡೋಕಾಗಲ್ಲ ನಿಂಗೊತ್ತು ,ಅದ್ಕೆ ಅದ್ನ ಎಲ್ಲರ 'ಬೇಲಿ ಬೆಳ್ದಿರೋ' ಜಾಗದಲ್ಲಿ ಮುಚ್ಚಿಟ್ರೆ ಹೆಂಗೆ?  ಅದೇನೋ ಸರಿ ಆದ್ರೆ ಯಾರಾರ  ಬೆಳಗೆ ೨ಕ್ಕೆ ಹೋದಾಗ ಅದು ಕಣ್ಣಿಗ್ ಬಿದ್ರೆ? ಇಸ್ತೊಂದ್ ಭಾರದ್ ಕುರ್ಚೀನ ತುಂಬಾ ದೂರ ಒಯ್ಯೋದ್ ಕಷ್ಟ, ಸ್ಸರಿ ನೀ ಹೇಳ್ದಂಗೆ ಬಯಲು ಜಮೀನ್ ಆದ್ಮೇಲ್ ಬರ್ತಲ್ಲ ' ಗಿಡಗಂಟಿ ಮುಳ್ಳು ಬೆಳೆದ ಜಾಗ' ಅಲ್ಲಿ ಇದನ ಮುಚ್ಚಿ ಇಡೋಣ ಅಲ್ಲಿ 'ದನಗಳ್ ' ಸಹಾ ಹೋಗೋಲ ಇನ್ನು ಮನುಷ್ಯರು ಹೋಗೋಕ್ ಸಾಧ್ಯವೇ ಇಲ್ಲ.

ಕೊಂಚ ಭಾರವೇ ಇದ್ದ  ಕುರ್ಚೀನ ಎತ್ಕೊಂಡು ಬಿರಬಿರನೆ ಹೊಗೊಕು ಆಗೋಲ್ಲ ಹಾಗಂತ ಸಾವಕಾಶವಾಗ್ಹೋದ್ರೆ ಭಾರ ಇನ್ನು ಹೆಚ್ತಿದೆ ಹೆಂಗೋ  ಸಮಾಧಾನ ಮದ್ಕಳ್ತಾ  ನಾಳೆ ತಾವೆನಿಸೋ  ಗರಿ ಗರಿ ನೋತುಗಲ್ನ ನೆನಸ್ಕೊಂಡು ಈಗಿನ ಕಷ್ಟ ಮರೆತ ಹೊತ್ತ್ಯ್ತಿರ್ವಾಗ ಅಲಿದಾರಿ ಮಧ್ಯೆ ನೆಲದಿಂದ ಮೇಲೆದ್ದಿದ್ದ ಗಿಡದ ಬೋದ್ದೆಯೊಂದನ್ನ  ನೋಡದೆ ಎಡವಿ ಮೊದಲು ಬಿದ್ದವನುಕರಿಯಅವು ಬಿದ್ದಕೂಡಲೇ  'ಭವಿಷ್ಯವಿಲ್ಲದ ಸಮ್ಮಿಶ್ರಸರ್ಕಾರಒಬ್ಬನ ರಾಜೀನಾಮೆಯಿಂದ ಬಿದೋದಂತೆಎಲ್ರೂ ಕುರ್ಚೀನ ಹಾಕ್ಕೊಂಡು ಕೆಳಗಡೆ ಬಿದ್ರುಮೂವರ್ಗೆಕರಿಯನ ಮೇಲೆ ಸಿಟ್ಟುಕರಿಯಂಗೆ  ಗಿಡದ ಬೊಡ್ಡೆ ಮತ್ತು ಕುರ್ಚಿ ಭಾರದ್ ಮೇಲೆ:

 

