ಜೀವಸೆಲೆ

ಜೀವಸೆಲೆ

ಕವನ

ಇಲ್ಲಿ ಪರಿಪೂರ್ಣ ಬದುಕು


ಯಾರಿಗೂ ದೊರೆಯುವುದಿಲ್ಲ.


ಒಬ್ಬರಿಗೆ ಭೂಮಿ ಸಿಗದ್ದಿದ್ದರೆ


ಇನ್ನೊಬ್ಬರಿಗೆ ಆಕಾಶ..!!


 


ಇವೆರಡರ ಮಧ್ಯ..


ರಸ್ತೆಗಳನೇಕ,ಹೆಜ್ಜೆಗಳನೇಕ.


ಎಲ್ಲಿಯೂ ಹೂ ಅರಳಿದ ಉದಾಹರಣೆಯಿಲ್ಲ..!!


ಆದರೂ ಭೂಮಿ,ಆಕಾಶ


ನಿಲುಕುವ ಭ್ರಾಂತಿಯಲಿ


ಕನಸ ಹೆಣೆದು,ಹಗಲ ಕಳೆಯುವವರನ್ನು ಕಂಡು


ಸೂರ್ಯ ಹುಟ್ಟುತ್ತಾನೆ,


ನಕ್ಷತ್ರ ಬೆಳಗುತ್ತವೆ...!!!


 

Comments