ಸ್ಸರಿ ಎಲ್ಲರೂ ಅದ್ನ ಎತ್ತಿಕೊಂಡು 'ತಮ್ಮ ಹೆಜ್ಜೆ ಶಬ್ಧಕ್ಕೆ'  ತಾವೇ  ಭಯ ಪಡ್ತಾ ,ಏದುಸಿರು ಬಿಡ್ತಾ ಬಯಲು ಜಾಗದ ಪಕ್ಕದ ಮುಳ್ಳು ಗಿಡ ಗಂಟಿ ಒತ್ತೊತ್ತಾಗಿ ಬೆಳೆದೆಡೆ     ಹೊತ್ತು ತಂದರು 'ಸುದೈವಕ್ಕೆ' ಯಾರೊಬ್ಬರೂ ಇವರ್ಗೆ ಎದುರಾಗಲಿಲ್ಲ.  ಅದ್ನ ಕೆಳಗಿಳ್ಸಿ ಸೋತು ಸುಸ್ತಾಗ್ ನೆಲದ ಮೇಲೆ ಕುಳಿತರು ಒಬ್ಬರ ಮುಖ ಒಬ್ರು ನೋಡ್ತಾ ಮುಂದೇನು ಅಂತ?

 

 

ಕೊಂಚ  ಸುಧಾರಿಸಿಕೊಂಡಾದ್   ಮೇಲೆ ಎಲ್ರೂ ಎದ್ದು ಕೆಲ ಗಿಡ ಗಂಟಿ ಕಿತ್ತಾಕಿ ಕುರ್ಚಿಗಾಗ್ವಸ್ತು ಜಾಗ್ ಮಾಡಿ ಅದ್ನ ಇತ್ತು ಅದ್ರ ಸುತ್ತ ಕಿತ್ತಿದ ಮುಳ್ಳಿನ ಗಿಡಗಳನ ಮತ್ತು ಮರದ ಎಲೆಗಳನ  ಹಾಕ್  ಕಾಣದಂಗೆ  'ಮುಚ್' ಇಟ್ರು. ಈಗ ಅದ್ರ ಮುಂದೆ ಯಾರಾದ್ರೂ ಹಾದು ಹೋದ್ರೆ ಅಲ್ಲಿ 'ಅದು' ಇದೆ ಎನ್ನುವ ಯಾವೊಂದು ಸೋಚನೆಯೋಒ ಕಾಣ್ತಿರಲಿಲ್ಲ. ಮೂವರ ಮುಖ ನೋಡ್ತಾ ಹೇಳ್ದ ಮುನಿಯ ನಾಳೆ ಬೆಳಗ್ಗೆಯೇ ಪಟ್ಟಣಕ್ ಹೋಗ   ನನ್ಗೊತ್ತಿರೋರತ್ರ ಮಾತಾಡ್ 'ಅದ್ನ ಪಟ್ಟಣಕ್   ಸಾಗ್ಸೋ ಏರ್ಪಾಡ ಮಾಡ್ತೀನ್ ಎಂದ.

 

 

ಮೂವರ ಮುಖಾರವಿನ್ದವೂ 'ಪ್ರಸಂನವಾಗ್' ಸಂಪೂರ್ಣ 'ಕಾಂತಿಯಿಂದ' ಬೆಳಗ್ತಾ ನಾಳೆ ತಾವ್ ಎಣಿಸೋ 'ಗರಿ ಗರಿ ನೋಟುಗಳ 'ಬಗ್ಗೆ ಕನಸ್ ಕಾನ್ವಂತೆ  ಮಾಡ್ತು. ಎಲ್ರೂ ಒಂದೊಂದು ಬೀಡಿ ಸೇದಿ ತಮ್ಮ ತಮ್ಮ ಮನೆ ದಾರಿ ಹಿಡಿದರು. ಮನೆಗೊಗ್ ಮಲ್ಕೊಂಡ ಮೇಲೆ ಎಲ್ರ 'ಕನಸೂ ಒಂದೇ'   ಕುರ್ಚೀನ್ ಮಾರ್ ಕೈ ತುಂಬಾ ಗರಿ ಗರಿ ನೋಟು ಎನ್ಸ್ತಿರೋದ್ 'ಹಂಡೆ' ತುಂಬಾ 'ಕಳ್ಳು'   ಕುಡೀತ  'ಬುಟ್ಟಿ ತುಂಬಾ ಹುರಿದ ಮೀನು' ತಿನ್ನೋ ದೃಶ್ಯ, ಮಡದಿ ಮಕ್ಕಳ್ಗೆ ಹೊಸ  ಬಟ್ಟೆ ಇನ್ನು ಏನೇನೋ:))

 

ಬೆಳಗೆ ಎದ್ದು ಕಣ್ಣುಜ್ಜಿಕೊಂಡು 'ದೇವರ ಪಟದ' ಕಡೆ ನೋಡದೆ 'ಕುರ್ಚಿ' ಇರೋ ಜಾಗದತ್ತ  ನೋಡಿದ 'ಬೋರನಿಗೆ' ಅಲ್ಲೇನು ಕಾಣಸ್ತು

? ಖಾಲಿ ಜಾಗ, ಎದೆ ಧಸ್ಸಕ್ಕಂತು, ಅಲ್ಲ ರಾತ್ರಿ ಇಲ್ಲೇ ಇತ್ತು ಬೆಳ್ಗೆ ಇಲ್ಲ ಎಲ್ಲೋಯ್ತು?  ನಮ್ ಅಪ್ಪಯ್ಯ ಎನರ್ರ ಬೆಳ್ ಬೆಳಗ್ಗೆ ಮುನಿಯನ್ನ ಕರಡು   ಕುರ್ಚಿ ಕೊಟ್ಟು ಕಳಿಸಿದನ?  ಧಡಕ್ಕನೆ ಎದ್ದು ಮೊಲೆಲ್ ಮಲಗಿದ್ದ 'ಕೆಮ್ಮೀರಪ್ಪನ ' ಜ್ಪ್ರಾಗ್ಸಮೀಪ ಹೋಗ ಜೋರಾಗಿ  ಕೂಗ್ ಕೇಳ್ದ, ಅಪ್ಪಯ್ಯ ಅಪ್ಪಯ ' ಕುರ್ಚಿ'  ಎಲ್ಲಿ? ಅದ್ನ ಅದ್ಯಾವಾಗ ನಂಗ್ ಗೊತ್ತಿಲ್ದಂಗೆ ಮುನಿಯಂಗೆ ಕೊಟ್ಟೆ? ಅಪ್ಪಯ್ಯ ಅಪ್ಪಯ್ಯ ಒಂದೇ ಸವನೆ ಕಿರ್ಚೋಕ್ ಶುರು ಹಚ್ಕೊಂಡ.

 

ರಾತ್ರಿ ಎಲ್ಲ ಕೆಮ್ಮಿ ಕೆಮ್ಮಿ ಸುಸ್ತಾಗ್ ಬೆಳಗ್ಗೆ ಹೊತ್ಗೆ ನಿದ್ದೆ ಹತ್ತಿ ಮುದುಡಿ  ಮಲಗಿಕೊಂಡಿದ್ದ 'ಕೆಮ್ಮೀರಪ್ಪಂಗೆ' ಮಗ ಹೀಗೆ ಬೆಳ್ ಬೆಳಗ್ಗೆ ಬಾಯ್ ಬಾಯ್ ಬಡುಕೊಳ್ತಿರೋದ್ ,ಅದೂ 'ಹಾಳಾದ್ಕುರ್ಚಿ'  ಬಗ್ಗೆ ಅಂತ ಗೊತ್ತಾಗ್   ರೇಗ್ ಹೋಯ್ತು, ಲೋ ಮುಂದೆ ಗಂಡ -ದರಿದ್ರದವ್ನೆ, ಅದ್ಯಾಕ್ಲ ಬೆಳಗ್ಗೆ ನನ್ ನಿದ್ದೆ ಹಾಳ್ ಮಾಡ್ತಾ ಒಂದೇ ಸವನೆ ಅರ್ಚತ ಇದ್ದೀಯ? ಯಾರು 'ನೆಗೆದ್ ಬಿದ್ರು'

?

 

Comments